Asianet Suvarna News Asianet Suvarna News

2021 ಮ್ಯಾಕ್‌ಬುಕ್ ಪ್ರೋ ಲಾಂಚ್, ಏನೆಲ್ಲ ವಿಶೇಷತೆಗಳಿವೆ?

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಆಪಲ್(Apple) ಕಂಪನಿಯ ಮ್ಯಾಕ್‌ಬುಕ್ ಪ್ರೋ (MacBook Pro 2021) ಸೀರೀಸ್ ಮಾರುಕಟ್ಟೆ ಬಿಡುಗಡೆಯಾಗಿದೆ. ಕಂಪನಿಯ ಹೊಸ  ಪ್ರೊಸೆಸರ್‌ಗಳೊಂದಿಗೆ ಬಿಡುಗಡೆಯಾಗಿರುವ ಈ ಮ್ಯಾಕ್‌ಬುಕ್ ಪ್ರೋ ಹೆಚ್ಚು ಶಕ್ತಿಶಾಲಿ ಹಾಗೂ ವೇಗವನ್ನು ಹೊಂದಿದೆ. ಹಾಗಾಗಿ, ಭಾರೀ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ ಈ ಮ್ಯಾಕ್‌ಬುಕ್ ಪ್ರೋ ಲ್ಯಾಪ್‌ಟ್ಯಾಪ್ ಬಗ್ಗೆ ತೀವ್ರ ಕುತೂಹಲ ಕೂಡ ಉಂಟಾಗಿದೆ.
 

Apple launched MackBook Pro with new processors
Author
Bengaluru, First Published Oct 19, 2021, 3:54 PM IST
  • Facebook
  • Twitter
  • Whatsapp

ತನ್ನ ಉತ್ಕೃಷ್ಣ ಹಾಗೂ ಕಟಿಂಗ್ ಎಡ್ಜ್ ಟೆಕ್ನಾಲಜಿ ಸಾಧನಗಳ ಮೂಲಕವೇ ಹೆಚ್ಚು ಪ್ರಸಿದ್ಧಿಗಳಿಸಿರುವ ಆಪಲ್ (Apple) ಕಂಪನಿ ಇದೀಗ ಹೊಸ ಮಾದರಿಯ ಮ್ಯಾಕ್‌ಬುಕ್ ಪ್ರೋ 2021 (Apple MacBook Pro 2021) ಲ್ಯಾಪ್‌ಟ್ಯಾಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮ್ಯಾಕ್‌ಬುಕ್ ವಿಶೇಷ ಏನೆಂದರೆ, ಕಂಪನಿಯೇ ಅಭಿವೃದ್ಧಿಪಡಿಸಿರುವ ಹೊಸ ಎಂ1 ಪ್ರೋ (M1 Pro) ಹಾಗೂ ಎಂ1 ಮ್ಯಾಕ್ಸ್ (M1  Max) ಹೊಸ ಪ್ರೊಸೆಸರ್ ಆಧರಿತವಾಗಿದೆ!

ಬಹಳ ನಿರೀಕ್ಷೆ ಮೂಡಿಸಿದ್ದ ಮ್ಯಾಕ್‌ಬುಕ್ ಪ್ರೋ (Mackbook Pro) ಸೀರೀಸ್ ಲ್ಯಾಪ್‌ಟ್ಯಾಪ್ ಮಾರುಕಟ್ಟೆಗೆ ಸೋಮವಾರ ಲಗ್ಗೆ ಇಟ್ಟಿದೆ. ಈ ಲ್ಯಾಪ್‌ಟ್ಯಾಪ್ ಗ್ರಾಹಕರಿಗೆ 14 ಇಂಚ್ ಹಾಗೂ 16 ಇಂಚ್ ಡಿಸ್‌ಪ್ಲೇ ವೆರಿಯೆಂಟ್‌ಗಳಲ್ಲಿ ಸಿಗಲಿದೆ. ಮತ್ತೊಂದು ವಿಶೇಷ ಏನೆಂದರೆ, 2016ರಲ್ಲಿ ಪರಿಚಿಯಿಸಿದ ಬಳಿಕ 5 ವರ್ಷದಲ್ಲಿ ಇದೇ ಮೊದಲ ಬಾರಿಗೆ ಭಾರಿ ಅಪ್‌ಡೇಟ್‌ಗಳೊಂದಿಗೆ ಈ ಮ್ಯಾಕ್ ಬುಕ್ ಪ್ರೋ ಬಿಡುಗಡೆಯಾಗುತ್ತಿದೆ. 

