ಪೀರಿಯಡ್ಸ್ ವಿಷಯದಲ್ಲಿ ಯಾವುದು ನಾರ್ಮಲ್, ಯಾವುದು ಅಬ್ನಾರ್ಮಲ್ ಎಂದು ನಿರ್ಧರಿಸುವುದು ಕಷ್ಟವೇ. ಒಬ್ಬೊಬ್ಬ ಮಹಿಳೆಗೆ ಒಂದೊಂದು ಮಟ್ಟಿನ ಬ್ಲೀಡಿಂಗ್ ಇರುತ್ತದೆ, ನೋವಿನ ಸಮಯ ಬೇರೆ ಬೇರೆ ಇರುತ್ತದೆ, ಇತರೆ ಲಕ್ಷಣಗಳಲ್ಲಿ ವ್ಯತ್ಯಾಸವಿರುತ್ತದೆ, ಎಷ್ಟು ದಿನ ಪೀರಿಯಡ್ಸ್ ಇರುತ್ತದೆ ಎಂಬುದು ಕೂಡ ಒಬ್ಬರಿಂದೊಬ್ಬರಿಗೆ ಬೇರೆ ಬೇರೆ ಇರುತ್ತದೆ.

ಈ ಪೀರಿಯಡ್ಸ್ ಎಷ್ಟು ದಿನ ಇದ್ದರೆ ನಾರ್ಮಲ್, ಯಾವಾಗ ಚಿಂತಿಸಬೇಕು, ವೈದ್ಯರನ್ನು ನೋಡಬೇಕು ಎಂಬುದು ಹಲವರಿಗೆ ಗೊಂದಲವೇ. ಆದರೆ, ಸ್ತ್ರೀರೋಗ ತಜ್ಞರ ಪ್ರಕಾರ, ಪೀರಿಯಡ್ಸ್ 2ರಿಂದ 7 ದಿನಗಳವರೆಗೆ ಇದ್ದರೆ ನಾರ್ಮಲ್. ಜೊತೆಗೆ, ಮುಟ್ಟಾದ ಹೊಸತರಲ್ಲಿ ಹಾಗೂ ಮುಟ್ಟು ನಿಲ್ಲುವಾಗ ಇರೆಗುಲರ್ ಪೀರಿಯಡ್ಸ್ ಕೂಡಾ ನಾರ್ಮಲ್. ಆದರೆ, ಕೆಲ ಮಹಿಳೆಯರು 7 ದಿನಕ್ಕೂ ಹೆಚ್ಚು ದಿನ ಕಾಲ ಬ್ಲೀಡಿಂಗ್ ಅನುಭವಿಸಬಹುದು.

ಪೀರಿಯಡ್ಸ್‌‌ ನೋವಿದ್ಯಾ? ಡಯಟ್ ಹೀಗಿರಲಿ...

ಆಗ ಇನ್ನೊಬ್ಬ ಮಹಿಳೆಯೊಂದಿಗೆ ಹೋಲಿಸಿ ನೋಡಿಕೊಳ್ಳುವ ಬದಲು ತಮ್ಮದೇ ಪೀರಿಯಡ್ಸ್ ಹಿಸ್ಟರಿಯನ್ನು ಕೆದಕಿ ನೋಡಬೇಕು. ಇದಕ್ಕಾಗಿ ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್ ಇಲ್ಲವೇ ಬುಲೆಟ್ ಜರ್ನಲ್ ಬಳಸಬಹುದು. ಆಗ, ನಿಮ್ಮ ಪೀರಿಯಡ್ಸ್‌ನಲ್ಲಿ ಹೆಚ್ಚಿನ ಬದಲಾವಣೆ ಇದ್ದರೆ ಗಮನಕ್ಕೆ ಬರುತ್ತದೆ. 

