O Review: ಚೀನಿ ಮಾಂತ್ರಿಕನ ಆತ್ಮ ಓ ಅಂದಾಗ
ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ನಟಿಸಿರುವ 'ಓ' ಸಿನಿಮಾ ಬಿಡುಗಡೆಯಾಗಿದೆ. ಪೋಸ್ಟರ್ ನೋಡಿ ಹಾರರ್ ಅನ್ಸುತ್ತೆ ನಿಜಕ್ಕೂ ಸಿನಿಮಾ ಹೇಗಿದೆ?
ಆರ್ ಕೇಶವಮೂರ್ತಿ
ಮಾಂತ್ರಿಕರ ಆಲೋಚನೆ, ಅವರು ಸೃಷ್ಟಿಸೋ ಆತ್ಮ- ಪ್ರೇತಗಳಿಗೆ ದೇಶ, ಭಾಷೆಯ ಬೇಲಿ ಇಲ್ಲ. ಪ್ಯಾನ್ ಇಂಡಿಯಾ ಸ್ಟಾರ್‌ಗಳಂತೆ ಅವು ಒಂಥರಾ ಪ್ಯಾನ್ ವಲ್ಡ್‌ರ್ ಸ್ಟಾರ್‌ಗಳು! ಯಾವಾಗ ಬೇಕಾದರೂ ಯಾವುದೇ ಊರು, ಜಾಗ ಮತ್ತು ಮನುಷ್ಯರ ದೇಹ ಹೊಕ್ಕು, ತಮ್ಮ ಆಟ ಆರಂಭಿಸುತ್ತವೆ. ಹೀಗೆ ಸೀದಾ ಚೀನಿ ಮಾಂತ್ರಿಕನ ಬ್ಲಾಕ್ ಮ್ಯಾಜಿಕ್‌ನಿಂದ ಹುಟ್ಟಿಕೊಂಡ ಆತ್ಮಗಳು ಅವನ ಸಾವಿನ ನಂತರ ಪುಸ್ತಕ ಸೇರಿ, ಆ ಪುಸ್ತಕದ ಮೂಲಕ ಭಾರತದ ಕರ್ನಾಟಕ ರಾಜ್ಯದ, ಬೆಂಗಳೂರು ರಾಜಧಾನಿಯ ಗಾಂಧಿನಗರಕ್ಕೆ ಪ್ರವೇಶ ಮಾಡಿದರ ಫಲವೇ ‘ಓ’ ಎನ್ನುವ ಸಿನಿಮಾ. ಯಾವುದೋ ಕಾಲದಲ್ಲಿ ದೇಶ, ಗಡಿ ದಾಟಿ ಬಂದ ಆತ್ಮಗಳು ಇಲ್ಲಿ ಏನು ಮಾಡುತ್ತವೆ ಮತ್ತು ಏನು ಮಾಡಿಸುತ್ತವೆ ಎಂಬುದೇ ಚಿತ್ರದ ಕತೆ.
