ಜಗತ್ತು ಕಂಡ ಜೀನಿಯಸ್ , ಇಬ್ಬರಿಗೆ ಹಂಚಿದರೂ IAS ಪಾಸ್ ಮಾಡಿಸುವಷ್ಟಿತ್ತು ಇವರ IQ!

ಜೀನಿಯಸ್ ಇಲ್ಲದೆ ಇತಿಹಾಸ ಹುಟ್ಟಲು ಸಾಧ್ಯವಾಗುವುದಿಲ್ಲ. ನ್ಯೂಟನ್, ಐನ್‌ಸ್ಟೀನ್, ಥಾಮಸ್ ಆಲ್ವಾ ಎಡಿಸನ್, ಸರ್ ಎಂ. ವಿಶ್ವೇಶರಯ್ಯನಂಥ ಅದ್ಭುತ ತಲೆಗಳು ಎಲ್ಲೆಲ್ಲೂ ಇರಲು, ಹುಟ್ಟಲು ಸಾಧ್ಯವಿಲ್ಲ. ಹೇರಳ ಬುದ್ಧಿವಂತಿಕೆ, ಅಪಾರ ಸೃಜನಶೀಲತೆ, ಅದ್ಭುತ ಜ್ಞಾನ, ಮಿತಿಯಿಲ್ಲದ ಪ್ರತಿಭೆಗಳಿಂದ ಕೋಟಿಗೊಬ್ಬ ಎನಿಸಿಕೊಂಡಿರುವಂಥ ಇಂಥ ಜೀನಿಯಸ್‌ಗಳ ಐಕ್ಯೂ ಎಷ್ಟಿತ್ತು? 

top 7 world's  famous geniuses who created wonders

ಸಾಮಾನ್ಯ ಬುದ್ದಿಮತ್ತೆಯುಳ್ಳ ಮನುಷ್ಯನ ಐಕ್ಯೂ(ಇಂಟೆಲಿಜೆಂಟ್ ಕೋಶಂಟ್) 100 ಇದ್ದರೆ ಜೀನಿಯಸ್ ಎನಿಸಿಕೊಳ್ಳಬೇಕಾದವರು ಬುದ್ಧಿಮಟ್ಟ 145 ದಾಟಿರಬೇಕು. ಇಂಥ ಜೀನಿಯಸ್‌ಗಳು ಬಹಳ ಅಪರೂಪ. ತಾವು ಮಾಡುವ ಕೆಲಸದಲ್ಲಿ ಇವರು ಹೆಚ್ಚು ಕ್ರಿಯೇಟಿವ್ ಆಗಿಯೂ, ಇನ್ನೋವೇಟಿವ್ ಆಗಿಯೂ ಇರಬಲ್ಲರು. ತಾವು ಅಧ್ಯಯನ ಮಾಡಿದ ವಿಷಯದಲ್ಲಿ ಎಕ್ಸ್‌ಪರ್ಟ್ ಆಗಿರಬಲ್ಲರಷ್ಟೇ ಅಲ್ಲ, ಆ ಅಧ್ಯಯನವನ್ನು ಮತ್ತೊಂದು ಮಟ್ಟಕ್ಕೇ ತೆಗೆದುಕೊಂಡು ಹೋಗಬಲ್ಲರು. ಜಗತ್ತು ಕಂಡ ಇಂಥ ವಿಶೇಷ ಜೀನಿಯಸ್‌ಗಳು ಯಾರ್ಯಾರು ನೋಡೋಣ

ಲಿಯೋನಾರ್ಡೋ ಡಾ ವಿನ್ಸಿ

ಇವರ ಹೆಸರು ಕೇಳದವರೇ ಇಲ್ಲ. ವಿಶ್ವಪ್ರಸಿದ್ಧ ಮೊನಾಲಿಸಾ ಪೇಂಟಿಂಗ್‌ನ ಸೃಷ್ಟಿಕರ್ತ. ಜಗತ್ತಿನ ಸರ್ವಶ್ರೇಷ್ಠ ಚಿತ್ರ ರಚನೆಕಾರರಾಗಿದ್ದ ಡಾ ವಿನ್ಸಿಯ ಐಕ್ಯೂ ಬರೋಬ್ಬರಿ 200. ಕೇವಲ ಚಿತ್ರಕಲೆಯಲ್ಲದೆ, ಅತ್ಯುತ್ತಮ ವಿನ್ಯಾಸಕಾರ, ಸಂಗೀತಕಾರ, ಬರಹಗಾರ, ಅನಾಟಮಿಸ್ಟ್ ಹಾಗೂ ಎಂಜಿನಿಯರ್ ಕೂಡಾ. ಮೊನಾಲಿಸಾ ಹಾಗೂ ಲಾಸ್ಟ್ ಸಪ್ಪರ್ ಪೇಂಟಿಂಗ್‌ಗಳು ಡಾ ವಿನ್ಸಿಯ ಹೆಸರನ್ನು ಮನೆಮಾತಾಗಿಸಿವೆ. ಇವರ ಪೇಂಟಿಂಗ್‌ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮನುಷ್ಯನ ದೇಹವನ್ನು ಡಿಸೆಕ್ಟ್ ಮಾಡಿದ ಮೊದಲಿಗ. 

