ಜಂಕ್‌ ಫುಡ್‌ ಬದಲು ಆರೋಗ್ಯಕರ ತಿಂಡಿಗಳನ್ನು ಸೇವಿಸಿ. ಸುಟ್ಟ ಮಾಂಸ, ಕಡಲೆಕಾಯಿ ಸಲಾಡ್, ಸಿಹಿ ಆಲೂಗೆಡ್ಡೆ ಫ್ರೈಸ್, ಹುರಿದ ಕಡಲೆ, ಮೊಳಕೆ ಕಾಳಿನ ಸ್ಯಾಂಡ್‌ವಿಚ್‌ ಉತ್ತಮ ಆಯ್ಕೆಗಳು. ಜೇನುತುಪ್ಪ-ಹಣ್ಣಿನ ಮೊಸರು, ಡಾರ್ಕ್‌ ಚಾಕಲೇಟ್, ಚಿಯಾ ಬೀಜದ ಪಾನೀಯ, ಹಣ್ಣಿನ ಸಲಾಡ್‌ ಆರೋಗ್ಯಕರ ಸಿಹಿ ತಿಂಡಿಗಳು. ಇವು ಪೌಷ್ಟಿಕಾಂಶ ಒದಗಿಸಿ, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತವೆ.

ಆಹಾರದ ಜೊತೆಗೆ ಆರೋಗ್ಯ 
 ನೀವು ಹಸಿವಾದಾಗ ಜಂಕ್‌ ಪುಡ್‌ಗಳ ಮೊರೆ ಹೊಗ್ತಾ ಇದ್ರೆ ಆ ಅಭ್ಯಾಸವನ್ನ ಇಗಲೇ ಬಿಡುವುದು ಉತ್ತಮ. ನೀವು ಖಾರದ ಮತ್ತು ಸಿಹಿ ಜಂಗ್ ಆಹಾರಗಳನ್ನು ಪ್ರಯತ್ನಿಸಬೇಕು ಎಂದೆನಿಸಿದರೆ ಆರೋಗ್ಯಕರ ಆಹಾರಗಳ ಬಗ್ಗೆ ಈ ಲೇಖನ ನಿಮಗೆ ತಿಳಿಸುತ್ತದೆ. ಹಸಿವು ಸಾಮಾನ್ಯ ಆದರೆ ಹಸಿವಾದಾಗ ಯಾವ ರೀತಿಯ ಆಹಾರಗಳನ್ನು ತಿನ್ನಬೇಕು ಎಂಬುದರ ಮಾಹಿತಿ ಇಲ್ಲಿದೆ. ನಾವು ಹಸಿವಾದಾಗ ಆರೋಗ್ಯಕರ ಆಹಾರಕ್ಕಿಂತ ಸೋಡಿಯಂ ತುಂಬಿದ ಪ್ಯಾಕ್ ಗಳಲ್ಲಿ ಇರಿಸಲಾದ ಚಿಪ್ಸ್, ಎಷ್ಟೋ ದಿನಗಳಿಂದ ಸಂಸ್ಕರಿಸಿ ಇಟ್ಟಂತಹ ಆಹಾರ, ಕುಕ್ಕಿಸ್ ಅಥವಾ ಪೇಸ್ಟ್ರಿಗಳಂತಹ ಸಕ್ಕರೆಯ ಆಹಾರಗಳನ್ನ ಸೇವಿಸುತ್ತೇವೆ. ಆದರೆ ಅವು ನಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ? ಅವು ನಮ್ಮ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುವುದಕ್ಕಿಂತ ಋಣಾತ್ಮಕವಾಗಿ ಪರಿಣಾಮ ಬೀರುವುದೇ ಹೆಚ್ಚು. ಜಂಕ್‌ ಫುಡ್‌ಗಳು ತಿನ್ನುವಾಗ ರುಚಿ ಎನಿಸಬಹುದು ಆದರೆ ಅವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನ ಬೀರುತ್ತವೆ ಎಂಬುದರ ಅರಿವು ನಮಗಿರುವುದಿಲ್ಲ.
