Amazon river facts Kannada: ಮಾನವ ಸಮುದ್ರದ ಮೇಲೆಯೇ ಬೃಹತ್ ಸೇತುವೆಗಳನ್ನು ಕಟ್ಟಿ ಮೆರೆದಿದ್ದಾನೆ. ಆದರೆ, ವಿಶ್ವದ ಎರಡನೇ ಅತಿ ದೊಡ್ಡ ನದಿ ಅಮೆಜಾನ್ ಮುಂದೆ ಮಾತ್ರ ಇಡೀ ಜಗತ್ತಿನ ದಿಗ್ಗಜ ಇಂಜಿನಿಯರ್‌ಗಳೇ ಮಂಡಿಯೂರಿದ್ದಾರೆ! ಕೋಟ್ಯಂತರ ರೂಪಾಯಿ ಸುರಿದು ಅಮೆಜಾನ್ ಮೇಲೆ ಸೇತುವೆ ಕಟ್ಟಲು ಹೊರಟವರು ಸೋತು ಸುಣ್ಣವಾಗಿ ಓಡಿಬಂದಿದ್ದೇಕೆ? ಆ ಬೆಚ್ಚಿಬೀಳಿಸುವ ಅಸಲಿ ರಹಸ್ಯ ಇಲ್ಲಿದೆ.

ಆಧುನಿಕ ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಮಾನವ ಸಮುದ್ರ, ಬೆಟ್ಟ-ಗುಡ್ಡಗಳ ನಡುವೆ ನೂರಾರು ಕಿಲೋಮೀಟರ್ ಉದ್ದದ ಬೃಹತ್ ಸೇತುವೆಗಳನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾನೆ. ಆದರೆ ಇಡೀ ಜಗತ್ತಿನಲ್ಲೇ ಒಂದು ಸ್ಥಳದಲ್ಲಿ ಮಾತ್ರ ಇಂಜಿನಿಯರ್‌ಗಳು ಎಷ್ಟೇ ಪ್ರಯತ್ನಪಟ್ಟರೂ ಇಂದಿಗೂ ಒಂದೇ ಒಂದು ಸೇತುವೆಯನ್ನು (Bridge) ನಿರ್ಮಿಸಲು ಸಾಧ್ಯವಾಗಿಲ್ಲ!

ಹೌದು, ಅದುವೇ ವಿಶ್ವದ ಎರಡನೇ ಅತಿ ದೊಡ್ಡ ನದಿಯಾದ ದಕ್ಷಿಣ ಅಮೆರಿಕಾದ ಅಮೆಜಾನ್ ನದಿ (Amazon River). ಸುಮಾರು 6,400 ಕಿ.ಮೀ ಉದ್ದವಿರುವ, 5 ದೇಶಗಳ ಮೂಲಕ ಹರಿದು ಅಟ್ಲಾಂಟಿಕ್ ಸಾಗರ ಸೇರುವ ಈ ನದಿಗೆ ಇಂದಿಗೂ ಸೇತುವೆ ಇಲ್ಲದಿರಲು ಕಾರಣವೇನು? ಬಹುತೇಕರು ಅಮೆಜಾನ್ ಕಾಡಿನಲ್ಲಿರುವ ಬೃಹತ್ 'ಗ್ರೀನ್ ಅನಕೊಂಡ' ಅಥವಾ ಅಪಾಯಕಾರಿ ಪ್ರಾಣಿಗಳಿಗೆ ಹೆದರಿ ಸೇತುವೆ ಕಟ್ಟಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದಿರುವ ಅಸಲಿ ಸತ್ಯವೇ ಬೇರೆ!

ಅಮೆಜಾನ್ ನದಿಗೆ ಸೇತುವೆ ಕಟ್ಟದಿರಲು ಮುಖ್ಯ ಕಾರಣಗಳಿವು

ಅಂದು ಏನಾಯ್ತು?

