Asianet Suvarna News Asianet Suvarna News

ಪಿರಿಯಡ್ಸ್ ಬಗ್ಗೆ ಹೆಣ್ಣಿಗಿರಲಿ ಹೆಮ್ಮೆ...

ಪಿರಿಯಡ್ಸ್ ಹೆಣ್ಣಿನ ಜೀವನದ ಅವಿಭಾಜ್ಯ ಅಂಗ. ನೈಸರ್ಗಿಕ ಕೊಡುಗೆಯಾದ ಈ ಬಗ್ಗೆ ಹೆಮ್ಮೆಗಿಂತ ಹೆಣ್ಣು ಶಾಪವೆಂದು ಪರಿಗಣಿಸುವುದೇ ಹೆಚ್ಚು. ಪಿರಿಯಡ್ಸ್ ಅನ್ನೂ ಖುಷಿಯಾಗಿ ಸ್ವೀಕರಿಸಲು ಹೆಣ್ಣಿಗೆ ಈ ಬಗ್ಗೆ ತಾಯಿ ಸೂಕ್ಷ್ಮ ಮಾಹಿತಿ ಕೊಟ್ಟಿರಬೇಕು. ಏನು ಹೇಳಿದ್ರೆ ಬೆಸ್ಟ್?

Talk to your daughters about periods and puberty
Author
Bengaluru, First Published Oct 3, 2018, 3:32 PM IST
  • Facebook
  • Twitter
  • Whatsapp

ಅರಿವೇ ಇಲ್ಲದ ಹೆಣ್ಣಿಗೆ ಮೊದಲು ಬಟ್ಟೆಯಲ್ಲಿ ರಕ್ತ ಕಂಡಾಗ ಭಯ ಹುಟ್ಟೋದು ಸಹಜ. ಒಂದು ಹಂತಕ್ಕೆ ಬಂದ ಮಕ್ಕಳಿಗಾದರೆ, ವಿವಿಧ ಮಾಧ್ಯಮದಿಂದ ಈ ಬಗ್ಗೆ ಅರಿವು ಮೂಡಿಸಿಕೊಂಡಿರುತ್ತಾರೆ. ಆದರೆ, ಬದಲಾದ ಜೀವನಶೈಲಿಯಿಂದ ಈಗೀಗ ಹೆಣ್ಣು ಮಕ್ಕಳು ಬಹಳ ಬೇಗನೇ ಮೈ ನೆರೆಯುತ್ತಿದ್ದು, ಏನೂ ಗೊತ್ತಿಲ್ಲದ ವಯಸ್ಸಿನಲ್ಲಿಯೇ ತಾಯಿಯಾಗಲು ಸನ್ನದ್ಧರಾಗಿ ಬಿಡುತ್ತಾರೆ.  ಏನೂ ಅರಿಯದ ಮುಗ್ಧ ಮನಸ್ಸು ಘಾಸಿಗೊಳ್ಳದಂತೆ ಪಿರಿಯಡ್ಸ್ ಬಗ್ಗೆ ಹೇಳುವುದು ಎಲ್ಲರ ಅಮ್ಮಂದಿರ ಕರ್ತವ್ಯ. ಅಷ್ಟಕ್ಕೂ ಏನೇನು ಹೇಳಿದರೊಳಿತು?

ಮೊದಲ ಪಿರಿಯಡ್ಸ್ ಲಕ್ಷಣ
ಮೊದಲ ಪಿರಿಯಡ್ ಕಾಣಿಸಿಕೊಳ್ಳುವ ಸ್ವಲ್ಪ ಸಮಯದ ಮೊದಲೇ ದೇಹದಲ್ಲಿ ಬದಲಾವಣೆಯಾಗಲು ಶುರುವಾಗುತ್ತದೆ. ಸ್ತನಗಳ ಗಾತ್ರ ಹಿಗ್ಗುತ್ತದೆ ಹಾಗೂ ಸೂಕ್ಷ್ಮ ಜಾಗಗಳಲ್ಲಿ ಕೂದಲು ಬೆಳೆಯುತ್ತದೆ. ಇದಾಗಿ ಮೂರರಿಂದ ಆರು ತಿಂಗಳೊಳಗೆ ಹುಡುಗಿ ಋತುಮತಿಯಾಗುತ್ತಾಳೆಂದರ್ಥ. 

