ಉದ್ಯೋಗಸ್ಥ ಮಹಿಳೆಯ ಮುಂದಿರುವ ದೊಡ್ಡ ಸವಾಲೆಂದರೆ ಮನೆ ಹಾಗೂ ಕಚೇರಿಗಳೆರಡರ ನಡುವೆ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು. ಮನೆಯ ಎಲ್ಲ ಕೆಲಸಗಳನ್ನೂ ಚಾಚೂ ತಪ್ಪದೆ ಮಾಡಿ, ಕಚೇರಿಗೂ ಸಮಯಕ್ಕೆ ಸರಿಯಾಗಿ ಹೋಗಿ ಸ್ಮಾರ್ಟ್ ಮಹಿಳೆ ಎನಿಸಿಕೊಳ್ಳುವುದು ಸುಲಭವೇನಲ್ಲ. ಇದನ್ನು ಸಾಧಿಸಲು, ಮನೆ ಕೆಲಸಗಳನ್ನು ಸುಲಭವಾಗಿಸಲು ಕೆಲವು ಉಪಕರಣಗಳನ್ನು ಖರೀದಿಸುವುದು ಅಗತ್ಯ. ಅದರಲ್ಲೂ ಅಡುಗೆಮನೆಯಲ್ಲಿ ಈ ಸಾಧನಗಳಿದ್ದರೆ, ಅಡುಗೆ ಕೆಲಸ ಒಂದಿಷ್ಟು ಸಲೀಸಾದೀತು.ಎಲೆಕ್ಟ್ರಿಕ್ ಬ್ಲೆಂಡರ್
ಐಸ್ ಕ್ರಶ್ ಮಾಡುವುದು, ದೋಸೆ ಹಿಟ್ಟು ರೆಡಿ ಮಾಡುವುದು ಮುಂತಾದ ಸಮಯ ತಿನ್ನುವ ಕೆಲಸಗಳನ್ನು ಎಲೆಕ್ಟ್ರಿಕ್ ಬ್ಲೆಂಡರ್ ಜಾದೂವಿನಂತೆ ಮಾಡಿ ಮುಗಿಸುತ್ತದೆ. ನಿಮ್ಮ ಅಡುಗೆ ಅಗತ್ಯಗಳಿಗೆ ತಕ್ಕಂತೆ ಸ್ಪೀಡ್ ಕಂಟ್ರೋಲ್ ಸ್ವಿಚ್ ಬಳಸಿಕೊಳ್ಳಬಹುದು. ಒದ್ದೆ ಹಾಗೂ ಒಣ ಗ್ರೈಂಡಿಂಗ್‌ ಎರಡೂ ಕೆಲಸಗಳಿಗೆ ಸಿಂಗಲ್ ಜಾರ್ ಇಟ್ಟುಕೊಂಡರೆ ಕೆಲಸ ಸುಲಭವಾದೀತು.

ಕಾಫಿ ಮಶೀನ್
ಬೆಳ್ಳಂಬೆಳಗ್ಗೆ ಎದ್ದು ಮನೆ ಹಾಗೂ ಕಚೇರಿಗೆ ತಿಂಡಿ ಊಟ ರೆಡಿ ಮಾಡಿಕೊಂಡು, ನೀವೂ ರೆಡಿಯಾಗಿ ಹೋಗುವ ನಡುವೆ ರಿಫ್ರೆಶ್ ಮಾಡುವಂಥ ಒಂದು ಕಪ್ ಕಾಫಿಯನ್ನು ಯಾರಾದರೂ ಮಾಡಿಕೊಡಬಾರದೇ ಎನಿಸದಿರದು. ಇದಕ್ಕಾಗಿ ಆಟೋಮ್ಯಾಟಿಕ್ ಕಾಫಿ ಮೆಶಿನ್ ಕೊಂಡುಕೊಳ್ಳಿ. ಅದು ನೀವು ಹಾಗೂ ನಿಮ್ಮ ಕುಟುಂಬವನ್ನು ಸದಾ ಸೂಪರ್ ರೆಡಿಯಾಗಿರಿಸುತ್ತದೆ.

ಸಂತಾನೋತ್ಪತ್ತಿ ಮೇಲೆ ವಯಸ್ಸಿನ ಪರಿಣಾಮ ಮತ್ತು ಪರಿಹಾರ!

