1. ತಲೆಯಲ್ಲಿ ಜಿಡ್ಡಿನಂಶ ಹೆಚ್ಚಿದ್ದರೆ ತಲೆಹೊಟ್ಟು ಬರುತ್ತೆ ಅನ್ನೋದು ಸಾಮಾನ್ಯಜ್ಞಾನ. ಜೊತೆಗೆ ಡ್ರೈ ಸ್ಕಿನ್ ಇರುವವರಿಗೂ ಹೊಟ್ಟು ಸಮಸ್ಯೆ ಬರಬಹುದು, ಹಾರ್ಮೋನಲ್ ಬದಲಾವಣೆಯಿಂದಲೂ ಡ್ಯಾಂಡ್ರಫ್ ಹೆಚ್ಚಬಹುದು. ಮಲಸ್ಸೇಝಿಯಾ ಅನ್ನೋ ಎಂಬ ಯೀಸ್ಟ್ ತಲೆಬುರುಡೆಯಲ್ಲಿ ಬೆಳೆಯುತ್ತ ಹೋದಾಗ ಚರ್ಮದ ಮೇಲ್ಪದರಕ್ಕೆ ಹಾನಿಯಾಗುತ್ತೆ.

ಸೌಂದರ್ಯಕ್ಕೆ ಅಂಟುವಾಳ ಕಾಯಿ ಎಂಬ ನೈಸರ್ಗಿಕ ಶ್ಯಾಂಪೂ...

ಚರ್ಮ ಹುಡಿಯಂತೆ ಉದುರುತ್ತೆ. ಜೊತೆಗೆ ಕೂದಲುದುರುವುದೂ ಶುರುವಾಗುತ್ತೆ. ಈ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಹಾಗಂತ ಇದರಿಂದ ಹೊರಬರೋದು ಅಷ್ಟು ಸುಲಭವಲ್ಲ. ಆದರೆ ಕನಿಷ್ಟ ದಿನ ಬಿಟ್ಟು ದಿನ ತಲೆಸ್ನಾನ ಮಾಡೋದರಿಂದ ತಕ್ಕಮಟ್ಟಿಗೆ ಈ ಸಮಸ್ಯೆ ಹತೋಟಿಯಲ್ಲಿರುತ್ತೆ. ಝಿಂಕ್ ಪಿರಿಥ್ಯಾನ್ (Zinc Pyrithione ) ಅಂಶ ಇರುವ ಶ್ಯಾಂಪೂ ಬಳಸೋದು ಉತ್ತಮ. ತಲೆಸ್ನಾನದ ಬಳಿಕ ಬಿಸಿಲಲ್ಲಿ ಸ್ವಲ್ಪ ಹೊತ್ತು ನಿಲ್ಲಿ. ಕೂದಲು ಪೂರ್ತಿ ಒಣಗುವಂತೆ ನೋಡಿಕೊಳ್ಳಿ. ಟೀ ಮರದ ಎಣ್ಣೆ ಹಚ್ಚಿ ತಲೆಗೆ ಮಸಾಜ್ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತೆ. ತೆಂಗಿನೆಣ್ಣೆಯಿಂದ ತಲೆ ಬುರೆಗೆ ಮಸಾಜ್ ಮಾಡಿ ಉಗುರು ಬೆಚ್ಚನೆಯ ನೀರಲ್ಲಿ ದಿನಾ ಸ್ನಾನ ಮಾಡುವುದೂ ಉತ್ತಮ.

ಮ್ಯಾಂಗೋ ಮಾಸ್ಕ್ ಎಂಬ ಕೇಶ ಆರೋಗ್ಯ ವರ್ಧಕ!

