Asianet Suvarna News Asianet Suvarna News

Filme Review: ಗೋವಿಂದ ಗೋವಿಂದ

ಸಿನಿಮಾ ಜಗತ್ತಿನಲ್ಲಿ ಕಿಡ್‌ನ್ಯಾಪ್‌ ಸ್ಟೋರಿಗಳಿಗೆ ಸಿಕ್ಕಾಪಟ್ಟೆಬೇಡಿಕೆ ಇದೆ. ಅದರಲ್ಲೂ ಈ ಕಿಡ್‌ನ್ಯಾಪ್‌ಗಳಿಗೆ ಕಾಮಿಡಿ ಸೇರಿಕೊಂಡರೆ ಸಿನಿಮಾ ನೋಡುಗನಿಗೆ ಭರಪೂರ ಮನರಂಜನೆಯಂತೂ ಗ್ಯಾರಂಟಿ. 

Kannada actor Sumanth Shailendra Bhavana Kannada movie Govinda Govinda film review vcs
Author
Bangalore, First Published Nov 27, 2021, 9:32 AM IST

ಆರ್‌.ಕೇಶವಮೂರ್ತಿ

ಹೀಗೆ ನಗುವನ್ನು ಗ್ಯಾರಂಟಿ ಕೊಡುತ್ತಾ, ಮನರಂಜನೆಯೇ ಮೂಲವಾಗಿಸಿಕೊಂಡಿರುವ ಚಿತ್ರ ‘ಗೋವಿಂದ ಗೋವಿಂದ’ (Govinda Govinda). ಮನರಂಜನೆಯ ಹೊರತಾಗಿ ಬೇರೆ ಏನನ್ನು ಬಯಸದವರು ಈ ಸಿನಿಮಾ ನೋಡಬಹುದು. ಕಿರುತೆರೆಯಲ್ಲಿ ಧಾರಾವಾಹಿಗಳನ್ನೂ ಕೂಡ ಸಿನಿಮಾ ಲೆವೆಲ್ಲಿಗೆ ರೂಪಿಸುತ್ತಿದ್ದ ತಿಲಕ್‌ (Thilak) ಅವರು ತಮಗೆ ಇದು ಮೊದಲ ಸಿನಿಮಾ ಎಂಬುದನ್ನು ಮರೆಸುವಂತೆ ಕೆಲಸ ಮಾಡಿದ್ದಾರೆ. ಹೀಗಾಗಿಯೇ ಕಿಡ್‌ನ್ಯಾಪ್‌ (Kidnap) ಕತೆಗೆ ಒಂದಿಷ್ಟುಟ್ವಿಸ್ಟ್‌, ತಂದೆ ಮಗಳ ಎಮೋಷನ್‌ (Emotion) , ಪ್ರೀತಿ- ಪ್ರೇಮ ಇವಿಷ್ಟೂಜತೆ ಮಾಡಿಸಿ ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.

