Film Review: ಅಮೃತ ಅಪಾರ್ಟ್‌ಮೆಂಟ್ಸ್
ಹೊಂದಾಣಿಕೆಯಾಗದೆ ಬೇರೆಯಾಗಲು ನಿರ್ಧರಿಸಿರುವ ದಂಪತಿಯನ್ನು ಕೊಲೆ ಪ್ರಕರಣ ಒಂದು ಮಾಡುತ್ತದೆ. ಅಚ್ಚರಿ ಆದರೂ ಇದು ನಿಜ. ಅದು ಹೇಗೆ ಎನ್ನುವ ಕುತೂಹಲ ನಿಮಗೆ ಹುಟ್ಟಿಕೊಂಡರೆ ನೀವು ‘ಅಮೃತ ಅಪಾರ್ಟ್‌ಮೆಂಟ್ಸ್’ ಎನ್ನುವ ಚಿತ್ರ ನೋಡಬಹುದು.
ಆರ್ ಕೇಶವಮೂರ್ತಿ
ತೀರಾ ಹೊಸತನ ಇಲ್ಲದಿದ್ದರೂ ಕೊಲೆಯನ್ನು (Murder) ಇಟ್ಟುಕೊಂಡು ಸಿನಿಮಾ ಮಾಡಬಹುದೇ ಎನ್ನುವ ಲೆಕ್ಕಾಚಾರದಲ್ಲಿ ಇದ್ದವರಿಗೆ ಈ ಸಿನಿಮಾ ಒಳ್ಳೆಯ ಸಿಲಬಸ್! ಲೋನ್‌ನಲ್ಲಿ (Loan) ತೆಗೆದುಕೊಂಡಿರುವ ಒಂದು ಅಪಾರ್ಟ್‌ಮೆಂಟ್ಸ್ (Apartment) ಹಾಗೂ ಕಾರು (Car), ಹೊಸದಾಗಿ ಮದುವೆಯಾದ (Marriage) ಜೋಡಿ, ಇಬ್ಬರ ಭಾಷೆ, ಊರು ಬೇರೆ. ಈಗ ಅಪಾರ್ಟ್‌ಮೆಂಟ್ ಮಾರಬೇಕು, ಡಿವೋರ್ಸ್ (Divorce) ತೆಗೆದುಕೊಳ್ಳಬೇಕು ಎಂದುಕೊಳ್ಳುವ ಹೊತ್ತಿಗೆ ಲೋನ್ ವಸೂಲಿ ಮಾಡುವ ವ್ಯಕ್ತಿಯ ಕೊಲೆ ಆಗುತ್ತದೆ. ಕೊಲೆಯಾದ ಈ ವ್ಯಕ್ತಿಗೂ ಮತ್ತು ಅಪಾರ್ಟ್‌ಮೆಂಟ್ ಮಾಲೀಕ ಕಂ ಹೀರೋ (Hero) ನಡುವೆ ಜಗಳ ಆಗಿರುತ್ತದೆ. ಅಲ್ಲಿಗೆ ಪೊಲೀಸ್ (Police) ಇಲಾಖೆಯ ತನಿಖೆ ಎತ್ತ ಹೋಗುತ್ತದೆ ಎಂಬುದು ಊಹಿಸದಂತೆ ನಡೆಯುತ್ತದೆ.