- ಬೇರೆ ಕಾಯಿಲೆಗಳಿದ್ದರೆ

ಪೀರಿಯಡ್ಸ್ ಸಣ್ಣದಾಗಿ ಶುರುವಾಗಿ ನಂತರದಲ್ಲಿ ಸಿಕ್ಕಾಪಟ್ಟೆ ಬ್ಲೀಡಿಂಗ್ ಆರಂಭವಾದರೆ ಆಗ ಸ್ವಲ್ಪ ಹೆಚ್ಚಿನ ಗಮನ ವಹಿಸಬೇಕು. ಇದು ಏಳು ದಿನಗಳಾದರೂ ನಿಲ್ಲದಿದ್ದರೆ ಅದಕ್ಕೆ ಫೈಬ್ರಾಯ್ಡ್ಸ್ ಕಾರಣವಿರಬಹುದು. ಗರ್ಭಕೋಶದ ಅಥವಾ ಸರ್ವಿಕಲ್ ಕ್ಯಾನ್ಸರ್ ಇದ್ದಾಗ, ಲಿವರ್ ಅಥವಾ ಕಿಡ್ನಿ ಸಮಸ್ಯೆಗಳಿದ್ದಾಗ, ಅನುವಂಶೀಯವಾಗಿ ಬರುವ ವಿಲ್ಲೆಬ್ರ್ಯಾಂಡ್ಸ್ ಕಾಯಿಲೆಯಂಥ ಬ್ಲೀಡಿಂಗ್ ಡಿಸಾರ್ಡರ್ ಇದ್ದಾಗ, ಯುಟೆರಿನ್ ಪಾಲಿಪ್ಸ್, ಅಡೆನೋಮಯೋಸಿಸ್ ಸಮಸ್ಯೆಗಳಿದ್ದಾಗ ಪೀರಿಯಡ್ಸ್ ಮುಗಿಯದ ಗೋಳಾಗಬಹುದು. ಇಂಥ ಸಂದರ್ಭದಲ್ಲಿ ವೈದ್ಯರ ಮೊರೆ ಹೋಗಬೇಕು. ಇವನ್ನೆಲ್ಲ ನಿರ್ವಹಿಸಲು ಔಷಧಿಗಳಿವೆ.

- ಗರ್ಭಪಾತ

ಕೆಲವೊಮ್ಮೆ ಗರ್ಭಿಣಿಯಾಗಿರುವುದು ಬೆಳಕಿಗೆ ಬರುವ ಮೊದಲೇ ಗರ್ಭಪಾತವಾಗುವ ಸಾಧ್ಯತೆಗಳಿರುತ್ತವೆ. ಅಂಥ ಸಂದರ್ಭದಲ್ಲಿ ಕೂಡಾ ಪೀರಿಯಡ್ಸ್ ಹಲವು ದಿನಗಳವರೆಗೆ ಇರುತ್ತದೆ. ಇನ್ನು ವೈದ್ಯಕೀಯವಾಗಿ ನಡೆದ ಗರ್ಭಪಾತದ ಬಳಿಕ ಮುಟ್ಟಾದರೆ, ಅದು ಕೂಡಾ ಹೆಚ್ಚು ದಿನಗಳ ಕಾಲ ಇರುವ ಸಾಧ್ಯತೆ ಹೆಚ್ಚು. 

'ಆ ದಿನಗಳ'ಲ್ಲಿ ಏನು ತಿನ್ನಬೇಕು?

