Asianet Suvarna News Asianet Suvarna News

ದೀಪಾವಳಿಗೆ Jiophone Next ಲಾಂಚ್, ಊಹೆಗೆ ನಿಲುಕದ ಬೆಲೆ ಸ್ಮಾರ್ಟ್‌ಫೋನ್?

ಭಾರತದ ರಿಲಯನ್ಸ್ (Reliance) ಮತ್ತು ಗೂಗಲ್ (Google) ಸಂಸ್ಥೆಗಳು ಜತೆಗೂಡಿ ಅಭಿವೃದ್ಧಿಪಡಿಸುತ್ತಿರುವ ಜಿಯೋಫೋನ್ ನೆಕ್ಸ್ಟ್ ದೀಪಾವಳಿಗೆ ಬಿಡುಗಡೆಯಾಗುವುದು ಪಕ್ಕಾವಾಗಿದೆ. ಈ ಫೋನ್ ಸೆಪ್ಟೆಂಬರ್ ತಿಂಗಳಲ್ಲಿ ಅಂದರೆ ಗಣೇಶ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆ ಬಳಿಕ ಬಿಡುಗಡೆಯನ್ನು ಮುಂದೂಡಲಾಯಿತು. ಕಡಿಮೆ ಬೆಲೆ ಅತ್ಯುತ್ತಮ ಅತ್ಯಾಧುನಿಕ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಲಿದೆ.

JioPhone Next to be launched on Deepavali
Author
Bengaluru, First Published Oct 27, 2021, 3:17 PM IST

ಸೆಪ್ಟೆಂಬರ್ ತಿಂಗಳಲ್ಲಿ ಅಂದರೆ ಗಣೇಶ ಹಬ್ಬಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಬೇಕಿದ್ದ ಜಿಯೋ ಫೋನ್ ನೆಕ್ಸ್ಟ್ (JioPhone Next) ಲಾಂಚ್ ಡೇಟ್ ಇದೀಗ ಫಿಕ್ಸ್ ಆಗಿದೆ. ದೇಶದ  ಬಹುದೊಡ್ಡ ಹಬ್ಬ ಎನಿಸಿಕೊಂಡಿರುವ ದೀಪಾವಳಿ ಜಿಯೋಫೋನ್ ನೆಕ್ಸ್ಟ್ ಬಿಡುಗಡೆಯು ಪಕ್ಕಾ ಆಗಿದೆ. 

ಜಿಯೋಫೋನ್ ನೆಕ್ಸ್ಟ್ ಅನ್ನು ರಿಲಯನ್ಸ್ (Reliance) ಗೂಗಲ್ (Google) ಜತೆಗೂಡಿ ಅಭಿವೃದ್ಧಿಪಡಿಸುತ್ತಿವೆ. ದೀಪಾವಳಿಗೆ ಜಿಯೋಫೋನ್ ನೆಕ್ಸ್ಟ್ ಬಿಡುಗಡೆಯಾಗುವುದನ್ನು ಭಾರತೀಯರೇ ಆದ ಗೂಗಲ್ ಸಿಇಒ ಸುಂದರ್ ಪಿಚ್ಚೈ (Sundar Pichai) ಅವರು ಖಚಿತಪಡಿಸಿದ್ದಾರೆ. ಆಂಡ್ರಾಯ್ಡ್ ಆಧರಿತ ಪ್ರಗತಿ ಒಎಸ್ (Pragati OS) ಹೊಸ ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ಈ ಫೋನ್ ರನ್ ಆಗಲಿದೆ.

ಫೇಸ್‌ಬುಕ್ ಈಗ ಭವಿಷ್ಯವನ್ನೂ ಊಹಿಸಬಲ್ಲುದು!

ಈ ಜಿಯೋಫೋನ್ ನೆಕ್ಸ್ಟ್ (Jio Phone Next) ಭಾರತದ ಜನರ ಇಂಗ್ಲಿಷ್ ಆಚೆಗಿನ ಅಗತ್ಯಗಳನ್ನು ಪೂರೈಸುವ ಫೋನ್ ಆಗಿರಲಿದೆ. ಜೊತೆಗೆ, ಭಾರತದಲ್ಲಿ ಭಾರಿ ದೊಡ್ಡ ಸಂಖ್ಯೆಯಲ್ಲಿನ ಜನರು ಫೀಚರ್‌ ಫೋನುಗಳಿಂದ ಸ್ಮಾರ್ಟ್‌ಫೋನ್‌ (Smartphone) ಬಳಕೆಗೆ ವರ್ಗಾವಣೆಯಾಗಲು ಈ ಜಿಯೋಫೋನ್ ನೆಕ್ಸ್ಟ್ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆಂದು ಹೇಳಲಾಗುತ್ತಿದೆ.

ಭಾರತದಲ್ಲಿ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್‌ಗೆ (Digital Transformation) ಜಿಯೋಫೋನ್ ನೆಕ್ಸ್ಟ್ ಅಡಿಪಾಯ ಹಾಕಲಿದೆ ಎಂದು ಪಿಚೈ ಅವರು ಹೂಡಿಕೆದಾರರಿಗೆ ವಿವರಿಸಿದ್ದಾರೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಸ್ಥಳೀಯಕೇಂದ್ರೀತ, ಸಾಕಷ್ಟು ಫೀಚರ್‌ಗಳನ್ನು ಒಳಗೊಂಡಿರುವ ಹಾಗೂ ಕಡಿಮೆ ಬೆಲೆಯ ಈ ಫೋನ್ ಸಾಕಷ್ಟು ಪರಿಣಾಮವನ್ನು ಬೀರಲಿದೆ ಎಂದು ಹೇಳಲಾಗುತ್ತಿದೆ. 

