ದುಬಾರಿ ಎಂಬುದಕ್ಕೆ ಒಬ್ಬೊಬ್ಬರಲ್ಲಿ ಒಂದೊಂದು ವ್ಯಾಖ್ಯಾನ ಸಿಗಬಹುದು. ಕೆಲವರಿಗೆ 60 ಲಕ್ಷದ ಕಾರ್ ಅತಿ ದುಬಾರಿಯದು ಎನಿಸಿದರೆ ಮತ್ತೆ ಕೆಲವರಿಗೆ 16 ಲಕ್ಷದ ಕಾರೇ ದುಬಾರಿ ಎನಿಸಬಹುದು. ಆದರೆ, ಈ ದುಬಾರಿಗಳೂ ಜುಜುಬಿಗಳೆನಿಸುವಂತೆ ಮಾಡುತ್ತೆ ಜಗತ್ತಿನ ಅತಿ ದುಬಾರಿ ವಸ್ತುಗಳು. ಯಾವುವಪ್ಪಾ ಆ ದುಬಾರಿ ವಸ್ತುಗಳು ನೋಡೋಣ ಬನ್ನಿ...
ಸಿನಿಮಾದಲ್ಲಿ ಬಳಸಿದ ವಿಶ್ವದ ಅತಿ ದುಬಾರಿ ಶೂ- 666,000 ಡಾಲರ್‌ಗಳು

 'ದ ವಿಜಾರ್ಡ್ ಆಫ್ ಓಜ್' ಚಿತ್ರದಲ್ಲಿ ಜೂಡಿ ಗಾರ್ಲಾಂಡ್ ಧರಿಸಿದ ರೂಬಿ ಚಪ್ಪಲಿಗಳು ಚಲನಚಿತ್ರದಲ್ಲಿ ಬಳಸಿದ ಅತಿ ಕಾಸ್ಟ್ಲಿ ಚಪ್ಪಲಿಗಳೆಂದು ಹೆಸರಾಗಿವೆ. ಇಷ್ಟೊಂದು ಕಾಸ್ಲ್ಟಿ ಚಪ್ಪಲಿ ಬಳಕೆ ಮಾಡಿದ ಚಿತ್ರ 1939ರಲ್ಲೇ ಬಿಡುಗಡೆಯಾಗಿದ್ದೆಂದರೆ ಅಚ್ಚರಿಯಾಗಬಹುದು! 1998ರಲ್ಲಿ 165,000 ಡಾಲರ್‌ಗಳಿಗೆ ಹರಾಜಾಗಿ ದಾಖಲೆ ಸೃಷ್ಟಿಸಿದ್ದ ಈ ಚಪ್ಪಲಿಗಳು, 2000ನೇ ಇಸವಿಯಲ್ಲಿ ಮತ್ತೊಮ್ಮೆ ಹರಾಜಿಗೆ ಬಿದ್ದಾಗ ತನ್ನದೇ ದಾಖಲೆಯನ್ನು ಮುರಿದು 660,000 ಅಮೆರಿಕನ್ ಡಾಲರ್‌ಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿತು. 

ಫಿಲ್ಮ್ ಕಾಸ್ಟ್ಯೂಮ್- $924,347
ಹ್ಯೂಬರ್ಟ್ ಡಿ ಗಿವೆಂಚಿ ವಿನ್ಯಾಸ ಮಾಡಿದ ಕಪ್ಪನೆಯ ಈ ಕಾಕ್‌ಟೇಲ್ ಡ್ರೆಸ್‌ನ್ನು 1961ರಲ್ಲಿ ಬಿಡುಗಡೆಯಾದ ಬ್ರೇಕ್‌ಫಾಸ್ಟ್ ಚಿತ್ರದಲ್ಲಿ ನಟಿ ಆಡ್ರಿ ಹೆಪ್ಬರ್ನ್ ಧರಿಸಿದ್ದರು. 2006ರಲ್ಲಿ ಲಂಡನ್‌ನಲ್ಲಿ ನಡೆದ ಕ್ರಿಸ್ಟೀಸ್ ಹರಾಜಿನಲ್ಲಿ ಅನಾಮಿಕ ಹರಾಜುದಾರರೊಬ್ಬರು ಇದನ್ನು ಬರೋಬ್ಬರಿ $924,347 ಕೊಟ್ಟು ಖರೀದಿಸಿದರು. ಈ ಡ್ರೆಸ್ ಹಲವಾರು ತಲೆಮಾರುಗಳು ಕಳೆದರೂ ಫಿಲ್ಮ್ ಹಾಗೂ ಫ್ಯಾಶನ್ ಲವರ್ಸ್‌ನ ಪ್ರೀತಿ ಗಳಿಸುತ್ತಲೇ ಇದೆ. 

