Egg Freezing ಎಂದರೇನು? ಗರ್ಭಧರಿಸುವ ಈ ವಿಧಾನದಿಂದ ಅಪಾಯ ಇದ್ಯಾ?
ಎಗ್ ಪ್ರೀಜಿಂಗ್ ಅಥವಾ Egg Freezing ಸುಧಾರಿತ ತಂತ್ರಜ್ಞಾನವಾಗಿದ್ದು, ಇದರ ಸಹಾಯದಿಂದ ಇಂದಿನ ಮಹಿಳೆಯರು ಬಯೋಲಾಜಿಕಲ್ ಕ್ಲಾಕ್ ಬಗ್ಗೆ ಚಿಂತಿಸದೇ ವೃತ್ತಿಜೀವನದ ಬಗ್ಗೆ ಯೋಜಿಸಿ, ಮಗುವನ್ನು ತಡವಾಗಿ ಪಡೆಯಬಹುದು. ತಾಯಿಯಾಗುವ ಸಂತೋಷವನ್ನು ಆನಂದಿಸಬಹುದು. ಆದ್ದರಿಂದ ಎಗ್ ಪ್ರೀಜಿಂಗ್ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳೋಣ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕುಟುಂಬ ಮುಂದುವರಿಸೋದು ಮಹಿಳೆಯರು ಮತ್ತು ದಂಪತಿಗೆ ಪ್ರಮುಖ ವಿಷ್ಯ ಅಲ್ಲವೇ ಅಲ್ಲ. ಏಕೆಂದರೆ ಅವರು ಮೊದಲು ತಮ್ಮ ವೃತ್ತಿಪರ ಜೀವನವನ್ನು ಸ್ಥಿರಗೊಳಿಸಿಕೊಳ್ಳಲು ಬಯಸುತ್ತಾರೆ, ವೃತ್ತಿಜೀವನವನ್ನು(career life) ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ ಮತ್ತು ನಂತರವೇ ಮಕ್ಕಳ ಬಗ್ಗೆ ಯೋಚನೆ ಮಾಡ್ತಾರೆ. ಪುರುಷರಿಗೆ ಇದು ಇನ್ನೂ ಸಾಧ್ಯವಿದ್ದರೂ, ವಯಸ್ಸಾದಂತೆ ಮಹಿಳೆಯರು ಗರ್ಭ ಧರಿಸುವುದು ಕಷ್ಟ.
ಅಂತಹ ಪರಿಸ್ಥಿತಿಯಲ್ಲಿ, ವಿಜ್ಞಾನದ ಇತ್ತೀಚಿನ ತಂತ್ರಜ್ಞಾನಗಳು ಉಪಯುಕ್ತವಾಗಬಹುದು. Egg Freezing ಮೂಲಕ ಗರ್ಭಧಾರಣೆಯನ್ನು ವಿಳಂಬಗೊಳಿಸುವುದು ಮೊದಲಿಗಿಂತ ಇಂದು ಹೆಚ್ಚು ಸಾಮಾನ್ಯ. ಆದ್ದರಿಂದ ನೀವು ನಿಮ್ಮ ವೃತ್ತಿಜೀವನದ ಮೇಲೆ ಗಮನ ಹರಿಸಲು ನೋಡುತ್ತಿದ್ದರೆ, ಅಥವಾ ನೀವು ಇನ್ನೂ ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳದಿದ್ದರೆ, ಅಥವಾ ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ನೀವು Egg Freezing ಆಯ್ಕೆ ಮಾಡಬಹುದು. ಹಾಗಾದರೆ Egg Freezing ಎಂದರೇನು ಎಂದು ತಿಳಿಯೋಣ?
ಎಗ್ ಪ್ರೀಜಿಂಗ್ (Egg Freezing) ಎಂದರೇನು?
