ರಸಜ್ವಾಲೆಯಾದವರು ಎಳ್ಳು ದೀಪ ಹಚ್ಚಬಹುದಾ?

Is woman having periods can light sesame oil light
Highlights

ಒಳ್ಳೆಣ್ಣೆ, ತುಪ್ಪ..ಹೀಗೆ ವಿವಿಧ ಎಣ್ಣೆಗಳಲ್ಲಿ ದೇವರಿಗೆ ಒಂದೊಂದು ಸಂದರ್ಭದಲ್ಲಿ ದೀಪ ಹಚ್ಚುತ್ತಾರೆ. ತುಪ್ಪದ ದೀಪ ಹಚ್ಚಿದರೆ ಮನೆ ಪರಿಸರ ಮಾಲಿನ್ಯ ಮುಕ್ತವಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಶನಿಗೆ ಅತ್ಯಂತ ಪ್ರಿಯವಾಗಿರುವ ಎಳ್ಳೆಣ್ಣೆ  ಹಚ್ಚಲೂ ರೀತಿ ರಿವಾಜುಗಳಿವೆ. ಏನವು?

ಶನಿ ಹಿಡಿದಿದ್ದರೆ ಎಳ್ಳು ದೀಪ ಹಚ್ಚಬೇಕೆಂದು ಗೊತ್ತು. ಅಲ್ಲದೇ ಮನೆ ದೇವರಿಗೆ ದಿನಾಲೂ ಎಳ್ಳು ದೀಪ ಹಚ್ಚುವವರು ಇದ್ದಾರೆ. ಧರ್ಮ ಶಾಸ್ತ್ರದಲ್ಲಿ ತನ್ನದೇ ಮಹತ್ವ ಪಡೆದುಕೊಂಡಿರುವ ಎಳ್ಳು ದೀಪವನ್ನು ಯಾರು, ಯಾವಾಗ, ಎಲ್ಲಿ ಹಚ್ಚಬಹುದು?

