Raymo Film Review: ಬೆಳಕು ಕತ್ತಲೆಗಳ ರೋಲರ್ ಕೋಸ್ಟರ್
ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮತ್ತು ಇಶಾನ್ ನಟಿಸಿರುವ ರೇಮೋ ಸಿನಿಮಾ ರಿಲೀಸ್ ಅಗಿದೆ...ಹೇಗಿದೆ ಗೊತ್ತಾ?
ಪ್ರಿಯಾ ಕೆರ್ವಾಶೆ
ಮಗುವಿನ ಕಣ್ಣಲ್ಲಿ ಕಾಮನಬಿಲ್ಲು ಮೂಡಿಸಿ ಮರುಕ್ಷಣದಲ್ಲಿ ವಾಟರ್ ಬಬಲ್ ಒಡೆದು ಹೋಗುತ್ತೆ. ಅದು ಸೃಷ್ಟಿಸಿದ ಬಣ್ಣ ಕಣ್ಣಲ್ಲಿ ಮನಸ್ಸಲ್ಲಿ ಬಹಳ ಹೊತ್ತು ಉಳಿಯುತ್ತೆ.
ಅಂಥದ್ದೊಂದು ಮ್ಯಾಜಿಕಲ್ ಮೊಮೊಂಟ್ ಅನ್ನು ಹಿಡಿದುಕೊಟ್ಟು, ಆ ಬಣ್ಣದ ಸೊಗಸನ್ನೂ, ಗುಳ್ಳೆಯ ಕ್ಷಣಿಕತೆಯನ್ನೂ, ವಾಸ್ತವದ ಪಾಠವನ್ನೂ ಹೇಳಲು ಹೊರಟ ಸಿನಿಮಾ ರೇಮೋ.
‘ಡಾಗ್ ಆ್ಯಂಡ್ ಡ್ಯಾಡ್ ನಾಟ್ ಅಲೌಡ್’ - ತನ್ನ ರೂಮಿಗೆ ಹೀಗೊಂದು ಬೋರ್ಡ್ ಹಾಕಬೇಕೆಂದುಕೊಂಡಿರುವ ಹೀರೋ ರೇವಂತ್ ದೇಶಪಾಂಡೆ. ಕೋಟ್ಯಾಧಿಪತಿ ಅಪ್ಪನ ಪರಮ ದ್ವೇಷಿ. ದುಡ್ಡು, ಕುಡಿತ, ದೈಹಿಕ ವಾಂಛೆ ಮತ್ತು ಮ್ಯೂಸಿಕ್ ಈತನ ಜಗತ್ತು. ಇಂಥಾ ಹಿಪ್ಪಿ ಮನಸ್ಥಿತಿ ಹುಡುಗನ ಲೈಫಿಗೆ ಶಾಸ್ತ್ರೀಯ ಸಂಗೀತ ಹಾಡುವ ಸಂಪ್ರದಾಯಸ್ಥ ಹುಡುಗಿ ಎಂಟ್ರಿ. ಆಮೇಲೆ ರೋಲರ್ ಕೋಸ್ಟರ್ ರೈಡ್.
SADDU VICHARANE NADEYUTTIDE REVIEW: ಅಸಾಧ್ಯ ತಿರುವುಮುರುವುಗಳ ಸುದೀರ್ಘ ಪಯಣ
ತಾರಾಗಣ: ಇಶಾನ್, ಆಶಿಕಾ ರಂಗನಾಥ್, ರಾಜೇಶ್ ನಟರಂಗ, ಮಧು ಶಾ, ಶರತ್‌ಕುಮಾರ್
ನಿರ್ದೇಶನ : ಪವನ್ ಒಡೆಯರ್
ರೇಟಿಂಗ್ : 3
ಕಥೆಯ ದಾರ ಹಳೆಯದಾದರೂ ಹೆಣೆದ ರೀತಿಯಲ್ಲೊಂದು ಭಿನ್ನತೆ ಇದೆ. ರೊಮ್ಯಾಂಟಿಕ್ ಕಥೆಯನ್ನು ನಿರೂಪಿಸೋದ್ರಲ್ಲಿ ನಿರ್ದೇಶಕ ಪವನ್ ಒಡೆಯರ್ ಸೋತಿಲ್ಲ. ಆದರೆ ಅಲ್ಲಲ್ಲಿ ಫೋಕಸ್ ಔಟ್ ಆಗಿರೋದು ಗೊತ್ತಾಗುತ್ತೆ. ಎಲ್ಲಿಂದಲೋ ಶುರುವಾಗೋ ಕಥೆ ಎಲ್ಲೋ ಹೋಗಿ ಮತ್ತೆಲ್ಲೋ ಕೊನೆಯಾಗುತ್ತೆ. ಅಲ್ಲಲ್ಲಿ ಎದುರಾಗುವ ತಿರುವುಗಳು ಚೆನ್ನಾಗಿವೆ.
Tribble Riding Review ಫನ್ನು, ಎಮೋಷನ್ನು ಮತ್ತು ಗಣೇಶ್ ಎಲಿವೇಷನ್ನು
ಕಥೆಯ ತಿರುವುಗಳಷ್ಟೇ ಮಜಾ ನೀಡೋದು ಟೆಕ್ನಿಕಲ್ ಅಂಶಗಳು. ಇದೊಂದು ಮ್ಯೂಸಿಕಲ್ ಡ್ರಾಮಾವೂ ಆಗಿರುವ ಕಾರಣ ಅರ್ಜುನ್ ಜನ್ಯಾ ಹಾಡಿನಲ್ಲಿ ತೇಲಿಸುತ್ತಾರೆ. ‘ಚೂರಿ ಚುಚ್ಚಿ ಕೇಳುವೆ ನೋವಾಯಿತೇ..’ ಎಂಬ ಸಾಲುಗಳು ಕಾಡುತ್ತವೆ. ವೈದಿ ಅವರ ಸಿನಿಮಾಟೋಗ್ರಫಿ ದೃಶ್ಯಕಾವ್ಯವನ್ನು ಕಣ್ಮುಂದೆ ನಿಲ್ಲಿಸುತ್ತದೆ. ಕೆ ಎಂ ಪ್ರಕಾಶ್ ಎಡಿಟಿಂಗ್ ಹಾಡುಗಳಲ್ಲಿ ಸಖತ್ ಶಾಪ್‌ರ್. ಅದ್ದೂರಿ ಬಜೆಟ್ ಮೇಕಿಂಗ್ ಸ್ಕ್ರೀನ್ ಮೇಲೂ ಕಾಣುತ್ತದೆ.
ಹಿಪ್ಪಿಯಂಥಾ ಲುಕ್ ಇಶಾನ್‌ಗೆ ಹೊಂದುತ್ತದೆ. ಆಶಿಕಾ ನಟನೆಯಲ್ಲಿ ಇನ್ನೂ ಜೋಶ್ ಬೇಕಿತ್ತು. ರಾಜೇಶ್ ನಟರಂಗ ಎಂದಿನಂತೆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮಧು ಶಾ ಮಾಡಿರೋ ಪಾತ್ರಕ್ಕೆ ಸಹಜತೆ ಬೇಕಿತ್ತು. ‘ಹುಡುಗರು ಸಂಪಾದನೆ ಮಾಡ್ತಾರೆ, ಹುಡುಗೀರು ಮದುವೆ ಆಗ್ತಾರೆ’ ಅನ್ನೋ ರೀತಿಯ ಸಾಲುಗಳಲ್ಲಿ, ಸ್ಟೋರಿ ಲೈನ್‌ನ ಕೆಲವು ಕಡೆ ಹಳೆಯ ಮೈಂಡ್‌ಸೆಟ್ ಅನ್ನು ಇನ್ನೂ ಮೀರಲಾಗದ್ದು ಗೊತ್ತಾಗುತ್ತದೆ. ಪ್ರಿ-ಕ್ಲೈಮ್ಯಾಕ್ಸ್‌ನಲ್ಲಿ ಅನಿರೀಕ್ಷಿತ ತಿರುವಿದ್ದರೂ ಕ್ಲೈಮ್ಯಾಕ್ಸ್‌ನಲ್ಲಿ ಅಂಥಾ ಹೊಸತನ ಕಾಣೋದಿಲ್ಲ. ಆರಂಭದಲ್ಲಷ್ಟೇ ಮಿಂಚಿ ಮರೆಯಾಗುವ ‘ರೇಮೋ’, ಸಿನಿಮಾಗೆ ಯಾಕೆ ಟೈಟಲ್ ಆಯ್ತು ಅನ್ನೋದು ಪ್ರಶ್ನೆಯಾಗಿಯೇ ಉಳಿಯುತ್ತೆ.