Asianet Suvarna News Asianet Suvarna News

ಫೇಸ್‌ಬುಕ್ ಈಗ ಭವಿಷ್ಯವನ್ನೂ ಊಹಿಸಬಲ್ಲುದು!

ಕೇವಲ ಸಂವಹನ, ಮನರಂಜನೆ ಹಾಗೂ ಮಾಹಿತಿ ಷೇರಿಂಗ್ ವೇದಿಕೆಯಂತಿರುವ ಫೇಸ್‌ಬುಕ್ (Facebook) ಇನ್ನು ಮುಂದೆ, ಬಳಕೆದಾರರಿಗೆ ಭವಿಷ್ಯವನ್ನು ಊಹಿಸುವ ಕೆಲಸವನ್ನು ಮಾಡಲಿದೆ! ಇತ್ತೀಚೆಗಷ್ಟೇ ಅನಾವರಣ ಮಾಡಲಾಗಿರುವ ಎವಿಟಿ (AVT) ಎಂಬ ಮಷಿನ್ ಲರ್ನಿಂಗ್ ಪ್ರಕ್ರಿಯೆಯನ್ನು ಬಳಸಿಕೊಂಡು ಭವಿಷ್ಯವನ್ನು ಊಹಿಸಲಿದೆ.

Facebook can now predict the future with help of AVT
Author
Bengaluru, First Published Oct 22, 2021, 5:03 PM IST
  • Facebook
  • Twitter
  • Whatsapp

ಫೇಸ್‌ಬುಕ್‌ (Facebook)ನಿಂದ ಏನೆಲ್ಲ ಉಪಯೋಗಗಳಿವೆ? ನಿಮ್ಮ ಫ್ರೆಂಡ್ ಸರ್ಕಲ್ (Friend Circle) ಸಿಗಬಹುದು, ಹೊಸ ಫ್ರೆಂಡ್ಸ್ ಆಗಬಹುದು, ಮಾಹಿತಿ ಷೇರ್ ಮಾಡಿಕೊಳ್ಳಬಹುದು, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಗಬಹುದು ಇತ್ಯಾದಿ.  ಇಷ್ಟು ಮಾತ್ರವಲ್ಲದೇ  ಲಾಭಗಳ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ ಅಲ್ಲವೇ? 

ದೈತ್ಯ ಸೋಷಿಯಲ್ ಮೀಡಿಯಾ (Social Media) ಫೇಸ್‌ಬುಕ್‌ನಿಂದ ಮತ್ತೊಂದು ಮಹತ್ತರ ಪ್ರಯೋಜನ ದೊರೆಯುವ ಸಾಧ್ಯತೆ ಇದೆ. ನೀವು ಫೇಸ್‌ಬುಕ್ (Facebook) ಮೂಲಕವೇ ಭವಿಷ್ಯವನ್ನು ಊಹಿಸಬಹುದು (Predict the Future)! ಹೌದು, ಇದು ಆಶ್ಚರ್ಯವಾದರೂ ನಿಜ. ಫೇಸ್‌ಬುಕ್ ಇತ್ತೀಚೆಗಷ್ಟೇ ಆಂಟಿಸಿಪೆಟಿವ್ ವಿಡಿಯೋ ಟ್ರಾನ್ಸಫಾರ್ಮರ್ (Anticipative Video Transformer- AVT) ಎಂಬ ಮಷಿನ್ ಲರ್ನಿಂಗ್ ಪ್ರೊಸೆಸ್ (Machine Learning Process) ಅನ್ನು ಅನಾವರಣ ಮಾಡಿದೆ. ಎವಿಟಿ (AVT) ಮೂಲಕ ದೃಶ್ಯಗಳನ್ನು ವ್ಯಾಖ್ಯಾನ ಮಾಡುವ ಮೂಲಕ ಭವಿಷ್ಯವನ್ನು ಊಹಿಸಲು ಸಾಧ್ಯವಾಗಲಿದೆ.

