ರಾಕೇಶ್‌ ಮಯ್ಯ, ಪಾವನಾ ಗೌಡ ಮತ್ತು ಅಚ್ಯುತ್‌ ಕುಮಾರ್‌ ನಟಿಸಿರುವ ಸದ್ದು! ವಿಚಾರಣೆ ನಡೆಯುತ್ತಿದೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? 

ರಾಜೇಶ್‌ ಶೆಟ್ಟಿ

ಪ್ರೀತಿಸಿ ಮದುವೆಯಾದ ಒಂದು ಜೋಡಿ ಕಾಣೆಯಾಗಿದೆ ಎಂಬಲ್ಲಿಂದ ಕತೆ ಶುರು. ಅವರು ಎಲ್ಲಿ ಹೋಗಿದ್ದಾರೆ, ಅವರಿಗೆ ಏನಾಗಿದೆ ಮತ್ತಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪೊಲೀಸ್‌ ಅಧಿಕಾರಿಯೊಬ್ಬರು ಆ ಊರಿಗೆ ಬರುವಲ್ಲಿಗೆ ಕತೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರ್ಶ ಪ್ರೇಮಕತೆಯೊಂದರ ತುಣುಕಿನಂತೆ ಭಾಸವಾಗುವ ಕತೆ ನಿಧಾನಕ್ಕೆ ಥ್ರಿಲ್ಲರ್‌ ಶೈಲಿಗೆ ಹೊರಳಿಕೊಳ್ಳುವುದನ್ನು ನೋಡುವುದೇ ಚೆಂದ.

ನಿರ್ದೇಶನ: ಭಾಸ್ಕರ್‌ ಆರ್‌.

ತಾರಾಗಣ: ಮಧುನಂದನ್‌, ರಾಕೇಶ್‌ ಮಯ್ಯ, ಪಾವನಾ ಗೌಡ, ಅಚ್ಯುತ್‌ ಕುಮಾರ್‌, ರಾಘು ಶಿವಮೊಗ್ಗ, ಜಹಾಂಗೀರ್‌

ರೇಟಿಂಗ್‌- 2

TRIBBLE RIDING REVIEW ಫನ್ನು, ಎಮೋಷನ್ನು ಮತ್ತು ಗಣೇಶ್‌ ಎಲಿವೇಷನ್ನು

ದ್ವಿತೀಯಾರ್ಧದಲ್ಲಿ ಇದೊಂದು ಪಕ್ಕಾ ಥ್ರಿಲ್ಲರ್‌. ಒಂದರ ಹಿಂದೊಂದು ತಿರುವುಗಳು ಎದುರಾಗುತ್ತಾ ಹೋಗುತ್ತವೆ. ಅವರನ್‌ ಬಿಟ್‌ ಇವರನ್‌ ಬಿಟ್‌ ಮತ್ಯಾರು ಎಂಬ ಹುಡುಕಾಟದಲ್ಲಿ ಅಪರಾಧಿಗಳು ಬದಲಾಗುತ್ತಾ ಬದಲಾಗುತ್ತಾ ಕೊನೆಗೆ ಯೋಚಿಸಿ ಆಲೋಚಿಸಿ ತಲೆ ಕೆರೆದುಕೊಂಡಾಗ ನೋಡುವವರು ತಮ್ಮನ್ನೇ ತಾವು ಅಪರಾಧಿ ಇರಬಹುದಾ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ಸಶಕ್ತ ವಿಶಿಷ್ಟಟರ್ನು ಟ್ವಿಸ್ಟುಗಳು ಸೇರಿಕೊಂಡಿವೆ. ಮೊದಲಾರ್ಧದಲ್ಲಿರುವ ನಿಧಾನವನ್ನು ತೊಡೆದುಹಾಕಲು ಪ್ರಯತ್ನಿಸುವಂತೆ ನಿರ್ದೇಶಕರು ಸೆಕೆಂಡ್‌ ಹಾಫ್‌ನಲ್ಲಿ ಅಸಾಧ್ಯ ತಿರುವು ಮುರುವಿನಲ್ಲೂ ಅಪರೂಪದ ವೇಗ ಇಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಸಿನಿಮಾ ಹೆಚ್ಚುಗಾರಿಕೆ ಮೆರೆಯುತ್ತದೆ.

ಇಲ್ಲಿ ಯಾವುದೂ ತನ್ನಿಂತಾನೇ ಘಟಿಸುತ್ತದೆ ಎಂದು ಅನ್ನಿಸುವುದಿಲ್ಲ. ಎಲ್ಲವೂ ಅವಶ್ಯಕತೆಗೆ ತಕ್ಕಂತೆ ನಡೆಯುತ್ತದೆ. ಇಲ್ಲಿ ಅತಿಯಾದ ಜಾಣತನವೂ ಇದೆ. ಬುದ್ಧಿವಂತ ಪಾತ್ರ ಪೆದ್ದಾಗಿಯೂ ವರ್ತಿಸುತ್ತದೆ. ಥ್ರಿಲ್ಲರ್‌ ಸಿನಿಮಾದಂತೆ ಕಂಡರೂ ಥ್ರಿಲ್ಲರ್‌ ಸಿನಿಮಾಗೆ ಇರಬೇಕಾದ ಸೂಕ್ಷ್ಮ ಗುಣವಿಶೇಷಣಗಳೂ ಕಾಣೆಯಾಗಿರುವುದು ವಿಶೇಷ. ಪೊಲೀಸ್‌ ಪಾತ್ರವನ್ನು ಬಿಟ್ಟರೆ ಬಹುತೇಕ ಪಾತ್ರಗಳಿಗೆ ಗುರಿ ಇದೆ ಎಂದು ಭಾಸವಾದರೂ ಗುರಿಯೇ ಇಲ್ಲ ಎಂಬ ಭಾವ ಮೂಡುವ ವೇಳೆಗೆ ಅಪರಾಧಿಯೂ ಸಿಗುತ್ತಾನೆ. ಅಲ್ಲಿಗೆ ಒಂದು ಸುದೀರ್ಘ ನಿಟ್ಟುಸಿರು.

Raana Review: ಸಮರ ಕಲೆ ಮೈದಾನದಲ್ಲಿ ರಣ ರಣ ರಾಣ

ಈ ಸಿನಿಮಾದ ನಿಜವಾದ ಆಸ್ತಿಗಳು ನಟರು. ಅಚ್ಯುತ್‌ ಕುಮಾರ್‌ ಎಂದಿನಂತೆ ಅವರ ಪಾತ್ರವನ್ನು ಜೀವಿಸಿದ್ದಾರೆ. ರಾಕೇಶ್‌ ಮಯ್ಯ ತುಂಬಾ ಚೆಂದ ಕಾಣಿಸುತ್ತಾರೆ ಮತ್ತು ಭರವಸೆಯ ನಟನೆ ನೀಡಿದ್ದಾರೆ. ಪಾವನಾ ಗೌಡ ತೆರೆಗೆ ಹಚ್ಚಿದ ದೀಪ. ಮಧುಚಂದನ್‌ ಅವರ ಧ್ವನಿ, ನಿಲುವು ವಿಶಿಷ್ಟವಾಗಿದೆ. ಸಂಗೀತ ನಿರ್ದೇಶಕ ಸಚಿನ್‌ ಬಸ್ರೂರು ಸೊಗಸಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಳಿದಂತೆ ಇದೊಂದು ಅಸಾಧ್ಯ ತಿರುವುಮುರುವುಗಳ ಸುದೀರ್ಘ ಪಯಣ.