ಔಷಧೀಯ ಸಸ್ಯಗಳಲ್ಲಿ ಅಶ್ವಗಂಧದ್ದು ಮುಂಚೂಣಿ ಹೆಸರು. ಇದರ ಬೇರು ಕುದುರೆಯ ಪರಿಮಳ ಹೊಂದಿರುವದರಿಂದ ಇದಕ್ಕೆ ಅಶ್ವಗಂಧ ಎಂದು ಹೆಸರಿಸಲಾಗಿದೆ. ಅಶ್ವಗಂಧದ ಬೇರು, ಎಲೆಗಳು, ಹಣ್ಣುಗಳು- ಪ್ರತಿಯೊಂದರಲ್ಲೂ ಔಷಧೀಯ ಗುಣಗಳಿವೆ.

ಆರೋಗ್ಯ ಲಾಭಗಳಿವೆ. ಕೆಲವೊಂದು ಕ್ಯಾನ್ಸರ್, ಆತಂಕ, ಮರೆವಿನ ರೋಗ ಮುಂತಾದುವುಗಳಿಗೆ ಅಶ್ವಗಂಧ ಮದ್ದು. 3000 ಸಾವಿರ ವರ್ಷಗಳಿಂದಲೂ ಆಯುರ್ವೇದದಲ್ಲಿ ಅಶ್ವಗಂಧವನ್ನು ಆರ್ತ್ರೈಟಿಸ್, ಚರ್ಮ ರೋಗಗಳು, ನಿದ್ರಾಹೀನತೆ, ಮಲಬದ್ಧತೆ, ಕರುಳಿನ ಸಮಸ್ಯೆಗಳು, ಡಯಾಬಿಟೀಸ್, ನರ ರೋಗಗಳು, ಹಾವು ಕಚ್ಚುವಿಕೆ, ನೆನಪಿನ ಶಕ್ತಿ ಕುಂದುವಿಕೆ ಮುಂತಾದ ಕಾಯಿಲೆಗಳಿಗೆ ಔಷಧವಾಗಿ ಬಳಸಿಕೊಂಡು ಬರಲಾಗುತ್ತಿದೆ. ಆದರೆ ಗರ್ಭಿಣಿ ಮಹಿಳೆಯರು ಅಶ್ವಗಂಧ ಸೇವಿಸಕೂಡದು. ಇದರಿಂದ ಬೇಗ ಹೆರಿಗೆಯಾಗುವ ಅಪಾಯ ಸಾಧ್ಯತೆಯಿದೆ. 

60 ಹಸು, 1000 ಲೀ ಹಾಲು;ಹಸು ಸಾಕಿದರೆ ಲಾಭವುಂಟು!

ಪ್ರತಿದಿನ 1-2 ಚಮಚ ಅಶ್ವಗಂಧ ಸೇವಿಸುವಂತೆ ಆಯುರ್ವೇದ ಹೇಳುತ್ತದೆ. ಹೇಗೆ ಸೇವಿಸುವುದು? ಮೆಡಿಕಲ್ ಸ್ಟೋರ್‌ಗಳಲ್ಲಿ ಅಶ್ವಗಂಧದ ಲೇಹ ದೊರೆಯುತ್ತದೆ. ಅದಲ್ಲದೆ, ಅಶ್ವಗಂಧದಿಂದ ಟೀ, ಚಾಕೋಲೇಟ್, ಸ್ಮೂತಿ ಮುಂತಾದವುಗಳನ್ನು ಸ್ವತಃ ನೀವೇ ತಯಾರಿಸಿ ಸೇವಿಸಬಹುದು.

ಅಶ್ವಗಂಧ ಟೀ

ಮಾನಸಿಕ ಹಾಗೂ ದೈಹಿಕ ಸುಸ್ತನ್ನು ದೂರವಿಡಲು ಪ್ರತಿದಿನ 1ರಿಂದ 2 ಕಪ್ ಅಶ್ವಗಂಧ ಟೀ ಸೇವಿಸುವಂತೆ ಆಯುರ್ವೇದ ಶಿಫಾರಸು ಮಾಡುತ್ತದೆ. 