ವಯಸ್ಸಾದಂತೆ, ಅಂಡಾಣುಗಳ ಗುಣಮಟ್ಟವೂ ಕುಸಿಯಲು ಪ್ರಾರಂಭಿಸುತ್ತದೆ, ಇದು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಮತ್ತು ವೈದ್ಯರು ನಂಬುತ್ತಾರೆ. ಆದ್ದರಿಂದ, ಎಗ್ ಪ್ರೀಜಿಂಗ್ ನಂತಹ ಸಂತಾನೋತ್ಪತ್ತಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಈ ವಿಧಾನದಲ್ಲಿ, ಔಷಧಿಗಳ ಸಹಾಯದಿಂದ ಅಂಡಾಣು ಸಂಖ್ಯೆಯನ್ನು (eggs count) ಹೆಚ್ಚಿಸಲಾಗುತ್ತದೆ, ನಂತರ ಅವುಗಳನ್ನು ಅಂಡಾಶಯಗಳಿಂದ ತೆಗೆದು ಹೆಪ್ಪುಗಟ್ಟಿಸಲಾಗುತ್ತದೆ. ಭ್ರೂಣ ತಯಾರಿಸಲು, ಅವುಗಳನ್ನು ಕೋಣೆಯ ತಾಪಮಾನಕ್ಕೆ ತರಲಾಗುತ್ತದೆ ಮತ್ತು ವೀರ್ಯಾಣುಗಳೊಂದಿಗೆ ಬೆರೆಸಲಾಗುತ್ತದೆ. ನಂತರ ಭ್ರೂಣದ ವರ್ಗಾವಣೆ ಚಕ್ರದ ಸಮಯದಲ್ಲಿ, ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.
ಎಗ್ ಪ್ರೀಜಿಂಗ್ ಹೇಗೆ ಮಾಡಲಾಗುತ್ತದೆ?
ಅಂಡಾಶಯಗಳು ಉತ್ತೇಜಿಸಲ್ಪಡುತ್ತವೆ
ಮೊದಲಿಗೆ ಮಹಿಳೆಗೆ ಸಿಂಥೆಟಿಕ್ ಹಾರ್ಮೋನುಗಳನ್ನು (synthetic hormones) ನೀಡಲಾಗುತ್ತದೆ, ಇದು ಅಂಡಾಶಯಗಳನ್ನು ಉತ್ತೇಜಿಸುತ್ತದೆ ಮತ್ತು ಒಂದು ಅಂಡಾಣು ಬದಲು ಹಲವಾರು ಅಂಡಾಣುಗಳನ್ನು ಉತ್ಪಾದಿಸುತ್ತದೆ. ಅಂಡೋತ್ಪತ್ತಿಯನ್ನು ಉತ್ತೇಜಿಸಲು ಮತ್ತು ಅಕಾಲಿಕ ಅಂಡೋತ್ಪತ್ತಿಯನ್ನು ತಪ್ಪಿಸಲು ಔಷಧಿಗಳು ಸಹ ಬೇಕಾಗುತ್ತವೆ. ಕಿರುಚೀಲಗಳು ಬೆಳೆದಂತೆ ಈಸ್ಟ್ರೊಜೆನ್ ಮಟ್ಟ ಸಾಮಾನ್ಯವಾಗಿ ಹೆಚ್ಚಾಗುತ್ತವೆ ಮತ್ತು ಅಂಡೋತ್ಪತ್ತಿ ನಂತರ ಪ್ರೊಜೆಸ್ಟರಾನ್ ಮಟ್ಟವು ಕಡಿಮೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಅಂಡಾಣುಗಳನ್ನು ತೆಗೆದು ಹಾಕಲಾಗುತ್ತದೆ
ಅಂಡಾಶಯಗಳಿಂದ ಅಂಡಾಣುಗಳನ್ನು ತೆಗೆದು ಹಾಕಲು ವ್ಯಕ್ತಿಯ ಪ್ರಜ್ಞೆ ತಪ್ಪಿಸಲಾಗುತ್ತೆ ಮತ್ತು ಟ್ರಾನ್ಸ್ವಾಜಿನಲ್ ಅಲ್ಟ್ರಾಸೌಂಡ್ನಂತಹ ಸಾಮಾನ್ಯ ಕಾರ್ಯವಿಧಾನ ಅಳವಡಿಸಿಕೊಳ್ಳಲಾಗುತ್ತದೆ. ಅಂಡಾಣುಗಳನ್ನು ತೆಗೆದು ಹಾಕಿದಾಗ, ಅಂಡಾಶಯಗಳ ಗಾತ್ರವೂ ಹೆಚ್ಚಾಗುವುದರಿಂದ ನೀವು ಹೊಟ್ಟೆಯಲ್ಲಿ ಸ್ವಲ್ಪ ಸೆಳೆತವನ್ನು ಅನುಭವಿಸಬಹುದು.
