Asianet Suvarna News Asianet Suvarna News

ದಲಿತರನ್ನು ಹೊರಗಿಡುವುದು ಧರ್ಮಕ್ಕೆ ಅವಮಾನ ಮಾಡಿದಂತೆ: ಪೇಜಾವರ ಶ್ರೀ

ದಲಿತರನ್ನು ಹೊರಗಿಡುವುದು ಧರ್ಮಕ್ಕೆ ಅವಮಾನ ಮಾಡಿದಂತೆ ಎನ್ನುತ್ತಿದ್ದ ಪೇಜಾವರಶ್ರೀ | ಬದುಕಿನುದ್ದಕ್ಕೂ ಅಸ್ಪಶ್ಯತೆ ನಿವಾರಣೆಗೆ ಶ್ರಮಿಸಿದ್ದರು |  ಕರ್ಮಠ ಸಂಪ್ರದಾಯಸ್ಥರಿಂದ ವಿರೋಧ, ಪ್ರಗತಿಪರ ಹೋರಾಟಗಾರರಿಂದ ವ್ಯಂಗ್ಯ ಎದುರಿಸಿಯೂ ಶೋಷಿತರನ್ನು ಬರಸೆಳೆದುಕೊಂಡ ವಿಶ್ವೇಶ ಶ್ರೀ
 

Staying Away From Dalits Is like Insulting the religion says Udupi Pejawar mutt Vishvesha Teertha Swamiji
Author
Bengaluru, First Published Dec 30, 2019, 10:46 AM IST
  • Facebook
  • Twitter
  • Whatsapp

ದಲಿತರು ಕೂಡ ಹಿಂದೂಗಳು, ಅವರನ್ನು ಹೊರಗಿಟ್ಟು ಈ ಸಮಾಜ ಪೂರ್ಣಗೊಳ್ಳುವುದು ಸಾಧ್ಯವಿಲ್ಲ ಎಂದು ವಾದಿಸುತ್ತಿದ್ದ ಶ್ರೀಗಳಿಗೆ, ದಲಿತರ ಬಗ್ಗೆ ಬಾಲ್ಯದಿಂದಲೇ ಕಾಳಜಿ ಇತ್ತು. ಆದರೆ ಮಠದ ವ್ಯವಸ್ಥೆಯಲ್ಲಿ ದಲಿತರನ್ನು ಹತ್ತಿರ ಸೇರಿಸಿಕೊಳ್ಳುವುದು ಮತ್ತು ಆ ಕಾರಣಕ್ಕೆ ಆಗಿನ ಉಡುಪಿಯ ಇತರ ಹಿರಿಯ ಮಠಾಧೀಶರನ್ನು ಎದುರು ಹಾಕಿಕೊಳ್ಳುವುದು ತೀರಾ ಕಿರಿಯನಾದ ತನಗೆ ಸಾಧ್ಯವಾಗಿಲಿಲ್ಲ ಎಂದು ಶ್ರೀಗಳೇ ಹೇಳುತ್ತಿದ್ದರು.

"

ಆದರೆ, ಅವರೊಳಗಿದ್ದ ಬಂಡಾಯಗಾರ 1970 ರಲ್ಲಿ ಸಿಡಿದೇಳುತ್ತಾನೆ. ಆಗ ಅವರಿಗೆ 38 ವರ್ಷ. ಅವರ ದ್ವಿತೀಯ ಪರ್ಯಾಯೋತ್ಸವ ನಡೆಯುತ್ತಿತ್ತು. ಉಡುಪಿ ಯಲ್ಲಿ 40 ವಿವಿಧ ಮಠಾಧೀಶರ ಸಮಾವೇಶವನ್ನು ಆಯೋಜಿಸಿದ್ದರು. ಪ್ರಥಮ ಬಾರಿಗೆ ಬ್ರಾಹ್ಮಣೇತರ ಮಠಾಧೀಶರಿಗೆ ಕೃಷ್ಣಮಠದಲ್ಲಿ ವೇದಿಕೆ ನೀಡಿದ್ದರು. ಪರಿಶಿಷ್ಟ ಜಾತಿಯ ಸರ್ಕಾರಿ ಅಧಿಕಾರಿಯನ್ನು ವೇದಿಕೆಯಲ್ಲಿ ಗೌರವಿಸಿ, ಅಸ್ಪೃಶ್ಯತೆಯ ವಿರುದ್ಧ ತಮ್ಮ ಯುದ್ಧವನ್ನು ಘೋಷಿಸಿದ್ದರು.

