ಕರೀಶ್ಮಾ ಕಪೂರಳ ಸಪೂರ ದೇಹದ ಗುಟ್ಟೇನು ಗೊತ್ತಾ? ನಲವತ್ನಾಲ್ಕರಲ್ಲೂ ನವ ಯೌವನ ಕಾಪಾಡಿಕೊಂಡಿದ್ದು ಹೇಗಿರಬಹುದು? ಎರಡು ಮಕ್ಕಳ ತಾಯಿಯಾಗಿರುವ ಕರೀಶ್ಮಾ ಸಧ್ಯ ಅಲ್ಟ್ ಬಾಲಾಜಿಯ ಸಿಂಗಲ್ ಪೇರೆಂಟ್ಸ್ ಕುರಿತ ಹೊಸ ಸಿರೀಸ್‌ನಲ್ಲಿ ಭಾಗವಹಿಸುತ್ತಿದ್ದಾಳೆ. ಸೋಷ್ಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿರುವ ಕರೀಶ್ಮಾ, ಕೇವಲ ಇನ್ಸ್ಟಾ‌ಗ್ರಾಂ ಒಂದರಲ್ಲೇ 40 ಲಕ್ಷ ಫಾಲೋವರ್ಸ್ ಹೊಂದಿದ್ದಾಳೆ. ಈ ಸೂಪರ್ ಫಿಟ್ ಹೀರೋಯಿನ್ ತನ್ನ ಅಭಿಮಾನಿಗಳಿಗೆ ಆರೋಗ್ಯಕಾರಿ ಆಹಾರಗಳ ಸೇವನೆಗೆ ಕರೆ ನೀಡಿದ್ದಾಳೆ. 

ಕರೀಶ್ಮಾಳ ಇನ್ಸ್ಟಾ ಖಾತೆ ಸ್ಕ್ರಾಲ್ ಮಾಡಿದರೆ, ಆಕೆ ಆಹಾರ ಪ್ರಿಯಳು ಎಂಬುದು ಖಂಡಿತಾ ತಿಳಿಯುತ್ತದೆ. ಆಕೆಯ ಡಯಟ್‌ನಲ್ಲಿ ಏನೇನಿರುತ್ತದೆ ತಿಳ್ಕೋಬೇಕಾ?

- ತಿಂಡಿಗೆ ಹಣ್ಣುಗಳು ಮತ್ತು ಕಾಫಿ
ಕರೀಶ್ಮಾ ಆಗಾಗ ತನ್ನ ಬ್ರೇಕ್‌ಫಾಸ್ಟ್ ಫೋಟೋ ಹಾಕುತ್ತಲೇ ಇರುತ್ತಾಳೆ. ಅವುಗಳಲ್ಲಿ ಯಾವಾಗಲೂ ಬೆರೀಸ್, ಸಿಟ್ರಸ್ ಫ್ರೂಟ್ಸ್ ಹಾಗೂ ಕಾಫಿ ಇರುವುದನ್ನು ಕಾಣಬಹುದು. ಹಣ್ಣುಗಳಲ್ಲಿ ಫೈಟೋನ್ಯೂಟ್ರಿಯಂಟ್ಸ್ ಹೆಚ್ಚಿರುತ್ತವೆ. ಇವು ದೇಹವನ್ನು ಉರಿ, ಊತಗಳಿಂದ ರಕ್ಷಿಸುತ್ತದೆ. ಬೆರೀಸ್ ಆ್ಯಂಟಿಆಕ್ಸಿಡೆಂಟ್ಸ್‌ನಿಂದ ಶ್ರೀಮಂತವಾಗಿರುತ್ತವೆ. ಸಿಟ್ರಸ್ ಹಣ್ಣುಗಳು ತ್ವಚೆಗೆ ಒಳ್ಳೆಯದು ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಇನ್ನು ಕಾಫಿಯು ಮೆಟಬಾಲಿಸಂ ಹೆಚ್ಚಿಸುತ್ತದೆ.


 
- ಕಾರ್ಬೋಹೈಡ್ರೇಟ್ಸ್ ಪಡೆಯುವ ಸರಿಯಾದ ವಿಧಾನ
ಕಾರ್ಬೋಹೈಡ್ರೇಟ್ಸ್‌ನ್ನು ದೇಹಕ್ಕೆ ಒದಗಿಸುವಲ್ಲಿ ಸರಿಯಾದ ವಿಧಾನ ಯಾವುದೆಂಬ ಕುರಿತು ಕರೀಶ್ಮಾ ತಿಳಿಸಿಕೊಡಬಲ್ಲಳು. ನೀವು ಯಾವುದೇ ಡಯಟ್ ಮಾಡಿ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಬೇಕೇ ಬೇಕು. ಕರೀಶ್ಮಾ ಆಕೆಯ ಪಾಸ್ತಾವನ್ನು ಮನೆಯಲ್ಲೇ ತಯಾರಿಸಿಕೊಳ್ಳುತ್ತಾಳೆ. ಅದರೊಂದಿಗೆ ತರಕಾರಿಗಳು ಹಾಗೂ ಪ್ರೋಟೀನ್ ಅಧಿಕವಿರುವ ಮೊಟ್ಟೆಯ ಬಿಳಿಭಾಗ ಹಾಗೂ ಚಿಕನ್ ಇರುವಂತೆ ಮ್ಯಾಚ್ ಮಾಡಿಕೊಳ್ಳುತ್ತಾಳೆ. ಮೊಟ್ಟೆ ಹಾಗೂ ಚಿಕನ್ ಎರಡರಲ್ಲೂ ಲೀನ್ ಪ್ರೋಟೀನ್ ಹೇರಳವಾಗಿರುತ್ತದೆ.

