ಪಿರಿಯಡ್ಸ್ ಮಹಿಳೆಯರ ಜೀವನದ ಪ್ರಾಕೃತಿಕ ಭಾಗ.. ಆದರೂ ಆ ಸಮಯದಲ್ಲಿ ಉಂಟಾಗುವ ನೋವನ್ನು ತಡೆಯಲು ಮಾತ್ರ ಹಲವರು   ಹೆಣಗಾಡುತ್ತಾರೆ. ಪಿರಿಯಡ್ಸ್‌ ಟೈಮಲ್ಲಿ ಪರಿತಪಿಸಲಾಗದೇ ಪರದಾಡೋ ಪೆಣ್ಣು ವೈದ್ಯರ ಬಳಿ ಹೋಗುವ ಬದಲು, ಮನೆಯಲ್ಲಿಯೇ ಮಾಡಿಕೊಳ್ಳಬಹುದು ಔಷಧಿ. ಇಲ್ಲಿವೆ ಟಿಪ್ಸ್....

ಮತ್ತಷ್ಟು ಮನೆ ಮದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತರಕಾರಿ ಜ್ಯೂಸ್: ಹೆಚ್ಚು ಹೊಟ್ಟೆ ನೋವು ಕಾಣಿಸಿದರೆ ಕ್ಯಾರೆಟ್ ಅಥವಾ ಇತರೆ ಮಿಕ್ಸಡ್ ವೆಜಿಟೇಬಲ್ ಜ್ಯೂಸ್ ಮಾಡಿ ಸೇವಿಸಿ. 
ಅಲೋವೆರಾ: ಅಲೋವೆರಾ ಜ್ಯೂಸನ್ನು ಜೇನಿನ ಜೊತೆ ಬೆರೆಸಿ ಸೇವಿಸಿದರೆ, ಹೊಟ್ಟೆ ನೋವು ಹೇಳ ಹೆಸರಿಲ್ಲದಂತೆ ಓಡುತ್ತೆ. 
ತುಳಸಿ: ಪಿರಿಯಡ್ಸ್ ನೋವು ನಿವಾರಿಸುವಲ್ಲಿ ತುಳಸಿ ಬೆಸ್ಟ್. ಒಂದು ಕಪ್ ಬಿಸಿ ನೀರಿಗೆ ಒಂದು ಮುಷ್ಟಿ ತುಳಸಿ ಎಲೆ ಹಾಕಿ ಕುದಿಸಿ. ಅದನ್ನು ತಣಿಸಿ ಕುಡಿಯುತ್ತಿರಿ. ಇದರಿಂದ ಹೊಟ್ಟೆ ನೋವು ಹೋಗುತ್ತದೆ. 
ಎಳ್ಳು: ಎಳ್ಳನ್ನು ನೀರಿಗೆ ಹಾಕಿ ದಿನಕ್ಕೆರಡು ಬಾರಿ ಸೇವಿಸಿದರೆ, ನೋವು ಕಡಿಮೆಯಾಗುತ್ತದೆ. 
ಶುಂಠಿ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಅದನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಮುಟ್ಟಿನ ನೋವ ನುಂಗಬಹುದು.
ಪಪ್ಪಾಯಿ: ಕಾಯಿ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆ ನೋವಿಗೂ ಮದ್ದು, ಬ್ಲೀಡಿಂಗ್ ಸಹ ಕಡಿಮೆಯಾಗುತ್ತದೆ. 
ಲ್ಯಾವೆಂಡರ್ ಆಯಿಲ್: ಲ್ಯಾವೆಂಡರ್ ಎಣ್ಣೆಯನ್ನು ಹೊಟ್ಟೆ ಸುತ್ತ ಹಚ್ಚುವುದರಿಂದ ಹೊಟ್ಟೆ ನೋವು ಕೂಡಲೇ ಶಮನವಾಗುತ್ತದೆ. 
ಕೊತ್ತಂಬರಿ ಬೀಜ: ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ, ಕುಡಿಯುವುದೂ ದಿವ್ಯೌಷಧಿ.