Artificial Intelligence ಸ್ಟಾರ್ಟ್‌ಅಪ್‌ ಬೆಂಬಲಿಸಲು ಮೈಕ್ರೋಸಾಫ್ಟ್ AI ಇನೋವೇಟ್ ಕಾರ್ಯಕ್ರಮ!

ವರ್ಧಿತ ರಿಯಾಲಿಟಿ (Augmented Reality - AR) ಅಥವಾ ಮೆಟಾವರ್ಸ್‌ಗಾಗಿ ಫೇಸ್‌ಬುಕ್‌ನ ದೊಡ್ಡ ವಾಹನದ ಸಣ್ಣ ಚಕ್ರದಂತೆ ಗ್ರಹಿಸಲ್ಪಟ್ಟಿರುವ ಕಾರಣ, ಎವಿಟಿ (AVT) ಚಟುವಟಿಕೆಗಳನ್ನು ವಿಶ್ಲೇಷಿಸುವ ಮೂಲಕ ಸಂಭಾವ್ಯ ಫಲಿತಾಂಶವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಪಡೆಯಲಿದೆ ಎಂಬುದು ಫೇಸ್‌ಬುಕ್ ಅಭಿಪ್ರಾಯವಾಗಿದೆ. 

ಈ ಹೊಸ ತಂತ್ರಜ್ಞಾನವು ಅಪ್ಲಿಕೇಷನ್‌ಗಳ ಸರಣಿಯಾಗಿದೆ. ಇದು ಎಆರ್ (AR) ಅನ್ನು ಆಕ್ಷನ್ ಕೋಚ್ ಆಗಿ ಅಥವಾ ಕೃತಕ ಬುದ್ಧಿಮತ್ತೆ (intelligence assistant) ಸಹಾಯಕವಾಗಿ ಎವಿಟಿ ಬಳಸಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಸಮಯದೊಳಗೆ ಜನರು ಮಾಡುವ ತಪ್ಪುಗಳಿಗೆ ಸಂಬಂಧಿಸಿದಂತೆ ಈ ಹೊಸ ಟೂಲ್ ಎಚ್ಚರಿಕೆಯನ್ನು ರವಾನಿಸುವ ಕೆಲಸವನ್ನು ಮಾಡುತ್ತದೆ. ಇಷ್ಟು ಮಾತ್ರವಲ್ಲದೇ, ವ್ಯಕ್ತಿಯೊಬ್ಬ ತಾನು ಪಾಲಿಸಬೇಕಾದ ಸರಿಯಾದ ಮಾರ್ಗದ ಕುರಿತಂತೆಯೂ ಪರಿಹಾರವನ್ನು ಸೂಚಿಸುವ ಕೆಲಸವನ್ನು ಮಾಡಲಿದೆ.

Facebook can now predict the future with help of AVT

ಫೇಸ್‌ಬುಕ್ ಹೊಸ ಪ್ರಕ್ರಿಯೆನ್ನು ಉದಾಹರಣೆಯ ಮೂಲಕವೇ ವಿವರಿಸುವ ಪ್ರಯತ್ನ ಮಾಡಿದೆ. ಉದಾಹರಣೆಗೆ ನೀವು ಹಾಟ್ ಪಾನ್(ಕಡಾಯಿ) ಅನ್ನು ಹಿಡಿಯುವವರಿದ್ದೀರಿ ಎಂದುಕೊಳ್ಳಿ. ಆಗ, ಈ ಕಡಾಯಿ ಎತ್ತಿಕೊಳ್ಳುವ ಸಂಬಂಧ ಈ ಹಿಂದೆ ನೀವು ಹೊಂದಿದ ಅನುಭವದ ಆಧಾರದ ಮೇಲೆ ಈ ಎವಿಟಿ ನಿಮಗೆ ಎಚ್ಚರಿಕೆಯನ್ನು ರವಾನಿಸುವ ಕೆಲಸವನ್ನು ಮಾಡುತ್ತದೆ.  ಇನ್ನೂ ಬಲವಾಗಿ ಹೇಳಬೇಕೆಂದರೆ, ಬಲ್ಬುಗಳನ್ನು ಮೀರಿದ ಸ್ಮಾರ್ಟ್ ಹೋಮ್ಸ್(Smart Homes) ಹಾಗೂ ಸಂಭಾಷಣೆಗಾಗಿ  ಸಹಾಯ ಒದಗಿಸುವ ಅಲೆಕ್ಸಾ (Alexa), ಗೂಗಲ್‌ ನೌ (Google Now) ಸಾಧನಗಳಾಚೆ ಮಾನವರಿಗೆ ನೆರವಾಗುವಂತ ತಂತ್ರಜ್ಞಾನ ಇದಾಗಿದೆ.