ಮಾಡುವ ವಿಧಾನ:

ಎರಡು ಚಮಚ ಅಶ್ವಗಂಧದ ಒಣಬೇರನ್ನು ಪಾತ್ರೆಯಲ್ಲಿ ತೆಗೆದುಕೊಂಡು ಅದಕ್ಕೆ ಮೂರೂವರೆ ಕಪ್ ನೀರು ಹಾಕಿ. 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಬೇರನ್ನು ತೆಗೆದು ಶೋಧಿಸಿ ಕುಡಿಯಿರಿ. ಇದು ಸೇರುವುದಿಲ್ಲವೆಂದರೆ, ಅರ್ಧ ಕಪ್ ಹಾಲಿಗೆ 1 ಚಮಚ ಅಶ್ವಗಂಧ ಬೇರಿನ ಪುಡಿ ಹಾಕಿ, 1 ಚಮಚ ಕರ್ಜೂರದ ಸಕ್ಕರೆ, ಅರ್ಧ ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ನೀರು ಅರ್ಧ ಲೋಟದಷ್ಟಕ್ಕೆ ಇಳಿದ ಬಳಿಕ ಏಲಕ್ಕಿ ಪುಡಿ ಸೇರಿಸಿ ಸೇವಿಸಿ. 

ಅಶ್ವಗಂಧ ಟಿಂಕ್ಚರ್

ಮೂತ್ರನಾಳದ ಆರೋಗ್ಯ ಕಾಪಾಡುವ ಜೊತೆಗೆ ನೋವು ನಿವಾರಕವಾಗಿ ಅಶ್ವಗಂಧ ಟಿಂಕ್ಚರ್ ಕೆಲಸ ಮಾಡುತ್ತದೆ.

ಇದನ್ನು ಓದಿದ್ರೆ ಇನ್ನು ನೀವು ಜಂಕ್ ಫುಡ್ ಮುಟ್ಟೋಲ್ಲ!

ಮಾಡುವ ವಿಧಾನ:

ಅರ್ಧ ಕಪ್ ಒಣಗಿಸಿ ಕತ್ತರಿಸಿದ ಅಶ್ವಗಂಧದ ಬೇರನ್ನು ಜಾರ್‌ಗೆ ಹಾಕಿ. ಇದಕ್ಕೆ 2 ಕಪ್ 80-100 ಪ್ರೂಫ್‌ನ ಜಿಎಂಒ ರಹಿತ ವೊಡ್ಕಾ ಅಥವಾ ರಮ್ ಹಾಕಿ. ಜಾರ್ ಮುಚ್ಚಳ ಹಾಕಿ ಎರಡು ವಾರದಿಂದ 4 ತಿಂಗಳವರೆಗೆ ಕತ್ತಲೆಯ ಸ್ಥಳದಲ್ಲಿಡಿ. ಆಗಾಗ ಜಾರನ್ನು ಶೇಕ್ ಮಾಡುವುದು ಮರೆಯಬೇಡಿ. ಟಿಂಕ್ಚರ್ ರೆಡಿಯಾದ ಬಳಿಕ ಅದನ್ನು ಬೇರೆ ಗ್ಲಾಸ್ ಬಾಟಲ್‌ಗೆ ವರ್ಗಾಯಿಸಿಟ್ಟುಕೊಳ್ಳಿ. ಪ್ರತಿ ದಿನ ಮೂರು ಬಾರಿ 120 ಎಂಎಲ್ ನೀರಿಗೆ 40-50 ಹನಿ ಟಿಂಕ್ಚರ್ ಹಾಕಿಕೊಂಡು ಸೇವಿಸಿ.