ಇನ್ಫಿನಿಕ್ಸ್ ನೋಟ್ 11, ಇನ್ಫಿನಿಕ್ಸ್ ನೋಟ್ 11 ಪ್ರೋ ಫೋನ್ ಲಾಂಚ್ 

ಈಗಾಗಲೇ ಹೇಳಿದಂತೆ ಆಪಲ್ ಮ್ಯಾಕ್‌ಬುಕ್ ಪ್ರೋ 2021 ಸೀರೀಸ್ ಲ್ಯಾಪ್‌ಟ್ಯಾಪ್ ಪೈಕಿ 14 ಇಂಚ್ ಹಾಗೂ 16 ಇಂಚ್ ಡಿಸ್‌ಪ್ಲೇಗಳಲ್ಲಿ ದೊರೆಯಲಿವೆ. ಈ ಎರಡೂ ವೆರಿಯೆಂಟ್‌ಗಳು ಹೊಸ ವಿನ್ಯಾಸಗೊಂಡಿರುವ ಟಚ್ ಬಾರ್ ಮತ್ತು SDXC ಮತ್ತು HDMI port ಪೋರ್ಟುಗಳೊಂದಿಗೆ ಬರಲಿದೆ.  ವಿನ್ಯಾಸದ ದೃಷ್ಟಿಯಿಂದ ಮಾಡಲಾಗಿರುವ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಫ್ರಂಟ್‌ನಲ್ಲಿ ನಾಚ್ ನೀಡಲಾಗಿದೆ. ಇದರಿಂದಾಗಿ ಸ್ಕ್ರೀನ್‌ನ ಹೊರ ಜಾಗವನ್ನು ಕಡಿಮೆ ಮಾಡಿ ಮತ್ತು ಹೆಚ್ಚು ಸ್ಕ್ರೀನ ಸ್ಪೇಸ್ ಅನ್ನು ಒದಗಿಸುತ್ತದೆ. 

ಮ್ಯಾಕ್‌ಬುಕ್ ಪ್ರೋ ಲ್ಯಾಪ್‌ಟ್ಯಾಪ್‌ನಲ್ಲಿ ಕಂಪನಿಯು ಫೇಸ್ ಐಡಿ (Face ID) ಯನ್ನು ಒದಗಿಸಿಲ್ಲ. ಈ ತಂತ್ರಜ್ಞಾನವನ್ನು ಆಪಲ್ ಕಂಪನಿಯ ಅತ್ಯುನ್ನತ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು. ಫೇಷಿಯಲ್ ರೆಕಗ್ನೆಷನ್ ಟೆಕ್ನಾಲಜಿಯಿಂದಾಗಿ ಹೆಚ್ಚು ಗಮನ ಸೆಳೆದಿದೆ. ಫೋನುಗಳಲ್ಲಿ ಈ ಟೆಕ್ನಾಲಜಿ ಬಳಸಿದ್ದರಿಂದ ಮುಖ ಗುರುತಿಸುವಿಕೆಯಿಂದಲೇ ಬಳಕೆದಾರರು ಮೊಬೈಲ್ ಅಕ್ಸೆಸ್ ಪಡೆಯಲು ಸಾಧ್ಯವಾಗುತ್ತದೆ. ಅಂಥ ತಂತ್ರಜ್ಞಾನವನ್ನು ಈ ಮ್ಯಾಕ್ ಬುಕ್ ಪ್ರೋ ಸೀರೀಸ್‌ನಲ್ಲಿ ಆಪಲ್ ಕಂಪನಿಯು ಬಳಸಿಲ್ಲ.