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ? 

ಥ್ರೀ ಲಾಸಿಸ್ (three losses) ತತ್ವದ ಆಧಾರದ ಮೇಲೆಯೇ ಭವಿಷ್ಯವನ್ನು ಊಹಿಸುವ ಪ್ರಕ್ರಿಯೆಯು ಆಧರಿತವಾಗಿದೆ ಎಂಬುದು ಫೇಸ್‌ಬುಕ್‌ನ ವಾದವಾಗಿದೆ. ಮೊದಲನೆಯದಾಗಿ, ಭವಿಷ್ಯದ ಕ್ರಿಯೆಯನ್ನು ಲೇಬಲ್ಲಿಂಗ್ ಮಾಡುವುದನ್ನು ಊಹಿಸಲು ನಾವು ವಿಡಿಯೋ ಕ್ಲಿಪ್‌ನ ಕೊನೆಯ ಫ್ರೇಮ್‌ನಲ್ಲಿರುವ ವೈಶಿಷ್ಟ್ಯಗಳನ್ನು ವರ್ಗೀಕರಿಸುತ್ತೇವೆ.

ಎರಡನೆಯದಾಗಿ, ಮಧ್ಯಂತರ ಫ್ರೇಮ್ ವೈಶಿಷ್ಟ್ಯವನ್ನು ಮುಂದಿನ ಫ್ರೇಮ್‌ಗಳ ವೈಶಿಷ್ಟ್ಯಗಳಿಗೆ ಅದನ್ನು ಹಿಂದಕ್ಕೆಸರಿಸುತ್ತೇವೆ ಮತ್ತು  ಅದು ಮುಂದಿನದನ್ನು ಊಹಿಸಲು ಮಾದರಿಗೆ ಟ್ರೈನ್ ಮಾಡತ್ತದೆ. ಮೂರನೆಯದಾಗಿ, ಮಧ್ಯಂತರ ಕ್ರಮಗಳನ್ನು ವರ್ಗೀಕರಿಸಲು ನಾವು ಮಾದರಿಗೆ ಟ್ರೈನ್ ನೀಡಲಾಗುತ್ತದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ

ಫೇಸ್‌ಬುಕ್, ಭವಿಷ್ಯದಲ್ಲಿ ನೀವು ಉತ್ತಮವಾದ್ದನ್ನು ಮಾಡಲು ಹೇಳುವುದಕ್ಕಾಗಿ ನಿಮ್ಮ ಹಿಂದಿನ ಮತ್ತು ಪ್ರಸ್ತುತ ಕ್ರಿಯೆಗಳನ್ನು ಬಳಸಿಕೊಳ್ಳುತ್ತದೆ. ಫೇಸ್‌ಬುಕ್ ತನ್ನ ಮಾದರಿಯು ಇತರ ರೀತಿಯ ಮಾದರಿಗಳಿಗಿಂತ 10-30 ಪ್ರತಿಶತದಷ್ಟು ಉತ್ತಮ ಭವಿಷ್ಯವನ್ನು ಊಹಿಸಲು ಸಮರ್ಥವಾಗಿದೆ ಎಂದು ಹೇಳಿಕೊಂಡಿದೆ.

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ? 

Follow Us:
Download App:
  • android
  • ios