Diamond Cross Review: ಇಲ್ಲಿ ಕಳ್ಳರು ಕೂಡ ಕ್ರಾಂತಿಕಾರಿಗಳೇ!

ರೋಜರ್‌ ನಾರಾಯಣ, ರಜತ್‌ ಅಣ್ಣಪ್ಪ, ರೂಪಿಕಾ, ಮನು ಕೆ ಎಂ ಸಿನಿಮಾ ರಿಲೀಸ್ ಆಗಿದೆ.

Kannada film Diamond cross movie review vcs

ಆರ್.ಕೆ.

ಸೈಬರ್‌ ಕ್ರೈಮ್‌ ಕತೆ ಹೇಳುವ ‘ಡೈಮಂಡ್‌ ಕ್ರಾಸ್‌’ ಸಿನಿಮಾ ‘ಇಲ್ಲಿ ಕಳ್ರು ಕೂಡ ಕ್ರಾಂತಿಕಾರಿಗಳೇ’ ಎನ್ನುವ ಸಂದೇಶ ಹೇಳುತ್ತದೆ. ಈ ಕಳ್ಳರು ಯಾರು, ಅವರು ಕ್ರಾಂತಿಕಾರಿಗಳಾಗುವುದು ಯಾಕೆ ಮತ್ತು ಯಾರಿಗಾಗಿ, ಕೊನೆಗೆ ಕಳ್ಳರು ಸಿಗುತ್ತಾರೆಯೇ ಎಂಬುದು ಚಿತ್ರದ ಒಟ್ಟು ಕತೆ. ಮಾಹಿತಿ, ಸನ್ನಿವೇಶಗಳ ರೀತಿ ಸಾಗುವ ಸಿನಿಮಾ ‘ಎಂಡಿ’ ಹಾಗೂ ‘ಮಯೂರ’ ಯಾರು ಎಂದು ಕಂಡು ಹಿಡಿಯುವುದೇ ಚಿತ್ರದ ಅಂತಿಮ ಗುರಿ. ಆದರೆ, ಚಿತ್ರದ ಕೊನೆಯಲ್ಲಿ ಕೊಟ್ಟಿರುವ ಟ್ವಿಸ್ಟ್‌ ಚಿತ್ರದ ಪಾರ್ಟ್‌ 2ಗೆ ಕಾಯುವಂತೆ ಮಾಡಿದೆ. ಆ್ಯಕ್ಷನ್‌, ತನಿಖೆ ಮತ್ತು ಚೇಸಿಂಗ್‌ನಲ್ಲೇ ಬಹುತೇಕ ಸಿನಿಮಾ ಮುಗಿಯುತ್ತದೆ. ಸಾಹಸಗಳಲ್ಲಿ ರಜತ್‌ ಅಣ್ಣಪ್ಪ ಹೀರೋ ಅನಿಸಿಕೊಂಡರೆ, ಚೇಸಿಂಗ್‌ ಮಾಡುತ್ತಲೇ ರೋಜರ್‌ ನಾರಾಯಣ ಗಮನ ಸೆಳೆಯುತ್ತಾರೆ.