- ಮನೆಯಲ್ಲಿ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳು ನಡೆಯುವಾಗ ಯಾವುದೇ ಕಾರಣಕ್ಕೂ ಎಳ್ಳು  ದೀಪಗಳನ್ನು  ಹಚ್ಚಬಾರದು.
- ಮನೆಯಲ್ಲಿ ಸೂತಕ ಇರುವಾಗ ಯಾವುದೇ ಕಾರಣಕ್ಕೂ ಎಳ್ಳು  ದೀಪವನ್ನು ಹಚ್ಚಬಾರದು.
- ಎಳ್ಳು ದೀಪಗಳನ್ನು ಹಚ್ಚಿದ‌ ನಂತರ ಬರುವ ಕಪ್ಪನ್ನು ಹಣೆಗಾಗಲೀ ಅಥವಾ ಕಣ್ಣಿಗಾಗಲೀ ಹಚ್ಚಿಕೊಳ್ಳಬಾರದು.
- ಒಬ್ಬರ ಪರವಾಗಿ ಇನ್ನೊಬ್ಬರು ಎಳ್ಳು ದೀಪಗಳನ್ನು ಹಚ್ಚಬಾರದು.
- ಒಂದೇ ಕುಟುಂಬದಲ್ಲಿ ಇಬ್ಬರು ಬೇರೆ ಬೇರೆಯಾಗಿ ಎಳ್ಳು ದೀಪಗಳನ್ನು ಹಚ್ಚಬಾರದು. 
- ಗಂಡ-ಹೆಂಡತಿ ಇಬ್ಬರಿಗೂ ಶನಿಕಾಟವಿದ್ದಾಗ ಇಬ್ಬರೂ ಜೊತೆಯಲ್ಲಿ ಶನೈಶ್ಚರ ಸ್ವಾಮಿಯ ದೇವಾಲಯದಲ್ಲಿ ಎಳ್ಳು ದೀಪಗಳನ್ನು ಹಚ್ಚಿ, ಶನಿಯ ‌ಪ್ರಭಾವದಿಂದ ಮುಕ್ತಿ ಕೊಡುವಂತೆ ಪ್ರಾರ್ಥಿಸಬೇಕು.
-  ಹೆಂಗಸರು ರಜಸ್ವಲೆಯರಾದಾಗ ಎಳ್ಳು ದೀಪ ಹಚ್ಚಬಾರದು. 
- ಎಳ್ಳು ದೀಪಗಳನ್ನು ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಾಗಲೀ, ಸಂಬಂಧಿಕರ ಅಥವಾ ಮಿತ್ರರ ಮನೆಯಲ್ಲಾಗಲೀ ಹಚ್ಚಬಾರದು.
- ಎಳ್ಳು ದೀಪಗಳನ್ನು ಶನೈಶ್ಚರ ಸ್ವಾಮಿಯ ದೇವಾಲಯ, ನವಗ್ರಹ ದೇವಾಲಯ, ಶ್ರೀ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ಹಚ್ಚಬಹುದು.
- ಪ್ರತಿ ಶನಿವಾರಗಳಂದು ಎಳ್ಳೆಣ್ಣೆ ಸ್ನಾನ ಮಾಡಿ,  ಶನಿದೇವರಿಗೆ ನೀಲಿಯ ಹೂವಿನಿಂದ ಪೂಜೆ ಮಾಡಿ, ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ, 
- 09 ಶನಿವಾರಗಳಂದು ತಪ್ಪದೇ ನಿರಂತರವಾಗಿ ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ, ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸಿದರೆ ಕಷ್ಟ ನಿವಾರಣೆಯಾಗುತ್ತದೆ.
- ಸಾಡೇಸಾತಿ ಶನಿ ಪ್ರಭಾವ ಇರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪ ಹಚ್ಚಿ, ಶನಿವಾರ ಒಂದು ಹೊತ್ತು ಮಾತ್ರ ಊಟ ಮಾಡಿ, ಬ್ರಹಚರ್ಯ ವ್ರತ
ಪಾಲಿಸಬೇಕು.
- ಸಾಡೇಸಾತಿ ಶನಿಯ ಪ್ರಭಾವವಿರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪ ಹಚ್ಚಿ ಎಳ್ಳು, ಉದ್ದು, ಉಪ್ಪು, ಎಳ್ಳೆಣ್ಣೆ, ಜಾಜಿಕಾಯಿ ಇವುಗಳನ್ನು ದಾನ
ಮಾಡಬೇಕು.
- ಸಾಡೇಸಾತಿ ಶನಿಯ ಪ್ರಭಾವವಿರುವವರು ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಎಳ್ಳು ದೀಪವನ್ನು ಹಚ್ಚಿ ಶನೈಶ್ಚರ ಸ್ವಾಮಿಯ ಅಷ್ಟೋತ್ತರ ಪಠಿಸಬೇಕು. 
- ಎಳ್ಳು ದೀಪವನ್ನು ಹಚ್ಚುವುದರಿಂದ ಕೆಲಸ ಕಾರ್ಯಗಳಲ್ಲಿನ ವಿಘ್ನಗಳು ದೂರವಾಗುತ್ತವೆ.
 - ಎಳ್ಳು ದೀಪದಿಂದ ಶನಿಯ ಪ್ರಭಾವ ಕಡಿಮೆಯಾಗಿ ಎಲ್ಲಾ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ.
- ಎಳ್ಳು ದೀಪವನ್ನು ಹಚ್ಚಿದ ಮೇಲೆ ಆಂಜನೇಯ ಸ್ವಾಮಿ ಅಥವಾ ಗಣಪತಿಯ ದರ್ಶನ ಮಾಡುವುದರಿಂದ ಎಲ್ಲಾ ರೀತಿ ಕಷ್ಟಗಳೂ ಶಮನವಾಗುತ್ತವೆ. 
- ಎಳ್ಳು ದೀಪವನ್ನು ಶನಿವಾರ ಬೆಳಿಗ್ಗೆ ಅಥವಾ ಸಾಯಂಕಾಲ ಹಚ್ಚಬಹುದು.
- ಶನೈಶ್ಚರ ಸ್ವಾಮಿ ಮುಂದೆ ಎಳ್ಳು ದೀಪವನ್ನು ಹಚ್ಚಿದರೆ, ಸಾಡೇಸಾತಿ,  ಅಷ್ಟಮ ಶನಿ, ಅರ್ಧಾಷ್ಟಮ ಶನಿ, ಪಂಚಮ ಶನಿಯ ಪ್ರಭಾವಕ್ಕೊಳಗಾಗಿರುವವರು
ಅಥವಾ ಶನಿ ದೆಶೆ ನಡೆಯುತ್ತಿರುವವರು ದುಷ್ಪರಿಣಾಮಗಳಿಂದ ಮುಕ್ತರಾಗಬಹುದು.
- ಶನೈಶ್ಚರ ಸ್ವಾಮಿಗೆ ಅತ್ಯಂತ ಪ್ರಿಯವಾದದ್ದು ಎಳ್ಳು. ಎಳ್ಳೆಣ್ಣೆಯ ಅಭಿಷೇಕ, ಎಳ್ಳಿನ ದಾನ, ಎಳ್ಳೆಣ್ಣೆಯ ದೀಪ ಸೇವೆ, ಎಳ್ಳಿನ ದಾನ ಇವೆಲ್ಲವೂ ವಿಶೇಷ. 

loader