ಭೂಮಿ ಮೇಲೆ ಕೀಟಗಳೇ ಇಲ್ಲ ಅಂದ್ರೆ ಏನಾಗತ್ತೆ?

ಥಾಮಸ್ ಎಡಿಸನ್

ಥಾಮಸ್ ಎಡಿಸನ್ ಬೆಲ್‌ ಕಂಡುಹಿಡಿದ ವಿಜ್ಞಾನಿ. ಅಮೆರಿಕಾದ ಮೊದಲ ತಂತ್ರಜ್ಞಾನ ಕ್ರಾಂತಿಗೆ ಕಾರಣನಾದ ಇವರ ಐಕ್ಯೂ 145 ಆಗಿತ್ತು. ವೈಜ್ಞಾನಿಕ ಆವಿಷ್ಕಾರಗಳಿಗಾಗಿ ಮೊದಲ ಪ್ರಯೋಗಾಲಯ ಹುಟ್ಟು ಹಾಕಿದ ಕೀರ್ತಿ ಕೂಡಾ ಎಡಿಸನ್‌ರದ್ದು. ಮೂವಿ ಕ್ಯಾಮೆರಾ, ಎಲೆಕ್ಟ್ರಿಕ್ ಬಲ್ಬ್, ಫ್ಲೂರೋಸ್ಕೋಪ್, ರಿಚಾರ್ಜೇಬಲ್ ಬ್ಯಾಟರಿ ಮುಂತಾದವನ್ನು ಕಂಡುಹಿಡಿದ ಜೀನಿಯಸ್ ಎಡಿಸನ್. 

ಆರ್ಯಭಟ

ಭಾರತದ ಸರ್ವಶ್ರೇಷ್ಠ ಬುದ್ಧಿವಂಥ ಆರ್ಯಭಟ ಜಗತ್ತಿಗೆ ಸೊನ್ನೆಯನ್ನು ಪರಿಚಯಿಸಿದ ಗಣಿತಜ್ಞ. ಪೈ ವ್ಯಾಲ್ಯೂವನ್ನು ಮೊದಲ ಬಾರಿ ಸರಿಯಾಗಿ ಲೆಕ್ಕ ಹಾಕಿದ, ತ್ರಿಕೋನ ಹಾಗೂ ವೃತ್ತದ ಪರಿಧಿಯನ್ನು ಲೆಕ್ಕ ಹಾಕಲು ಫಾರ್ಮುಲಾ ನೀಡಿದ, ಭೂಮಿಯ ಸುತ್ತಳತೆ 62,831 ಮೈಲಿ ಎಂದು ಲೆಕ್ಕ ಹಾಕಿದ, ಗ್ರಹಣ ಏಕಾಗಿ ಆಗುತ್ತದೆ ಎಂದು ವೈಜ್ಞಾನಿಕ ವಿವರಣೆ ನೀಡಿದ, ಸೂರ್ಯನ ಸುತ್ತ ಭೂಮಿ ಹಾಗೂ ಇತರೆ ಗ್ರಹಗಳು ಸುತ್ತುತ್ತವೆ ಎಂಬ ವಿಷಯಕ್ಕೆ ಮುನ್ನಡಿ ಬರೆದ ಅಪ್ರತಿಮ ಬುದ್ಧಿವಂತ ಆರ್ಯಭಟ. ತಮ್ಮ ಆರ್ಯಭಟಿಯ ಪುಸ್ತಕವನ್ನು ರಚಿಸುವಾಗ ಇವರಿಗಿನ್ನೂ 24 ವರ್ಷವಾಗಿತ್ತು ಎಂಬುದು ಅಚ್ಚರಿಯಾದರೂ ಸತ್ಯ. 

ಗೆಲಿಲಿಯೋ ಗಲಿಲಿ

ಇಟಲಿಯ ವೈದ್ಯ, ಗಣಿತಜ್ಞ ಹಾಗೂ ಜ್ಯೋತಿಷ್ಯಶಾಸ್ತ್ರಜ್ಞನಾಗಿದ್ದ ಗೆಲಿಲಿಯೋ ಫಾದರ್ ಆಫ್ ಮಾಡರ್ನ್ ಆಸ್ಟ್ರಾನಮಿ ಎನಿಸಿಕೊಂಡಿದ್ದಾರೆ. ಟೆಲಿಸ್ಕೋಪ್, ಮಿಲಿಟರಿ ಕಂಪಾಸ್ ಕಂಡುಹಿಡಿದ ವಿಜ್ಞಾನಿ ಗೆಲಿಲಿಯೋ. ಇವರ ಐಕ್ಯೂ 182 ಆಗಿತ್ತು. 

