ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್ ತಮ್ಮ ನೆಚ್ಚಿನ ಭಾರತದ ಖಾದ್ಯಗಳೇನೆಂದು ಹೇಳಿದ್ದು, ಫೊಟೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಬಹಳಷ್ಟು ಭಾರತದ ರೆಸ್ಟೋರೆಂಟ್‌ಗಳಿರುವ ತೈವಾನ್ ಲಕ್ಕಿ ಎಂದು ಅವರು ಹೇಳಿದ್ದಾರೆ.

ಚನ್ನಾ ಮಸಾಲಾ ಮತ್ತು ನಾನ್ ನನ್ನ ನೆಚ್ಚಿನ ಭಾರತೀಯ ಆಹಾರ ಎಂದಿದ್ದಾರೆ ತ್ಸಾಯ್. ಹಾಗೆಯೇ ಚಹಾ ಕೂಡಾ ನನಗೆ ಇಷ್ಟ ಎಂದಿದ್ದಾರೆ. ಭಾರತ ವೈಬ್ರೆಂಟ್, ವೈವಿದ್ಯತೆ ಇರುವ ಕಲರ್‌ಫುಲ್ ದೇಶ ಎಂದೂ ಬಣ್ಣಿಸಿದ್ದಾರೆ.

ಮಕ್ಕಳಿಗೆ ಇಷ್ಟವಾಗೋ ಸೂಪರ್ ಬ್ರೇಕ್ ಫಾಸ್ಟ್ ರೆಸಿಪಿ, ಟ್ರೈ ಮಾಡಿ

ಬಹಳಷ್ಟು ಭಾರತೀಯ ರೆಸ್ಟೋರೆಂಟ್‌ಗಳಿಗೆ ತೈವಾನ್ ಮನೆಯಾಗಿರುವುದು ಲಕ್ಕಿ. ತೈವಾನಿ ಜನರಿಗೆ ಇದು ಇಷ್ಟ. ನನಗೆ ಚನ್ನಾ ಮಸಾಲಾ ಮತ್ತು ದಾಲ್ ಅಂದ್ರೆ ಇಷ್ಟ. ಚಹಾ ಕುಡಿದಾಗ ಭಾರತದಲ್ಲಿ ಸುತ್ತಿದ್ದ ದಿನಗಳೇ ನೆನಪಾಗುತ್ತವೆ. ನಿಮ್ಮ ಭಾರತೀಯ ಫೇವರೇಟ್ ಫುಡ್ ಯಾವುದು ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇವರ ಪೋಸ್ಟ್‌ಗೆ ಬಹಳಷ್ಟು ಪ್ರತಿಕ್ರಿಯೆ ಬಂದಿದ್ದು, ಎಲ್ಲರೂ ತಮ್ಮ ನೆಚ್ಚಿನ ಖಾದ್ಯಗಳ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ತ್ಸೈ ಇಂಗ್-ವೆನ್ ತೈವಾನೀಸ್ ಒಬ್ಬ ರಾಜಕಾರಣಿ. ಅವರು 2016 ರಲ್ಲಿ ಚೀನಾ ಗಣರಾಜ್ಯದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ತ್ಸೈ ಇಂಗ್-ವೆನ್ ತೈವಾನ್‌ನ ಮೊದಲ ಮಹಿಳಾ ಅಧ್ಯಕ್ಷೆ.