ಜೀನಿಯಸ್ ಇಲ್ಲದೆ ಇತಿಹಾಸ ಹುಟ್ಟಲು ಸಾಧ್ಯವಾಗುವುದಿಲ್ಲ. ನ್ಯೂಟನ್, ಐನ್ಸ್ಟೀನ್, ಥಾಮಸ್ ಆಲ್ವಾ ಎಡಿಸನ್, ಸರ್ ಎಂ. ವಿಶ್ವೇಶರಯ್ಯನಂಥ ಅದ್ಭುತ ತಲೆಗಳು ಎಲ್ಲೆಲ್ಲೂ ಇರಲು, ಹುಟ್ಟಲು ಸಾಧ್ಯವಿಲ್ಲ. ಹೇರಳ ಬುದ್ಧಿವಂತಿಕೆ, ಅಪಾರ ಸೃಜನಶೀಲತೆ, ಅದ್ಭುತ ಜ್ಞಾನ, ಮಿತಿಯಿಲ್ಲದ ಪ್ರತಿಭೆಗಳಿಂದ ಕೋಟಿಗೊಬ್ಬ ಎನಿಸಿಕೊಂಡಿರುವಂಥ ಇಂಥ ಜೀನಿಯಸ್ಗಳ ಐಕ್ಯೂ ಎಷ್ಟಿತ್ತು?