- ಜನನ ನಿಯಂತ್ರಣ 

ಈಗಷ್ಟೇ ನೀವು ಜನನ ನಿಯಂತ್ರಣಕ್ಕಾಗಿ ಕಾಪರ್ ಐಯುಡಿ ಹಾಕಿಸಿದ್ದರೆ, ಅದಾಗಿ ಆರಂಭದ ಕೆಲ ತಿಂಗಳು ಮುಟ್ಟು ಹೆಚ್ಚೇ ದಿನ ಇರುತ್ತದೆ. ಇದಕ್ಕಾಗಿ  ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಅಥವಾ ಬೇರೆ ಯಾವುದೇ ವಿಧಾನ ಅನುಸರಿಸುತ್ತಿದ್ದಾಗಲೂ ಅಡ್ಡ ಪರಿಣಾಮವಾಗಿ ಹೀಗೆ ಹೆಚ್ಚು ಕಾಲ, ಹೆಚ್ಚಾಗಿ ಬ್ಲೀಡಿಂಗ್  ಆಗಬಹುದು. ಅಲ್ಲದೆ, ಆ್ಯಂಟಿ ಇನ್ಫ್ಲಮೇಟರಿ ಡ್ರಗ್, ಆ್ಯಸ್ಪಿರಿನ್ ತೆಗೆದುಕೊಳ್ಳುವಾಗಲೂ ಹೀಗಾಗಬಹುದು. 

- ಬೊಜ್ಜು

ಅತಿಯಾದ ತೂಕವೂ ಪೀರಿಯಡ್ಸ್ ಹೆಚ್ಚು ಕಾಲ ಇರುವಂತೆ ಮಾಡಬಲ್ಲದು. ದೇಹದಲ್ಲಿ ಫ್ಯಾಟಿ ಟಿಶ್ಯೂ ಹೆಚ್ಚಾದಾಗ ಹೆಚ್ಚು ಈಸ್ಟ್ರೋಜನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಪೀರಿಯಡ್ಸ್‌ನಲ್ಲಿ ಬದಲಾವಣೆ ತರುತ್ತದೆ. 

ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

- ಹಾರ್ಮೋನ್ ಬದಲಾವಣೆ

ಥೈರಾಯ್ಡ್, ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ ಮುಂತಾದ ಕಾರಣಗಳಿಂದಾಗಿ ದೇಹದಲ್ಲಿ ಹಾರ್ಮೋನ್ ಏರುಪೇರಾದಾಗ ಕೂಡಾ ಪೀರಿಯಡ್ಸ್ ಹೆಚ್ಚು ದಿನ ಬಾಧಿಸಬಹುದು. ನಿಮ್ಮ ಹಾರ್ಮೋನ್ ಸಾಮಾನ್ಯ ಮಟ್ಟದಲ್ಲಿಲ್ಲದಾಗ, ಮುಟ್ಟಿನ ಸಂದರ್ಭದಲ್ಲಿ ಓವ್ಯುಲೇಟ್ ಆಗದಿರಬಹುದು. ಆಗ ಗರ್ಭಕೋಶದ ಲೈನಿಂಗ್ ದಪ್ಪಗಾಗುತ್ತದೆ. ನಂತರ ನಮ್ಮ ದೇಹ ಈ ಲೈನಿಂಗನ್ನು ಹೊರ ಹಾಕುವಾಗ ಹೆಚ್ಚಿನ ಕಾಲ ಮುಟ್ಟು ಇರಬಹುದು. 

ಯಾವಾಗ ವೈದ್ಯರ ನೆರವು ಪಡೆಯಬೇಕು?

ಒಂದು ವೇಳೆ ಪೀರಿಯಡ್ಸ್ 7 ದಿನಗಳಾದರೂ ನಿಂತಿಲ್ಲವೆಂದರೆ, ಅಥವಾ ಬ್ಲೀಡಿಂಗ್‌ನಿಂದಾಗಿ ನೀವು ಅನೀಮಿಕ್ ಆಗಿ ರಕ್ತಕಣಗಳ ಸಂಖ್ಯೆ ಇಳಿಕೆಯಾಗಿ, ತಲೆಸುತ್ತು, ಉಸಿರಾಟ ಸಮಸ್ಯೆ, ಎದೆನೋವು ಮುಂತಾದವು ಕಾಣಿಸಿಕೊಂಡರೆ ತಕ್ಷಣ ಸ್ತ್ರೀರೋಗ ತಜ್ಞರನ್ನು ಕಾಣಬೇಕು. 

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?