20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

2001ರಲ್ಲಿ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದ, ಐಕಾನಿಗ್ ಮೊಬೈಲ್ ಫೋನ್ ನೋಕಿಯಾ 6319 (Nokia 6310) ಮತ್ತೆ ಮರು ಬಿಡುಗಡೆಯಾಗಿದೆ. 20ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಕಂಪನಿಯು ಈ ಫೋನನ್ನು ರಿಲಾಂಚ್ ಮಾಡಿದೆ. ಭಾರತವು ಸೇರಿದಂತೆ ಜಗತ್ತಿನಾದ್ಯಂತ ಈ ಫೋನ್‌ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

Nokia Company re releases its iconic Nokia 6310 phone

ಕೆಲವು ವರ್ಷಗಳ ಹಿಂದೆ  ಭಾರತೀಯ ಫೋನ್ (Phone) ಮಾರುಕಟ್ಟೆಯಲ್ಲಿ ನೋಕಿಯಾ (Nokia) ಕಂಪನಿಯ ಫೋನುಗಳಿಗೆ ಬೇರೆ ಯಾವುದೇ ಫೋನುಗಳ ಸಾಟಿಯೇ ಇರಲಿಲ್ಲ. ಅಕ್ಷರಶಃ ನೋಕಿಯಾ  ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ (Indian Mobile Market) ರಾಜನಂತಿತ್ತು. ಆದರೆ, ನಂತರದ ಸ್ಮಾರ್ಟ್‌ಫೋನ್ (Smartphone) ಜಮಾನ ಶುರುವಾಗುತ್ತಿದ್ದಂತೆ ತಪ್ಪಿದ ಲಯ ಮತ್ತೆ ಸರಿ ದಾರಿಗೆ ಬರಲು ಸಾಧ್ಯವಾಗಲಿಲ್ಲ. 

ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 6310 (Nokia 6310) ಹಾಗೂ ನೋಕಿಯಾ 1100 (Nokia 1100) ಫೋನುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಎಲ್ಲರ ಕೈಯಲ್ಲೂ ಈ ಫೋನುಗಳದ್ದೇ ಕಾರುಬಾರು. ಅದರಲ್ಲೂ ನೋಕಿಯಾ 6310 (Nokia 6310) ಫೋನು ತನ್ನ ಬ್ಯಾಟರಿ ಬ್ಯಾಕ್ ಅಪ್ ಹಾಗೂ ಗಟ್ಟಿಮುಟ್ಟಾದ ಕಾರಣಕ್ಕಾಗಿ ಭಾರತೀಯ ಫೋನು ಬಳಕೆದಾರರ ಮನ ಗೆದ್ದಿತ್ತು. 

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ?

ಈ ಕ್ಲಾಸಿಕ್ ಐಕಾನಿಕ್ ನೋಕಿಯಾ 6310 ಫೋನು ಮತ್ತೆ ಮಾರುಕಟ್ಟೆಗೆ ಮರುಬಿಡುಗಡೆಯಾದರೆ? ಖಂಡಿತ, ಕಂಪನಿಯು ತನ್ನ ಐಕಾನಿಕ್ ಮೊಬೈಲ್ (Mobile) ನೋಕಿಯಾ 6310 ಮೊಬೈಲ್ ಅನ್ನು ಹೊಸ ರೂಪದಲ್ಲಿ ಮರು ಲಾಂಚ್ ಮಾಡಿದೆ.  20ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಕಂಪನಿಯು ನೋಕಿಯಾ 6310 ಮೊಬೈಲ್ ಫೋನು ಮರು ಬಿಡುಗಡೆ ಮಾಡಿದೆ.

ಫಿನಿಶ್ ಕಂಪನಿಯು ಈ ಐಕಾನಿಕ್ ಮೊಬೈಲ್ 6310 ಫೋನ್ ಅನ್ನು ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಿದೆ. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ‘ಇಟ್ಟಿಗೆ (Brick)’ ಫೋನ್ ಎಂದು ಖ್ಯಾತಿಗಳಿಸಿದ್ದ ಈ ಗಟ್ಟುಮುಟ್ಟಾದ ಫೋನನ್ನು ಕಂಪನಿಯು 2001ರಲ್ಲಿ ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ವರ್ಷದ ನಂತರ 6310ಐ (Nokia 6310i) ಗೆ ಅಪ್‌ಡೇಟ್ ಮಾಡಲಾಗಿತ್ತು.

 

 

15 ವರ್ಷಕ್ಕೂ ಹೆಚ್ಚು ಸಮಯದಿಂದ ಹೊಸ 6310 ಫೋನುಗಳ ಮಾರುಕಟ್ಟೆಯಲ್ಲಿ ಕಾಣಸಿಗುವುದಿಲ್ಲ. ಹಾಗಿದ್ದೂ, ಈ ಫೋನಿಗೆ ಇದ್ದಷ್ಟು ಗ್ರಾಹಕರು ಅಥವಾ ಫ್ಯಾನ್ ಫಾಲೋಯಿಂಗ್ ಮತ್ತೆ ಯಾವುದೇ ಫೋನಿಗೂ ಇರಲಿಲ್ಲ ಎಂಬದೂ ಅಷ್ಟೇ ಸತ್ಯ. ತಮ್ಮ ಸೂಪರ್ ಬ್ಯಾಟರಿ  ಬ್ಯಾಕ್ ಅಪ್ ಹಾಗೂ ದೀರ್ಘಕಾಲಿನ ಬ್ಯಾಟರಿ ಬಾಳಿಕೆಯಿಂದಾಗಿ ಬಹಳಷ್ಟು ಜನರು ನೋಕಿಯಾ 6310 ಹಾಗೂ 3310 ಫೋನುಗಳನ್ನು ಬಳಸುತ್ತಿದ್ದರು. 

