ಪೀರಿಯಡ್ಸ್ ಪೇನ್- ಒಬ್ಬೊಬ್ಬರಿಗೆ ಒಂದೊಂದು ಮಟ್ಟದ ನೋವಿರುತ್ತದೆ. ಕೆಲವರಿಗೆ ಅರ್ಧ ಗಂಟೆಯಲ್ಲಿ ನೋವು ಮುಗಿಯಬಹುದು, ಮತ್ತೆ ಕೆಲವರಿಗೆ ಮೂರು ದಿನಗಳ ನರಕ ಯಾತನೆ. 15 ವರ್ಷದ ಹುಡುಗಿಯಲ್ಲಿರುವಷ್ಟೇ ನೋವು ಪೀರಿಯಡ್ಸ್ ಆಗಿ 15 ವರ್ಷ ದಾಟಿದರೂ ಇರಬಹುದು. 

ಶೇ.20ರಷ್ಟು ಮಹಿಳೆಯರ ದೈನಂದಿನ ಬದುಕನ್ನು ಪೀರಿಯಡ್ಸ್ ಪೇನ್ ಏರುಪೇರು ಮಾಡುತ್ತದೆ. 10ರಲ್ಲಿ ಒಬ್ಬಾಕೆ ಪ್ರತಿ ಬಾರಿ ಅದೆಷ್ಟು ನೋವು ಅನುಭವಿಸುತ್ತಾಳೆಂದರೆ ತಿಂಗಳಲ್ಲಿ ಮೂರು ದಿನ ಆಕೆ ಏನೂ ಮಾಡಲಾರಳು.  ದುರದೃಷ್ಟವೆಂದರೆ, ಈ ನೋವನ್ನು ತಕ್ಷಣ ನಿಲ್ಲಿಸಲು ಮಾತ್ರೆಯ ಹೊರತಾದ ಬೇರಾವುದೇ ಸುಲಭ ವಿಧಾನ ಇಲ್ಲ. ಆದರೆ, ನೋವನ್ನು ಕಡಿಮೆ ಮಾಡುವಂಥ, ಅಡ್ಡ ಪರಿಣಾಮಗಳಿಲ್ಲದ ಕೆಲವೊಂದಿಷ್ಟು ವಿಧಾನಗಳಿವೆ. 

ಲೇಟಾಗೇಕೆ ಆಗುತ್ತೆ ಪಿರಿಯಡ್ಸ್?

ನೋವಿಗೆ ಕಾರಣವೇನು?

ಸ್ನಾಯುಗಳ ಕಾಂಟ್ರ್ಯಾಕ್ಷನ್‌ನಿಂದ ನೋವು ಬರುತ್ತದೆ ಎನಿಸಿದರೂ, ಪ್ರೊಸ್ಟಾಗ್ಲ್ಯಾಂಡಿನ್ಸ್ ಎಂಬ ಹಾರ್ಮೋನ್ ರೀತಿಯ ಕೆಮಿಕಲ್ ಮುಟ್ಟಿನ ಸಂದರ್ಭದಲ್ಲಿ ಗರ್ಭಕೋಶದ ಸಂಕೋಚನಕ್ಕೆ ಕಾರಣವಾಗಿ ನೋವು ಉಂಟಾಗುತ್ತದೆ. ದೇಹದಲ್ಲಿ ಹೆಚ್ಚು ಪ್ರೊಸ್ಟಾಗ್ಲ್ಯಾಂಡಿನ್ಸ್ ಇದ್ದಷ್ಟೂ ನೋವು ಹೆಚ್ಚಾಗಿರುತ್ತದೆ. ಈ ಕೆಮಿಕಲ್ಸ್ ಕಡಿಮೆ ಮಾಡಿ ನೋವು ಕಡಿಮೆ ಮಾಡಲು ಕೆಲವು ದಾರಿಗಳಿವೆ. ಅವೆಂದರೆ, 