ಪಿರಿಯಡ್ಸ್‌ನಲ್ಲಿ ಪೀಡಿಸೋ ನೋವಿಗೆ ತುಳಸಿ ಮದ್ದು

ಮಗಳೊಂದಿಗೆ ಮಾತನಾಡಿ 
ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ. ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ಆಕೆಯ ಮನಸ್ಸನ್ನು ಅರಿಯಲು ಯತ್ನಿಸಿ. ಶಾಲೆಯಲ್ಲಿ ಈ ಬಗ್ಗೆ ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡುತ್ತಾರೆಯೇ ಎಂಬುದನ್ನು ಅರಿತುಕೊಳ್ಳಿ. ಇಲ್ಲವಾದರೆ ಆ ಬಗ್ಗೆ ಮಾಹಿತಿ ನೀಡಿ. ಈ ಬಗ್ಗೆ ಮಕ್ಕಳು ಮಾತನಾಡಲು ಹಿಂಜರಿಯಬಹುದು. ಸಂಕೋಚ ಹೋಗಿಸುವಂಥ ವಾತಾವರಣ ಸೃಷ್ಟಿಸುವುದು ನಿಮ್ಮ ಜವಾಬ್ದಾರಿ.

ಈ ವಿಷಯಗಳನ್ನು ಶೇರ್ ಮಾಡಿ
ಋತುಸ್ರಾವದ ಬಗ್ಗೆ, ಅಲ್ಲಲ್ಲಿ ಹುಟ್ಟಿಕೊಳ್ಳುವ ಕೂದಲ ಬಗ್ಗೆ ಹಾಗೂ ಹಾರ್ಮನ್ ಬದಲಾವಣೆ ಹಾಗೂ ಅದರಿಂದ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆ ಬಗ್ಗೆ ಸೂಕ್ಷ್ಮವಾಗಿ ತಿಳಿ ಹೇಳಿ. ಅವರ ಸಂಶಯವನ್ನು ನಿವಾರಿಸಿ.

ಪಿರಿಯಡ್ಸ್ ರಕ್ತ ನೋಡಿ ರೋಗ ಕಂಡು ಕೊಳ್ಳಿ..

ಪ್ಯಾಡ್ ಸಿಗುವಂತಿರಲಿ
ಮಕ್ಕಳ ನೋವು ಮರೆಸುವಂಥ ಮದ್ದುಗಳು, ಸ್ಯಾನಿಟರಿ ಪ್ಯಾಡ್ ಹಾಗೂ ಅವಗಳ ಬಳಕೆ ಬಗ್ಗೆ ಮಕ್ಕಳಿಗೆ ಗೊತ್ತಿರಲಿ. ಅವರಿಗಿಷ್ಟವಾದ ಚಾಕಲೇಟ್ ಹಾಗೂ ಇತರೆ ವಸ್ತುಗಳೂ ಜತೆಯಿರಲಿ. ಏನೋ ಆಗಬಾರದ್ದು ಆಗಿ ಹೋಯಿತು ಎನ್ನೋ ಭಾವದಿಂದ ಮುಗುದೆ ಮುದುಡದಿರಲಿ. 

ಪಾಸಿಟಿವ್ ಆಗಿರಿ
ಪಿರಿಯಡ್ಸ್ ಬಗ್ಗೆ ಆತಂಕ ಮೂಡಿಸುವ ಅಂಶಗಳನ್ನಾಗಲಿ, ಹೆಣ್ಣಿಗೊಂದು ಶಾಪ ಎನ್ನುವ ರೀತಿಯಲ್ಲಿ ಅಪ್ಪಿತಪ್ಪಿಯೂ ಮಾತನಾಡದಿರಿ. ಬದಲಾಗಿ ಇದು ಹೆಣ್ಣಿಗೊಂದು ನೈಸರ್ಗಿಕ ಕೊಡುಗೆ ಎಂಬುವುದು ಮನವರಿಕೆ ಮಾಡಿಕೊಡಿ. ಅವರೂ ಪಿರಿಯಡ್ಸ್ ಅನ್ನು ಎಂಜಾಯ್ ಮಾಡುವಂತ ಮನಸ್ಥಿತಿ ಮೂಡುವಂತೆ ಮಾಡಿ. 

ರಸಜ್ವಾಲೆಯಾದವರು ಎಳ್ಳು ದೀಪ ಹಚ್ಚಬಹುದಾ?

ವೈದ್ಯರನ್ನು ಕಾಣಿ 
ಪುಷ್ಪಮತಿಯಾದ ಆರಂಭದಲ್ಲಿ ಮಕ್ಕಳಿಗೆ ಪಿರಿಯಡ್ಸ್ ಇರೆಗ್ಯುಲರ್ ಆಗೋದು ಕಾಮನ್. ಅದಕ್ಕೇ ಗಾಬರಿ ಬೀಳಬೇಡಿ. ಆದರೆ, ಇತರೆ ಅಸಹಜ ಲಕ್ಷಣಗಳು ಕಂಡು ಬಂದರೆ ಮಾತ್ರ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

Follow Us:
Download App:
  • android
  • ios