Movie Review: ಆತಂಕ ನೀಡಿ ಆಹ್ಲಾದ ಉಳಿಸುವ ಇಂಟರ್‌ನೆಟ್ ಸಿನಿಮಾ 100ನಾಯಕನ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾದ ವ್ಯಕ್ತಿಯ ಹಿನ್ನೆಲೆ ಏನು, ಆತ ಸತ್ತ ಮೇಲೆ ಸೆಕ್ಯುರಿಟಿಯ (Security Guard) ಸಾವು ಸಂಭವಿಸುವುದು ಯಾಕೆ, ಆ ಅಪಾರ್ಟ್‌ಮೆಂಟ್ ಇರುವ ಏರಿಯಾ ಕೌನ್ಸಿಲರ್ (councillor) ಹಿನ್ನೆಲೆ ಏನು, ಮನೆ ಮಾರಾಟಕ್ಕೆ ಬಂದ ಬ್ರೋಕರ್ (Broker) ಯಾರು, ಇಷ್ಟಕ್ಕೂ ಕೊಲೆ ಮಾಡಿದ್ದು ಯಾರು, ಆಟೋ ಡ್ರೈವರ್ (Auto driver) ಪೊಲೀಸ್ ಆಗುವುದು ಹೇಗೆ.... ಇಂಥ ಒಂದು ರಾಶಿ ಪ್ರಶ್ನೆಗಳನ್ನು ಮುಂದೆ ಹಾಕಿಕೊಂಡು ಅವುಗಳಿಗೆ ಉತ್ತರ ಕಂಡುಕೊಂಡರೆ ‘ಅಮೃತ ಅಪಾರ್ಟ್‌ಮೆಂಟ್ಸ್’ ಸಿನಿಮಾ ಕತೆ ತೆಗೆದುಕೊಳ್ಳುತ್ತದೆ. ಈಗಿನ ಜನರೇಷನ್ ಜೀವನ ಶೈಲಿಯ ಕತೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ನೀರಸ ಎನಿಸುವ ಪಾತ್ರಧಾರಿಗಳ ನಟನೆ, ಪ್ರತಿಯೊಂದನ್ನು ಸುತ್ತಿಬಳಿಸಿ ಹೇಳುವ ನಿರ್ದೇಶಕ ನಿರೂಪಣೆಯಲ್ಲೇ ಕತೆ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ಕಳೆದು ಹೋದಂತೆ ಅನಿಸುತ್ತದೆ.
Filme Review: ಗೋವಿಂದ ಗೋವಿಂದಆದರೆ, ಕೊಲೆಗೂ ಮತ್ತು ಕೌನ್ಸಿಲರ್‌ಗೂ ಲಿಂಕು ಇದೆ ಎನ್ನುವ ಹೊತ್ತಿಗೆ ಕತೆ ಬೇಸ್‌ಮೆಂಟ್‌ನಿಂದ ಫಸ್ಟ್ ಫೆä್ಲೕರ್‌ಗೆ ಬಂದು ಇನ್ನೇನು ಮೂರನೇ ಮಹಡಿಗೆ ಬರುತ್ತದೆ ಎಂದುಕೊಳ್ಳುವಾಗಲೇ ಕತೆ ಅಪಾರ್ಟ್‌ಮೆಂಟ್‌ನ ಸ್ಟೇರ್‌ಕೇಸ್ ಮೇಲೆಯೇ ಮುಕ್ತಾಯ ಆಗುತ್ತದೆ. ಥ್ರಿಲ್ಲಿಂಗ್ ನಿರೂಪಣೆಯ ನೆರಳನ್ನೇ ನಂಬಿಕೊಂಡು ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ‘ಅಮೃತ ಅಪಾರ್ಟ್‌ಮೆಂಟ್ಸ್’ ಅತ್ಯುತ್ತಮ ಉದಾಹರಣೆ. ಒಟ್ಟಿಗೆ ಜೀವನ ಮಾಡುವುದಕ್ಕಿಂತ ಬೇರೆ ಬೇರೆ ಆಗಿಯೇ ಬದುಕುವುದೇ ಲೇಸು ಎನ್ನುವ ಈಗಿನ ಜನರೇಷನ್ ಕತೆಯನ್ನು ಹೇಳಲು ನಿರ್ದೇಶಕರು ಒಳ್ಳೆಯ ಪ್ರಯತ್ನ ಮಾಡಿದ್ದಾರೆ ಎಂಬುದಷ್ಟೇ ಈ ಚಿತ್ರದ ಹೈಲೈಟ್.