ಪ್ರಜ್ಞೆ ಕಳೆದುಕೊಳ್ಳುವ 9 ತಾಸು ಮುನ್ನ, ಸ್ವರ್ಗ ಪ್ರಾಪ್ತಿ ಕುರಿತು ಕೊನೆ ಉಪನ್ಯಾಸ!

ಅದೇ ವರ್ಷ ಅವರು ಬೆಂಗಳೂರಿನ ಮಲ್ಲೇಶ್ವರಂನ ದಲಿತರ ಕಾಲೋನಿಯಲ್ಲಿ ಪಾದಯಾತ್ರೆ ನಡೆಸುತ್ತಾರೆ ಮತ್ತು ಅಲ್ಲಿನ ದಲಿತ ಮನೆಯೊಂದರಲ್ಲಿ ಪೂಜೆ ಮಾಡುತ್ತಾರೆ. ಇದು ಅಂದಿನ ಕಾಲದಲ್ಲಿ ನಾಡಿನಾದ್ಯಂತ ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಸಮಾಜದ ಒಂದು ವರ್ಗದಿಂದ ಶ್ರೀಗಳ ಬಗ್ಗೆ ತೀವ್ರ ಪ್ರಶಂಸೆಯೂ ವ್ಯಕ್ತವಾಯಿತು. ಇನ್ನೊಂದು ವರ್ಗದಿಂದ ಆಕ್ಷೇಪಕ್ಕೂ ಕಾರಣವಾಯಿತು.

ಆಗ ಶ್ರೀಗಳು, ನಮ್ಮ ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕ್ರೈಸ್ತರಿಗೆ ಅಥವಾ ಮುಸ್ಲಿಮರಿಗೆ ಇರುವ ಸ್ಥಾನಮಾನ ದಲಿತರಿಗೆ ನೀಡುವುದಿಲ್ಲ, ಒಂದು ವೇಳೆ ದಲಿತರು ಮುಸ್ಲಿಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಆಗ ಅವರನ್ನು ಮುಟ್ಟುತ್ತೇವೆ, ಅವರನ್ನು ದೂರ ಇಡುವುದಿಲ್ಲ. ಅದೇ ಕಾರಣಕ್ಕೆ ದಲಿತರು ಹಿಂದೂ ಧರ್ಮವನ್ನು ಬಿಟ್ಟು ತಮಗೆ ಗೌರವ ಸಿಗುವ ಇತರ ಧರ್ಮಗಳಿಗೆ ಮತಾಂತರವಾಗುತ್ತಾರೆ. ಇದು ನಾವು ಹಿಂದು ಧರ್ಮಕ್ಕೆ ಮಾಡುತ್ತಿರುವ ಅವಮಾನವಾಗಿದೆ ಎಂದಿದ್ದರು.

ಮತಾಂತರಕ್ಕೆ ತಡೆ: ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ನೂರಾರು ದಲಿತರ ಮತಾಂತರವಾದಾಗ ಅಲ್ಲಿಗೆ ಧಾವಿಸಿದ ಶ್ರೀಗಳು, ದಲಿತರ ಮನವೊಲಿಸಿ ಮತಾಂತರ ತಡೆದರು. ಮಾತ್ರವಲ್ಲ ದೇಶದಲ್ಲಿ ಎಲ್ಲೇ ದಲಿತರ ಮೇಲೆ ದೌರ್ಜನ್ಯವಾದರೆ ಉಪವಾಸ ಮಾಡುತ್ತಿದ್ದರು.

ನಂತರ ಶ್ರೀಗಳು ರಾಜ್ಯದ ಬಹುತೇಕ ಜಿಲ್ಲೆಗಳ ದಲಿತರ ಕೇರಿಗೆ ಭೇಟಿ ನೀಡಿ, ಪಾದಯಾತ್ರೆ- ಪೂಜೆಗಳನ್ನು ನಡೆಸಿದ್ದಾರೆ. ಅಲ್ಲಿನ ದಲಿತರಿಗೆ ಸೌಲಭ್ಯಗಳನ್ನು ವಿತರಿಸಿದ್ದಾರೆ. ಅವರ ಈ ನಡೆಯನ್ನು ಪ್ರಗತಿಪರರು ನಾಟಕ ಎಂದು ಟೀಕಿಸಿದರೆ, ಧರ್ಮಕರ್ಮಠರು ಈಗಲೂ ಆಕ್ಷೇಪಿಸುತ್ತಾರೆ.

ಕೊಪ್ಪಳ: ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿದ್ದ ಪೇಜಾವರ ಶ್ರೀ

ಮನ ನೋಯಿಸಿದ ಎರಡು ಘಟನೆಗಳು

ಪೇಜಾವರ ಶ್ರೀಗಳಿಗೆ ದಲಿತರ ಮೇಲೆ ಕಾಳಜಿ ಹುಟ್ಟುವುದಕ್ಕೆ ಅವರ ಜೀವನದಲ್ಲಿ ನಡೆದ ಎರಡು ಘಟನೆಗಳು ಕಾರಣ. ಆಗಿನ್ನೂ ಅವರಿಗೆ ಸನ್ಯಾಸ ದೀಕ್ಷೆಯಾಗಿರಲಿಲ್ಲ, ಆಗ ಅವರ ಹೆಸರು ವೆಂಕಟರಮಣ, ಆರೇಳು ವರ್ಷ ವಯಸ್ಸು. ಹುಟ್ಟೂರು ರಾಮ ಕುಂಜದಲ್ಲಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದುಬಿಟ್ಟರು. ಅವರಿಗೆ ಈಜು ಬರುತ್ತಿರಲಿಲ್ಲ. ಜೋರಾಗಿ ಕೂಗಿದರು. ದಾರಿಯಲ್ಲಿ ಹೋಗುತ್ತಿದ್ದ ರಾಮ ಮೊಗೇರ ಎಂಬಾತ ಅದನ್ನು ನೋಡಿ, ತಾನೂ ಜೋರಾಗಿ ಬೊಬ್ಬೆ ಹೊಡೆದ. ತಕ್ಷಣ ವೆಂಕಟರಮಣನ ತಂದೆ ಬಂದು ಆತನನ್ನು ಮೇಲಕ್ಕೆತ್ತಿದರು.

ರಾಮ ಮೊಗೇರ ಬೊಬ್ಬೆ ಹೊಡೆಯುವು ದರ ಬದಲು ತಾನೇ ವೆಂಕಟರಮಣನನ್ನು ಮೇಲಕ್ಕೆತ್ತಬಹದಾಗಿತ್ತು. ಆದರೆ ಆತ ದಲಿತನಾಗಿದ್ದರಿಂದ, ಬ್ರಾಹ್ಮಣ ಹುಡುಗ ನನ್ನು ಮುಟ್ಟುವಂತಿರಲಿಲ್ಲ. ಇದು ತಿಳಿದು ವೆಂಕಟರಮಣ ತೀವ್ರ ನೊಂದುಕೊಂಡ.  ಇನ್ನೊಮ್ಮೆ ಶ್ರೀಗಳು ಮಠದಲ್ಲಿದ್ದಾಗ ಊರಿನ ಒಂದಷ್ಟು ಜನರು ಅವರನ್ನು ನೋಡುವುದಕ್ಕೆ ಬಂದಿದ್ದರು. ಅವರಲ್ಲಿ ಕ್ರೈಸ್ತರು, ಮುಸ್ಲಿಮರೂ ಇದ್ದರು. ಅವರೆಲ್ಲರೂ ಮಠದೊಳಗೆ ಬಂದಿದ್ದರು. ಆದರೆ ಕೆಲವರು ಮಾತ್ರ ಮಠದ ಹೊರಗೆ ನಿಂತಿದ್ದರು.

ಅವರನ್ನು ಒಳಗೆ ಬರ ಹೇಳಿದರೂ ಬರಲಿಲ್ಲ. ಕಾರಣ ಕೇಳಿದರೆ ‘ಅವರು ದಲಿತರು’ ಎಂಬ ಉತ್ತರ ಬಂತು. ಅಂದೇ ಶ್ರೀಗಳು ‘ದಲಿತರನ್ನು ದೂರ ಇಡುವುದು ಧರ್ಮಕ್ಕೆ ಮಾಡುವ ಅವಮಾನ, ಇದನ್ನು ನಿಲ್ಲಿಸಬೇಕು’ ಎಂದು ನಿರ್ಧರಿಸಿದ್ದರು.