ಕೆಲವು ಆರೋಗ್ಯ ತಜ್ಞರು ಹೇಳುವುದೇನೆಂದರೆ ಸಂಸ್ಕರಿಸಿದ ಆಹಾರಗಳನ್ನ ಆಗಾಗ ಸೇವಿಸುವುದರಿಂದ ಅನಗತ್ಯ ತೂಕ ಹೆಚ್ಚಾಗುವುದು, ಕಳಪೆ ಕರುಳಿನ ಆರೋಗ್ಯ ಮತ್ತು ದೀರ್ಘಕಾಲದ ಕಾಯಿಲೆಗಳು ಉಂಟಾಗಬಹುದು, ಸಂಸ್ಕರಿಸಿದ ಖಾರದ ಆಹಾರಗಳು ಸಾಮಾನ್ಯವಾಗಿ ಅನಾರೋಗ್ಯಕರ ಕೊಬ್ಬುಗಳು ಮತ್ತು ಕೃತಕ ಪದಾರ್ಥಗಳಿಂದ ಕೂಡಿರುತ್ತವೆ. ಸಿಹಿ ಆಹಾರಗಳು ನಮ್ಮ ದೇಹದ ಸಕ್ಕರೆ ಮಟ್ಟವನ್ನ ಹೆಚ್ಚಿಸುತ್ತವೆ. ಮತ್ತು ನಿದ್ರಾಹೀನತೆಯನ್ನು ಉಂಟುಮಾಡುತ್ತವೆ. ಹಾಗಾಗಿ ನಮ್ಮ ಅಡುಗೆ ಮನೆಗಳಲ್ಲಿ ನಮ್ಮ ಆಯ್ಕೆಯ ಆಹಾರಗಳು ಯಾವಾಗಲೂ ನಮ್ಮ ಆರೋಗ್ಯವನ್ನು ಆರೋಗ್ಯಕವಾಗಿ ಇಡುವಂತೆ ಇರಬೇಕು. ಯಾವಾಗಲೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರುಚಿ ಮತ್ತು ಪೌಷ್ಟಿಕಾಂಶ ಎರಡನ್ನು ತರುವ ಆಹಾರವನ್ನು ಆಯ್ಕೆ ಮಾಡಬೇಕು. ಹಾಗೇ ರುಚಿ ಮತ್ತು ಆರೋಗ್ಯವನ್ನ ತರುವಂತಹ ಆಹಾರಗಳ ಪಟ್ಟಿ ಇಲ್ಲಿದೆ.
ಖಾರದ ಆಹಾರಗಳು:
 *ಸುಟ್ಟಂತಹ ಮಾಂಸಾಹಾರಿ ಪದಾರ್ಥಗಳು, ಅವುಗಳ ಜೊತೆ ತರಕಾರಿಗಳನ್ನ ಚಪಾತಿ ಅಥವಾ ಪರೋಟಾಗಳಲ್ಲಿ ರೋಲ್ ಮಾಡಿ ತಿನ್ನುವುದರಿಂದ ನಾಲಗೆಗೆ ರುಚಿಯನ್ನ ನೀಡುವುದರ ಜೊತೆಗೆ ದೇಹಕ್ಕೆ ಪ್ರೊಟೀನ್ ಫೈಬರ್ ಮತ್ತು ಕೊಬ್ಬು ಹೇರಳವಾಗಿ ಸಿಗುತ್ತದೆ. 
 *ಕಡಲೆಕಾಯಿ ಸಲಾಡ್‌: ಕಡಲೆಕಾಯಿಯಿಂದ ತಯಾರಿಸಿದಂತಹ ಸಲಾಡ್‌ ಮತ್ತು ಪೋಲೆಟ್ ಆರೋಗ್ಯಪೂರ್ಣವಾಗಿರುತ್ತದೆ. ಮತ್ತು ತರಕಾರಿಗಳು ವಿಟಮಿನ್ ಎ ಮತ್ತು ಸಿ ನೀಡುತ್ತದೆ. 
*ಹಾಗೇ ಬೇಯಿಸಿದ ಸಿಹಿ ಆಲೂಗಡ್ಡೆ ಫ್ರೈಗಳು ಗರಿಗರಿಯಾದ ಮತ್ತು ರುಚಿಕರವಾದ ಉತ್ತಮ ಆಯ್ಕೆಯಾಗಿದೆ. ಸಿಹಿ ಆಲೂಗಡ್ಡೆ ಫೈಬರ್ ಮತ್ತು ವಿಟಮಿನ್ ಎ ಸಮೃದ್ಧವಾಗಿದ್ದು ಇದು ಚರ್ಮ ಮತ್ತು ಕಣ್ಣಿಗಳಿಗೆ ಉತ್ತಮವಾಗಿದೆ. ಪೊಟ್ಯಾಶಿಯಂ ಹೃದಯ ಆರೋಗ್ಯಕ್ಕೆ ಸಹಕಾರಿ. ಮನೆಯಲ್ಲಿಯೇ ತಯಾರಿಸಿದ ತರಕಾರಿ ಸ್ಟಿರ್ ಫ್ರೈ.. ಆಲೀವ್ ಎಣ್ಣೆ ಬೆಳ್ಳುಳ್ಳಿ ಮತ್ತು ಸೋಯಾ ಸಾಸ್ ಇದರ ಜೊತೆಗೆ ತರಕಾರಿಗಳನ್ನ ಮಿಕ್ಸ್ ಮಾಡಿ ಬಳಸುವುದರಿಂದ ಹೆಚ್ಚಿನ ಫೈಬರ್ ಮತ್ತು ರೋಗನಿರೋಧಕ ಶಕ್ತಿಗೆ ಹಾಗೂ ಜೀರ್ಣಕ್ರಿಯೆಯನ್ನು ಹೆಚ್ಚಿಸಿಕೊಳ್ಳಬಹುದು. 