ದುಬಾರಿ ವಾಚ್- 55 ದಶಲಕ್ಷ ಡಾಲರ್
110 ಕ್ಯಾರಟ್ ಡೈಮಂಡ್‌ಗಳನ್ನು ಹೊಂದಿದ, ಹಲವಾರು ಬಣ್ಣಬಣ್ಣಗಳ ಹರಳುಗಳುಳ್ಳ ದಿ ಗ್ರಾಪ್ ಡೈಮಂಡ್ಸ್ ಹ್ಯಾಲುಸಿನೇಶನ್ ವಾಚ್‌ನ್ನು ಬಹುತೇಕರು ವಾಚ್‌ಗಿಂತ ಹೆಚ್ಚಾಗಿ ಕಲಾಕೃತಿಯಂತೆಯೇ ನೋಡುತ್ತಾರೆ. 

ಯಾಚ್- 240 ದಶಲಕ್ಷ ಡಾಲರ್
ಅತಿ ದುಬಾರಿ ಯಾಚ್ ಎಂಬ ಹೆಗ್ಗಳಿಕೆ ಪಡೆದ ಪ್ರಾಜೆಕ್ಟ್ ಇನ್ಫಿನಿಟಿ- 104 ಮೀಟರ್‌ನ ಈ ಲಕ್ಷುರಿ ಯಾಚ್ ಸಧ್ಯ ಮಾರಾಟಕ್ಕಿದೆ. ಇದರಲ್ಲಿ 16 ಗೆಸ್ಟ್‌ರೂಂಗಳು, 36 ನೌಕರರ ಕೋಣೆಗಳು, ಹೆಲಿಡೆಕ್, ಗ್ಲಾಸ್ ಎಲಿವೇಟರ್, ಒಳಾಂಗಣ ಹಾಗೂ ಹೊರಾಂಗಣ ಸಿನಿಮಾ, ಬೀಚ್ ಕ್ಲಬ್ ಮುಂತಾದ ಫೀಚರ್‌ಗಳಿವೆ.

ದುಬಾರಿ ಪ್ರೈವೇಟ್ ಜೆಟ್- 300 ದಶಲಕ್ಷ ಡಾಲರ್
ದ ಡ್ರೀಮ್ ಜೆಟ್ ಹೆಸರಿನ ಈ ಪ್ರೈವೇಟ್ ಜೆಟ್ ಬೆಲೆ 300 ದಶಲಕ್ಷ ಡಾಲರ್‌ಗಳಾಗಿದ್ದು, ಇದರ ಸೇವೆ ತೆಗೆದುಕೊಳ್ಳುವವರು ಗಂಟೆಗೆ 70,000 ಡಾಲರ್ ನೀಡಬೇಕಾಗುತ್ತದೆ. 220 ಚದರ ಅಡಿಯ ಈ ಲಕ್ಷುರಿ ಜೆಟ್‌ನಲ್ಲಿ 40 ಪ್ರಯಾಣಿಕರು 20 ಗಂಟೆಗಳ ಕಾಲ ಯಾವುದೇ ಸ್ಟಾಪ್ ಇಲ್ಲದೆ ಪ್ರಯಾಣಿಸಬಹುದಾಗಿದೆ. ಪ್ರೈವೇಟ್ ಡೈನಿಂಗ್ ಏರಿಯಾಗಳು, ಮಾಸ್ಟರ್ ಬೆಡ್‌ರೂಂ, ಬಾತ್‌ರೂಂ, ಡ್ರೆಸ್ಸಿಂಗ್ ರೂಂ, ಟಿವಿ ಏರಿಯಾ ಹಾಗೂ ಲಾಂಜ್ ಇವೆ. 

ದುಬಾರಿ ಕಸ್ಟಮ್ ಫೋನ್- 48.5 ದಶಲಕ್ಷ ಡಾಲರ್
ಫಾಲ್ಕಾನ್ ಸೂಪರ್‌ನೋವಾ ಐಫೋನ್ 6 ಪಿಂಕ್ ಡೈಮಂಡ್ 4.85 ಕೋಟಿ ಡಾಲರ್‌ಗಳು! ಅಂದ ಹಾಗೆ ಇಂಥ ಕಾಸ್ಟ್ಲಿ ಫೋನ್ ಓನರ್ ಯಾರು ಗೊತ್ತಾ? ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ. 24 ಕ್ಯಾರಟ್ ಗೋಲ್ಡ್‌ನಿಂದ ಮಾಡಿದ ಈ ಫೋನ್ ಪ್ಲ್ಯಾಟಿನಮ್ ಕೋಟಿಂಗ್ ಹಾಗೂ ಪಿಂಕ್ ಡೈಮಂಡ್ ಹೊಂದಿದೆ. 

