ಹಬ್ಬಗಳ ಸೀಸನ್‌ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ತೈಲ ಉತ್ಪಾದಕ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬರುವ ಸಾಲು ಸಾಲು ಹಬ್ಬಗಳ ಸೀಸನ್‌ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ಈ ಗೊಂದಲಕ್ಕೆ ಜಗತ್ತಿನ ಬಲಶಾಲಿ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ! ಏನೆಂದು ನೋಡಿಕೊಂಡು ಬರೋಣ ಬನ್ನಿ.

ತೈಲ ಬೆಲೆ ಇಳಿಯುತ್ತಾ? ಅಥವಾ ಇಳಿಯಲ್ವಾ?!

ಜನರ ನಿರೀಕ್ಷೆಗೆ ಸಂಪೂರ್ಣ ಉಲ್ಟಾ ಫಲಿತಾಂಶ ಸಿಕ್ಕಿದೆ. ದೀಪಾವಳಿ ವೇಳೆಗೆ ತೈಲ ಬೆಲೆ ಖಂಡಿತವಾಗಿಯೂ ಇಳಿಯುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಭಾರಿ ಬೇಡಿಕೆಯಿದ್ದರೂ, ದೀಪಾವಳಿ ಹಬ್ಬ ಮುಗಿಯುವವರೆಗೆ ತೈಲ ಉತ್ಪಾದನೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸದಿರಲು ಬಲಶಾಲಿ ರಾಷ್ಟ್ರಗಳು ನಿರ್ಧರಿಸಿವೆ. ಇದರಿಂದಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವ ಭರವಸೆಗಳು ಸಂಪೂರ್ಣವಾಗಿ ಹುಸಿಯಾಗಿವೆ.

ರಷ್ಯಾ ಮತ್ತು ಸೌದಿ ಪಡೆಯ ಬಿಗ್ ಅಪ್ಡೇಟ್!

ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ 'ಒಪೆಕ್' (OPEC) ತೈಲ ಸಂಘಟನೆಯ ಏಳು ರಾಷ್ಟ್ರಗಳು ನಡೆಸಿರುವ ತುರ್ತು ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಆಘಾತ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ಉತ್ಪಾದನೆ ಹೆಚ್ಚಳಕ್ಕೆ ಬ್ರೇಕ್; ಪ್ರಸ್ತುತ ಮಾರುಕಟ್ಟೆಯಲ್ಲಿ ತೈಲ ಅಭಾವವಿದ್ದರೂ, ಅಕ್ಟೋಬರ್ ವರೆಗೆ ಕಚ್ಚಾ ತೈಲ ಉತ್ಪಾದನಾ ಕೋಟಾವನ್ನು ಹೆಚ್ಚಿಸದೆ ಯಥಾವತ್ತಾಗಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.

ಹೊಸ ಮಾರ್ಗ ಸಿಗುವವರೆಗೆ ಕಾಯುವಿಕೆ; ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ತೈಲ ರಫ್ತು ಮಾರ್ಗಗಳು ಕಂಡುಕೊಳ್ಳುವವರೆಗೆ ಪ್ರಸ್ತುತ ಇರುವ ಉತ್ಪಾದನೆಯನ್ನಷ್ಟೇ ಮುಂದುವರಿಸಲಾಗುವುದು ಎಂದು ಈ ಒಕ್ಕೂಟ ಪಟ್ಟು ಹಿಡಿದಿದೆ.

ಯುಎಸ್-ಇರಾನ್ ಯುದ್ಧ ತಂದಿಟ್ಟ ಸಂಕಟ!

ಅಮೆರಿಕ ಮತ್ತು ಇರಾನ್ ನಡುವೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಭೀಕರ ಯುದ್ಧವೇ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವಾಗಿದೆ.

1. ಹಾರ್ಮುಜ್ ಜಲಸಂಧಿ ಬ್ಲಾಕ್; ಯುದ್ಧದ ಬಿಕ್ಕಟ್ಟಿನಿಂದಾಗಿ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ ತೈಲ ಸಾಗಣೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

2. ಪೂರೈಕೆಯಲ್ಲಿ ಭಾರಿ ಕಡಿತ; ಪರ್ಷಿಯನ್ ಕೊಲ್ಲಿಯ ಮೂಲಕ ಜಗತ್ತಿನಾದ್ಯಂತ ರಫ್ತಾಗಬೇಕಿದ್ದ ಕಚ್ಚಾ ತೈಲದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಸಾಗಣೆಯಲ್ಲಾಗಿರುವ ಈ ಭಾರಿ ತಡೆಯಿಂದಾಗಿ ಜಾಗತಿಕವಾಗಿ ತೈಲ ಅಭಾವ ಸೃಷ್ಟಿಯಾಗಿದ್ದು, ಬೆಲೆ ಇಳಿಕೆ ಸಾಧ್ಯವೇ ಇಲ್ಲದಂತಾಗಿದೆ.

ಕೈಕೊಟ್ಟ ಒಪೆಕ್ ದೇಶಗಳ ಯೋಜನೆ!

2023 ರಲ್ಲಿ ಉತ್ಪಾದನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಮಾರುಕಟ್ಟೆಗೆ ಯಥೇಚ್ಛವಾಗಿ ತೈಲ ಪೂರೈಸುವ ಯೋಜನೆಯನ್ನು ಈ ಮೈತ್ರಿಕೂಟ ಹೊಂದಿತ್ತು. ಯುದ್ಧ ಮುಗಿದ ಬಳಿಕ ಉತ್ಪಾದನೆ ಹೆಚ್ಚಿಸುವ ಆಸೆಯಿತ್ತಾದರೂ, ಹಲವು ವರ್ಷಗಳ ನಿರ್ಬಂಧಗಳಿಂದಾಗಿ ಸದಸ್ಯ ರಾಷ್ಟ್ರಗಳ ಬೌದ್ಧಿಕ ಹಾಗೂ ತಾಂತ್ರಿಕ ಉತ್ಪಾದನಾ ಸಾಮರ್ಥ್ಯವೇ ಕುಸಿದುಹೋಗಿದೆ. ಇದೀಗ ಯುಎಸ್-ಇರಾನ್ ಸಮರ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತೈಲ ಪೂರೈಸುವುದು ತೈಲ ಒಕ್ಕೂಟಕ್ಕೂ ಸವಾಲಾಗಿ ಪರಿಣಮಿಸಿದೆ. ಪರಿಣಾಮವಾಗಿ, ಈ ದೀಪಾವಳಿ ಹಬ್ಬಕ್ಕೂ ತೈಲ ದರ ಇಳಿಕೆಯಾಗದೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ.