Asianet Suvarna News Asianet Suvarna News

300 ರೂಪಾಯಿ ಸೋಪ್ ಕೇಳಿದ ಮಗಳಿಗೆ 30 ರೂಪಾಯಿದು ತಗೋ ಎಂದಿದ್ರು ವೀರೇಂದ್ರ ಹೆಗ್ಗಡೆ

ಚಂದದ ಸಾಬೂನಿಗೆ ಮರುಳಾಗಿ ಅಯ್ಯನಿಗೆ ತೋರಿಸಲು ಹೋದರೆ ಇದನ್ನು ಇಡಿಯಾಗಿ ಗಮನಿಸಿ ನೋಡಿದರು. ‘ಪರಿಮಳ ಚೆನ್ನಾಗಿದೆ, ಮಾಟ ಚೆನ್ನಾಗಿದೆ’ ಎಂದೆಲ್ಲಾ ಹೊಗಳಿದರು. ‘ಆದರೆ, ಇದಕ್ಕೆ ಮುನ್ನೂರು ರೂಪಾಯಿ ಕೊಡುವ ಬದಲು ನನಗೆ ಲಕ್ಸ್‌ ಸಾಬೂನು ಮೂವತ್ತು ರೂಪಾಯಿಗೆ ಸಿಗುತ್ತೆ’ ಅಂದರು!

Daughter Shraddha Heggade writes about father Veerendra Heggade dpl
Author
Bangalore, First Published Oct 18, 2020, 3:06 PM IST
  • Facebook
  • Twitter
  • Whatsapp

ಶ್ರದ್ಧಾ ಅಮಿತ್‌

ಸಾಮಾನ್ಯವಾಗಿ ನನ್ನ ಸಂಬಂಧಿಕರಲ್ಲಿ ಹೆಚ್ಚಿನವರು ಅವರವರ ತಂದೆಯವರನ್ನು ಅಪ್ಪಾಜಿ ಅಥವಾ ಅಪ್ಪಾ ಎಂದು ಕರೆದರೆ, ನಾನು ನನ್ನ ತಂದೆಯವರನ್ನು ‘ಅಯ್ಯಾ’ ಎಂದು ಕರೆಯುತ್ತೇನೆ. ನನ್ನ ತಂದೆಯೂ ಇವರ ತಂದೆಯನ್ನು ‘ಅಯ್ಯಾ’ ಎಂದೇ ಕರೆಯುತ್ತಿದ್ದರಂತೆ. ಬಹುಶಃ ನನ್ನ ಅಜ್ಜನಿಗೆ ಸೂರಾಲಿನ ಸಂಪರ್ಕವಿದ್ದುದರಿಂದ ಹೀಗಾಗಿರಬೇಕು. ನಾನು ಸುಮಾರು ಮೂರು - ನಾಲ್ಕು ವರ್ಷದವಳಿದ್ದಾಗಲೇ ಅಯ್ಯ ನನಗೆ ಕತೆಯ ಗೀಳು ಹಿಡಿಸಿದ್ದರು. ಮಧ್ಯಾಹ್ನದ ಊಟ ಮುಗಿಸಿ ಮೇಲೆ ಚಾವಡಿಗೆ ನಾನವರ ಬೆನ್ನು ಹಿಡಿಯುತ್ತಿದ್ದೆ. ಅವರೂ ಕೂಡ ಎಷ್ಟೇ ಆಯಾಸವಾಗಿದ್ದರೂ ನನಗೆ ಕತೆ ಹೇಳಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಮೊದ ಮೊದಲು ಪಶು ಪಕ್ಷಿಗಳು, ರಾಜಕುಮಾರ ಕುಮಾರಿಯರು, ಬೇರೆ ಗ್ರಹಗಳಿಂದ ಇಳಿದು ಬರುವ ವಿಚಿತ್ರ ಮಾನವರು ಅವರ ಕತೆಯ ವಸ್ತುಗಳಾಗಿರುತ್ತಿದ್ದವು. ಅವರು ಕತೆ ಹೇಳುತ್ತಿದ್ದ ರೀತಿ ಎಷ್ಟುಸಹಜ ಮತ್ತು ಆಕರ್ಷಕವಾಗಿರುತ್ತಿತ್ತೆಂದರೆ, ನಾನು ಕತೆಯಲ್ಲಿ ಸಂಪೂರ್ಣವಾಗಿ ತಲ್ಲೀನಳಾಗುತ್ತಿದ್ದೆ. ಮಾತ್ರವಲ್ಲದೆ, ಆಗಸದ ಮಾನವರು ನಮ್ಮ ಮನೆಯ ಅಂಗಳದಲ್ಲೇ ಇಳಿಯಬೇಕೆಂದೂ ಈ ಗ್ರಹದ ಆತ್ಯಂತ ಬುದ್ಧಿವಂತ ಹುಡುಗಿ ಎಂದು ಅವರು ನನ್ನನ್ನೇ ಆರಿಸಬೇಕೆಂದೂ ಹಟಹಿಡಿಯುತ್ತಿದ್ದೆ. ಆಯ್ಯ ಅಂದು ಹೇಳುತ್ತಿದ್ದ ಕತೆಗಳನ್ನು ಯಾರಾದರೂ ಬರೆದಿಡುತ್ತಿದ್ದರೆ, ಇಂದು ಅನೇಕ ಮಕ್ಕಳಿಗೆ ನನ್ನ ಹಾಗೆ ಸುಂದರ ಅನುಭವಗಳು ಆಗುತ್ತಿದ್ದವೇನೋ. ಆವರು ನನಗೆ ಬಿಡುವಾಗಿ ಸಿಕ್ಕುತ್ತಿದ್ದುದು ಹೆಚ್ಚಾಗಿ ಅವರ ಪ್ರಯಾಣ ಕಾಲದಲ್ಲಿ ಮಾತ್ರ. ಆಗ ಕತೆ ಹೇಳಿಸುವ ಮೂಲಕ ಈ ಸಂದರ್ಭದ ಪೂರ್ಣ ಪ್ರಯೋಜನ ಪಡೆಯುತ್ತಿದ್ದೆ. ಒಮ್ಮೆ ಹೀಗೆ ಬೆಂಗಳೂರಿನಲ್ಲಿ ಆರಂಭವಾದ ಕತೆ ಸಕಲೇಶಪುರದವರೆಗೂ ಮುಂದುವರಿದಿತ್ತು. ಇಂತಹ ಕತೆಗಳಿಂದಾಗಿ ನಮ್ಮ ಜತೆ ಪ್ರಯಾಣ ಮಾಡುತ್ತಿದ್ದ ಅಮ್ಮನ ತಾಳ್ಮೆಯ ಪರೀಕ್ಷೆಯೂ ಆಗಾಗ ಆಗುತ್ತಿತ್ತು.

ನಾನಿನ್ನೂ ಎರಡನೇ ತರಗತಿಯಲ್ಲಿರುವಾಗಲೇ ನನಗೆ asಠಿಛ್ಟಿಜ್ಡಿ sಛ್ಟಿಜಿಛಿs ನ ಕತೆಗಳನ್ನು ವಿವರಣೆ ಸಹಿತ ಓದಿ ಹೇಳುತ್ತಿದ್ದರು. ಸುಲಭವಾಗಿ ಅರ್ಥವಾಗದ ಈ ಕತೆಗಳನ್ನು ಓದುವುದೆಂದರೆ ಈಗಲೂ ನನಗೆ ಬಹಳ ಪ್ರೀತಿ. ಅಯ್ಯನಿಗೂ ಈ ಪುಸ್ತಕ ಮಂತ್ರ ಪುಸ್ತಕವಿದ್ದಂತೆ. ನೂರು ಬಾರಿ, ಸಾವಿರ ಬಾರಿ ಓದಿದ ಪುಸ್ತಕವನ್ನೇ ಮತ್ತೆ ಓದಿ ಮಲಗುವುದು ಅವರ ಅಭ್ಯಾಸ. ಈ ಪುಸ್ತಕ ಓದುವುದರಿಂದ ತಲೆಯೊಳಗಿನ ಯೋಚನೆಗಳು ಕಡಿಮೆಯಾಗಿ ನಿದ್ದೆಗೆ ಅನುಕೂಲವಾಗುವುದೆಂದು ಅವರ ವಾದ. ನನ್ನ ಈಗಿನ ಪುಸ್ತಕ ಓದುವ ಹವ್ಯಾಸಕ್ಕೆ ಅಯ್ಯನೇ ಕಾರಣ ಎಂದರೆ ತಪ್ಪಲ್ಲ.

ಮಿಸ್‌ ವರ್ಲ್ಡ್ ಫೈನಲಿಸ್ಟ್ ಈಗ ಟ್ರೈನ್ ಡ್ರೈವರ್..! ಇಲ್ನೋಡಿ ಫೋಟೋಸ್

ಅಯ್ಯಎಂದೂ ನನ್ನನ್ನು ಶಾಲೆಗೆ ಸೇರಿಸಲು ಬರಲಿಲ್ಲ. ಶಾಲೆಗೆ ಕಳಿಸಲೂ ಬರಲಿಲ್ಲ. ಆದರೆ ಅವರು ತಮ್ಮೆಲ್ಲಾ ಕೆಲಸಗಳ ನಡುವೆಯೂ ನನಗೆ ಸಮಯ ಕೊಡುತ್ತಿದ್ದರು. ನಾನು ಬರೆಯುವಲ್ಲಿಗೆ ತಾವೂ ಬಂದು ಕುಳಿತು ತಮ್ಮ ಪತ್ರಗಳನ್ನು ಬರೆಯುತ್ತಿದ್ದರು. ನನಗೆ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕು ಬಂದಾಗ ನಾನು ನಿನಗೆ ಹೇಳಿಕೊಟ್ಟಿದ್ದಕ್ಕೆ ಇಷ್ಟುಅಂಕಗಳು ಬಂದವು ಅಂತ ಕ್ರೆಡಿಟ್‌ ತಗೊಂಡರು. ‘ಆಯ್ಯ ನೀವು ಯಾವಾಗ ನನಗೆ ಹೇಳಿಕೊಟ್ಟಿದ್ದೀರಿ..’ ಅಂತ ಕೇಳಿದರೆ, ‘ಅವತ್ತು ನಿನ್ನ ಜೊತೆ ಓದಲು ಕೂರಲಿಲ್ಲವಾ, ಅದಕ್ಕೇ ನಿನಗೆ ಮಾರ್ಕು ಬಂತು’ ಎಂದು ಸಮರ್ಥಿಸಿಕೊಂಡರು!

Daughter Shraddha Heggade writes about father Veerendra Heggade dpl

ಒಮ್ಮೆ ನಮ್ಮ ಶಾಲೆಯಲ್ಲಿ ತೆಂಗಿನ ಮರದ ಬಗ್ಗೆ ಪ್ರಬಂಧ ಬರೆಯಲು ಹೇಳಿದ್ದರು. ನಾನು ಒಂದೋ ಎರಡೋ ಪುಟ ಬರೆದರೆ ಸಾಕಿತ್ತು. ಛಾನ್ಸ್‌ ತೆಗೆದುಕೊಳ್ಳಲು ಅಯ್ಯನ ಬಳಿ ಪ್ರಬಂಧ ಬರೆಯಲು ಹೇಳಿಕೊಡಲು ಒತ್ತಾಯಿಸಿದೆ. ಅವರು ಪಕ್ಕದಲ್ಲೇ ಬಂದು ಕುಳಿತು ತೆಂಗಿನ ಮರದ ಬಗ್ಗೆ ಡಿಕ್ಟೇಶನ್‌ ಕೊಡತೊಡಗಿದರು. ಅವರು ಹೇಳಿದಂತೆ ನಾನು ಬರೆಯುತ್ತಿದ್ದೆ. ತೆಂಗಿನ ಮರ, ಅದರ ಕಾಯಿ, ಗರಿ, ಕಾಂಡ, ಎಳನೀರು ಎಲ್ಲಾ ಹೇಳುತ್ತಾ ಹೋದರು. ಪುಟ ಎರಡಾಗಿ ಮೂರಾಗಿ ಹತ್ತಾಗಿ ಹದಿನಾರಾಗಿತ್ತು. ನಾನು, ‘ಸಾಕು ಅಯ್ಯ, ಮಿಸ್ಸು ಬೈತಾರೆ’ ಎಂದರೂ ಬಿಡದೇ 16 ಪುಟದ ಪ್ರಬಂಧ ಬರೆಸಿದರು!

ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ

ಬಡವರಿಗೆ, ಹಸಿದವರಿಗೆ, ಉದಾರವಾಗಿ ದಾನ ಮಾಡುವ ಅಯ್ಯ, ಮನೆಯವರ ವಿಷಯದಲ್ಲಿ ಮಾತ್ರ ಬಹಳ ಕಂಜೂಸು. ಮಿತವ್ಯಯವೇ ಅವರ ಮಂತ್ರ. ಒಂದು ರೂಪಾಯಿಯೂ ಸುಮ್ಮನೆ ದಂಡವಾಗಬಾರದು ಎಂಬುದು ಅವರ ಎಚ್ಚರಿಕೆ. ಹಣ, ಆಹಾರ, ಸಮಯ ಎಲ್ಲಾ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕೆಂಬುದು ಅವರು ಮಕ್ಕಳಿಗೆ ಕಲಿಸಿಕೊಟ್ಟಿರುವ ಅಂಶ.

ಒಮ್ಮೆ ನಾನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಾಗ ಚಂದದ ಸಾಬೂನಿಗೆ ಮರುಳಾಗಿ ಅಯ್ಯನಿಗೆ ತೋರಿಸಲು ಹೋದರೆ ಇದನ್ನು ಇಡಿಯಾಗಿ ಗಮನಿಸಿ ನೋಡಿದರು. ‘ಪರಿಮಳ ಚೆನ್ನಾಗಿದೆ, ಮಾಟ ಚೆನ್ನಾಗಿದೆ’ ಎಂದೆಲ್ಲಾ ಹೊಗಳಿದರು. ‘ಆದರೆ, ಇದಕ್ಕೆ ಮುನ್ನೂರು ರೂಪಾಯಿ ಕೊಡುವ ಬದಲು ನನಗೆ ಲಕ್ಸ್‌ ಸಾಬೂನು ಮೂವತ್ತು ರೂಪಾಯಿಗೆ ಸಿಗುತ್ತೆ’ ಅಂದರು!

ಅವರಿಗೆ ಇನ್ಯಾರೋ ಒಂದು ಸೆಂಟು ತಂದು ಕೊಟ್ಟಿದ್ದರು. ಅದನ್ನು ನೋಡಿ ಓಹೋ ಇದರ ಬಗ್ಗೆ ಬಂದ ಜಾಹೀರಾತು ನೋಡಿದ್ದೇನೆ. ಇದನ್ನು ಬಳಸಿದರೆ ಹುಡುಗಿಯರಿಗೆ ಆಸಕ್ತಿ ಆಗುತ್ತದೆಯಂತೆ. ಹಾಗಾಗಿ ನನಗೆ ಬೇಡ ನೀನೇ ಇಟ್ಟುಕೋ ಅಂತ ಒಬ್ಬ ಬಂಟನಿಗೆ ಕೊಟ್ಟರು. ಅವನಿಗೆ ಇನ್ನೂ ಮದುವೆ ಆಗಿರಲಿಲ್ಲ!

ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಪ್ರಿನ್ಸಿಪಾಲ್‌ಗೊಂದು ಸಲಾಂ!

ಮಕ್ಕಳ ಜೊತೆ ಬೆಟ್‌ ಕಟ್ಟುವುದು ಅವರಿಗೆ ಒಂದು ಆಟ. ಅದೂ ಎಷ್ಟುರೂಪಾಯಿ- ಹೆಚ್ಚೆಂದರೆ ಐದು ರೂಪಾಯಿ! ಈಗ ಐದು ರೂಪಾಯಿಗೆ ಬೆಲೆಯೇ ಇಲ್ಲ ಎಂದು ಎಷ್ಟುಸಾರಿ ನಾವು ಮಕ್ಕಳು ತಮಾಷೆ ಮಾಡಿಯಾಗಿದೆ. ಆದರೆ ಅವರ ರೇಟು ಏರುವುದೇ ಇಲ್ಲ. ನನ್ನ ತಂಗಿಯ ಜೊತೆ ಅವರು ಒಮ್ಮೆ ಪಂಥ ಕಟ್ಟಿಅವರು ಸೋತರು. ಪಂಥ ಏನಾಗಿತ್ತೆಂದರೆ ಬಾಯಲ್ಲಿ ಐದು ಮಾವಿನ ಹಣ್ಣಿನ ಗೊರಟೆಯನ್ನು ಹಾಕಿಕೊಳ್ಳುವುದು. ನನ್ನ ಚಿಕ್ಕಪ್ಪನ ಮಗಳು ಬೆಟ್‌ ಗೆದ್ದು ಬಿಟ್ಟಳು, ಅಂದರೆ ಐದು ಮಾವಿನ ಗೊರಟೆಗಳನ್ನು ಬಾಯಿಗೆ ತುರುಕಿಕೊಂಡಿದ್ದಳು. ಆಗ ಐದು ರೂಪಾಯಿ ಕೊಡಬೇಕಾದ ಅಯ್ಯ, ಪಂಥಕ್ಕೆ ಕಟ್ಟಿದ ಹಣ ಕೊಡುವ ಮಾತೇ ಇಲ್ಲ. ಅವಳು ಬಿಡಳು- ಇವರು ಕೊಡರು. ಈ ಜಗಳ ಇದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ. ಒಮ್ಮೆ ಅವಳ ಶಾಲೆಯಲ್ಲಿ ನನ್ನ ಆದರ್ಶ ವ್ಯಕ್ತಿತ್ವ ಎಂಬ ವಿಷಯದ ಮೇಲೆ ಪ್ರಬಂಧ ಬರೆಯಲಿತ್ತು. ಅವಳು ಅಯ್ಯನ ಬಗ್ಗೆ ಬರೆದಳು. ಅವರೇ ನನ್ನ ಜೀವನಕ್ಕೆ ಆದರ್ಶಪ್ರಾಯರು ಎಂದು ಬರೆದು, ಆದರೆ ಅವರು ಅಷ್ಟುದೊಡ್ಡ ಜನವಾದರೂ ನನ್ನ ಜೊತೆ ಬೆಟ್ಟು ಕಟ್ಟಿಐದು ರೂಪಾಯಿ ಸೋತು ಇನ್ನೂ ಕೊಟ್ಟಿಲ್ಲ ಅಂತ ಬರೆದಿದ್ದಳು!

ನಮ್ಮ ದೊಡ್ಡ ಕುಟುಂಬದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿ ಅಯ್ಯ. ಅಷ್ಟುಕೆಲಸದ ಒತ್ತಡಗಳು ಅವರಿಗೆ ಇರುತ್ತವೆ. ಆದರೆ ಇಡೀ ನಮ್ಮ ಕುಟುಂಬದಲ್ಲಿ ಮಕ್ಕಳಿಗೆ ಅತ್ಯಂತ ಪ್ರಿಯವಾದ ವ್ಯಕ್ತಿ ಇದ್ದರೆ ಅಯ್ಯನೇ. ಮಕ್ಕಳಿಗೆ ಅವರ ಜೊತೆ ಇರುವಷ್ಟುಸಲುಗೆ ಯಾರ ಜೊತೆಯೂ ಇಲ್ಲ. ಅವರು ಕೂಡಾ ಅಷ್ಟೆ. ಪ್ರೀತಿಯಿಂದ ಮಕ್ಕಳಿಗೆ ಸ್ಪಂದಿಸುವುದೂ ಇದಕ್ಕೆ ಕಾರಣ. ಈಗ ಅವರಿಗೆ ಅನೇಕ ಮೊಮ್ಮಕ್ಕಳಿದ್ದಾರೆ. ಅವರಿಗಂತೂ ದೊಡ್ಡ ಅಜ್ಜನೇ ಪ್ರೀತಿ. ಆಟಕ್ಕೆ ಅವರೆಂದರೆ ಪಂಚಪ್ರಾಣ. ಸುರೇಂದ್ರ ಚಿಕ್ಕಪ್ಪನ ಮೊಮ್ಮಗ ಇದ್ದಾನೆ, ಅವನು ಮಾತ್ರ ನಮ್ಮ ಕುಟುಂಬದಲ್ಲಿ ಅಯ್ಯನಿಗೆ ಫೋನಾಯಿಸಿ ಮಾತನಾಡುವ ಧೈರ್ಯಸ್ಥ. ಆದನ್ನು ಧೈರ್ಯ ಅನ್ನುವುದಕ್ಕಿಂತ ಸಲುಗೆ ಅನ್ನಬೇಕು. ಅವನು ಎಷ್ಟುಹೊತ್ತಿಗೆ ಫೋನು ಮಾಡಿದರೂ ಅಯ್ಯನಿಗೆ ಖುಷಿ. ತಾಳ್ಮೆಯಿಂದ ಅವನು ಕ್ರಿಕೆಟ್‌ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ!

ಕೆಲಸದವಳಿಗೆ ಹೊಸ ಮನೆ ಗಿಫ್ಟ್ ಮಾಡಿದ ದಂಪತಿ..! ಹೀಗಿತ್ತು ಆ ಭಾವುಕ ಕ್ಷಣ

ಈಗ ಅರ್ಥವಾಗುತ್ತದೆ, ಅಯ್ಯ ಎಷ್ಟೇ ಬಿಜಿಯಾಗಿದ್ದರೂ ನಾನು ಚಿಕ್ಕವಳಿದ್ದಾಗ ನನ್ನನ್ನು ಮರೆಯುತ್ತಿರಲಿಲ್ಲ ಅಂತ. ಯಾಕೆಂದರೆ ಅವರು ಹೊರಗಡೆ ಹೋದಾಗ ನನಗೆ ಅದೆಷ್ಟು ಪುಸ್ತಕಗಳನ್ನು ತಂದುಕೊಡುತ್ತಿದ್ದರೋ ಲೆಕ್ಕವಿಲ್ಲ. ಈಗ ನನ್ನ ಮಗಳಿಗೆ ಅವುಗಳನ್ನು ಓದಿಸಲು ಸುಲಭವಾಗುತ್ತದೆ. ಈಗ ಮೊಮ್ಮಗಳು ಮಾನ್ಯಳಿಗೆ ಟಾಮ್‌ ಆ್ಯಂಡ್‌ ಜೆರ್ರಿ ಓದಿಸುವುದು ಅಜ್ಜನಿಗೆ ಖುಷಿ. ಎಷ್ಟೋ ಸಾರಿ ಅಯ್ಯ ಏನೋ ಗಹನವಾದ ಕೆಲಸದಲ್ಲಿ ನಿರತರಾಗಿದ್ದಾರೆಂದು ನಾವು ಮಾತಾಡಿಸಲು ಹೋಗಿ ನೋಡಿದರೆ ಮೊಮ್ಮಗಳಿಗೆ ಟಾಮ್‌ ಎಂಡ್‌ ಜೆರ್ರಿ ಫಿಲಂ ತೋರಿಸುತ್ತಿರುತ್ತಾರೆ. ಅದರಲ್ಲಿ ಬರುವ ಪಾತ್ರಗಳು, ಆದರೆ ವಿಶೇಷತೆಗಳು, ಚಿತ್ರಗಳು, ಆದರ ರೇಖೆಗಳನ್ನು ನೋಡು ಎನ್ನುತ್ತಾ ಅವರು ಕಲಿಸುತ್ತಾರೆ .

Daughter Shraddha Heggade writes about father Veerendra Heggade dpl

ಅಯ್ಯನಿಗೆ ಕಾರು ಚಾಲನೆ ಬಹಳ ಇಷ್ಟದ ಕೆಲಸ. ಎಷ್ಟೋ ಸಾರಿ ದೂರ ಹೋಗಬೇಕಾದಾಗ ಡೈವರ್‌ನನ್ನು ಆಚೆ ಕುಳ್ಳಿರಿಸಿ ತಾವೇ ಚಾಲನೆ ಮಾಡುವುದಿದೆ. ಅದೂ ಬೆಟ್ಟಗುಡ್ಡದ ಕಷ್ಟದ ದಾರಿಗಳಲ್ಲಿ ಡ್ರೈವ್‌ ಮಾಡುವುದು ಅವರಿಗೆ ಇಷ್ಟ. ಇತ್ತೀಚೆಗೆ ಮಾನ್ಯಳ ಶಾಲೆಯ ಹತ್ತಾರು ಮಕ್ಕಳು ಕ್ಷೇತ್ರ ಪ್ರವಾಸಕ್ಕೆ ಬಂದಿದ್ದರು. ಅವರೆಲ್ಲ ಅಯ್ಯನ ಅತಿಥಿಗಳು, ಅವರಿಗೆ ನಮ್ಮ ಅಯ್ಯ ನಿಮಗೆಲ್ಲ ಬ್ಯಾಟಲ್‌ ಫೀಲ್ಡ್‌ ತೋರಿಸುತ್ತಾರೆ ಅಂತ ಮಾನ್ಯ ಹೇಳಿ ಬಿಟ್ಟಿದ್ದಾಳೆ. ಅವರೆಲ್ಲ ರೋಮಾಂಚನಗೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ಆರ್ಮಿ ಜೀಪಿನಂಥ ತೆರೆದ ಜೀಪಿನಲ್ಲಿ ಕುಳ್ಳಿರಿಸಿ ಇವರು ಮಕ್ಕಳಿಗೆ ಬ್ಯಾಟಲ್‌ ಫೀಲ್ಡ್‌ ತೋರಿಸಲು ಕರಕೊಂಡು ಹೋದರು. ಅವರೇ ಡ್ರೈವ್‌ ಮಾಡುತ್ತಿದ್ದರು. ಹತ್ತಿರದ ಕಾಡಿನ ರಸ್ತೆಯಲ್ಲಿ ಸಂಚರಿಸಿ ಜೋರಾಗಿ ಇಳುಕಲ್ಲಿನಲ್ಲಿ ಚಲಿಸಿ ಮಜಾ ಕೊಟ್ಟರು. ಏರುಮಾರ್ಗದಲ್ಲಿ ಹತ್ತಿಸಿದರು. ಮಕ್ಕಳು ನಿಜವಾಗಿ ಅಯ್ಯ ಬ್ಯಾಟಲ್‌ಫೀಲ್ಡ್‌ ತೋರಿಸಿದ್ದಾರೆ ಅಂತಲೇ ನಂಬಿಕೊಂಡು ಖುಷಿಯಿಂದ ಬೆಂಗಳೂರಿಗೆ ವಾಪಾಸ್ಸಾಗಿ ತಮ್ಮ ಅಪ್ಪ ಅಮ್ಮನಿಗೆ ಹೇಳುತ್ತಿದ್ದಾರೆ.

ಭಾರತ ಆಹಾರ ನಂಗಿಷ್ಟ ಎಂದು ಡ್ರ್ಯಾಗನ್‌ಗೆ ಟಾಂಗ್ ಕೊಟ್ಟ ತೈವಾನ್ ಅಧ್ಯಕ್ಷೆ

ಅಯ್ಯನಿಗೆ ಅವರ ಕೆಲಸವನ್ನು ಅವರೇ ಮಾಡಿಕೊಳ್ಳಲು ಖುಷಿ. ಪ್ರವಾಸದಲ್ಲಿರುವಾಗ ಅವರ ಊಟದ ಬಟ್ಟಲನ್ನೂ ಅವರೇ ತೊಳೆಯುತ್ತಾರೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಪರ ಊರುಗಳಿಗೆ ಹೋದಾಗ ತಮ್ಮ ಬಟ್ಟೆಗಳನ್ನು ತಾವೇ ಮಡಿಸಿಕೊಳ್ಳುವುದು, ಬಟ್ಟೆಗಳನ್ನು ಇಸ್ತ್ರಿ ಮಾಡಿಸಿಕೊಳ್ಳುವುದು ಅವರ ಹವ್ಯಾಸ. ಮಗಳ ಮನೆಗೆ ಬಂದರೂ ಅವರ ಕೆಲಸ ಅವರೇ ಮಾಡಿಕೊಳ್ಳುವುದು. ಅಯ್ಯ ನಿಮ್ಮ ಬಟ್ಟೆನಾನು ಮಡಿಸಿಡುತ್ತೇನೆ ಎಂದರೂ ಕೇಳುವುದಿಲ್ಲ. ಅವರು ದಪ್ಪದ ರಗ್ಗು ಹೊದ್ದುಕೊಳ್ಳುವುದಿಲ್ಲ. ಅದರ ಹಿಂದಿನ ಕಾರಣ ಎಷ್ಟೋ ವರ್ಷದವರೆಗೆ ನಮಗೆ ಗೊತ್ತಿರಲಿಲ್ಲ. ದಪ್ಪದ ರಗ್ಗಾದರೆ ತೊಳೆಯುವವರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಅವರು ತೆಳುವಾದ ರಗ್ಗನ್ನೇ ಬಳಸುವುದು.

ಇತ್ತೀಚೆಗೆ ನಮ್ಮ ಮನೆಗೆ ಬಂದಾಗ ಕೆಲಸದವಳು ಬಂದಿರಲಿಲ್ಲ. ಯಾಕೆಂದು ಕೇಳಿದರು. ಅವಳಿಗೆ ಹುಷಾರಿಲ್ಲ, ಹೊಟ್ಟೆಯ ಆಪರೇಷನ್‌ ಆಗಬೇಕಂತೆ ಅಂದೆ. ಆಗ ಅವರು ಔಷಧಿಯ ಖರ್ಚು ನೀನೇ ಕೊಡಬೇಕು, ಎಲ್ಲೋ ನೂರಿನ್ನೂರು ಕೊಟ್ಟು ಕೈತೊಳೆದುಕೊಳ್ಳಬೇಡ ಎಂದು ಎಚ್ಚರಿಕೆ ನೀಡಿದರು. ಅವರಿಗೆ ಯಾವಾಗಲೂ ಕೆಲಸದವರ ಬಗ್ಗೆ, ಮನೆಯವರ ಬಗ್ಗೆಯೂ ಇರದ ಪ್ರೀತಿ, ಕಾಳಜಿ ಇರುವುದನ್ನು ಕಂಡಿದ್ದೇವೆ.

Follow Us:
Download App:
  • android
  • ios