ದುಬಾರಿ ಟೆಲಿಸ್ಕೋಪ್- 2.1 ಶತಕೋಟಿ ಡಾಲರ್
ಹಬಲ್ ಸ್ಪೇಸ್ ಟೆಲಿಸ್ಕೋಪ್ ಜಗತ್ತಿನ ಅತಿ ದುಬಾರಿ ಟೆಲಿಸ್ಕೋಪ್ ಎಂದು ಗಿನ್ನೆಸ್ ದಾಖಲೆ ಪುಸ್ತಕ ಸೇರಿದೆ. 1990ರಲ್ಲಿ ಲಾಂಚ್ ಆದಂದಿನಿಂದಲೂ ಹಲವಾರು ಪ್ರಮುಖ ಅನ್ವೇಷಣೆಗಳಿಗೆ ಕಾರಣವಾಗಿದೆ. 

ದುಬಾರಿ ಲಿಮಿಟೆಡ್ ಎಡಿಶನ್ ಕಾರ್- 13 ದಶಲಕ್ಷ ಡಾಲರ್
ಅಲ್ಟ್ರಾ ಲಕ್ಷುರಿಯಸ್ ಆಗಿರುವ ರೋಲ್ಸ್ ರಾಯ್ಸ್ ಸ್ವೆಪ್‌ಟೇಲ್ ಯಾರ ಒಡೆತನದಲ್ಲಿದೆ ಎಂಬುದು ಗುಟ್ಟಾಗಿಯೇ ಇದೆ. ಇದರಲ್ಲಿ ಪನೋರಮಾ ಸನ್‌ಪ್ರೂಫ್, ಶಾಂಪೇನ್ ಡಿಸ್ಪೆನ್ಸರ್, ಲ್ಯಾಪ್‌ಟಾಪ್‌ಗೆ ಲೆದರ್ ಕೇಸಿಂಗ್ ಮುಂತಾದ ಫೀಚರ್‌ಗಳು ಇದರಲ್ಲಿವೆ.  

ಅನುಷ್ಕಾ ಶೆಟ್ಟಿ ಬಳಿ ಇರೋ ಈ ವಸ್ತುಗಳು ಕೋಟಿ ಬಾಳುತ್ತೆ

ದುಬಾರಿ ಮಾನವನಿರ್ಮಿತ ವಸ್ತು- 19.6 ಶತಕೋಟಿ ಡಾಲರ್
19.6 ಶತಕೋಟಿ ಡಾಲರ್ ಎಂಬುದು ಈಗಿನ ಮಾರುಕಟ್ಟೆಯಲ್ಲಿ ಬಹಳ ದೊಡ್ಡ ಮೊತ್ತ ಎಂದು ನೀವಂದುಕೊಳ್ಳುತ್ತಿದ್ದರೆ, ಪರಾನಾ ನದಿಗೆ ಕಟ್ಟಲಾಗಿರುವ ದ ಇಟೈಪು ಹೈಡ್ರೋಎಲೆಕ್ಟ್ರಿಕ್ ಡ್ಯಾಮ್ 1984ರಲ್ಲೇ ಈ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಇನ್ನೂ ಕೂಡಾ ಇದರ ದಾಖಲೆ ಮುರಿವ ಧೈರ್ಯ ಬೇರಾವ ಪ್ರಾಜೆಕ್ಟ್ಗಲು ತೋರುತ್ತಿಲ್ಲ. 

ಅತಿ ದುಬಾರಿ ಹೆಡ್‌ಫೋನ್ಸ್- $50,000
ಸೆನ್ಹೀಸರ್ ಕಂಪನಿಯ ಎಚ್ಇ1 ಹೆಡ್‌ಫೋನ್ಸ್‌ನ್ನು 6000 ಕಾಂಪೋನೆಂಟ್‌ಗಳಿಂದ ತಯಾರಿಸಲಾಗಿದೆ. ಮಾರ್ಬಲ್ ಸ್ಟ್ಯಾಂಡ್, ವೇಪರೈಜ್ಡ್ ಚಿನ್ನದಿಂದ ಮಾಡಿದ ಸೆರಾಮಿಕ್ ಎಲೆಕ್ಟ್ರೋಡ್ಸ್, ಕ್ವಾರ್ಟ್ ಗ್ಲಾಸ್ ವ್ಯಾಕ್ಯೂಮ್ ಟ್ಯೂಬ್ ಹಾಗೂ ಸರಿಸಮವಿಲ್ಲದ ಸೌಂಡಿಂಗ್ ವ್ಯವಸ್ಥೆ ಇದರಲ್ಲಿದೆ.

ಐಶ್ವರ್ಯಾ ರೈ ಬಳಿ ಇರೋ ದುಬಾರಿ ವಸ್ತುಗಳಿವು

ಅತಿ ದುಬಾರಿ ಖಾಸಗಿ ಮನೆ- 2 ಶತಕೋಟಿ ಡಾಲರ್
ಜಗತ್ತಿನ ಅತಿ ದುಬಾರಿ ಮನೆ ಮುಖೇಶ್ ಅಂಬಾನಿಯ ಆ್ಯಂಟಾಲಿಯಾ. ಇದು ಮುಂಬೈನಲ್ಲಿದೆ.