2. ನೀತಿ ಮನೆಯಿಂದ ಹೊರಬಿದ್ದರೆ ಕೈ ಮೇಲೆತ್ತುವುದಿಲ್ಲ. ಕೈ ಎತ್ತುವ ಸನ್ನಿವೇಶ ಬಂದರೆ ಆಕೆ ಕಿರಿಕಿರಿಯಿಂದ ಒದ್ದಾಡುತ್ತಾಳೆ. ಕಾರಣ ಕಂಕುಳಿನ ಅತಿಯಾದ ಬೆವರು. ಆಫೀಸ್‌ಗೆ ಹೊರಟು ಅರ್ಧ ದಾರಿಗೆ ಬಂದಾಗಲೇ ಕೈಯ ಅಡಿಭಾಗದಲ್ಲಿ ತಣ್ಣನೆಯ ಅನುಭವವಾಗುತ್ತದೆ. ಲೈಟ್‌ಕಲರ್ ಶರ್ಟ್ ತೊಟ್ಟರಂತೂ ಶರ್ಟ್‌ನಿಂದ ಬೆವರ ಕಲೆ ಹೋಗೋದೇ ಇಲ್ಲ. ಇದಕ್ಕೆ ಕಾರಣ ಏನೇ ಇರಬಹುದು, ಈ ಕಿರಿಕಿರಿಯಿಂದ ಸುಲಭವಾಗಿ ಹೊರಬರುವ ಕೆಲವೊಂದು ಮಾರ್ಗಗಳಿವೆ. ಮಾರುಕಟ್ಟೆಯಲ್ಲಿರುವ ಆ್ಯಂಟಿಪರ್‌ಸ್ಪಿರೆಂಟ್‌ಗಳ ಬಳಕೆ ಸರಳ ಪರಿಹಾರ. ಇದರಿಂದ ಅತೀ ಬೆವರೋದು ಕೊಂಚ ಕಡಿಮೆಯಾಗುತ್ತೆ. ದುರ್ಗಂಧದ ಬದಲು ಸುಗಂಧವಿರುತ್ತೆ. ಸ್ನಾನದ ಬಳಿಕ ಕಂಕುಳ ಭಾಗ ಸಂಪೂರ್ಣ ಒಣಗಬೇಕು. ಅತೀ ಬಿಸಿನೀರಿನ ಸ್ನಾನವೂ ಈ ಸಮಸ್ಯೆಗೆ ಕಾರಣವಾಗಬಹುದು. ಉಗುರು ಬೆಚ್ಚಗೆ ಅಥವಾ ತಣ್ಣೀರಿನ ಸ್ನಾನ ಬೆಸ್ಟ್. ಜೊತೆಗೆ ಆಗಾಗ ಕಂಕುಳಿನ ಕೂದಲು ಶೇವ್ ಮಾಡುತ್ತಿರಬೇಕು. ಗಾಳಿಯಾಡುವ ಬಟ್ಟೆಯನ್ನೇ ಧರಿಸಿದರೆ ಉತ್ತಮ. 

ನೀವು ಹೀಗೇ ಮಾಡುತ್ತಿದ್ದರೆ, ತಲೆ ಬೋಳಾಗುತ್ತೆ ಅಷ್ಟೇ...

3. ಅತಿಯಾಗಿ ಧೂಳು, ಕೊಳೆಯಲ್ಲಿ ಓಡಾಟ, ಗಂಟೆಗಟ್ಟಲೆ ಏಸಿ ವಾಸ.. ಹೀಗಾದ್ರೆ ಕೂದಲ ಕತೆ ದೇವ್ರಿಗೇ ಪ್ರೀತಿ. ಥೇಟ್ ಪೊರಕೆಕಡ್ಡಿಯಾಕಾರಕ್ಕೆ ತಿರುಗಿಬಿಡುತ್ತೆ. ಇದಕ್ಕೆ ಎಲ್ಲರೂ ಹೇಳುವ ಸಾಮಾನ್ಯ ಪರಿಹಾರ ನೀವು ಪಿಎಚ್ ಬ್ಯಾಲೆನ್ಸ್ ಇರುವ ಮೈಲ್ಡ್ ಶ್ಯಾಂಪೂ ಬಳಸಿ. ಕಂಡೀಶನರ್ ಬಳಸಿ ಅಂತ. ಇದಲ್ಲದೇ ಮನೆಯಲ್ಲೇ ಒಣ ಕೂದಲಿಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು.

ಸೊಂಪಾದ ಕೂದಲಿಗೂ ಬೇಕು 'ಯೋಗ'!

ಅಲ್ವೆರವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಹಾಗೇ ಬಿಡಿ, ಆಮೇಲೆ ಮೈಲ್ಡ್ ಶ್ಯಾಂಪೂ ಬಳಸಿ ಹೇರ್‌ವಾಶ್ ಮಾಡಿ. ಕೂದಲು ಒಣಗಿದ ಬಳಿಕ ರಾತ್ರಿ ಮಲಗೋ ಮೊದಲು ನಸು ಬೆಚ್ಚನೆಯ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ, ಮರುದಿನ ಹೇರ್‌ವಾಶ್ ಮಾಡಿ. ಕೂದಲು ಮೃದುವಾಗಿರೋದು ನಿಮ್ಮ ಅನುಭವಕ್ಕೆ ಬರುತ್ತೆ. ಆಲಿವ್‌ಆಯಿಲ್, ತೆಂಗಿನೆಣ್ಣೆ ಹಾಗೂ ಬಾದಾಮಿ ಎಣ್ಣೆಗಳನ್ನು ನಸು ಬೆಚ್ಚಗೆ ಮಾಡಿ ತಲೆಗೆ ಮಸಾಜ್ ಮಾಡಿ. ಹೆಡ್ ಮಾಸ್ಕ್ ಹಾಕಿ ಸ್ವಲ್ಪ ಹೊತ್ತು ಬಿಡಿ. ಆಮೇಲೆ ಸ್ನಾನ ಮಾಡಿ. ಕೂದಲು ಮೃದುವಾಗುತ್ತೆ. ಇಂಥ ಮನೆಮದ್ದುಗಳಿಂದ ಸೈಡ್ ಎಫೆಕ್ಟೂ ಇರಲ್ಲ.