ಫೇಸ್‌ಬುಕ್‌ನಲ್ಲಾದರೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಕೂಡಲೇ, ಅವರು ಅದನ್ನು ಅಕ್ಸೆಪ್ಟ್ ಮಾಡಿಕೊಂಡ ಕೂಡಲೇ ಆತ್ಮೀಯರಾಗದೇ ಹೋದರೂ ಫ್ರೆಂಡ್ಸ್ ಆಗಿ ಬಿಡುತ್ತೇವೆ. ನಂತರ ಚಿಟ್, ಚಾಟ್ ನಡೆದು ಆ ಸ್ನೇಹ, ಪ್ರೇಮವಾಗಿಯೋ, ಇಲ್ಲ ಇನ್ನೇನೋ ಆಗಿ ತಿರುಗುವ ಸಾಧ್ಯತೆ ಇರುತ್ತದೆ. ಆದರೆ, ಫೇಸ್‌ಬುಕ್ ಇಲ್ಲದ ಬದುಕಿನಲ್ಲಿ ಒಬ್ಬರು, ಮತ್ತೊಬ್ಬರಿಗೆ ಫ್ರೆಂಡ್ಸ್ ಆಗುವುದಾದರೆ? 

ಮೊದಲ ಭೇಟಿಯಲ್ಲಿಯೇ ಒಬ್ಬರನ್ನು ಅರ್ಥ ಮಾಡಿಕೊಳ್ಳುವುದು, ಅವರ ವ್ಯಕ್ತಿತ್ವವನ್ನು ಅಳೆಯುವುದು ಕಷ್ಟ. ಅಂಥದ್ರಲ್ಲಿ ಬೆಸ್ಟ್ ಫ್ರೆಂಡ್ ಮಾಡಿಕೊಳ್ಳುವುದು ಸಾಧ್ಯವೇ? ಅಷ್ಟಕ್ಕೂ ಒಬ್ಬರನ್ನು ಫ್ರೆಂಡ್ ಅಥವಾ ಬೆಸ್ಟ್ ಫ್ರೆಂಡ್ ಮಾಡಿಕೊಳ್ಳಲು ಎಷ್ಟು ಟೈಂ ಬೇಕು?

ಐಂದ್ರಿತಾಗೆ ಮುಳುವಾಯ್ತು ರಾಗಿಣಿ ಸ್ನೇಹ

ಒಬ್ಬರನ್ನು ಫ್ರೆಂಡ್ ಮಾಡಿಕೊಳ್ಳಲು ಎಷ್ಟು ಸಮಯ ಬೇಕೆಂದು ಕಂಡು ಕೊಳ್ಳಲು ಸಂಶೋಧನೆಯೊಂದನ್ನು ನಡೆಸಲಾಗಿತ್ತು. ಎರಡು ಗುಂಪುಗಳನ್ನಾಗಿ ಮಾಡಿ ಒಂದರಲ್ಲಿ 355 ಮಂದಿ, ಮತ್ತೊಂದರಲ್ಲಿ 112 ಜನರನ್ನು ಇರಿಸಲಾಗಿತ್ತು. ಇಷ್ಟು ಜನರ ನಡುವೆಯೇ ಒಬ್ಬರು, ಮತ್ತೊಬ್ಬರಿಗೆ ಸ್ನೇಹಿತರಾಗಲು, ಆತ್ಮೀಯರಾಗಲು ಎಷ್ಟು ಸಮಯ ತೆಗೆದುಕೊಂಡರೆಂಬುದನ್ನು ಪರೀಕ್ಷಿಸಲಾಯಿತು. ಇಂಟರೆಸ್ಟಿಂಗ್ ರಿಸಲ್ಟ್ ಹೊರಬಿದ್ದಿದೆ. ಜಸ್ಟ್ ಫ್ರೆಂಡ್ ಆಗುವುದಾದರೆ 40-60 ಗಂಟೆಗಳು ಬೇಕಂತೆ. ಫ್ರೆಂಡ್ಲಿ ಆಗಿರಲು 80-100 ಗಂಟೆಗಳು ಬೇಕಂತೆ. ಅತೀವ ಆತ್ಮೀಯರಾಗಬೇಕೆಂದರೆ ಆ್ಯಟ್‌ಲೀಸ್ಟ್ 200 ಗಂಟೆಗಳಾದರೂ ಲವ್ ಆ್ಯಟ್ ಫಸ್ಟ್ ಸೈಟ್‌ನಂತೆ, ಫಸ್ಟ್‌ಸೈಟ್‌ನಲ್ಲಿಯೇ ಒಬ್ಬರು ಮತ್ತೊಬ್ಬರಿಗೆ ಬರೀ ಫ್ರೆಂಡ್ಸ್ ಆಗುವುದು ಸಾಧ್ಯವೇ ಇಲ್ಲವಂತೆ.

ಗೆಳತಿ ಜೊತೆ ತಮ್ಮನ ಸಂಬಂಧ: ಹೇಗೆ ಸಹಿಸಲಿ

ಆದರೆ, ಮತ್ತೊಂದು ಇಂಟರೆಸ್ಟಿಂಗ್ ಫ್ಯಾಕ್ಟ್ ಗೊತ್ತಾ? ಯುವಕರು ಫ್ರೆಂಡ್ಸ್ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲವಂತೆ. ಸದಾ ಫ್ರೆಂಡ್ಸ್ ಮಧ್ಯೆಯೇ ಇರುವ ಇವರು ಯಾರನ್ನಾದರೂ ಫ್ರೆಂಡ್ ಮಾಡಿಕೊಳ್ಳುತ್ತಾರಂತೆ. 

ಭಾವನೆಗಳನ್ನು ಹಂಚಿಕೊಳ್ಳಲು, ಹೃದಯವನ್ನು ತೆರೆದುಕೊಳ್ಳಲು ಹಾಗೂ ಕಷ್ಟ ಹಂಚಿ ಕೊಳ್ಳಲು ಕಂಫರ್ಟ್ ನೀಡುವಂಥ ಫ್ರೆಂಡ್ಸ್ ಮಾಡಿಕೊಳ್ಳುವುದೆಂದರೆ ಅಷ್ಟು ಸುಲಭವಲ್ಲ!