KAMBALI HULA REVIEW: ಮನ ಸೆಳೆಯುವ ಮಲೆನಾಡಿನ ಕಂಬ್ಳಿಹುಳ
ತಾರಾಗಣ: ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ಸಿದ್ದು ಮೂಲಿಮನಿ, ಸಂಗೀತಾ, ಶ್ರವ್ಯಾ ಗಣಪತಿ, ಸುಚೇಂದ್ರ ಪ್ರಸಾದ್
ನಿರ್ದೇಶನ: ಮಹೇಶ್
ರೇಟಿಂಗ್: 3
ಕತೆ ವಿಚಾರಕ್ಕೆ ಬಂದರೆ ಅವರು ಅಕ್ಕ-ತಂಗಿ. ನಿಶಾ ಮತ್ತು ನಿಖಿತಾ. ಇಬ್ಬರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾರೆ. ಇವರ ಜತೆಗೆ ಒಬ್ಬ ಹುಡುಗ. ಆತ ಈ ಇಬ್ಬರ ಪೈಕಿ ಒಬ್ಬರನ್ನು ಪ್ರೀತಿಸುತ್ತಿದ್ದಾನೆ. ಸಹಜವಾಗಿ ಮತ್ತೊಬ್ಬಳಿಗೆ ಅಸೂಯೆ ಹುಟ್ಟಿಕೊಳ್ಳುತ್ತದೆ. ತನಗೆ ದಕ್ಕದೆ ಹೋಗಿದ್ದು ಮತ್ತೊಬ್ಬರಿಗೆ ಸಿಗಬಾರದು ಎನ್ನುವ ಕೆಟ್ಟಆಲೋಚನೆ ಮೂಡುತ್ತದೆ. ಇದೇ ಹೊತ್ತಿನಲ್ಲಿ ನಿಶಾ ಸ್ನೇಹಿತೆ ರತಿ ಮನೆಯಲ್ಲೊಂದು ಪುಸ್ತಕ ಇದೆ. ಅದು ಚೀನಿ ಮಾಂತ್ರಿಕ ಬರೆದಿಟ್ಟಿರುವುದು. ಆ ಪುಸ್ತಕ ಹೇಗೋ ಎತ್ತಿಕೊಂಡು ಬರುತ್ತಾಳೆ. ಪ್ರೇತ- ಆತ್ಮಗಳು ನಿಶಾ ಹಿಂದೆಯೇ ಬರುತ್ತವೆ. ತನ್ನ ಅಕ್ಕನ ನಿಖಿತಾ ಮೇಲೆಯೇ ನಿಶಾ ಬ್ಲಾಕ್ ಮ್ಯಾಜಿಕ್ ಮಾಡುತ್ತಾಳೆ. ಆದರೆ, ಇಲ್ಲಿ ಸಾಯುವುದು ಯಾರು ಎನ್ನುವ ಟ್ವಿಸ್ಟ್‌ನೊಂದಿಗೆ ಚಿತ್ರದ ಮೊದಲರ್ಧ ಕತೆ ಮುಗಿದು ವಿರಾಮದ ನಂತರ ಕತೆ ಶುರುವಾಗಿ ಚೀನಿ ಮಾಂತ್ರಿಕ, ಕೇರಳ ಸ್ವಾಮಿ, ದೆವ್ವ, ಆತ್ಮ ಮತ್ತು ಪ್ರೇತಗಳ ಆಟಗಳು ರಂಗೇರುತ್ತವೆ. ಇದು ಹೇಗಿರುತ್ತದೆ ಎಂಬುದನ್ನು ಸಿನಿಮಾ ನೋಡಿದರೆ ತಿಳಿಕೊಳ್ಳಬಹುದು.
Banaras Review: ಚದುರಿದ ಚಿತ್ರಗಳಾಗಿ ಉಳಿಯುವ ಬನಾರಸ್
ತುಂಬಾ ಕಡಿಮೆ ಪಾತ್ರಗಳು, ಅಗತ್ಯಕ್ಕೆ ತಕ್ಕಂತೆ ಚಿತ್ರಿಕರಣದ ತಾಣಗಳಲ್ಲಿ ‘ಓ’ ಚಿತ್ರವನ್ನು ರೂಪಿಸಿದ್ದಾರೆ ನಿರ್ದೇಶಕರು. ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಅವರು ಸ್ಪರ್ಧೆಗೆ ಬಿದ್ದಂತೆ ತೆರೆ ಮೇಲೆ ತಮ್ಮ ಪಾತ್ರಗಳನ್ನು ಪೋಷಣೆ ಮಾಡಿದ್ದಾರೆ. ಅಂದಹಾಗೆ ‘ಓ’ ಅಂತ್ಯವಲ್ಲ, ಆರಂಭ. ಅಂದರೆ ಕತೆ ಮುಂದುವರಿಯಲಿದೆ. ಯಾಕೆಂದರೆ ಆತ್ಮಗಳ ಆಟ ಬಲ್ಲವರಾರು!