ನೊರೆ ಕಾಯಿ, ಅಂಟುವಾಳಕಾಯಿ ಹೀಗೆ ಹಲವು ಹೆಸರಿನಿಂದ ಕರೆಯುವ ಈ ಕಾಯಿಯನ್ನು ಹಲವು ವರ್ಷಗಳಿಂದ ಭಾರತದಲ್ಲಿ ಬಳಸುತ್ತಿದ್ದಾರೆ. ಉತ್ತರ ಭಾರತದಲ್ಲಿ ರಿಥಾ ಅಥವಾ ರೀತಾ ಮರ ಎನ್ನುತ್ತಾರೆ. ಅಂಟುವಾಳದ ಕಾಯಿಯಲ್ಲಿನ ಸಪೋನಿನ್ ಎಂಬ ರಾಸಾಯನಿಕವೇ ಇದರ ನೊರೆಗೆ ಕಾರಣ. ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ, ಲಭಿಸುವ ನೊರೆಯನ್ನು ಬೆಳ್ಳಿ ಆಭರಣ ವಸ್ತುಗಳನ್ನೂ, ತಲೆಗೂದಲನ್ನೂ, ರೇಷ್ಮೆ ಬಟ್ಟೆಗಳನ್ನೂ ಶುಚಿ ಮಾಡಲು ಸಾಬೂನಿನ ಬದಲು ಬಳಸುತ್ತಾರೆ. ಅಷ್ಟೇ ಯಾಕೆ ಸೌಂದರ್ಯವರ್ಧಕವೂ ಹೌದು ಈ ಕಾಯಿ.  ಹೇಗೆ?

- ಕೂದಲಿನ ಸಮಸ್ಯೆ ಅಂದರೆ ತಲೆ ಹೊಟ್ಟು ಮತ್ತು ಹುಣ್ಣು ನಿವಾರಣೆಯಾಗುತ್ತದೆ. ಕೆಮಿಕಲ್‌ಯುಕ್ತ ಶ್ಯಾಂಪೂವಿನ ಬದಲು ಅಂಟುವಾಳ ಕಾಯಿ ಬಳಸಿ, ಕೂದಲು ವಾಶ್ ಮಾಡಿ. 

ಸುಮ್ ಸುಮ್ನೆ ತುರಿಸೋ ತಲೆಗೆ ಇಲ್ಲಿದೆ ಮನೆ ಮದ್ದು....

- ಮೈಗ್ರೇನ್ ಸಮಸ್ಯೆ ಇದ್ದರೆ ಚಿಕಿತ್ಸೆಗಾಗಿ ಈ ಬೀಜವನ್ನು ಬಳಸುತ್ತಾರೆ. 

- ಅಂಟುವಾಳಕಾಯಿಯನ್ನು ಶ್ಯಾಂಪೂವಿನಂತೆ ಬಳಸಿ, ಕೂದಲು ತೊಳೆದರೆ ಕೂದಲು ಸ್ಮೂತ್ ಹಾಗೂ ರೇಷ್ಮೆಯಂತಹ ಹೊಳಪು ಬರುತ್ತದೆ. 

- ಬೀಜಗಳನ್ನು ಬಳಸಿ ಚರ್ಮದ ಕಲ್ಮಶಗಳನ್ನು ತೆಗೆಯಬಹುದು. ಇದರಿಂದ ಸ್ಕಿನ್‌ಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್  ಆಗೋಲ್ಲ. 

- ಮೊಡವೆ ನಿವಾರಣೆಗೆ  ಇದು ಸಹಾಯಕ. ಇದರ ರಸವನ್ನು ಮೊಡವೆ ಮೇಲೆ ಹಚ್ಚಿದರೆ ಮೊಡವೆ ಮಾಯವಾಗುತ್ತದೆ. 

ಮ್ಯಾಂಗೋ ಮಾಸ್ಕ್ ಎಂಬ ಕೇಶ ಆರೋಗ್ಯ ವರ್ಧಕ!

- ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಸುಲಭವಾಗಿ ನಿವಾರಿಸುತ್ತದೆ. 

- ಈ ಕಾಯಿಯನ್ನು ತೇದು ವಿನಿಗರ್‌ನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೇನು ಹೇಳ ಹೆಸರಿಲ್ಲದಂತೆ ತೊಲಗುತ್ತದೆ.