Dil Pasand Review: ಯೇ ದಿಲ್ ಮಾಂಗೆ ಮೋರ್
ಡಾರ್ಲಿಂಗ್ ಕೃಷ್ಣ ವಿತ್ ನಿಶ್ವಿತಾ ನಾಯ್ಡು - ಮೇಘಾ ಶೆಟ್ಟಿ ಅಭಿನಯಿಸಿರುವ ದಿಲ್ ಪಸಂದ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ?
ಪೀಕೆ
‘ದಿಲ್‌ಪಸಂದ್’ ಅಂದ್ರೆ ಹದವಾದ ಡ್ರೈಫ್ರೂಟ್ಸ್ ಬೆರೆತ ತಿಂಡಿ ನೆನಪಾಗುತ್ತೆ. ಸಿನಿಮಾದ ಶೀರ್ಷಿಕೆಯೂ ಅದೇ ಇರುವ ಕಾರಣ ಸಿಹಿಯಾದ ಸೊಗಸಾದ ಕಥಾ ಹೂರಣ ಇರಬಹುದು ಅನ್ನೋ ನಿರೀಕ್ಷೆ ಮೂಡೋದು ಸಹಜ. ಆದರೆ ಸಿನಿಮಾ ಇದನ್ನೆಲ್ಲ ಉಲ್ಟಾಪಲ್ಟಾಮಾಡುತ್ತೆ.
ತಾರಾಗಣ: ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಮೇಘಾ ಶೆಟ್ಟಿ
ನಿರ್ದೇಶನ: ಶಿವ ತೇಜಸ್
O REVIEW: ಚೀನಿ ಮಾಂತ್ರಿಕನ ಆತ್ಮ ಓ ಅಂದಾಗ
ಸಂತು ಆಲಿಯಾಸ್ ಸಂತೋಷ ಹುಡುಗಿಯರ ಬಗ್ಗೆ ಮನಸ್ಸಲ್ಲೇ ಮಂಡಿಗೆ ತಿನ್ನೋ ಹುಡುಗ. ಏಳನೇ ಕ್ಲಾಸಲ್ಲಿ ಮದುವೆ ಆಗ್ತೀನಿ ಅಂತ ಹೊರಟು ಅಪ್ಪನಿಂದ ಬರೆ ಹಾಕಿಸಿಕೊಂಡವ. ಆ ಕಹಿ ನೆನಪು ಆತನನ್ನು ಹುಡುಗಿಯರ ಸಂಗ ಮಾಡದಂತೆ ತಡೆಯುತ್ತದೆ. ಆದರೆ ಹುಡುಗಿಯೊಬ್ಬಳ ಹುಡುಗಾಟ ಈತನ ಬದುಕನ್ನೇ ಬದಲಿಸುತ್ತೆ. ಆ ಹುಡುಗಿ ಯಾರು, ಅವಳ ಹಿನ್ನೆಲೆ, ಅವಳ್ಯಾಕೆ ಸಂತೋಷನನ್ನು ಟಾರ್ಗೆಟ್ ಮಾಡ್ತಾಳೆ, ಇದರ ಪರಿಣಾಮ ಏನಾಗುತ್ತೆ ಅನ್ನೋದು ಕತೆಯ ಒಂದೆಳೆ. ನಿರ್ದೇಶಕರು ಇದನ್ನು ಸಾಕಷ್ಟುಸಮಯ ತಗೊಂಡು ಪಾಠ, (ಅಪ)ಹಾಸ್ಯಗಳ ಸಮೇತ ನಿರೂಪಿಸುತ್ತಾರೆ. ಚಿತ್ರಕಥೆ ಬರೆದವರಿಗೆ ಹುಡುಗಿಯರನ್ನು ಕಂಡರೆ ಕೆಂಡದಂಥಾ ಕೋಪ ಇದ್ದಿರಬೇಕು, ಸಿನಿಮಾದುದ್ದಕ್ಕೂ ಪುಂಖಾನುಪುಂಖವಾಗಿ ಹೆಣ್ಮಕ್ಕಳ ಮೇಲೆ ಮಾತಿನ ದಾಳಿ ನಡೆಯುತ್ತಲೇ ಹೋಗುತ್ತದೆ, ಅಲ್ಲಲ್ಲಿ ಇದಕ್ಕೆ ಅಶ್ಲೀಲತೆಯ ಸ್ಪರ್ಶವೂ ಇದೆ. ಒಂದು ಲಿಂಗದವರನ್ನು ಹೀಗಳೆಯುವ ಇಂಥಾ ಡೈಲಾಗ್‌ಗಳನ್ನು ಬಳಸಿದ್ದು ಸರಿಯೇ ಅಂತ ನಿರ್ದೇಶಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
Kambali Hula Review: ಮನ ಸೆಳೆಯುವ ಮಲೆನಾಡಿನ ಕಂಬ್ಳಿಹುಳ
ಇದ್ದಿದ್ದರಲ್ಲಿ ಚೆನ್ನಾಗಿದೆ ಅನಿಸೋದು ಐಶು ಕ್ಯಾರೆಕ್ಟರೈಸೇಶನ್. ಮುಂದೆ ಹೀಗಾಗಬಹುದು ಅನ್ನೋದನ್ನು ಊಹಿಸಬಹುದಾದರೂ ಅವಳ ಮನಸ್ಥಿತಿಯನ್ನು ಕೊಂಚ ಭಿನ್ನವಾಗಿ ಹೇಳಲಾಗಿದೆ. ಸಂತೋಷ ಪಾತ್ರದ ಉತ್ತರಾರ್ಧ ತುಸು ನೋಡುವಂತಿದೆ. ಉಳಿದಂತೆ ಅನಾವಶ್ಯಕ ಸಂಗತಿಗಳು, ನಗು ತರಿಸದ ಅಶ್ಲೀಲತೆ ಬೆರೆತ ಹಾಸ್ಯ, ಫೈಟ್‌ಗಳ ಮಧ್ಯೆ ಕಥೆ ಬಲಹೀನವಾಗುತ್ತದೆ. ಉಪದೇಶಗಳನ್ನು ಅಲ್ಲಲ್ಲಿ ತುರುಕಲಾಗಿದೆ. ಹಾಡುಗಳು ಮನಸ್ಸಲ್ಲುಳಿಯೋದಿಲ್ಲ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಟನೆ ಚೆನ್ನಾಗಿದೆ. ಆರಂಭದಲ್ಲಿ ಸಿದ್ದಣ್ಣನ ಮಾತು ಕುತೂಹಲ ಮೂಡಿಸುತ್ತದೆ. ಆದರೆ ಮುಂದೆ ಕುಸಿಯುತ್ತದೆ.