ತಾರಾಗಣ: ರೋಜರ್‌ ನಾರಾಯಣ, ರಜತ್‌ ಅಣ್ಣಪ್ಪ, ರೂಪಿಕಾ, ಮನು ಕೆ ಎಂ
ನಿರ್ದೇಶನ: ರಾಮ್‌ ದೀಪ್‌

KOUSALYA SUPRAJA RAMA REVIEW: ಗಂಡಸಿನ ಅಹಂ, ಹೆಣ್ಣಿನ ತಾಳ್ಮೆ ಮಧ್ಯೆ ರಾಮನ ಆಟ

ಸೈಬರ್‌ ಅಪರಾಧದಲ್ಲಿ ತೊಡಗಿರುವ ಎಂಡಿ ಹಾಗೂ ಮಯೂರ ಹೆಸರಿನ ಕಳ್ಳರ ಗುಂಪನ್ನು ಹಿಡಿಯಲು ಪೊಲೀಸ್ ಇಲಾಖೆ ಮುಂದಾಗುತ್ತಾದೆ. ಈ ಪೈಕಿ ಮಯೂರ ಗ್ರೂಪಿನಲ್ಲಿರುವ ನಾಯಕ ಪೊಲೀಸರ ಕೈಗೆ ಸಿಕ್ಕಿಕೊಳ್ಳುತ್ತಾನೆ. ತಾವು ಯಾಕೆ ಸೈಬರ್‌ ಅಪರಾಧಕ್ಕೆ ಬರಬೇಕಾಯಿತು, ನಂತರ ನಾವು ಸ್ವಾರ್ಥಕ್ಕಾಗಿ ಮಾಡುತ್ತಿದ್ದ ಅಪರಾಧವನ್ನು ಸಮಾಜಕ್ಕೆ ಮಾಡಲು ಕಾರಣ ಏನು ಎಂಬುದನ್ನು ಪೊಲೀಸ್‌ ಅಧಿಕಾರಿ ಮುಂದೆ ಹೇಳುವ ಮೂಲಕ ಕತೆ ತೆರೆದುಕೊಳ್ಳುತ್ತದೆ. ಮೂವರು ಹುಡುಗರು. ಹ್ಯಾಕರ್‌ಗಳಿಂದ ಡಾಟಾ ರಿಕವರಿ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದವರು ಅದನ್ನೇ ದೊಡ್ಡ ಉದ್ಯೋಗ ಮಾಡಿಕೊಳ್ಳುತ್ತಾರೆ. ಈ ಡಾಟಾ ರೀಕವರಿ ಮಾಡುವ ಜತೆಗೆ ಸಾಮಾನ್ಯ ಜನ ನೆರವುಗೂ ಮುಂದಾಗುತ್ತಾರೆ.ಬ್ಯಾಂಕ್‌ನಲ್ಲಿ ಸಾಲ ಮನ್ನಾ ಮಾಡಿಸುವುದು, ಫೈನಾನ್ಸಿಯರ್‌ಗಳಿಂದ ಮುಕ್ತ ಮಾಡಿಸುವುದು, ರೈತರ ಆತ್ಮಹತ್ಯೆಗೆ ಸ್ಪಂಧಿಸುವುದು ಮಾಡುತ್ತಾರೆ. ಇದೆಲ್ಲವೂ ಸೈಬರ್‌ ಮೂಲಕವೇ ಮಾಡುತ್ತಾರೆ. ಪೊಲೀಸ್‌ ಇಲಾಖೆಗೆ ಇದೊಂದು ದೊಡ್ಡ ಪ್ರಕರಣವಾಗುತ್ತದೆ. ಮುಂದೆ ಇವರನ್ನು ಪೊಲೀಸರು ಹಿಡಿದ ಮೇಲೆ ಏನಾಗುತ್ತದೆ ಎಂಬುದನ್ನು ತೆರೆ ಮೇಲೆ ನೋಡಬೇಕು. ಅಲ್ಲದೆ ಚಿತ್ರದ ಮುಂದುವರಿದ ಭಾಗ ಕೂಡ ಇದೆ.

ಹಾಸ್ಟೆಲ್‌ಗೆ ಹೋಗಿಲ್ಲ ಆದ್ರೂ ಬಾಯ್ಸ್‌- ವಾರ್ಡನ್ ಲವ್ ಇಷ್ಟ ಆಯ್ತು: ಹಾಸ್ಟೆಲ್ ಹುಡುಗರು ಸಿನಿಮಾ ಹಿಂಗಿತ್ತು!

ರೋಜರ್‌ ನಾರಾಯಣ, ಎಂಡಿ ಪಾತ್ರಧಾರಿ, ರಜತ್‌ ಅಣ್ಣಪ್ಪ ಹೆಚ್ಚು ಗಮನ ಸೆಳೆಯುತ್ತಾರೆ. ನಿರೂಪಣೆ ಹಾಗೂ ಮೇಕಿಂಗ್‌ ಹೊಸದಾಗಿ. ಥ್ರಿಲ್ಲರ್‌ ಅನುಭವ ಬೇಕಿದ್ದವರು ‘ಡೈಮಂಡ್‌ ಕ್ರಾಸ್‌’ಗೆ ಹೋಗಬಹುದು.

Latest Videos
Follow Us:
Download App:
  • android
  • ios