ಬೆಲ್ಲಿ ಫ್ಯಾಟ್ ತೊಲಗಿಸಲು ಇಂಡಿಯನ್ ಫುಡ್

- ನಿಮಗೆ ನೀವು ಟ್ರೀಟ್ ಕೊಟ್ಟುಕೊಳ್ಳಿ
ಎಷ್ಟೇ ಡಯಟ್ ಮಾಡಿದರೂ ಆಗಾಗ ನಿಮ್ಮ ನಾಲಿಗೆಗೆ ಸಿಹಿ ಹಾಗೂ ಇತರೆ ಅಪರೂಪದ ಆಹಾರಗಳ ರುಚಿ ತೋರಿಸಬೇಕು. ಕರೀಶ್ಮಾ ಕೂಡಾ ಯೂರೋಪ್ ಸೇರಿದಂತೆ ಇತರೆ ದೇಶಗಳಿಗೆ ಹೋದಾಗ ಅಲ್ಲಿನ ಆಹಾರ ಟ್ರೈ ಮಾಡುವುದರ ಜೊತೆಗೆ ಐಸ್‌ಕ್ರೀಂ, ಸ್ವೀಟ್ಸ್ ತಿನ್ನುವುದನ್ನು ಆಕೆಯ ಪೋಸ್ಟ್‌ಗಳು ದೃಢೀಕರಿಸುತ್ತವೆ. ಡಯಟ್ ಎಂದು ಆಸೆಗಳೆಲ್ಲವನ್ನೂ ಪೂರ್ತಿ ಹೂತುಹಾಕಿಬಿಡಬೇಕಿಲ್ಲ.

- ಮಳೆಬಿಲ್ಲನ್ನು ತಿನ್ನುವಾಸೆಯೇ?
ಕರೀಶ್ಮಾ ಕಪೂರ್ ತಿನ್ನುವ ಆಹಾರ ಯಾವಾಗಲೂ ಕಲರ್‌ಫುಲ್ ಆಗಿರುತ್ತದೆ. ಆಕೆಯ ಆಹಾರದಲ್ಲಿ ವಿಧವಿಧದ ಹಣ್ಣುಗಳು ಹಾಗೂ ನಟ್ಸ್ ಇರುತ್ತವೆ. ನಟ್ಸ್‌ಗಳಲ್ಲಿ ಹೆಲ್ದೀ ಫ್ಯಾಟ್ಸ್, ಫೈಬರ್, ಪ್ರೋಟೀನ್ ಮುಂತಾದವಿದ್ದರೆ ಹಣ್ಣುಗಳು ಮೈಕ್ರೋ ನ್ಯೂಟ್ರಿಯೆಂಟ್ಸ್‌ಗಳ ಖನಿಜ. ಬಾದಾಮಿಯಲ್ಲಿ ಮೆದುಳನ್ನು ಚುರುಕುಗೊಳಿಸುವ ಅಂಶಗಳಿರುವುದು ಗೊತ್ತೇ ಇದೆ. 

ಸಿಕ್ಸ್ ಪ್ಯಾಕ್ ಎನ್ನೋರಿಗಿದೆ ಕಳ್ಳ ದಾರಿ

- ಸಂಪೂರ್ಣ ಊಟ
ಭಾರತೀಯ ಥಾಲಿಯು ಸಂಪೂರ್ಣ ಆಹಾರ ಎಂದು ಖ್ಯಾತಿ ಪಡೆದಿದೆ. ಥಾಲಿಯಲ್ಲಿ ಮ್ಯಾಕ್ರೋ ನ್ಯೂಟ್ರಿಯೆಂಟ್ಸ್, ಮೈಕ್ರೋ ನ್ಯೂಟ್ರಿಯೆಂಟ್ಸ್, ಫೈಬರ್, ಪ್ರೋಟೀನ್ಸ್ ಎಲ್ಲವುಗಳ ಪರ್ಫೆಕ್ಟ್ ಮಿಳಿತ ಕಾಣಬಹುದು. ಕರೀಶ್ಮಾ ಈ ಥಾಲಿಯ ಫ್ಯಾನ್ ಆಗಿದ್ದು, ಆಗಾಗ ಗುಜರಾತಿ ಥಾಲಿಯ ಫೋಟೋವನ್ನು ಆಕೆ ಇನ್ಸ್ಟಾಗೆ ಹಾಕುತ್ತಿರುತ್ತಾಳೆ.

ಇನ್ನು ಫಿಟ್ನೆಸ್ ವಿಷಯಕ್ಕೆ ಬಂದರೆ ಯೋಗ ಹಾಗೂ ಜಿಮ್ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಕರೀಶ್ಮಾ ದೇಹದಂಡನೆಗೆ ಹೆದರುವುದಿಲ್ಲ. ಒಟ್ಟಿನಲ್ಲಿ ಫಿಟ್ನೆಸ್ ಎಂಬುದು ಕಬ್ಬಿಣದ ಕಡಲೆ ಏನೂ ಅಲ್ಲ. ಆಹಾರ ಹಾಗೂ ವ್ಯಾಯಾಮದ ವಿಷಯದಲ್ಲಿ ಸ್ವಲ್ಪ ಹೆಚ್ಚಿನ ಗಮನ ನೀಡಿದರೆ ಎಲ್ಲರೂ ಫಿಟ್ ಆ್ಯಂಡ್ ಯಂಗ್ ಆಗಿರುವ ಸುಖ ಅನುಭವಿಸಬಹುದು.