2020ರೊಳಗೆ ವಿಜ್ಞಾನಿಗಳು ಹೇಳಿದ್ದೆಲ್ಲ ನಿಜವಾಯ್ತಾ? ಏನೆಲ್ಲಾ ಹೇಳಿದ್ರು

ಸ್ಟೀಫನ್ ಹಾಂಕಿಂಗ್

ಅಪರೂಪದ ಕಾಯಿಲೆಯಿಂದಾಗಿ ಇಡೀ ದೇಹದಲ್ಲಿ ತಲೆಯಷ್ಟೇ ಕೆಲಸ ಮಾಡುತ್ತಿದ್ದುದು  ಸ್ಟೀಫನ್‌ರಿಗೆ. ಆದರೆ, ಅದು ಮಾತ್ರ ಗಿಫ್ಟೆಡ್ ತಲೆ. ಏಕೆಂದರೆ ಅವರ ಐಕ್ಯೂ 160 ಆಗಿತ್ತು. ರಿಸರ್ಚ್ ಸೆಂಟರ್ ಫಾರ್ ಥಿಯರೆಟಿಕಲ್ ಕಾಸ್ಮಾಲಜಿಯ ನಿರ್ದೇಶಕರಾಗಿದ್ದ ಸ್ಟೀಫನ್ ಕ್ವಾಂಟಮ್ ಮೆಕ್ಯಾನಿಕ್ಸ್‌ಗೆ ಬೆಂಬಲ ಕೊಟ್ಟವರು, ಕಾಸ್ಮಾಲಜಿ ಕುರಿತು ಮೊದಲ ಥಿಯರಿ ಸಿದ್ಧಪಡಿಸಿದವರು. ಕಪ್ಪುರಂಧ್ರಗಳ ಕುರಿತು ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದವರು. ಸ್ಪೇಸ್, ಟೈಮ್, ಕಾಸ್ಮಾಲಜಿ  ಕುರಿತ ಹಲವು ಪುಸ್ತಕಗಳನ್ನು ಹೊರತಂದಿದ್ದಾರೆ. 

ಆಲ್ಬರ್ಟ್ ಐನ್‌ಸ್ಟೀನ್

ಶಾಲೆಯಲ್ಲಿ ಸ್ಲೋ ಲರ್ನರ್ ಎನಿಸಿಕೊಂಡಿದ್ದ ಐನ್‌ಸ್ಟೀನ್ ವಿಜ್ಞಾನ ಜಗತ್ತಿನ ಅತಿ ದೊಡ್ಡ ಸಾಧನೆಗಳನ್ನು ಮಾಡಿತೋರಿಸಿದ್ದಾರೆ. ಥಿಯರಿ ಆಫ್ ರಿಲೇಟಿವಿಟಿ ನೀಡಿ ಕ್ವಾಂಟಮ್ ಥಿಯರಿ ಅಭಿವೃದ್ಧಿಪಡಿಸಲು ಸಹಾಯ ಮಾಡಿದವರು. ಫೋಟೋಎಲೆಕ್ಟ್ರಿಕ್ ಎಫೆಕ್ಟ್ ಬಗ್ಗೆ ತಿಳಿಸಿಕೊಟ್ಟು ನೊಬೆಲ್ ಪ್ರೈಜ್ ಪಡೆದಿದ್ದಾರೆ. ಇರ ಐಕ್ಯೂ 160 ಆಗಿತ್ತು.

40 ಬಗೆಯ ಹಣ್ಣು ಕೊಡುತ್ತೆ ಈ ಮರ: ಅದ್ಭುತ ಗಿಡದ ಬೆಲೆ ಎಷ್ಟಿರಬಹುದು?

ಐಸಾಕ್ ನ್ಯೂಟನ್

192 ಐಕ್ಯೂ ಹೊಂದಿದ್ದ ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯ ಕುರಿತು ಜಗತ್ತಿಗೆ ತಿಳಿಸಿದ ವಿಜ್ಞಾನಿ. ಗಣಿತಜ್ಞ ಹಾಗೂ ಭೌತಶಾಸ್ತ್ರಜ್ಞ ಕೂಡಾ ಆಗಿದ್ದ ನ್ಯೂಟನ್ ಕ್ಯಾಲ್ಕುಲಸ್ ಅಭಿವೃದ್ಧಿಪಡಿಸಿ, ಇಂದಿನ ಎಂಜಿನಿಯರಿಂಗ್ ಜಗತ್ತಿಗೆ ಅಡಿಪಾಯ ಹಾಕಿದವರು. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು, ಶಬ್ದದ ವೇಗವನ್ನು ಅಧ್ಯಯನದಿಂದ ತಿಳಿಸಿದವರು. 

Latest Videos
Follow Us:
Download App:
  • android
  • ios