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ?

ಈಗಿನ ಸ್ಮಾರ್ಟ್‌ಗಳಲ್ಲಿ ಇರುವಂಥ ಮನರಂಜನೆಯ ಸಾಕಷ್ಟು ಅವಕಾಶಗಳು ಈ ಫೋನಿನಲ್ಲಿ ಇರಲಿಲ್ಲ. ತೀರಾ ಕಡಿಮೆ ಎನ್ನವಷ್ಟು ಮನರಂಜನಾ ಸೌಲಭ್ಯಗಳಿದ್ದವು. ಅಂದರೆ, ನೋಕಿಯಾ 6311 ಫೋನಿನಲ್ಲಿ ಬಳಕೆದಾರರು ಸ್ನೇಕ್ ಗೇಮ್ ಆಡಬಹುದಿತ್ತು ಅಥವಾ ಕಂಪೋಸರ್ ಬಳಸಿ ಮೋನೋಫೋನಿಕ್ ರಿಂಗ್‌ಟೋನ್‌ಗಳನ್ನು ಬಳಸಬಹುದಿತ್ತು. ಇವಿಷ್ಟೇ ಮನರಂಜನೆಗಿರುವ ಸಾಧ್ಯತೆಗಳಾಗಿದ್ದವು.

ಇಷ್ಟಾಗಿಯೂ, ನೋಕಿಯಾ ಕಂಪನಿಯ ಫೋನುಗಳಲ್ಲೇ ಈ 6310 ಫೋನು ಅತಿ ಹೆಚ್ಚು ಮಾರಾಟ ಕಂಡ ಸಾಧನವಾಗಿತ್ತು. ಇದೀಗ, ಮರು ಬಿಡುಗಡೆಯ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದ ಈ ಐಕಾನಿಕ್ ಫೋನು ಬಗ್ಗೆ ಸಾಕಷ್ಟು ಮೀಮ್ಸ್ ಮತ್ತು ಜೋಕ್ಸ್‌ಗಳನ್ನು  ಕಾಣಬಹುದಾಗಿದೆ.

ಮರು ಬಿಡುಗಡೆಯಾಗಿರುವ ನೋಕಿಯಾ 6310 ಹೇಗಿರಬಹುದು ಎಂಬುದು ಕುತೂಹಲವಿದೆ. ಕೆಲವು ಮಾರುಕಟ್ಟೆಗಳಲ್ಲಿ ಈ ಫೋನ್ ಈಗಾಗಲೇ ಬಿಡುಗಡೆಯಾಗಿದೆ ಕೂಡ. ಬೃಹತ್ ಕಮಾನು ರೀತಿಯಲ್ಲಿರುವ ಕಲರ್ ಡಿಸ್‌ಪ್ಲೇ ಇದೆ. 320x240 pixel ಡಿಸ್‌ಪ್ಲೇ ಇದಾಗಿದೆ. ವಿಶೇಷ ಎಂದರೆ, ಈ ಫೋನಿನಲ್ಲಿ ಕ್ಯಾಮೆರಾ (Camera) ಕೂಡ ಇದ್ದು, ಎರಡು ಬಣ್ಣಗಳಲ್ಲಿ ಮಾರಾಟಕ್ಕೆ ಸಿಗಲಿದೆ. ಸದ್ಯಕ್ಕೆ ಚೀನಾದ ಮಾರುಕಟ್ಟೆಯಲ್ಲಿ ಬಿಡುಗೆಯಾಗಿರುವ ಈ ಫೋನ್ ಬೆಲೆ ಅಂದಾಜು 6000 ರೂಪಾಯಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Vivo X70 Pro, Vivo X70 Pro+ ಸ್ಮಾರ್ಟ್‌ಫೋನ್ ಲಾಂಚ್

ನೋಕಿಯಾ (Nokia) ಬ್ರ್ಯಾಂಡ್ ಪಡೆದುಕೊಂಡಿರುವ ಎಚ್‌ಎಂಡಿ ಗ್ಲೋಬಲ್ (HMD Global) ಕಂಪನಿಯು ಐಕಾನಿಕ್ ನೋಕಿಯಾ 6310 ಫೋನು ಮರು ಬಿಡುಗಡೆಯ ಬಗ್ಗೆ ಈ ವರ್ಷದ ಆರಂಭದಲ್ಲೇ ಘೋಷಿಸಿತ್ತು. 

Latest Videos
Follow Us:
Download App:
  • android
  • ios