1973 ರಲ್ಲಿ ಅಮೆಜಾನ್ ನದಿಯ ಮೇಲೆ ಸೇತುವೆ ಕಟ್ಟುವ ಉದ್ದೇಶದಿಂದ ಸಾಮಗ್ರಿಗಳನ್ನು ಸಾಗಿಸಲು ಸುಮಾರು 869 ಕಿ.ಮೀ ಉದ್ದದ 'BR-319' ಎಂಬ ಬೃಹತ್ ರಸ್ತೆಯನ್ನು ನಿರ್ಮಿಸಲಾಯಿತು. ಇದಕ್ಕಾಗಿ ಭಾರತೀಯ ರೂಪಾಯಿ ಮೌಲ್ಯದಲ್ಲಿ ಬರೋಬ್ಬರಿ ₹2,174 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿತ್ತು. ಆದರೆ, ಅಮೆಜಾನ್ ಕಾಡಿನಲ್ಲಿ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ನಿರಂತರವಾಗಿ ಭೀಕರ ಮಳೆ ಸುರಿಯುತ್ತದೆ. ಈ ಮಳೆಯಿಂದಾಗಿ ನಿರ್ಮಿಸಿದ ರಸ್ತೆಯೆಲ್ಲಾ ಕೆಸರಾಗಿ ಕೊಚ್ಚಿಹೋಯಿತು. ನದಿಯ ನೀರಿನ ಮಟ್ಟ ಬರೋಬ್ಬರಿ 50 ಅಡಿಗಳಷ್ಟು (5 ಅಂತಸ್ತಿನ ಕಟ್ಟಡದಷ್ಟು ಎತ್ತರ) ಏರಿಕೆಯಾಗುತ್ತದೆ. ವಾಹನಗಳು ಕೆಸರಿನಲ್ಲಿ ಸಿಲುಕಿ ಯೋಜನೆ ಸಂಪೂರ್ಣ ವಿಫಲವಾಯಿತು.

ಸಾಗರದ ರಿವರ್ಸ್ ಅಲೆಗಳು (Tidal Bore)

ಪ್ರತಿ ವರ್ಷ ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವದಿಂದಾಗಿ ಅಟ್ಲಾಂಟಿಕ್ ಸಾಗರದ ಬೃಹತ್ ಅಲೆಗಳು ಗಂಟೆಗೆ 24 ಕಿ.ಮೀ ವೇಗದಲ್ಲಿ ಅಮೆಜಾನ್ ನದಿಯೊಳಗೆ ಹಿಮ್ಮುಖವಾಗಿ (Reverse Flow) ನುಗ್ಗುತ್ತವೆ. ಈ ಬೃಹತ್ ಅಲೆಗಳ ಹೊಡೆತಕ್ಕೆ ಎಂತಹ ಬಲಿಷ್ಠ ಸೇತುವೆಯೂ ಧರೆಗುರುಳುವ ಅಪಾಯವಿರುತ್ತದೆ.

ವಿಷಕಾರಿ ಹಾವು

ಅಮೆಜಾನ್ ಕಾಡಿನಲ್ಲಿ 'ಮಟುಪಸ್' ಎಂಬ ವಿಷಕಾರಿ ಬಳ್ಳಿಗಳು ಬೆಳೆಯುತ್ತವೆ. ಇವು ಸೇತುವೆಯನ್ನು ಆವರಿಸಿಕೊಂಡರೆ, ಆ ಬಳ್ಳಿಗಳ ಸಹಾಯದಿಂದಲೇ ಅತ್ಯಂತ ಅಪಾಯಕಾರಿ ವಿಷಕಾರಿ ಹಾವುಗಳು, ಜೇಡಗಳು ಮತ್ತು ಕೀಟಗಳು ಸೇತುವೆಯ ಮೇಲೆ ಸುಲಭವಾಗಿ ಹರಿದಾಡುತ್ತವೆ. ಇದರಿಂದಾಗಿ ಸೇತುವೆ ನಿರ್ಮಿಸಿದರೂ ಅದರ ಮೇಲೆ ಮನುಷ್ಯರು ಓಡಾಡುವುದು ಅಸಾಧ್ಯ.

