ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದ ನೀಲಿಕಣ್ಣಿನ ಚಾಯ್‌ವಾಲಾ!
ನಾಲ್ಕು ವರ್ಷದ ಹಿಂದೆ ಇಸ್ಲಾಮಾಬಾದ್‌ನ ನೀಲಿ ಕಣ್ಣಿನ ಚಾಯ್‌ವಾಲಾ ಹುಡುಗನೊಬ್ಬ ಟ್ವಿಟ್ಟರ್‌ನಲ್ಲಿ ಇದ್ದಕ್ಕಿದ್ದಂತೆ ಫೇಮಸ್ ಆಗಿದ್ದ. ಈಗ ಅವನೇನಾಗಿದ್ದಾನೆ ಗೊತ್ತಾ?
ನಾಲ್ಕು ವರ್ಷಗಳ ಹಿಂದೆ, ಅಂದರೆ ೨೦೧೬ರಲ್ಲಿ ಇದ್ದಕ್ಕಿದ್ದಂತೆ ಇಸ್ಲಾಮಾಬಾದ್‌ನ ಬೀದಿಗಳಲ್ಲಿ ಚಾಯ್ ಮಾಡಿ ಮಾರುತ್ತಿದ್ದ ಹುಡುಗನೊಬ್ಬ ಸುದ್ದಿಯಾದ. ಅವನೇನೂ ಮಾಡಿರಲಿಲ್ಲ. ಚಾಯ್ ಮಾಡುತ್ತಿದ್ದ ಈ ಹುಡುಗನ ಫೋಟೋವನ್ನು ಸ್ಥಳೀಯ ಫೋಟೋಗ್ರಾಫರನೊಬ್ಬ ಕ್ಲಿಕ್ಕಿಸಿ ಅದನ್ನು ಸ್ಥಳೀಯ ಪತ್ರಿಕೆ ಮತ್ತು ಟ್ವಿಟ್ಟರ್‌ಗಳಲ್ಲಿ ಹಾಕಿದ್ದ. ಇದನ್ನು ಅಂತಾರಾಷ್ಟ್ರೀಯ ಮಾಧ್ಯಮಗಳೂ ಗುರುತಿಸಿದವು. ಫೋಟೋ ಇದ್ದಕ್ಕಿದ್ದಂತೆ ವೈರಲ್ ಆಗಿಹೋಯಿತು. ಅದಕ್ಕೆ ಕಾರಣ ಆ ಯುವಕನ ಸ್ಮಾರ್ಟ್ ಗುಡ್ ಲುಕಿಂಗ್ ಮತ್ತು ನೀಲಿ ಕಣ್ಣುಗಳು. ಪಾಕಿಸ್ತಾನದ ಪಶ್ತೂನ್ ಪ್ರಾಂತ್ಯದ ಹುಡುಗರು ಹೀಗೆ ಇರುವುದು ಸಹಜ. ಆದರೆ ಯಾಕೋ ಏನೋ, ಈ ಹುಡುಗನ ಲುಕ್ ಮಾತ್ರ ಎಲ್ಲರನ್ನೂ ಸೆಳೆಯಿತು.
ಆ ನಂತರ ಅವನಿಗೆ ಏನಾಯಿತು ಅನ್ನುವುದನ್ನು ಯಾವ ಮಾಧ್ಯಮಗಳೂ ಫಾಲೋಅಪ್ ಮಾಡಲಿಲ್ಲ.
ಇದೀಗ ಅವನ ಬಗ್ಗೆ ಒಳ್ಳೆಯ ಸುದ್ದಿ ಬಂದಿದೆ. ಅವನ ಹೆಸರು ಅರ್ಶದ್ ಖಾನ್. ಇಸ್ಲಾಮಾಬಾದ್‌ನ ಸಂಡೇ ಬಜಾರ್‌ನಲ್ಲಿ ಚಾಯ್ ಮಾರುತ್ತಿದ್ದ ಅರ್ಶದ್‌ನ ದೆಸೆಯೇ ಕಳೆದ ನಾಲ್ಕು ವರ್ಷಗಳಲ್ಲಿ ತಿರುಗಿಬಿಟ್ಟಿದೆ. ಅವನ ಫೋಟೋ ವೈರಲ್ ಆದದ್ದೇ ತಡ, ಅವನನ್ನು ಮಾಡೆಲಿಂಗ್ ಇಂಡಸ್ಟ್ರಿಯ ಕೆಲವರು ಹುಡುಕಿಕೊಂಡೇ ಬಂದರು. ಅವನಿಗೆ ಇದ್ದಕ್ಕಿದ್ದಂತೆ ಬಂದ ಜನಪ್ರಿಯತೆಯನ್ನೂ ಮತ್ತು ಅವನ ಸ್ಮಾರ್ಟ್ ಲುಕ್ಕನ್ನೂ ಬಂಡವಾಳವಾಗಿಸಿಕೊಂಡು, ಅವನಿಗೆ ಕೆಲವು ಮಾಡೆಲಿಂಗ್ ಆಫರ್‌ಗಳನ್ನು ನೀಡಿದರು. ಆತನೂ ಬಂದ ಅವಕಾಶಗಳನ್ನು ಬಿಡಲಿಲ್ಲ. ಪಾಕಿಸ್ತಾನದ ಫಿಲಂ ಇಂಡಸ್ಟ್ರಿಯಲ್ಲಿ ಕೂಡ ಕೆಲವು ಸಣ್ಣಪುಟ್ಟ ಫಿಲಂಗಳಲ್ಲೂ ಆತ ಸಣ್ಣ ರೋಲ್‌ಗಳಲ್ಲಿ ನಟಿಸಿದ. ಕೆಲವು ಕಿರುತೆರೆ ಸೀರಿಯಲ್‌ಗಳಲ್ಲೂ ಕಾಣಿಸಿಕೊಂಡ.