ಹೀಟ್ ಪ್ಯಾಡ್ಸ್

ಮೆಡಿಕೇಶನ್ ಇಷ್ಟವೆಲ್ಲವೆನ್ನುವವರಿಗೆ ಹೀಟ್ ಟ್ರೀಟ್‌ಮೆಂಟ್ ಅತ್ಯುತ್ತಮ ಆಯ್ಕೆ. ಬಿಸಿಯಾದ ವಾಟರ್ ಬಾಟಲ್, ಹೀಟಿಂಗ್ ಪ್ಯಾಡ್ ಆದರೂ ಸರಿ, ಅಥವಾ ಬಿಸಿ ನೀರಿನ ಟಬ್‌ನೊಳಗೆ ಕೂರುತ್ತೀರೆಂದರೂ ಸರಿ, ಬಿಸಿಯು ಸ್ನಾಯುಗಳು ರಿಲ್ಯಾಕ್ಸ್ ಆಗಿ ನೋವು ಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ. ಕೆಳಗೆ ಹೀಟ್ ಪ್ಯಾಡ್ ಇಟ್ಟು, ಅದರ ಮೇಲೆ ಹೊಟ್ಟೆ ಬರುವಂತೆ ಉರುಳಾಡಿದರೂ ಸಹಾಯವಾದೀತು. ಬಿಸಿಯು ತಾಕಿದಾಗ ಪೀರಿಯಡ್ಸ್ ನೋವು ಯಾಕೆ ಕಡಿಮೆ ಆಗುತ್ತದೆ ಎಂಬ ಬಗ್ಗೆ ಹೆಚ್ಚು ಅಧ್ಯಯನಗಳಿಲ್ಲವಾದರೂ, ಹೀಗೆ ಮಾಡುವುದರಿಂದ ರಿಲ್ಯಾಕ್ಸ್ ಆಗುತ್ತದೆನ್ನುವುದಾದರೆ, ಅಧ್ಯಯನಗಳ ಆಧಾರ ಏಕೆ ಬೇಕಲ್ಲವೇ? 

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

ವ್ಯಾಯಾಮ

ಏನು, ಮುಟ್ಟಿನ ಸಂದರ್ಭದಲ್ಲಿ ಯಾರಾದರೂ ವ್ಯಾಯಾಮ ಮಾಡುತ್ತಾರಾ? ರೆಗುಲರ್ ಆಗಿ ಎಕ್ಸರ್ಸೈಸ್ ಮಾಡುವವರು ಕೂಡಾ ಆ ಮೂರು ದಿನಗಳ ಕಾಲ ರೆಸ್ಟಿಂಗ್ ಮೋಡ್‌ನಲ್ಲಿರುತ್ತಾರೆ ಎನ್ನುವುದು ನಿಮ್ಮ ಸಂದೇಹವಲ್ಲವೇ? ನೋವಿನಲ್ಲಿ ಏನೂ ಮಾಡಲು ಮನಸ್ಸಾಗದು. ಬ್ಲೀಡಿಂಗ್ ಜಾಸ್ತಿಯಾದರೆ ಎಂಬ ಭಯವಾಗುತ್ತದೆ ಕೂಡಾ. ಆದರೆ, ನೀವು ನಂಬ್ಲೇಬೇಕು, ಎಕ್ಸರ್ಸೈಸ್ ಖಂಡಿತಾ ನೋವು ಕಡಿಮೆ ಮಾಡುತ್ತದೆ. ವ್ಯಾಯಾಮದಿಂದ ಪ್ರೊಸ್ಟಾಗ್ಲ್ಯಾಂಡಿನ್ಸ್ ಮಟ್ಟ ಕಡಿಮೆಯಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಪ್ರೊಸ್ಟಾಗ್ಲಾಂಡಿನ್ಸ್ ಮಟ್ಟ ಇಳಿದ ಮೇಲೆ ನೋವು ಇಳಿಯಲೇಬೇಕು. ಪೀರಿಯಡ್ಸ್ ಆರಂಭಕ್ಕೂ ಎರಡು ದಿನ ಮುನ್ನ ಎಕ್ಸ‌ರ್ಸೈಸ್ ಮಾಡಿದರೂ ಆದೀತು. ಇನ್ನು ಪೀರಿಯಡ್ಸ್‌ನಲ್ಲಿ ನೋವು ಕಡಿಮೆ ಇದ್ದ ಸಂದರ್ಭದಲ್ಲಿ ವಾಕ್ ಹಾಗೂ ಇತರೆ ಲೈಟ್ ಎಕ್ಸ‌ರ್ಸೈಸ್ ಮಾಡಿ. ಇದರೊಂದಿಗೆ ವ್ಯಾಯಾಮವು ದೇಹದಲ್ಲಿ ಎಂಡೋರ್ಫಿನ್ ಹಾರ್ಮೋನ್ ಬಿಡುಗಡೆಗೆ ಕಾರಣವಾಗಿ, ಮೂಡನ್ನು ಉತ್ತಮಗೊಳಿಸುತ್ತದೆ.

