Asianet Suvarna News Asianet Suvarna News

Movie Review: ಆತಂಕ ನೀಡಿ ಆಹ್ಲಾದ ಉಳಿಸುವ ಇಂಟರ್‌ನೆಟ್ ಸಿನಿಮಾ 100

ಈ ಸಿನಿಮಾ ಒಂದು ಕನ್ನಡಿ ಥರ. ಅಲ್ಲಿ ಏನೋ ಕಾಣಿಸಿದರೆ ಒಂದೊಂದು ಕಡೆ ನಮ್ಮ ಚಿತ್ರವೇ ಕಾಣಿಸಿಕೊಳ್ಳುತ್ತದೆ. ಅಯ್ಯೋ ನಾನೂ ಹೀಗೆ ಮಾಡಿದ್ದೇನಲ್ಲ ಅನ್ನಿಸುತ್ತದೆ. ಒಬ್ಬೊಬ್ಬರದು ಒಂದೊಂದು ಥರದ ಚಿತ್ರ ಇರುತ್ತದೆ. ಸಣ್ಣ ಮಟ್ಟಿಗಾದರೂ ನಮ್ಮಲ್ಲೊಂದು ನಿಟ್ಟುಸಿರನ್ನು ಹೊರಡಿಸುವುದು ಈ ಸಿನಿಮಾದ ಸಾರ್ಥಕತೆ. ರಮೇಶ್, ರಚಿತಾರಾಮ್, ಪೂರ್ಣ ತಮ್ಮ ಪಾತ್ರವೇ ಆಗಿಬಿಟ್ಟಿದ್ದಾರೆ. 

Ramesh Aravind acted 100 a must watch film gvd
Author
Bangalore, First Published Nov 20, 2021, 3:30 PM IST

ರಾಜೇಶ್ ಶೆಟ್ಟಿ

ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಂತ ದಿನದ ಅತಿ ಹೆಚ್ಚು ಸಮಯ ಅದರಲ್ಲೇ ಕಳೆಯುತ್ತಿರುತ್ತೇವೆ. ಎದುರಿನವರಿಗೆ ಗೊತ್ತೇ ಆಗದಂತೆ ಸೋಷಿಯಲ್ ಮೀಡಿಯಾದಲ್ಲೇ ಒಂದು ಜಗತ್ತು ಸೃಷ್ಟಿಸಿಕೊಂಡು ಬಿಟ್ಟಿರುತ್ತೇವೆ. ಆ ಅನಾಮಿಕತೆಯಲ್ಲಿರುವ ಕ್ರೌರ್ಯವನ್ನು ಹೇಳುವ ಕತೆ ಇದು. ಕಣ್ಣಿಗೆ ಕಾಣಿಸದೇ ಇರುವ ಜಗತ್ತು ನಮ್ಮನ್ನು ಹೇಗೆ ಆಳುತ್ತದೆ ಎಂಬುದನ್ನು ರಮೇಶ್ ಅರವಿಂದ್ ನಿರಾಳವಾಗಿ ಕೂತು ನೋಡುವಂತೆ ಚಿತ್ರಿಸಿ ಹೇಳಿದ್ದಾರೆ. 

ಕತೆಯಲ್ಲಿ ಹೀರೋ ಒಬ್ಬ ಪೊಲೀಸ್ ಅಧಿಕಾರಿ. ಯಾವುದೋ ಒಂದು ಕೇಸಿನ ಬೆನ್ನು ಬಿದ್ದ ಹೋದಾಗ ಆ ಕೇಸು ತಮ್ಮ ಬುಡಕ್ಕೆ ಬಂದು ಸೇರುತ್ತದೆ. ಅಲ್ಲಿಂದ ಆ ಕೇಸನ್ನು ತೆರೆಯುತ್ತಾ ಹೋದಂತೆ ವಿಶ್ವರೂಪವೇ ಕಣ್ಣ ಮಂದೆ ಕಾಣಿಸಿಕೊಳ್ಳುತ್ತದೆ. ಒಂದು ಕಂಪ್ಯೂಟರ್ ಇಟ್ಟುಕೊಂಡು ತಂತ್ರಜ್ಞಾನದ ಮೂಲಕ ಏನೇನೆಲ್ಲಾ ಮಾಡಬಹುದು ಅನ್ನುವುದನ್ನು ನೋಡಿದರೆ ಗಾಬರಿಯಾಗುತ್ತದೆ. ಆ ಗಾಬರಿಯನ್ನು ಆತಂಕವನ್ನು ಚೂರು ಚೂರೇ ನೋಡುಗನಿಗೂ ದಾಟಿಸುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. 