ಇದೀಗ ಆತನ ಇಸ್ಲಾಮಾಬಾದ್‌ನ ತಾನು ಚಾಯ್ ಮಾರುತ್ತಿದ್ದ ಪ್ರದೇಶದಲ್ಲಿಯೇ ಚಾಯ್ ಕೆಫೆಯೊಂದನ್ನು ಆರಂಭಿಸಿದ್ದಾನೆ. ಅದಕ್ಕೆ ಕೆಫೆ ಚಾಯ್‌ವಾಲಾ ರೂಫ್‌ಟಾಪ್ ಎಂದು ಹೆಸರಿಟ್ಟಿದ್ದಾನೆ. ಕೆಫೆಗೆ ಅರ್ಶದ್ ಖಾನ್ ಎಂದು ಹೆಸರಿಡಬಹುದಲ್ಲಾ ಎಂದು ಯಾರೋ ಕೇಳಿದಾಗ, ತನ್ನ ಹೆಸರು ಅಗತ್ಯವಿಲ್ಲ ನಾನು ಮೊದಲು ಚಾಯ್‌ವಾಲಾ ಎಂದೇ ಫೇಮಸ್ ಆದವನು. ಅದೇ ನನ್ನ ಐಡೆಂಟಿಟಿ ಎಂದ.
ಕುರೂಪಿ ಎಂದಿದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳೋಲ್ಲ ಶಾರುಖ್ ಮಗಳು! ...
ಈತ ಕೆಫೆ ತುಂಬಾ ಮುದ್ದಾಗಿದೆ. ಉರ್ದುವಿನ ಸಾಂಸ್ಕೃತಿಕ ಐಡೆಂಟಿಟಿಯೆಲ್ಲ ಈ ಕೆಫೆಯೊಳಗಿದೆ. ಬಳ್ಳಿ ಹೂಗಳ ವಿನ್ಯಾಸ, ಪಾರಂಪರಿಕ ಜಾನಪದ ಸಂಸ್ಕೃತಿ ಸ್ಪರ್ಶ ಈತನ ಕೆಫೆಯಲ್ಲಿ ಹಾಸುಹೊಕ್ಕಾಗಿದೆ. ತನ್ನ ಮುಂದಿನ ದಿನಗಳನ್ನು ಈ ಕೆಫೆಗೆ ಮೀಸಲಾಗಿಡಲು ಅರ್ಶದ್ ನಿರ್ಧರಿಸಿದ್ದಾನೆ. ತನ್ನ ಸಮಯವನ್ನು ಕಿರುತೆರೆ ನಟನೆ ಹಾಗೂ ಕೆಫೆಯ ಮಧ್ಯೆ ಮ್ಯಾನೇಜ್ ಮಾಡುತ್ತಾನಂತೆ.
ಐಶ್ವರ್ಯಾ ರೈ, ಸುಷ್ಮಿತಾ ಸೇನ್ ಯಾರು ಹೆಚ್ಚು ಶ್ರೀಮಂತರು? ...
ತನ್ನ ಫೋಟೋ ವೈರಲ್ ಆದ ಕಾಲಕ್ಕೆ ಈತ ಹೆಚ್ಚು ಓದಿಕೊಂಡವನೂ ಆಗಿರಲಿಲ್ಲ. ಡಿಗ್ರಿಯೂ ಆಗಿರಲಿಲ್ಲ. ಮನೆಯಲ್ಲೂ ಬಡತನವಿತ್ತು. ಆದರೆ ಈಗ ಅರ್ಶದ್ ಬೆಳೆದಿದ್ದಾನೆ, ತನಗೆ ಇದ್ದಕ್ಕಿದ್ದಂತೆ ಬಂದ ಜನಪ್ರಿಯತೆಯನ್ನೇ ಬಂಡವಾಳ ಆಗಿಸಿಕೊಂಡು ಸರಿಯಾದ ರೀತಿಯಲ್ಲಿ ಬೆಳೆದಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಈಗ ಆತ ಉರ್ದು, ಹಿಂದಿ, ಇಂಗ್ಲಿಷ್‌ಗಳನ್ನು ಚೆನ್ನಾಗಿ ಮಾತನಾಡಬಲ್ಲ. ಚಿತ್ರರಂಗದ, ಕಿರುತೆರೆಯ ಕಾಂಟ್ಯಾಕ್ಟ್‌ಗಳನ್ನೂ ನಟನೆಯನ್ನೂ ಚೆನ್ನಾಗಿ ನಿಭಾಯಿಸಬಲ್ಲ.
ಸಿಂಪಲ್ ಚಾಯಾ್‌ವಾಲಾ ಆಗಿದ್ದವನೊಬ್ಬ ಹೀಗೆ ಯಶಸ್ವಿ ಎಂಟರ್‌ಪ್ರೇನರ್ ಆಗಿರುವುದು ಎಲ್ಲರ ಹುಬ್ಬೇರಿಸಿದೆ. ಅರ್ಶದ್ ಖಾನ್ ಮತ್ತೊಮ್ಮೆ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾನೆ. ಆತನ ಹೊಸ ಸಾಹಸಕ್ಕೆ ಶುಭವಾಗಲಿ.
ಬಸ್ಸಿನ ಖರ್ಚಿಗೆ 500 ರೂಪಾಯಿ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಉದ್ಯಮಿ ...