ಗರ್ಭಿಣಿಯರಿಗೆ ಗರ್ಭಸಂಸ್ಕಾರ ನೀಡಲು ವೈದ್ಯರಿಗೆ ಆರ್‌ಎಸ್‌ಎಸ್ ತರಬೇತಿ

ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ಗರ್ಭಿಣಿ ಮಹಿಳೆಯರಿಗೆ ಶ್ರೀರಾಮ, ಹನುಮಂತ, ಶಿವಾಜಿ ಹಾಗೂ ಸ್ವಾತಂತ್ರ ಹೋರಾಟಗಾರರ ಜೀವನ ಕತೆಗಳನ್ನು ಹೋರಾಟವನ್ನು ತಿಳಿಸಬೇಕು ಇದರಿಂ ಮಗುವಿಗೆ ಗರ್ಭದಲ್ಲಿದ್ದಾಗಲೇ ಮಗು ಸಂಸ್ಕಾರದ ಬಗ್ಗೆ ಕಲಿಯಲು ಆರಂಭಿಸುತ್ತದೆ ಎಂದು ಆರ್‌ಎಸ್‌ಎಸ್‌ ಹೇಳಿದೆ. 

RSS Told teach sansakar to child when it was in mothers womb tell stories of Lord Ram, Hanuman and shivaji to baby akb

ನವದೆಹಲಿ: ಮಗು ಗರ್ಭದಲ್ಲಿರುವಾಗಲೇ ಅದಕ್ಕೆ ಸಂಸ್ಕಾರ ಕಲಿಸುವ ಕೆಲಸವಾಗಬೇಕು. ಗರ್ಭಿಣಿ ಮಹಿಳೆಯರಿಗೆ ಶ್ರೀರಾಮ, ಹನುಮಂತ, ಶಿವಾಜಿ ಹಾಗೂ ಸ್ವಾತಂತ್ರ ಹೋರಾಟಗಾರರ ಜೀವನ ಕತೆಗಳನ್ನು ಹೋರಾಟವನ್ನು ತಿಳಿಸಬೇಕು ಇದರಿಂ ಮಗುವಿಗೆ ಗರ್ಭದಲ್ಲಿದ್ದಾಗಲೇ ಮಗು ಸಂಸ್ಕಾರದ ಬಗ್ಗೆ ಕಲಿಯಲು ಆರಂಭಿಸುತ್ತದೆ ಎಂದು ಆರ್‌ಎಸ್‌ಎಸ್‌ ಹೇಳಿದೆ. 

ಆರ್‌ಎಸ್‌ಎಸ್‌ನ ರಾಷ್ಟ್ರ ಸೇವಿಕಾ ಸಮಿತಿಯ  ಸಮವರ್ಧಿನಿ ನ್ಯಾಸ್ ಎಂಬ  ವಿಭಾಗವೂ(ಆರ್‌ಎಸ್‌ಎಸ್‌ನ ಮಹಿಳಾ ಘಟಕ) ವೂ ಈಗ ಗರ್ಭ ಸಂಸ್ಕಾರ ಎಂಬ 
ಆಂದೋಲನವನ್ನು ನಡೆಸುತ್ತಿದ್ದು,  ಈ ಯೋಜನೆಯ ಮೂಲಕ ಸ್ತ್ರೀ ರೋಗ ತಜ್ಞರು,  ಗರ್ಭಿಣಿ ಮಹಿಳೆಯರನ್ನು ಸಂಪರ್ಕಿಸಿ ಅವರಿಗೆ ಅವರಿಗೆ ಹೇಗೆ ಮಗುವಿನ ಜನನಕ್ಕೂ ಮೊದಲೇ ಮಗುವಿಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಸಂಸ್ಕಾರ ನೀಡುವುದು ಹೇಗೆ ಎಂಬುದನ್ನು ತಿಳಿಸಲಿದ್ದಾರೆ. ಇದರ ಭಾಗವಾಗಿ ಭಾನುವಾರ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ಅನೇಕ ಸ್ತ್ರೀರೋಗ ತಜ್ಞರು ಭಾಗಿಯಾಗಿದ್ದರು. 

ಗರ್ಭ ಸಂಸ್ಕಾರಕ್ಕಾಗಿ ವೈದ್ಯರಿಗೆ ಕಾರ್ಯಗಾರ

ಆರ್‌ಎಸ್‌ಎಸ್‌ನ ಮಹಿಳಾ ಘಟಕ ಸಮವರ್ಧಿನಿ ನ್ಯಾಸ್ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ 12 ರಾಜ್ಯಗಳ 70 ರಿಂದ 80 ವೈದ್ಯರು ಭಾಗಿಯಾಗಿದ್ದು, ಅವರಲ್ಲಿ ಬಹುತೇಕರು ಸ್ತ್ರೀರೋಗ ತಜ್ಞರು ಹಾಗೂ ಆಯುರ್ವೇದಿಕ್ ವೈದ್ಯರು. ಗರ್ಭದಿಂದಲೇ ಮಗುವಿಗೆ ಸಂಸ್ಕಾರ ನೀಡಬೇಕಿದೆ. ದೇಶ ಮೊದಲು ದೇಶವೇ ಮೊದಲ ಆದ್ಯತೆ ಎಂಬುದನ್ನು ಮಗುವಿಗೆ ತಿಳಿಸಬೇಕಿದೆ ಎಂದು ಸಮವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮಾರಠೆ ಹೇಳಿದರು. 