*ಹುರಿದ ಕಡಲೆ : ಹುರಿದ ಕಡಲೆಯಲ್ಲಿ ಪ್ರೊಟೀನ್, ಕಬ್ಬಿಣ ಮತ್ತು ನಾರಿನ ಅಂಶ ಇರುವುದರಿಂದ ಇವು ದೀರ್ಘಕಾಲದವರೆಗೆ ಉತ್ಸಾಹ ಭರಿತರನ್ನಾಗಿ ಇಡುತ್ತದೆ.
*ಮೊಳಕೆ ಕಾಳುಗಳ ಸ್ಯಾಂಡ್ವಿಚ್: ಇದು ಬರ್ಗರ್‌ಗೆ ಉತ್ತಮ ಪರ್ಯಾಯವಾಗಿದೆ. ಬರ್ಗರನ್ನ ತಿನ್ನಬೇಕು ಎಂದೆನಿಸಿದರೆ ಬರ್ಗರ್‌ನ ಬದಲಿಗೆ ಮೊಳಕೆ ಕಾಳುಗಳ ಸ್ಯಾಂಡ್ವಿಚ್‌ ತಿನ್ನಬಹುದಾಗಿದೆ. ಮೊಳಕೆ ಕಾಳುಗಳು ಮೆದುಳಿನ ಕಾರ್ಯ ಮತ್ತು ಶಕ್ತಿಗೆ ಸಹಕಾರಿಯಾಗಿದೆ.
ಸಿಹಿ
 ಜೇನುತುಪ್ಪ ಮತ್ತು ಹಣ್ಣುಗಳೊಂದಿಗೆ ಮೊಸರನ್ನ ಬಳಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗುತ್ತದೆ. ಮೊಸರಿನಲ್ಲಿ ಪ್ರೋಟೀನ್ ಮತ್ತು ಪ್ರೊಬ್ಯಾಟಿಕ್‌ಗಳು ಇರುವುದರಿಂದ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿರುತ್ತದೆ. ಜರಿ ಹಣ್ಣುಗಳು ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವುದರ ಜೊತೆಗೆ. ಬೇಗನೇ ಹಸಿವಾಗುವುದನ್ನು ತಡೆಯುತ್ತದೆ. 
ಡಾರ್ಕ್ ಚಾಕಲೇಟ್‌ಗಳು : ಡಾರ್ಕ್ ಚಾಕಲೇಟ್‌ಗಳು ಕನಿಷ್ಠ 70% ಕೋಕೋ ಹೊಂದಿರುವ ಚಾಕಲೇಟ್, ಜೊತೆಗೆ ಸ್ಟ್ರಾಬೆರಿ ಅಥವಾ ಬಾಳೆಹಣ್ಣುಗಳನ್ನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹಾಗೂ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
. ತೆಂಗಿನ ಹಾಲು ಮತ್ತು ಕರ್ಜೂರದೊಂದಿಗೆ ಚಿಯಾಬೀಜಗಳು ಸೇರಿಸಿ ಕುಡಿಯುವುದರಿಂದ ನಮ್ಮ ದೇಹ ಯಾವಾಗಲೂ ಹೈಡ್ರೆಟ್‌ ಆಗಿರಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರಿನಂಶವನ್ನು ಹೊಂದಿರುವುದರಿಂದ ಓಮೇಗಾ ಫೈಬರ್ ಮತ್ತು ಪ್ರೋಟೀನ್‌ಗಳಿಂದ ದೇಹ ತಂಪಾಗಿರುತ್ತದೆ. ಖಾಲಿ ನೀರನ್ನ ಕುಡಿಯುವುದಕ್ಕಿಂತ ಈ ರೀತಿಯಾಗಿ ಜ್ಯೂಸ್‌ ಮಾಡಿ ಕುಡಿಯಬಹುದು. 
. ಸಲಾಡ್: ಮನೆಯಲ್ಲಿ ಇರುವಂತಹ ಹಣ್ಣುಗಳನ್ನ ಬಳಸಿ ಎಲ್ಲಾ ಹಣ್ಣುಗಳನ್ನು ಮಿಕ್ಸ್ ಮಾಡಿ ಅದರ ಜೊತೆಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ತಿನ್ನುವುದರಿಂದ ಎಲ್ಲಾ ಹಣ್ಣುಗಳಲ್ಲಿರುವಂತಹ ಪೋಷಕಾಂಶಗಳು ಆರೋಗ್ಯವನ್ನು ಉತ್ತಮವಾಗಿರುತ್ತದೆ. ಆರೋಗ್ಯವನ್ನ ಕಾಪಾಡಿಕೊಳ್ಳುವುದರ ಜೊತೆ ಜೊತೆಗೆ ಕೆಲವು ಖಾಯಿಲೆಗಳಿಂದಲೂ ದೂರವಿರಬಹುದು.