ನರಭಕ್ಷಕ ಜಲಚರಗಳು (1981ರ ನೌಕಾ ದುರಂತ)

ಅಮೆಜಾನ್ ನದಿಯಲ್ಲಿ ಮನುಷ್ಯರನ್ನೇ ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಅಪಾಯಕಾರಿ ಜಲಚರಗಳಿವೆ. ಇದಕ್ಕೆ ಉದಾಹರಣೆ 1981ರಲ್ಲಿ ನಡೆದ ಘಟನೆ. 500 ಜನರಿದ್ದ ಹಡಗೊಂದು ನದಿಯಲ್ಲಿ ಮುಳುಗಿದಾಗ, ಈಜು ಬರುತ್ತಿದ್ದರೂ ಕೇವಲ 178 ಜನರು ಮಾತ್ರ ಬದುಕುಳಿದರು. ರಕ್ಷಣಾ ತಂಡಕ್ಕೆ ಸಿಕ್ಕಿದ್ದು ಜನರ ತುಂಡು-ತುಂಡಾದ ದೇಹದ ಭಾಗಗಳು ಮಾತ್ರ! ನದಿಯಲ್ಲಿದ್ದ ದೈತ್ಯ ಮಾಂಸಾಹಾರಿ ಮೀನುಗಳು (ಪಿರಾನ್ಹಾ ಮುಂತಾದವು) ಮನುಷ್ಯರನ್ನು ಕಚ್ಚಿ ತಿಂದಿದ್ದವು. ಇಂತಹ ಅಪಾಯಕಾರಿ ನೀರಿನಲ್ಲಿ ಪಿಲ್ಲರ್ ನಿರ್ಮಿಸುವುದು ಅಸಾಧ್ಯದ ಮಾತು.

ಹೊರಜಗತ್ತನ್ನು ಕಂಡಿರದ ನರಭಕ್ಷಕ ಬುಡಕಟ್ಟುಗಳು

ಅಮೆಜಾನ್ ಕಾಡಿನಲ್ಲಿ ಸುಮಾರು 11,200 ವರ್ಷಗಳಿಂದ ಬದುಕುತ್ತಿರುವ 400ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿವೆ. ಇವರಲ್ಲಿ ಕೆಲವರು ಕಾಡಿಗೆ ಕಾಲಿಡುವ ಅಪರಿಚಿತ ಮನುಷ್ಯರನ್ನು ಕಂಡ ತಕ್ಷಣ ಕೊಂದು, ಅವರ ಮಾಂಸವನ್ನೇ ತಿನ್ನುವ (Cannibals) ಅಪಾಯಕಾರಿ ಸ್ವಭಾವದವರಾಗಿದ್ದಾರೆ.

ಕಾರ್ಮಿಕರ ಜೀವಕ್ಕೆ ಗ್ಯಾರಂಟಿ ಇಲ್ಲ

ಸೇತುವೆ ಕಟ್ಟಲು ಸಾವಿರಾರು ಕಾರ್ಮಿಕರು ವರ್ಷಗಟ್ಟಲೆ ಕಾಡಿನಲ್ಲಿ ಉಳಿಯಬೇಕಾಗುತ್ತದೆ. ಆದರೆ ವಿಷಕಾರಿ ಕೀಟಗಳು, ಜ್ವರ, ವಿಷಕಾರಿ ಸಸ್ಯಗಳು ಮತ್ತು ಕ್ರೂರ ಪ್ರಾಣಿಗಳ ನಡುವೆ ಕಾರ್ಮಿಕರು ಜೀವಂತವಾಗಿ ಉಳಿಯುವುದು ಅಸಾಧ್ಯ.

ಕೇವಲ ಅನಕೊಂಡ ಹಾವು ಮಾತ್ರವಲ್ಲದೆ, ಪ್ರಕೃತಿಯ ಅತಿರೇಕದ ಹವಾಮಾನ, ಅಪಾಯಕಾರಿ ನರಭಕ್ಷಕ ಜೀವಿಗಳು ಹಾಗೂ ಅತಿ ಭೀಕರ ಭೌಗೋಳಿಕ ಪರಿಸ್ಥಿತಿಯಿಂದಾಗಿ ಅಮೆಜಾನ್ ನದಿಗೆ ಸೇತುವೆ ಕಟ್ಟುವುದು ಇಂದಿಗೂ ಮನುಷ್ಯನಿಗೆ ಅಸಾಧ್ಯವಾದ ಸವಾಲಾಗಿಯೇ ಉಳಿದಿದೆ!