ಶಿವಾಜಿ ಮಹರಾಜರ ತಾಯಿ ಜೀಜಾಬಾಯಿಯವರ ಉದಾಹರಣೆ ನೀಡಿದ ಅವರು, ಆಕೆ ಹೇಗೆ ಒಬ್ಬ ನಾಯಕನಿಗೆ ಜನ್ಮ ನೀಡಬೇಕೆಂದು ಬಯಸಿ ಪ್ರಾರ್ಥನೆ ಮಾಡಿದಳೋ ಹಾಗೆಯೇ ಎಲ್ಲಾ ಮಹಿಳೆಯರು ಪ್ರಾರ್ಥನೆ ಮಾಡಬೇಕಿದೆ. ಇದರಿಂದ ಹುಟ್ಟುವ ಮಗು ಹಿಂದೂ ಆಡಳಿತಗಾರರ ಅರ್ಹತೆಯನ್ನು ಗಳಿಸುವುದು ಎಂದು ಅವರು ಹೇಳಿದರು. 

ಗರ್ಭಿಣಿ, ಭ್ರೂಣ ಕಾಳಜಿಯ ಹೊಸ ಕೋರ್ಸ್ ಗರ್ಭ ಸಂಸ್ಕಾರ

ಏಮ್ಸ್ ಆಸ್ಪತ್ರೆಯ ಎನ್‌ಎಂಆರ್ ವಿಭಾಗದ ಮುಖ್ಯಸ್ಥ ಡಾ. ರಾಮ್ ಜಯಸುಂದರ್, ಮಾತನಾಡಿ,  ಇತ್ತೀಚೆಗೆ ಆರ್ಥಿಕವಾಗಿ ಆರಾಮದಾಯಕವಾಗಿರುವ ಸುಸ್ಥಿರ ಕುಟುಂಬಗಳಲ್ಲಿ ಅಂಗವೈಕಲ್ಯದ ಹಾಗೂ ಆಟಿಸಂನಿಂದ ಬಳಲುವ ಮಕ್ಕಳ ಜನನ ಪ್ರಮಾಣ ಹೆಚ್ಚಾಗುತ್ತಿದೆ. ಇದು ನಮಗೆ ಅಚ್ಚರಿ ಉಂಟು ಮಾಡುತ್ತಿದೆ. ಗರ್ಭಾವಸ್ಥೆಯಲ್ಲಿ ಏನು ತಪ್ಪಾಗುತ್ತಿದೆ?  ಗರ್ಭ ಸಂಸ್ಖಾರವೂ ಗರ್ಭಾವಸ್ಥೆಗೆ ಮೊದಲೇ ಆರಂಭವಾಗುತ್ತದೆ. ದಂಪತಿ ಮಗು ಪಡೆಯುವ ಬಗ್ಗೆ ಯೋಚನೆ ಮಾಡಲು ಶುರು ಮಾಡುವ ನಿಮಿಷದಿಂದಲೇ ಆಯುರ್ವೇದದ ಮಹತ್ವವೂ ಶುರುವಾಗುತ್ತದೆ. 

ಅಲ್ಲದೇ ಗರ್ಭದ ಸ್ವಚ್ಛತೆಗೆ ಮಹಿಳೆ ಸಂಸ್ಕೃತ ಹಾಗೂ ಭಗವದ್ಗೀತಾ ಪಠಣ ಮಾಡಬೇಕು.  ಒಂದು ವೇಳೆ ಗರ್ಭ ಸಂಸ್ಕಾರ ಸರಿಯಾಗಿ ಮಾಡಿದಲ್ಲಿ ಗರ್ಭದಲ್ಲಿಯೇ ಡಿಎನ್‌ಎಯೂ ಬದಲಾಗಬಹುದು. ದೈಹಿಕ ಆರೋಗ್ಯವಂತೂ ಬೇಕೆ ಬೇಕು. ಅದರ ಜೊತೆಗೆ ಗರ್ಭದ ಶುದ್ಧತೆ ಹಾಗೂ ಸಕರಾತ್ಮಕ ವಾತಾವರಣ ಇನ್ನೂ ಅಗತ್ಯ.  ದೇಶದಲ್ಲಿ ಪ್ರತಿವರ್ಷ ಗರ್ಭಸಂಸ್ಕಾರ ಪಡೆದ ಕನಿಷ್ಟ 1000 ಮಕ್ಕಳು ಜನಿಸಬೇಕು ಎಂಬುದು ನಮ್ಮ ಗುರಿ.  ಈ ಪ್ರಕ್ರಿಯೆಯೂ ಭಾರತದ ಹಳೆಯ ವೈಭವವನ್ನು ಮರುಸ್ಥಾಪಿಸುವ ಉದ್ದೇಶ ಹೊಂದಿದೆ. ಇತ್ತೀಚೆಗೆ ದೇಶದಲ್ಲಿ ಅತೀಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ತಂದೆ ತಾಯಿಯರನ್ನೇ ಮಕ್ಕಳು ಹತ್ಯೆ ಮಾಡುತ್ತಿದ್ದಾರೆ.  ಅತ್ಯಾಚಾರಿಗಳಾಗಿ ಬದಲಾಗುತ್ತಿದ್ದಾರೆ.  ಆದರೆ ಶ್ರೀರಾಮನಂತ ಮಕ್ಕಳು ಹುಟ್ಟಿದರೆ ತಾಯಂದಿರು ಕೂಡ ಖುಷಿಯಾಗಿರುತ್ತಾರೆ ಎಂದು ಈ ಕಾರ್ಯಕ್ರಮದ ಸಹ ಆಯೋಜಕರಾದ ರಜನಿ ಮಿತ್ತಲ್ ಹೇಳಿದರು. 

Egg Freezing ಎಂದರೇನು? ಗರ್ಭಧರಿಸುವ ಈ ವಿಧಾನದಿಂದ ಅಪಾಯ ಇದ್ಯಾ?

Latest Videos
Follow Us:
Download App:
  • android
  • ios