ನಿನ್ನ ಚರ್ಮದ ಬಣ್ಣ ತುಂಬಾ ಡಾರ್ಕ್, ಲೈಟ್ ಆಫ್‌ ಮಾಡಿದ್ರೆ ನೀನು ಕಾಣೋದೇ ಇಲ್ಲ- ಇವೇ ಮುಂತಾದ ಟೀಕೆಗಳನ್ನು ಕಾಮೆಂಟ್‌ಗಳನ್ನು ಆಕೆ ಸಾಕಷ್ಟು ಕಂಡಿದ್ದಾಳೆ, ಎದುರಿಸಿದ್ದಾಳೆ. ಅಂಥದ್ದಕ್ಕೆಲ್ಲ ಸರಿಯಾಗಿ ಉತ್ತರಿಸುವ ಛಾತಿಯೂ ತನ್ನಲ್ಲಿದೆ ಎಂಬುದನ್ನು ಆಕೆ ಒಂದು ಪ್ರತ್ಯುತ್ತರದ ಮೂಲಕ ಸಾಬೀತುಪಡಿಸಿದ್ದಾಳೆ.

ಇತ್ತೀಚೆಗೆ ಶಾರುಕ್‌ ಖಾನ್‌ ಮಗಳು ಸುಹಾನಾ ಖಾನ್‌, ತನಗೆ ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಮತ್ತಿತರ ಕಡೆ ಬಂದ ಕಮೆಂಟ್, ಮೆಸೇಜ್‌ಗಳನ್ನು ಹಂಚಿಕೊಂಡಿದ್ದಳು. ಅದರಲ್ಲಿ ಆಕೆಯನ್ನು ಗೇಲಿ ಮಾಡಲಾಗಿತ್ತು. ನೀನು ನೋಡೋಕೆ ಚೆನ್ನಾಗಿಲ್ಲ, ನೀನು ಕುರೂಪಿ, ನೀನು ಎಷ್ಟೇ ಮೇಕಪ್‌ ಮಾಡಿಕೊಂಡರೂ ಚೆನ್ನಾಗಿ ಕಾಣಿಸಲಾರೆ, ನಿನ್ನ ಚರ್ಮದ ಬಣ್ಣ ತುಂಬಾ ಡಾರ್ಕ್, ಲೈಟ್ ಆಫ್‌ ಮಾಡಿದ್ರೆ ನೀನು ಕಾಣೋದೇ ಇಲ್ಲ- ಇವೇ ಮುಂತಾದ ಟೀಕೆಗಳನ್ನು ಕಾಮೆಂಟ್‌ಗಳನ್ನು ಆಕೆ ಸಾಕಷ್ಟು ಕಂಡಿದ್ದಾಳೆ, ಎದುರಿಸಿದ್ದಾಳೆ. ಅಂಥದ್ದಕ್ಕೆಲ್ಲ ಸರಿಯಾಗಿ ಉತ್ತರಿಸುವ ಛಾತಿಯೂ ತನ್ನಲ್ಲಿದೆ ಎಂಬುದನ್ನು ಆಕೆ ಒಂದು ಪ್ರತ್ಯುತ್ತರದ ಮೂಲಕ ಸಾಬೀತುಪಡಿಸಿದ್ದಾಳೆ.

ಆಕೆ ಕೊಟ್ಟ ಉತ್ತರ ಹೀಗಿದೆ:
ಎಷ್ಟೋ ಘಟನೆಗಳು ನಮ್ಮ ಸುತ್ತ ನಡೆಯುತ್ತಿವೆ. ಕೆಲವಕ್ಕಾದರೂ ನಾನು ಉತ್ತರ ಕೊಡಲೇಬೇಕಾಗಿದೆ. ಇದು ಬರೀ ನನ್ನ ಬಗ್ಗೆ ಮಾತ್ರ ಅಲ್ಲ. ನನ್ನ ಹಾಗೇ ಇರುವ ಇತರ ಹುಡುಗಿಯರು, ಹುಡುಗರ ಸಂಗತಿ ಕೂಡಾ. ಇವರೆಲ್ಲ ನನ್ನ ಹಾಗೇ ಅನೇಕ ಕಾರಣಗಳಿಂದಾಗಿ, ತಮಗೆ ಯಾವ ರೀತಿಯಲ್ಲೂ ಸಂಬಂಧ ಪಡದ ಕಾರಣಗಳಿಂದಾಗಿ ನೋವು, ಕೀಳರಿಮೆ ಅನುಭವಿಸಿದವರು. ಇಲ್ಲಿವೆ ನೋಡಿ, ನನ್ನ ಬಗ್ಗೆ, ನನ್ನ ಹೊರನೋಟದ ಬಂದ ಅತ್ಯಂತ ಕೆಟ್ಟ ಕಮೆಂಟ್‌ಗಳಲ್ಲಿ ಕೆಲವು. ನನ್ನ ಹೊರರೂಪವನ್ನು ನೋಡಿ, ನಾಣು ಅತ್ಯಂತ ಕುರೂಪಿ, ಕೊಳಕಿ ಅಂತ ಹೇಳಿದವರಿದ್ದಾರೆ. ಮತ್ತೆ ಇವರೆಲ್ಲ ಪ್ರೌಢರು ಅನ್ನಿಸಿಕೊಳ್ಳುವ ವಯಸ್ಸಿನವರು. ನಾನು ಕೇವಲ ೧೨ ವರ್ಷ ವಯಸ್ಸಿನವಳಾಗಿದ್ದಾಗಿನಿಂದಲೂ ಇಂಥವನ್ನು ಕೇಳುತ್ತ ಬಂದಿದ್ದೀನಿ. 

ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ನಟಿ ಕಾಜಲ್ ಅಗರ್ವಾಲ್

ಸುಹಾನಾ ಖಾನ್‌ಳ ತಾಯಿ, ಗೌರಿ ಖಾನ್‌ ಕೂಡ ಇಂಥ ಮಂದಿಗಳಿಗೆ ಸರಿಯಾಗಿಯೇ ತಮ್ಮ ಇನ್‌ಸ್ಗ್ರಾಮ್ ಅಕೌಂಟ್‌ನಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ತಮ್ಮ ಮಗಳ ಬೆಂಬಲಕ್ಕೆ ಬಂದಿರುವ ಆಕೆ ತನ್ನ ಆತ್ಮವಿಶ್ವಾಸವಿರುವ ಮುಖದ ಒಂದು ಫೋಟೋ ಹಾಕಿ ಬರೆದಿರುವುದು ಹೀಗೆ:

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು? 

ನಾನು ಒಬ್ಬಳು ಹೆಣ್ಣು. ನಾನು ಅಲೆಮಾರಿ, ಸಾಧಕಿ, ಕನಸುಗಾರ್ತಿ ಎಲ್ಲವೂ ಆಗಿದ್ದೇನೆ. ಇದರಲ್ಲಿ ನೀವು ನನ್ನ ಒಟ್ಟಾರೆ ಸ್ವರೂಪದ ಒಂದು ಭಾಗವನ್ನು ಮಾತ್ರ ಕಾಣುತ್ತಿದ್ದೀರಿ. ಈ ನನ್ನ ಈ ರೂಪವೆಲ್ಲ ನನ್ನ ಈ ಪಾತ್ರಗಳನ್ನು ಅವಲಂಬಿಸಿದ್ದು, ಆದರೆ ಇದೇ ನನ್ನ ಮೂಲ ಬೇರುಗಳಲ್ಲ. ನೀವು ನೋಡಿರದ ಎಷ್ಟೋ ಅಂಶಗಳು ನನ್ನನ್ನು ಪೂರ್ಣಗೊಳಿಸುತ್ತವೆ. ಅಲ್ಲಿಂದ ನಾನು ನನ್ನ ಶಕ್ತಿಯನ್ನು ಪಡೆದುಕೊಳ್ಳುತ್ತೇನೆ. ತುಂಬಿಕೊಳ್ಳುತ್ತೇನೆ. ಇಲ್ಲಿ ನೀಡಿರುವ ನನ್ನ ಫೋಟೋ ನನ್ನ ಮೂಲಶಕ್ತಿಯಲ್ಲಿ ನೆಲೆಯಾಗಿರುವಂಥದ್ದು. ನೀವೂ ನಿಮ್ಮಲ್ಲಿ ಸ್ಫೂರ್ತಿ ತುಂಬುವ ಸ್ತ್ರೀಯರ ಚಿತ್ರವನ್ನು ಹಂಚಿಕೊಳ್ಳಿ. ಇದರ ಮೂಲಕ ನಾವೊಂದು ಜಾಗತಿಕ ಶಕ್ತಿಯ ಸರಣಿಯನ್ನೇ ಕಟ್ಟೋಣ.

ಸಂಖ್ಯಾಶಾಸ್ತ್ರ ಕಾರಣದಿಂದ ಶಾರುಖ್‌ ಖಾನ್‌ ಸೋಪ್‌ ಬಳಸಲ್ವಂತೆ!