ವರ್ಕಿಂಗ್ ವುಮೆನ್ ಹೆಚ್ಚು ಸಮಯವನ್ನು ಮಕ್ಕಳೊಟ್ಟಿಗೆ ಕಳೆಯುವುದಿಲ್ಲ. ಅದಕ್ಕೆ ಮಕ್ಕಳು ಹಾಳಾಗುತ್ತಾರೆ...ಎಂಬೆಲ್ಲ ಮಾತುಗಳನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲಿಯೂ ಪುರುಷ ಪ್ರಧಾನವಾದ ಭಾರತದಂಥ ದೇಶದಲ್ಲಿ ಹೆಣ್ಣು ಇವತ್ತಿಗೂ ಕೆಲಸಕ್ಕೆ ಹೋಗುವುದೆಂದರೆ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪುವುದೇ ಇಲ್ಲ.

ಉದ್ಯೋಗಸ್ಥ ನಾರಿ ಮನೇಲಿ ಇರ ಬೇಕಾದ ವಸ್ತುಗಳಿವು...

ಆದರೆ, ಸಂಶೋಧನೆಯೊಂದು ನಡೆಸಿದ ಅಧ್ಯಯನ ಇದಕ್ಕೆ ವ್ಯತಿರಿಕ್ತ ಫಲಿತಾಂಶ ನೀಡಿದ್ದು, ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳು ಹೆಚ್ಚು ಜವಾಬ್ದಾರಿಯುಳ್ಳರಾಗಿರುತ್ತಾರೆ ಎಂದಿದೆ.

ಉದ್ಯೋಗಸ್ಥ ನಾರಿ ತನ್ನ ಶ್ರೇಯಸ್ಸಿನೊಂದಿಗೆ, ಮಕ್ಕಳ ಶ್ರೇಯೋಭಿವೃದ್ಧಿ ಕಡೆಗೂ ಹೆಚ್ಚಿನ ಗಮನ ಹರಿಸಲಿದ್ದು, ಮಕ್ಕಳ ಪೋಷಣೆಗೆ ಯಾವುದೇ ಕೊರತೆಯಾಗದಂತೆ ಉದ್ಯೋಗಸ್ಥ ನಾರಿ ನೋಡಿಕೊಳ್ಳುತ್ತಾಳೆಂದು ಬ್ರಿಟನ್‌ನಲ್ಲಿ ನಡೆಸಿದ ಸಂಶೋಧನೆಯೊಂದು ಪ್ರೂವ್ ಮಾಡಿದೆ. ಇಂಥ ಮಕ್ಕಳು ದೊಡ್ಡವರಾದ ಮೇಲೂ ತಮ್ಮವರೊಂದಿಗೆ ಹೆಚ್ಚಿಗೆ ಪ್ರೀತಿಯಿಂದ ಇರುತ್ತಾರೆ. ಅಲ್ಲದೇ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿಗೆ ಕಾಲ ಕಳೆಯಲ ಬಯಸುತ್ತಾರೆಂದು, ಸಂಶೋಧನೆ ದೃಢಪಡಿಸಿದೆ.

ಸದಾ ಅಮ್ಮ ಜತೆಗಿಲ್ಲದ ಕಾರಣ ಹೆಚ್ಚು ಜವಾಬ್ದಾರಿಯಿಂದ ವರ್ತಿಸುವ ಈ ಮಕ್ಕಳು ಪ್ರಬುದ್ಧರಾಗಿ ಎಂಥದ್ದೇ ಕ್ಲಿಷ್ಟ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿಯೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದು ಅನಿವಾರ್ಯವಾಗುವ ಈ ಮಕ್ಕಳಿಗೆ, ದೊಡ್ಡವರಾದ ಮೇಲೂ ತಮ್ಮವರನ್ನು ನಿಭಾಯಿಸುವಂಥ ಚಾಕಚಕ್ಯತೆ ಬಂದಿರುತ್ತದೆ, ಎನ್ನುತ್ತದೆ ಸಂಶೋಧನೆ.

ಕರೀಶ್ಮಾಳ ಡಯಟ್ ಸೀಕ್ರೆಟ್ ಇದು

ತಾಯಿ ಜತೆಗಿಲ್ಲವೆಂದ ಕೂಡಲೇ ಮಕ್ಕಳು ಬೇಜಬ್ದಾರಿಯುತರಾಗಿ ವರ್ತಿಸುವುದಿಲ್ಲ. ಬದಲಾಗಿ, ಅಮ್ಮನ ಬೆಲೆ ಅರಿತುಕೊಂಡು ಸಮಯಕ್ಕೆ ತಕ್ಕಂತೆ ಹೇಗೆ ವರ್ತಸಬೇಕೋ, ಹಾಗಿರುತ್ತಾರೆ. ಅಮ್ಮ ಕೆಲಸಕ್ಕೆ ಹೋಗುತ್ತಾರೆ ಎಂದರೆ ಮಕ್ಕಳು ಪ್ರೀತಿಯಿಂದ ವಂಚಿತರಾಗುವುದಿಲ್ಲ. ಬದಲಾಗಿ ಪ್ರೀತಿಯನ್ನು ಎಲ್ಲರಿಗೂ ಹಂಚುತ್ತಾರೆ, ಎಂಬುವುದು ಸಂಶೋಧನೆಯ ತಾತ್ಪಾರ್ಯ.

ಮದುವೆ ಗೊಡವೆಯೇ ಬೇಡ ಎನ್ನೋ ಸ್ವತಂತ್ರ ಹೆಣ್ಣು

ಮಕ್ಕಳೊಂದಿಗೆ ಟೈಂ ಸ್ಪೆಂಡ್ ಮಾಡ್ಲಿಕ್ಕೇ ಆಗೋಲ್ಲವೆಂದು ಚಿಂತಿಸಬೇಡಿ. ಇರೋ ಸಮಯವನ್ನು ಚೆನ್ನಾಗಿ ಕಳೆದರೆ ಸಾಕೆನ್ನುವುದನ್ನು ವರ್ಕಿಂಗ್ ವುಮನ್ ಗಮನದಲ್ಲಿಟ್ಟುಕೊಂಡರೆ ಇನ್ನೂ ಹೆಚ್ಚು ಸಂತೋಷವಾಗಿರಬಹುದು.