Govinda Govinda: ಕಾಮಿಡಿ ಥ್ರಿಲ್ಲರ್ ಜಾನರ್‌ನಲ್ಲಿ ನಟ ಸುಮನ್ ಶೈಲೇಂದ್ರ

ಮೂವರು ಬೇಜವಾಬ್ದಾರಿ ಕಾಲೇಜು (College) ಹುಡುಗರು. ಅವರಿಗೊಂದಿಷ್ಟುದುಡ್ಡು ಬೇಕು. ಅದೇ ಕಾಲೇಜಿನಲ್ಲಿರುವ ಹುಡುಗಿಯೊಬ್ಬಳಿಗೆ ಡ್ಯಾನ್ಸರ್‌ (Dancer) ಆಗುವ ಕನಸು. ಆದರೆ, ಆಕೆಯ ಕನಸಿಗೆ ಅಪ್ಪನೇ ವಿಲನ್‌ (Villain). ಮನೆ ಬಿಟ್ಟು ಹೋಗಬೇಕು ಎನ್ನುವ ಆಕೆಗೂ ದುಡ್ಡು ಬೇಕು. ಮತ್ತೊಬ್ಬ ಸಿನಿಮಾ ನಿರ್ದೇಶಕ. ಸಿನಿಮಾನೇ ಜೀವನ ಎಂದುಕೊಂಡವನು. ಸ್ಟಾರ್‌ ನಟಿಗೆ ಕತೆ ಹೇಳಿ ಆಕೆ ಜತೆ ಸಿನಿಮಾ ಮಾಡಬೇಕೆಂಬ ಆಸೆ. ಬೇಜವಾಬ್ದಾರಿ ಹುಡುಗರು, ಕನಸು-ಗುರಿ ಹೊತ್ತುಕೊಂಡ ಹುಡುಗಿ ಈ ನಾಲ್ಕು ಜನ ಜತೆಯಾದರೆ ಏನಾಗುತ್ತದೆ ಎನ್ನುವ ಕುತೂಹಲಕಾರಿ ಅಂಶದ ಮೇಲೆ ಹುಟ್ಟಿಕೊಳ್ಳುವ ಈ ಕತೆಯ ಪಾತ್ರಧಾರಿಗಳೇ ಆ ಯುವ ನಿರ್ದೇಶಕನ ಮುಂದೆ ಬಂದರೆ, ಅವರ ಸಾವು- ಬದುಕಿಗೆ ಕಾರಣವಾದರೆ ಮುಂದೇನು ಎನ್ನುವುದು ಚಿತ್ರದ ಮತ್ತೊಂದು ತಿರುವು. ಜನಪ್ರಿಯ ಸಿನಿಮಾ ನಟಿ, ಯುವ ನಿರ್ದೇಶಕ, ಮೂವರು ಹುಡುಗರು, ಒಬ್ಬ ಪ್ರಿನ್ಸಿಪಾಲ್‌ (Principal) ಮಗಳು... ಇವಿಷ್ಟುಪಾತ್ರಗಳ ಮೂಲಕ ನಿರ್ದೇಶಕ ತಿಲಕ್‌ ಅವರು ವಿರಾಮದ ಹೊತ್ತಿಗೆ ಪ್ರೇಕ್ಷಕರಿಂದ ‘ಗೋವಿಂದ ಗೋವಿಂದ’ ಅನಿಸುತ್ತಾರೆ.

Kannada actor Sumanth Shailendra Bhavana Kannada movie Govinda Govinda film review vcs

ಇಲ್ಲೊಂದು ಹುಚ್ಚನ ಪಾತ್ರವೂ ಇದೆ. ಮೇಲೆ ಹೇಳಿದ ಕತೆಯ ಅಷ್ಟೂಪಾತ್ರಧಾರಿಗಳನ್ನು ತನ್ನ ಸುತ್ತ ತಿರುಗುವಂತೆ ಮಾಡುವ ಹುಚ್ಚನ ಪಾತ್ರ ಕೂಡ ಕ್ಲೈಮ್ಯಾಕ್ಸ್‌ನಲ್ಲಿ (Climax) ಹಾಸ್ಯದ ದಾರಿಯನ್ನು ರೂಪಿಸುತ್ತದೆ. ಕಿಡ್ನಾಪರ್‌ಗಳಾಗಿ ಸುಮಂತ್‌ ಶೈಲೇಂದ್ರ ಬಾಬು, ವಿಜಯ್‌ ಚೆಂಡೂರು, ಮಜಾಟಾಕೀಸ್‌ ಪವನ್‌ (Maja talkies Pavan), ಕಿಡ್‌ನ್ಯಾಪ್‌ಗೆ ಒಳಗಾಗುವ ಕವಿತಾ, ಸ್ಟಾರ್‌ ನಟಿಯಾಗಿ ಭಾವನಾ, ಯುವ ನಿರ್ದೇಶನಕನಾಗಿ ರೂಪೇಶ್‌, ಹುಚ್ಚನಾಗಿ ಕಾಮಿಡಿ ಕಿಲಾಡಿಗಳು (Comedy Kiladigalu) ಗೋವಿಂದೇಗೌಡ ಅವರು ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್‌ ಚಿತ್ರಗಳ ಪ್ರಿಯ ಎನಿಸಿಕೊಂಡಿದ್ದ ಸುಮಂತ್‌ ಮೊದಲ ಬಾರಿಗೆ ಇಲ್ಲಿ ನಗಿಸುವ ಸಾಹಸ ಮಾಡಿದ್ದಾರೆ. ಸಿನಿಮಾ ಮುಗಿಯುವಾಗಲೂ ಕಾಮಿಡಿ ಕಿಕ್‌ ಕೊಡುವ ಗೋವಿಂದೇಗೌಡ ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತಾರೆ. ಚಿತ್ರದ ಪ್ರತಿಯೊಂದು ಪಾತ್ರವನ್ನು ಎಷ್ಟುಬೇಕೋ ಅಷ್ಟುಮಾತ್ರ ದುಡಿಸಿಕೊಳ್ಳುವಲ್ಲಿ ನಿರ್ದೇಶಕ ತಿಲಕ್‌ ಯಶಸ್ವಿಯಾಗಿದ್ದಾರೆ.

Follow Us:
Download App:
  • android
  • ios