ಅಶ್ವಗಂಧ ಸ್ಮೂತಿ

ಕಾಡು ಸೇವಂತಿಗೆಯು ತನ್ನ ಆರೋಗ್ಯ ಲಾಭಗಳಿಗಾಗಿ ಹೆಸರಾಗಿದೆ. ಇದು ಹಾಲು, ಚಾಕೋಲೇಟ್, ಜೇನುತುಪ್ಪದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಶ್ವಗಂಧವು ಸ್ಟ್ಯಾಮಿನಾ ಹೆಚ್ಚಿಸಿ ಸುಸ್ತು, ಒತ್ತಡವನ್ನು ತಗ್ಗಿಸುತ್ತದೆ. ಜೊತೆಗೆ ಹಾರ್ಮೋನ್ ಬ್ಯಾಲೆನ್ಸ್ ಮಾಡುತ್ತದೆ. ಇನ್ನು ತುಳಸಿಯು ಒತ್ತಡದ ವಿರುದ್ಧ ಹೋರಾಡುತ್ತದೆ. ಅಂದ ಮೇಲೆ ಈ ಮೂರನ್ನೂ ಸೇರಿಸಿದರೆ ಎಷ್ಟೊಂದು ಲಾಭಗಳನ್ನು ಪಡೆಯಬಹುದಲ್ಲವೇ?

ಮಾಡುವ ವಿಧಾನ:

ಅರ್ಧ ಚಮಚ ದಾಲ್ಚೀನಿ, 1 ಚಮಚ ಹುರಿದ ಕಾಡುಸೇವಂತಿಗೆ ಬೇರು, 1 ಚಮಚ ಅಶ್ವಗಂಧದ ಬೇರಿನ ಪುಡಿ, 1 ಚಮಚ ತುಳಸಿ ಪುಡಿ, 2 ಕಪ್ ಬಾದಾಮಿ ಹಾಲು, 5-7 ಐಸ್ ಕ್ಯೂಬ್ಸ್ ಎಲ್ಲವನ್ನೂ ಮಿಕ್ಸಿ ಜಾರ್‌ಗೆ ಹಾಕಿ ಸ್ಮೂತಿ ಹದಕ್ಕೆ ಬ್ಲೆಂಡ್ ಮಾಡಿ. 

ಉಳಿದ ಅನ್ನ ಎಸೆಯಬೇಡಿ, ಅದರಿಂದ ರುಚಿಯಾದ ಕಟ್ಲೆಟ್ ಮಾಡಿ!

ಅಶ್ವಗಂಧ ಚಾಕೋಲೇಟ್

ಮಾಡುವ ವಿಧಾನ:

ಕಾಲು ಕಪ್ ಅಶ್ವಗಂಧ ಪುಡಿ, ಕಾಲು ಕಪ್ ಮಕಾ ಪೌಡರ್, 1-2 ಚಮಚ ಹಸಿ ಕೋಕೋ ಪೌಡರ್, 1 ಚಮಚ ದಾಲ್ಚೀನಿ, ಕಾಲು ಚಮಚ ಉಪ್ಪನ್ನು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ತೆಂಗಿನ ಬೆಣ್ಣೆ, ಅರ್ಧ ಕಪ್ ಜೇನು ತುಪ್ಪ, ಅರ್ಧ ಕಪ್ ಸೆಣಬಿನ ಬೆಣ್ಣೆ ಹಾಕಿ. ಮಿಕ್ಸ್ಚರನ್ನು ಚಾಕೋಲೇಟ್ ಟ್ರೇಗೆ ಹಾಕಿ  ಫ್ರೀಜರ್‌ನಲ್ಲಿಡಿ. ಗಟ್ಟಿಯಾದ ಬಳಿಕ ಚಾಕೋಲೇಟ್‌ನಂತೆ ಸೇವಿಸಿ.

ಅಶ್ವಗಂಧ ಮತ್ತು ತುಪ್ಪ

2 ಚಮಚ ಅಶ್ವಗಂಧವನ್ನು ಅರ್ಧ ಕಪ್ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ 1 ಚಮಚ ಡೇಟ್ ಶುಗರ್ ಸೇರಿಸಿ, ಫ್ರಿಡ್ಜ್‌ನಲ್ಲಿಡಿ. ಪ್ರತಿದಿನ 1 ಲೋಟ ಹಾಲು ಅಥವಾ ನೀರಿಗೆ 1 ಚಮಚ ಈ ಮಿಕ್ಸ್‌ಚರ್ ಸೇರಿಸಿಕೊಂಡು ಸೇವಿಸಿ. 

ಧಾರವಾಡ ಪೇಡದಂತೆ ಅವಲಕ್ಕಿಗೆ ಕೂಡಾ ಸಿಗುತ್ತಿದೆ ಭೌಗೋಳಿಕ ಮಾನ್ಯತೆ!