ಜಿಯೋಫೋನ್ ಬಗ್ಗೆ ಸೋರಿಕೆಯಾದ ಕೆಲವು ಮಾಹಿತಿಗಳ ಪ್ರಕಾರ ಬೆಲೆ 3,499 ರೂಪಾಯಿ ಇರಲಿದೆ. ಆದರೆ, ಈ ಬಗ್ಗೆ ರಿಲಯನ್ಸ್‌ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ. ದೀಪಾವಳಿಗೆ (Deepavali) ಬಹುಶಃ ಎಲ್ಲ ಮಾಹಿತಿಗಳು ಬಹಿರಂಗವಾಗಲಿವೆ.

2021 ಮ್ಯಾಕ್‌ಬುಕ್ ಪ್ರೋ ಲಾಂಚ್, ಏನೆಲ್ಲ ವಿಶೇಷತೆಗಳಿವೆ? 

ಜಿಯೋಫೋನ್‌ನಲ್ಲಿ ಬಳಕೆದಾರರು ತಮ್ಮ ಸಾಧನವನ್ನು ನಿರ್ವಹಿಸಲು (ಆಪ್ ತೆರೆಯುವುದು, ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು  ಇತ್ಯಾದಿ) ಮತ್ತು ತಮಗೆ ತಿಳಿದಿರುವ ಭಾಷೆಯಲ್ಲಿ ಅಂತರಜಾಲದಿಂದ ಮಾಹಿತಿ/ಕಂಟೆಂಟ್ ಅನ್ನು ಸುಲಭವಾಗಿ ಪಡೆದುಕೊಳ್ಳಲು  ವಾಯ್ಸ್ ಅಸಿಸ್ಟೆಂಟ್ (Voice Assitant) ಸಹಾಯ ಮಾಡುತ್ತದೆ.

ಅನುವಾದ (Translate) ಸೌಲಭ್ಯವು ಯಾವುದೇ ಪರದೆಯನ್ನು ಬಳಕೆದಾರರ ಆಯ್ಕೆಯ ಭಾಷೆಗೆ ಅನುವಾದಿಸಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

ಜಿಯೋಫೋನ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ (Night Mode) ಭಾವನೆಗಳು ಮತ್ತು ಹಬ್ಬಗಳ ಜೊತೆಗೂಡಿ ಚಿತ್ರಗಳ ಅಂದ ಹೆಚ್ಚಿಸಲು ಕ್ಯಾಮೆರಾ (Camera) ಆಪ್‌ನಲ್ಲಿ ವಿಶಿಷ್ಟವಾದ ಭಾರತೀಯ ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳನ್ನು ನೀಡಲಾಗಿದೆ.

ಬಳಕೆದಾರರು ಗೂಗಲ್ ಪ್ಲೇ (Google Play) ಸ್ಟೋರ್ ಮೂಲಕ ಡೌನ್‌ಲೋಡ್ (download) ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ  (Play Store)ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ (Jio) ಮತ್ತು ಗೂಗಲ್ (Google) ಆಪ್‌ಗಳ‌ನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

ಆಟೋಮೆಟಿಕ್ ಸಾಫ್ಟ್‌ವೇರ್ ಅಪ್‌ಡೇಟ್‌ಗಳೊಂದಿಗೆ ಜಿಯೋಫೋನ್ ನೆಕ್ಸ್ಟ್(JioPhone Next) ಯಾವಾಗಲೂ ಅಪ್-ಟು-ಡೇಟ್ ಆಗಿರುತ್ತದೆ. ಇತ್ತೀಚಿನ ವೈಶಿಷ್ಟ್ಯಗಳನ್ನು ಸ್ವಯಂಚಾಲಿತವಾಗಿ ಒದಗಿಸಲಾಗುವುದರಿಂದ ಬಳಕೆದಾರರ ಅನುಭವವು ಕಾಲಕ್ರಮೇಣ ಉತ್ತಮಗೊಳ್ಳುತ್ತಲೇ ಇರುತ್ತದೆ. ರೇಜಿಗೆಯಿಲ್ಲದ ಅನುಭವವನ್ನು ಖಾತ್ರಿಪಡಿಸುವುದಕ್ಕಾಗಿ ಭದ್ರತಾ ಅಪ್‌ಡೇಟ್‌ಗಳನ್ನೂ ನೀಡಲಾಗುತ್ತದೆ.  ಆಂಡ್ರಾಯ್ಡ್‌ನಿಂದ ಚಾಲಿತವಾದ, ಹೊಸದಾಗಿ ವಿನ್ಯಾಸಗೊಳಿಸಲಾದ ಪ್ರಗತಿ ಓಎಸ್, ದೀರ್ಘಾವಧಿಯ ಬ್ಯಾಟರಿ ಬಾಳಿಕೆಯನ್ನು ಖಚಿತಪಡಿಸುವುದಲ್ಲದೆ ಅತ್ಯುತ್ತಮ ಕಾರ್ಯಕ್ಷಮತೆಯನ್ನೂ ನೀಡುತ್ತದೆ.

Follow Us:
Download App:
  • android
  • ios