ಇಂಡಕ್ಷನ್ ಸ್ಟೌವ್
ಹೆಚ್ಚು ಪವರ್ ಎಳೆಯದೇ ವೇಗವಾಗಿ ಕೆಲಸ ಮಾಡುವ ಇಂಡಕ್ಷನ್ ಸ್ಟೌವ್ ಮನೆಯಲ್ಲಿ ಇರಲೇಬೇಕು. ಸುರಕ್ಷತೆಯ ಚಿಂತೆಯಿಲ್ಲದೆ ಮಕ್ಕಳಿಂದ ಹಿಡಿದು ಮನೆಯ ಸದಸ್ಯರೆಲ್ಲರೂ ಬಳಸಬಹುದಾದ ಇಂಡಕ್ಷನ್ ಕುಕ್‌ಟಾಪ್, ಇಡ್ಲಿ ಮಾಡಿದರೆ ಇಡ್ಲಿ ಮೋಡ್‌ಗೆ ಹಾಕಿದರೆ, ಬೆಂದಾದ ಬಳಿಕ ತಾನೇ ಆಫ್ ಆಗುತ್ತದೆ, ಐದೇ ನಿಮಿಷದೊಳಗೆ ಹಾಲು ಕಾಯಿತ್ತದೆ, ಟೈಮರ್ ಸೆಟ್ ಮಾಡುವ ಅವಕಾಶ ನೀಡುತ್ತದೆ. ಪಾತ್ರೆಯೂ ಬಿಸಿಯಾಗುವುದಿಲ್ಲವಾದ್ದರಿಂದ ಬರಿಗೈಯ್ಯಲ್ಲೇ ಪಾತ್ರೆ ಎತ್ತಿಳಿಸಬಹುದು.

ಕೋಲ್ಡ್ ಪ್ರೆಸ್ಡ್ ಜ್ಯೂಸರ್
ಮಾರುಕಟ್ಟೆಯಲ್ಲಿ ಸಿಗುವ ಇತರೆ ಜ್ಯೂಸರ್‌ಗಳಂಥಲ್ಲದೆ, ಕೋಲ್ಡ್ ಪ್ರೆಸ್ಡ್ ಜ್ಯೂಸರ್ ನಿಧಾನವಾಗಿ ಹಣ್ಣುಗಳ ರಸ ತೆಗೆಯುತ್ತದೆ. ಇದರಿಂದ ಹಣ್ಣಿನ ಒರಿಜಿನಲ್ ಹಾಗೂ ನ್ಯಾಚುರಲ್ ಫ್ಲೇವರ್‌ಗೆ ಕೊಂಚವೂ ಧಕ್ಕೆಯಾಗದು. ರುಚಿಯೂ ಹೆಚ್ಚು, ಹೆಲ್ದೀ ಕೂಡಾ. ಅಲ್ಲದೆ, ಇವುಗಳ ದೊಡ್ಡ ಇನ್‌ಲೆಟ್‌ನಲ್ಲಿ ಹಣ್ಣಿನ ದೊಡ್ಡ ದೊಡ್ಡ ಪೀಸ್‌ಗಳನ್ನು ಹಾಕಬಹುದಾದ್ದರಿಂದ ಸಣ್ಣದಾಗಿ ಹಣ್ಣು ಕತ್ತರಿಸುವ ರಗಳೆ ಇಲ್ಲ. ಇದು ಸಮಯ ಉಳಿಸುತ್ತದೆ. 

ತ್ವಚೆಯ ಸೌಂದರ್ಯಕ್ಕೆ ನೇರಳೆ: ನಾಚಿ ನೀರಾಗುವುದು ನಾರಿಯ ನೆರಳು!

ಮೈಕ್ರೋವೇವ್ ಓವನ್
ತನ್ನ ಬಹೂಪಯೋಗಿ ಕಾರಣದಿಂದ ಕೆಲವೇ ದಿನಗಳಲ್ಲಿ ಮೈಕ್ರೋವೇವ್ ಓವನ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಬಲ್ಲದು. ಸ್ವಚ್ಛಗೊಳಿಸಲೂ ಸುಲಭ. ಆಹಾರಗಳನ್ನು ಬಿಸಿ ಮಾಡಲು, ಫ್ರಿಡ್ಜ್‌ನಿಂದ ತೆಗೆದ ಆಹಾರಗಳನ್ನು ಬಹು ಬೇಗ ಬಿಸಿಯಾಗಿಸಲು ಓವನ್ ಸಹಾಯ ಮಾಡುತ್ತದೆ. ಫಿಜ್ಜಾ ಅಥವಾ ಯಾವುದೇ ಆಹಾರವಾಗಲಿ ಒಳಗಿನಿಂದ ಬಿಸಿಯಾಗುತ್ತದೆ.