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ?

14 ಇಂಚಿನ ಮ್ಯಾಕ್‌ಬುಕ್ ಪ್ರೊ ಮಾದರಿಯು 14.2 ಇಂಚಿನ ಆಕ್ಟಿವ್ ಏರಿಯಾವನ್ನು ಒಟ್ಟು 5.9 ಮಿಲಿಯನ್ ಪಿಕ್ಸೆಲ್‌ಗಳೊಂದಿಗೆ ನೀಡುತ್ತದೆ. ಹಾಗೆಯೇ 16 ಇಂಚಿನ ವೆರಿಯೆಂಟ್‌ನವ್ವಿ 7.2 ಮಿಲಿಯನ್ ಪಿಕ್ಸೆಲ್‌ಗಳೊಂದಿಗೆ 16.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಮಿನಿ-ಎಲ್ಇಡಿ (Mini LED) ತಂತ್ರಜ್ಞಾನವನ್ನು ಬಳಸುವ ಲಿಕ್ವಿಡ್ ರೆಟಿನಾ ಎಕ್ಸ್‌ಡಿಆರ್ (Liquid Retina XDR)  ಡಿಸ್‌ಪ್ಲೇ ಕೂಡ ಇದೆ-ಈ ಹಿಂದೆ ಐಪ್ಯಾಡ್ ಪ್ರೊ (iPad Pro) ನಲ್ಲಿ ಲಭ್ಯವಿತ್ತು. ಹೊಸ ಡಿಸ್‌ಪ್ಲೇ ತಂತ್ರಜ್ಞಾನವು 1,000 ನಿಟ್‌ಗಳ ಪೂರ್ಣ-ಪರದೆ ಹೊಳಪನ್ನು, 1,600 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 1,000,000: 1 ಕಾಂಟ್ರಾಸ್ಟ್ ಅನುಪಾತವನ್ನು ನೀಡುತ್ತದೆ ಎಂದು ಹೇಳಲಾಗಿದೆ. 

14 ಇಂಚಿನ್ ಆಪಲ್ ಮ್ಯಾಕ್ ಬುಕ್ ಪ್ರೋ 2021 (Apple MacBook Pro 2021) ಬೆಲೆ 1,94,900 ರೂಪಾಯಿಯಿಂದ ಆರಂಭವಾಗುತ್ತದೆ. ಇದೇ ವೇಳೆ, 16 ಇಂಚಿನ್ ಆಪಲ್ ಮ್ಯಾಕ್ ಬುಕ್ ಪ್ರೋ ಬೆಲೆ 2,39,900 ರೂಪಾಯಿಯಾಗಿದೆ. ಗ್ರಾಹಕರು ಆಪಲ್ ಇಂಡಿಯಾ ಆನ್‌ಲೈನ್ ಸ್ಟೋರ್‌ನಿಂದ ಖರೀದಿಸಬಹುದು. 

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ?

ಆಪಲ್ ತನ್ನ ಇವೆಂಟ್‌ ಮೂಲಕ ಈಗಾಗಲೇ  ಹಲವು ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆ ಸಾಲಿನಲ್ಲಿ ಈ ಮ್ಯಾಕ್‌ಬುಕ್ ಪ್ರೋ ಕೂಡ ಸೇರ್ಪಡೆಯಾಗುತ್ತದೆ. ಇತ್ತೀಚೆಗಷ್ಟೇ ಕಂಪನಿಯ ಐಫೋನ್ 13 ಸೀರೀಸ್ ಫೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಭಾರಿ ಅಪ್‌ಡೇಟ್‌ಗಳೊಂದಿಗೆ ಮ್ಯಾಕ್ ಬುಕ್ ಪ್ರೋ ಸೀರೀಸ್ ಲ್ಯಾಪ್‌ಟ್ಯಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Follow Us:
Download App:
  • android
  • ios