ನಂತರ ಎಗ್ ಪ್ರೀಜಿಂಗ್ ಮಾಡಲಾಗುತ್ತೆ:
ಭವಿಷ್ಯದ ಬಳಕೆಗಾಗಿ ನಿಮ್ಮ ಫಲವತ್ತಾಗದ ಅಂಡಾಣುಗಳನ್ನು ತೆಗೆದು ಹಾಕಿದ ತಕ್ಷಣ, ಅವುಗಳನ್ನು ಸಂರಕ್ಷಿಸಲು ಅವುಗಳನ್ನು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಇರಿಸಲಾಗುತ್ತದೆ. ಇದನ್ನು ಎಗ್ ಪ್ರೀಜಿಂಗ್ ಎನ್ನಲಾಗುತ್ತೆ. ಇವುಗಳನ್ನು ಹಲವು ಸಮಯದವರೆಗೆ ಈ ರೀತಿಯಾಗಿ ರಕ್ಷಿಸಿಡಲಾಗುವುದು.
ಈ ಕಾರ್ಯವಿಧಾನವು ಎಷ್ಟು ಸುರಕ್ಷಿತವಾಗಿದೆ?
ಎಗ್ ಪ್ರೀಜಿಂಗ್ ಬಹಳ ಸುರಕ್ಷಿತ ಪ್ರಕ್ರಿಯೆ ಎಂದು ಪರಿಗಣಿಸಲಾಗಿದೆ. ಇದು ಗಂಭೀರ ಅಡ್ಡಪರಿಣಾಮಗಳನ್ನು (serious side effect) ಸಹ ಹೊಂದಿಲ್ಲ, ಆದರೆ ಈ ಇಡೀ ಪ್ರಕ್ರಿಯೆಯು ಸ್ವಲ್ಪ ಕಷ್ಟಕರವಾಗಿದೆ. ಇದರಿಂದ ಕೊಂಚ ಮಟ್ಟಿಗೆ ನೋವನ್ನು (pain)ಅನುಭವಿಸಬೇಕಾಗುತ್ತೆ. ಅಲ್ಲದೇ ಇದು ಅತ್ಯುತ್ತಮವಾದ ಕಾರ್ಯವಿಧಾನವಾಗಿದೆ.
ಈ ವಿಧಾನವು ಚಿಕ್ಕದಾಗಿದೆ, ಆದರೆ ಇದರಿಂದ ಹೊಟ್ಟೆಯಲ್ಲಿ ಸ್ವಲ್ಪ ನೋವು, ಸೋಂಕು ಮತ್ತು ಉಬ್ಬರ ಅನುಭವಿಸಬಹುದು. ಇಡೀ ಪ್ರಕ್ರಿಯೆಯ ನಂತರ ಇದು ಸಂಭವಿಸಬಹುದು. ಆದಾಗ್ಯೂ, ನಿಮಗೆ ಜ್ವರ, ತೀವ್ರ ಹೊಟ್ಟೆ ನೋವು (heavy stomach pain), ಭಯಾನಕ ಉಬ್ಬರ, ಅತಿಯಾದ ಯೋನಿ ರಕ್ತಸ್ರಾವ ಅಥವಾ ಕಾರ್ಯವಿಧಾನದ ನಂತರ ಮೂತ್ರವಿಸರ್ಜನೆಯಲ್ಲಿ ತೊಂದರೆ ಇದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.