ಮೆಗ್ನೀಶಿಯಂ

ಮೆಗ್ನೀಶಿಯಂ ಪ್ರೊಸ್ಟಾಗ್ಲ್ಯಾಂಡಿನ್ಸ್ ಮಟ್ಟ ಕಡಿಮೆ ಮಾಡಿ, ಮುಟ್ಟಿನ ಹೊಟ್ಟೆ ನೋವು ತಗ್ಗಿಸುತ್ತದೆ. ಮಹಿಳೆಯು ಮುಟ್ಟಿನ ದಿನಗಳಲ್ಲಿ 300 ಎಂಜಿಯಷ್ಟು ಮೆಗ್ನೀಶಿಯಂ ಬಿಸ್‌ಗ್ಲೈಸಿನೇಟ್ ಸೇವಿಸಬೇಕು. ಆಹಾರದ ಮೂಲಕವಾದರೂ ಸರಿ. ಬಾಳೆಹಣ್ಣು, ಬಾದಾಮಿ, ಅವಕಾಡೋ, ಜೀರಿಗೆ, ಪುದೀನಾ, ಪಾಲಕ್, ಬ್ರೊಕೋಲಿ, ಕಲ್ಲಂಗಡಿ ಬೀಜ ಇವುಗಳಲ್ಲಿ ಮೆಗ್ನೀಶಿಯಂ ಹೇರಳವಾಗಿರುತ್ತದೆ. 

ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

ಡಯಟ್

ಮುಟ್ಟಿನ ಸಂದರ್ಭದಲ್ಲಿ ಪಿಜ್ಜಾ, ಬರ್ಗರ್, ಚಾಕೋಲೇಟ್, ಐಸ್‌ಕ್ರೀಂ ತಿನ್ನುತ್ತಾ ಕುಳಿತುಕೊಳ್ಳೋಣ ಎನಿಸಬಹುದು. ಆದರೆ, ಇದು ನೋವನ್ನು ಇನ್ನಷ್ಟು ಹೆಚ್ಚಿಸಬಹುದೇ ಹೊರತು ಉತ್ತಮ ಡಯಟ್ ಅಲ್ಲ. ಇನ್ನು ಪ್ರೊಸೆಸ್ಡ್ ಹಾಗೂ ಫ್ರೈಡ್ ಫುಡ್‌ನಲ್ಲಿ ಒಮೆಗಾ 6 ಹೆಚ್ಚಿದ್ದು ಇದು ಸ್ಟ್ರಾಂಗ್ ಆದ ಪ್ರೊಸ್ಟಾಗ್ಲ್ಯಾಂಡಿನ್ಸ್ ಹುಟ್ಟುಹಾಕುತ್ತದೆ. ಹೀಗಾಗಿ, ಇದಕ್ಕೆ ವಿರುದ್ಧವಾಗಿ ಒಮೆಗಾ-3 ಫ್ಯಾಟಿ ಆ್ಯಸಿಡ್ಸ್ ಹೆಚ್ಚಿರುವ ಸಾಲ್ಮೋನ್, ವಾಲ್‌ನಟ್ಸ್, ಫ್ಲ್ಯಾಕ್ಸ್‌ಸೀಡ್ಸ್‌ಗಳನ್ನು ಹೆಚ್ಚು ಸೇವಿಸಿ. ಇದು ನೋವು ಶಮನ ಮಾಡುತ್ತದೆ. ಅಲ್ಲದೆ, ಮುಟ್ಟಿಗೂ ಎರಡು ವಾರಗಳ ಮುಂಚಿನಿಂದಲೇ ಫೈಬರ್ ಹೆಚ್ಚಿರುವ ಆಹಾರ ಸೇವಿಸುವುದು ಕೂಡಾ ಕೆಲಸಕ್ಕೆ ಬರುತ್ತದೆ.