ನಿರ್ದೇಶನ: ರಮೇಶ್ ಅರವಿಂದ್

ತಾರಾಗಣ: ರಮೇಶ್ ಅರವಿಂದ್, ಪೂರ್ಣ, ರಚಿತಾ ರಾಮ್, ವಿಶ್ವ ಕರ್ಣ

ರೇಟಿಂಗ್: 4

ಈ ಸಿನಿಮಾ ಒಂದು ಕನ್ನಡಿ ಥರ. ಅಲ್ಲಿ ಏನೋ ಕಾಣಿಸಿದರೆ ಒಂದೊಂದು ಕಡೆ ನಮ್ಮ ಚಿತ್ರವೇ ಕಾಣಿಸಿಕೊಳ್ಳುತ್ತದೆ. ಅಯ್ಯೋ ನಾನೂ ಹೀಗೆ ಮಾಡಿದ್ದೇನಲ್ಲ ಅನ್ನಿಸುತ್ತದೆ. ಒಬ್ಬೊಬ್ಬರದು ಒಂದೊಂದು ಥರದ ಚಿತ್ರ ಇರುತ್ತದೆ. ಸಣ್ಣ ಮಟ್ಟಿಗಾದರೂ ನಮ್ಮಲ್ಲೊಂದು ನಿಟ್ಟುಸಿರನ್ನು ಹೊರಡಿಸುವುದು ಈ ಸಿನಿಮಾದ ಸಾರ್ಥಕತೆ. ರಮೇಶ್, ರಚಿತಾರಾಮ್, ಪೂರ್ಣ ತಮ್ಮ ಪಾತ್ರವೇ ಆಗಿಬಿಟ್ಟಿದ್ದಾರೆ. ಕಲಾವಿದರ ಸಾಲಿನಲ್ಲಿ ಸರ್ಪ್ರೈಸ್ ನೀಡುವುದು ವಿಶ್ವಕರ್ಣ ಎಂಬ ಹೊಸ ಪ್ರತಿಭೆ. 

100 Movie: ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿಯಾದ ನಟ ರಮೇಶ್ ಅರವಿಂದ್

ಹ್ಯಾಕರ್ ಆಗಿ ನಟಿಸಿರುವ ವಿಶ್ವಕರ್ಣ ಬೆರಗು ಹುಟ್ಟಿಸುತ್ತಾರೆ. ಗಂಭೀರವಾಗಿ ಸಿನಿಮಾ ಸಾಗುತ್ತಿರುವಾಗ ನೋಡುಗನನ್ನು ಹಗುರಗೊಳಿಸುವುದು ಇಬ್ಬರು ಪ್ರಕಾಶ್ ಬೆಳವಾಡಿ ಮತ್ತು ಶೋಭರಾಜ್. ಇವರಿಬ್ಬರ ನಟನೆ ನಿರಾಳವಾಗುವಂತೆ ಮಾಡುತ್ತದೆ. ಇದು ಯಾವುದೇ ಅತಿರೇಕಗಳಿಲ್ಲದ, ಎಲ್ಲೂ ತುಂಬಾ ಹಿಂಸೆ ಕೊಡದ ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ. ಸೈಬರ್ ಕ್ರೈಮ್ ಹೇಗೆ ನಡೆಯುತ್ತದೆ ಅನ್ನುವುದು ಇಲ್ಲಿ ಪಾಠ. 

ಸೈಬರ್ ಲೋಕದ 100 ಟ್ರೇಲರ್ ರಿಲೀಸ್: ಫ್ಯಾಮಿಲಿ ಥ್ರಿಲ್ಲರ್‌ನಲ್ಲಿ ರಮೇಶ್ ಅರವಿಂದ್

ಇಂಟರ್‌ನೆಟ್ ಕುರಿತು ಗೊತ್ತಿಲ್ಲದವರಿಗೆ ಗೊತ್ತು ಮಾಡಿಸುವ, ಮನಸ್ಥಿತಿಯನ್ನು ಬಳಸಿಕೊಂಡು ಅನಾಮಿಕನೊಬ್ಬ ಹೇಗೆ ಆಟವಾಡಿಸಬಹುದು ಎಂದು ತಿಳಿಸುವ, ಎಷ್ಟು ಮಿತಿಯಲ್ಲಿದ್ದರೆ ಒಳ್ಳೆಯದು ಎಂದು ಹೇಳದೆಯೇ ಹೇಳಿಕೊಡುವ ಈ ಸಿನಿಮಾವನ್ನು ನಿರ್ದೇಶಕ ರಮೇಶ್ ಅರವಿಂದ್ ನಿಭಾಯಿಸಿದ ರೀತಿ ಸೊಗಸಾಗಿದೆ. 'ತಿರುಟ್ಟು ಪಯಲೆ 2' ಎಂಬ ತಮಿಳು ಸಿನಿಮಾದಿಂದ ಸ್ಫೂರ್ತಿ ಪಡೆದಿರುವ ಈ ಸಿನಿಮಾ ಕನ್ನಡಕ್ಕೆ ಹೇಗೆ ಬೇಕೋ ಹಾಗೆ ರೂಪಿಸಿದ್ದಾರೆ. ಒಂದು ಸುಖೀ ಕುಟುಂಬದಲ್ಲಿ ಎದ್ದ ಸಣ್ಣದೊಂದು ಬಿರುಗಾಳಿ ತಣ್ಣಾಗಾದಾಗ ಆಗುವ ಸಮಾಧಾನ, ಆಹ್ಲಾದತೆ ಮತ್ತು ನಿರಾಳತೆಯನ್ನು ಈ ಸಿನಿಮಾ ಒದಗಿಸುತ್ತದೆ. ಅದಕ್ಕಾಗಿ ಈ ಸಿನಿಮಾ ವಿಭಿನ್ನವಾದುದು.

"

Follow Us:
Download App:
  • android
  • ios