ಶುಕ್ರವಾರ ಬಂದ್ರೆ ನಮಾಜ್ ನೆನಪಿಸುತ್ತಿದ್ರು: ಪೇಜಾವರ ಶ್ರೀ ಕಾರು ಚಾಲಕ ಆರೀಫ್‌ ಮನದ ಮಾತುಗಳು

ದಲಿತರ ಮನೆಯಲ್ಲಿ ಸತ್ಯನಾರಾಯಣ ಪೂಜೆ!

1929 ರಲ್ಲಿ ಕೊಪ್ಪಳದಲ್ಲಿ ಅಸ್ಪಶ್ಯತೆ ದೊಡ್ಡ ಪ್ರಮಾಣದಲ್ಲಿ ಆಚರಣೆಯಲ್ಲಿತ್ತು. ಅಂಥ ಕಾಲದಲ್ಲಿ ಪೇಜಾವರ ಶ್ರೀಗಳು ನಗರದ ಚಂದಪ್ಪ ಹರಿಜನ ಎನ್ನುವವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ತಾವೇ ನೆರವೇರಿಸಿ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಇದುರಿಂದಾಗಿ ಪೇಜಾವರ ಶ್ರೀಗಳು ತೀವ್ರ ಟೀಕೆಗೆ ಗುರಿಯಾಗಿದ್ದರು. ಇದು ರಾಜ್ಯವ್ಯಾಪಿ ಚರ್ಚೆಗೂ ಕಾರಣವಾಗಿತ್ತು. ಆದರೆ, ಶ್ರೀಗಳು ತಮ್ಮ ನಡೆಯನ್ನು
ಸಮರ್ಥಿಸಿಕೊಂಡಿದ್ದರು.ಇದಾದ ಮೇಲೆ ಕೊಪ್ಪಳದಲ್ಲಿ ಕೃಷ್ಣಮಠದ ಉದ್ಘಾಟನೆ, ಇದರ ಬಳಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ್ದರು. 

ಮಠದೊಳಗೆ ದಲಿತರಿಗೆ ಪ್ರವೇಶವೂ ಇಲ್ಲದ ಕಾಲದಲ್ಲಿ ದಲಿತರಿಗೆ ದೀಕ್ಷೆ ನೀಡುವುದನ್ನು ಊಹಿಸಿಕೊ ಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆದರೆ ಈ ಅನೂಹ್ಯವನ್ನೂ ಸಾಧಿಸಿ ತೋರಿಸಿದವರು ಪೇಜಾವರ ಶ್ರೀಗಳು.
1992 ರಲ್ಲಿ ಪೇಜಾವರ ಶ್ರೀಗಳು ಮಧ್ಯಪ್ರದೇಶದ ಹಿಂದುಳಿದ ವರ್ಗವಾದ ಲೋದಿ ಸಮುದಾಯಕ್ಕೆ ಸೇರಿದ ಉಮಾಭಾರತಿ ಅವರಿಗೆ ಸಂನ್ಯಾಸ ದೀಕ್ಷೆ ನೀಡಿದರು.

ನಂತರ 2016 ರಲ್ಲಿ ಕ್ಷತ್ರಿಯ ಸಮುದಾಯ ಭರತರಾಜೇ ಅರಸ್ ಎಂಬವರಿಗೆ ಸಂನ್ಯಾಸ ದೀಕ್ಷೆ ನೀಡಿ ದರು. 2017 ರಲ್ಲಿ ಉಡುಪಿ ಸಮೀಪದ ಪಡುಬಿದ್ರಿಯ ಪಾಂಡು ಎಂಬ ದಲಿತನಿಗೆ ವೈಷ್ಣವ ದೀಕ್ಷೆ ನೀಡಿದರು. ಇದು ವೈಷ್ಣವ ಸಂಪ್ರದಾಯದಲ್ಲಿಯೇ ಒಂದು ದಾಖಲೆಯಾಯಿತು.

 

Follow Us:
Download App:
  • android
  • ios