ಯೋಗವನ್ನು ಸೂಕ್ತವಾಗಿ ಅಭ್ಯಸ ಮಾಡಿ, ತಪ್ಪದೇ ಅಭ್ಯಾಸ ಮಾಡಿದರೆ ಸಕಲ ರೋಗಗಳಿಗೂ ಅತ್ಯುತ್ತಮ ಮದ್ದಾಗಬಲ್ಲದು. ಆರೋಗ್ಯಕ್ಕೆ ಹತ್ತು ಹಲವು ಪ್ರಯೋಜನಗಳಿರುವ ಯೋಗ ಕೂದಲಿನ ಆರೋಗ್ಯಕ್ಕೂ ಅತ್ಯಗತ್ಯ. ಕಪ್ಪು ಕೂದಲು ಬೆಳೆಯೋಕೆ ಯೋಗದ ಕೆಲವು ಆಸನಗಳು ಮತ್ತು ಪ್ರಾಣಾಯಾಮ ಸಹಾಯ ಮಾಡುತ್ತದೆ. ಲಯಬದ್ಧವಾಗಿ ಉಸಿರಿನ ಮೇಲೆ ಹಿಡಿತ ಸಾಧಿಸುವ ಪ್ರಾಣಾಯಾಮ ಮನಸ್ಸು ಹಾಗೂ ದೈಹಿಕ ಆರೋಗ್ಯಕ್ಕೂ ಅತ್ಯಗತ್ಯ.

ಬ್ಯೂಟಿಯ ಸಮಸ್ಯೆಗಳು ಮತ್ತು ಸ್ವೀಟಿಯ ಪರಿಹಾರ!

ಒಂದು ವಯಸ್ಸಿನ ನಂತರ ಕೂದಲು ಬಿಳಿಯಾಗುವುದು ಪ್ರಕೃತಿ ನಿಯಮ. ಸಮಯಕ್ಕೂ ಮೊದಲೇ ಬಿಳಿಯಾದರೆ ಇದರಿಂದ ಆತ್ಮವಿಶ್ವಾಸದ ಕೊರತೆ ಕಾಡುತ್ತೆ ಕೆಲವರಿಗೆ. ಅಲ್ಲದೇ ಇದು ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಅಕಾಲಿಕವಾಗಿ ಕೂದಲು ನೆರೆಯಾಗುವುದಕ್ಕೆ ಹಲವು ಕಾರಣಗಳಿವೆ. ಇದಕ್ಕೆ ನಿಮ್ಮ ಜೀವನಶೈಲಿ ಜೊತೆ ಜೊತೆಗೆ ಕೆಲವು ವಿಟಮಿನ್ ಹಾಗೂ ಮಿನರಲ್ ಕೊರತೆಯೂ ಕಾರಣವಾಗಿರಬಹುದು. ಈ ಎಲ್ಲಾ ಸಮಸ್ಯೆಗೂ ಯೋಗ ಉತ್ತಮ ಮದ್ದು. 

ಕೂದಲು ಕಪ್ಪಾಗಿಯೇ ಇರಬೇಕೆಂದರೆ ಪ್ರತಿದಿನ 15 ನಿಮಿಷ ಕಪಾಲಬಾತಿ ಪ್ರಾಣಾಯಾಮ ಮಾಡಬೇಕು. 

ಕಪಾಲಬಾತಿ ಪ್ರಾಣಾಯಾಮ ಮಾಡುವುದು ಹೇಗೆ? 

ಮೊದಲು ನೇರವಾಗಿ ಅಲುಗಾಡದಂತೆ ಕುಳಿತು ಕೊಳ್ಳಬೇಕು. ನಂತರ ಉಸಿರನ್ನು ವೇಗವಾಗಿ ಮೂಗಿನಿಂದ ಎಳೆದು ಹೊರ ಹಾಕಬೇಕು. ಹೀಗೆ ಮಾಡುವಾಗ ಮನಸ್ಸಿನ ಏಕಾಗ್ರತೆ ಕಾಪಾಡಿಕೊಳ್ಳಬೇಕು. ನಂತರ ಉಸಿರನ್ನು ಹೊರ ಹಾಕುವಾಗ ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ಹೊರ ಹಾಕಬೇಕು. ಈ ಪ್ರಕ್ರಿಯೆಯನ್ನು ಕಡಿಮೆ ಎಂದರೆ ಇಪ್ಪತ್ತು ಬಾರಿ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಯತ್ನಿಸಿ.

ಸೌಂದರ್ಯಕ್ಕೆ ಅಂಟುವಾಳ ಕಾಯಿ ಎಂಬ ನೈಸರ್ಗಿಕ ಶ್ಯಾಂಪೂ...

ನಂತರ ಉಸಿರನ್ನು ಬಿಗಿ ಹಿಡಿದು ಎರಡು ನಿಮಿಷಗಳ ಕಾಲ ಹಾಗೇ ಇರಬೇಕು. ಇದನ್ನು ಎರಡರಿಂದ ಮೂರು ಬಾರಿ ಮಾಡಬೇಕು. ಈ ರೀತಿ ಮಾಡಿದರೆ ಉಸಿರಾಟದ ತೊಂದರೆಯನ್ನು ನೀಗಿಸುತ್ತದೆ. ಶೀತ ಕೆಮ್ಮಿನ ಜೊತೆಗೆ ಕೂದಲಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.