ಕಟ್ಲೆಟ್ಟನ್ನು ಸಾಮಾನ್ಯವಾಗಿ ತರಕಾರಿಯ ಮಿಶ್ರಣದೊಂದಿಗೆ ಮಾಡಲಾಗುತ್ತದೆ. ಸ್ಯಾಂಡ್‌ವಿಚ್ ಅಥವಾ ಬರ್ಗರ್ ಫಿಲ್ಲರ್ ಆಗಿ, ಸ್ಟ್ರೀಟ್‌ಫುಡ್ ಆಗಿ ಕಟ್ಲೆಟ್ ಬಳಕೆಯಾಗುತ್ತದೆ. ಇಂಥ ಈ ವಿಶೇಷ ರುಚಿಯ ಕಟ್ಲೆಟ್ಟನ್ನು ಇಷ್ಟೇ ರುಚಿರುಚಿಯಾಗಿ ಉಳಿದ ಅನ್ನದಿಂದಲೂ ಮಾಡಬಹುದು ಎಂದು ನಿಮಗೆ ಗೊತ್ತಾ?

ಇನ್ನೊಮ್ಮೆ ಕಟ್ಲೆಟ್ ಮಾಡುವಾಗ ಅದಕ್ಕಾಗಿ ಬೇಯಿಸಿದ ತರಕಾರಿಗಳೊಡನೆ ಉಳಿದ ಅನ್ನವನ್ನೂ ಸೇರಿಸಿ ಕಲಸಿ. ಇದರಿಂದ ರೈಸ್ ಕಟ್ಲೆಟ್ ಹೊಟ್ಟೆಯನ್ನೂ ತುಂಬಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಡಲು ಇದು ಬಹಳ ಸರಿಯಾದ ತಿಂಡಿ. ರುಚಿಗೆ ರುಚಿಯೂ ಆಯಿತು.

ಏನ್ಸಾರ್! ಬ್ರಾಹ್ಮಣರ ಮನೆಯ ಸಾರು ಸೂಪರ್!

ಆರೋಗ್ಯಕರವೂ ಹೌದು. ಹಸಿರು ಚಟ್ನಿ ಅಥವಾ ಮಯೋನೀಸ್ ಜೊತೆ ಸರ್ವ್ ಮಾಡಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ. 

ತಯಾರಿ ಸಮಯ: 10 ನಿಮಿಷ

ಕುಕ್ ಟೈಮ್: 20 ನಿಮಿಷ

ಸರ್ವಿಂಗ್ಸ್: 8

ಬೇಕಾಗುವ ಸಾಮಗ್ರಿಗಳು

ಕಟ್ಲೆಟ್ ಮಿಕ್ಸ್ಚರ್‌ಗೆ- 1 ಕಪ್ ಚೆನ್ನಾಗಿ ಬೆಂದ ಅನ್ನ, 1 ಆಲೂಗಡ್ಡೆ ಬೇಯಿಸಿ ಮ್ಯಾಶ್ ಮಾಡಿದ್ದು, 2 ಚಮಚ ತುರಿದ ಕ್ಯಾರೆಟ್, 2 ಚಮಚ ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು, 2 ಚಮಚ ಸ್ವೀಟ್ ಕಾರ್ನ್, 2 ಚಮಚ ಸಣ್ಣ ತುಂಡುಗಳಾಗಿಸಿಕೊಂಡ ಗೋಡಂಬಿ, ½ ಚಮಚ ಶುಂಠಿ ಪೇಸ್ಟ್, ½ ಚಮಚ ಕೆಂಪು ಮೆಣಸಿನ ಪುಡಿ, ¼ ಚಮಚ ಗರಂ ಮಸಾಲಾ, ¼ ಚಮಚ ಜೀರಿಗೆ ಪುಡಿ, ¾ ಚಮಚ ಉಪ್ಪು, 2 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1 ಚಮಚ ನಿಂಬೆರಸ, ½ ಕಪ್ ಬ್ರೆಡ್ ಪೀಸ್‌ಗಳು. ಹಟ್ಟಿಗೆ- ¼ ಕಪ್ ಮೈದಾ, 2 ಚಮಚ ಜೋಳದ ಹಿಟ್ಟು, ¼ ಚಮಚ ಉಪ್ಪು, ½ ಚಮಚ ಪೆಪ್ಪರ್ ಇತರೆ ಸಾಮಗ್ರಿಗಳು- ಕರಿಯಲು ಎಣ್ಣೆ, 1 ಕಪ್ ಬ್ರೆಡ್ ಕ್ರಂಬ್ಸ್

ಮಾಡುವ ವಿಧಾನ

ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ಚೆನ್ನಾಗಿ ನುಣ್ಣಗೆ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಬರಿಸಿದ ಬೆಂದ, ಚೆನ್ನಾಗಿ ಕಲಸಿದ ಆಲೂಗಡ್ಡೆ ಸೇರಿಸಿ. ಕ್ಯಾರೆಟ್, ದೊಣ್ಣೆಮೆಣಸು, ಕಾರ್ನ್, ಗೋಡಂಬಿ ಸೇರಿಸಿ. ಈ ಮಿಶ್ರಣಕ್ಕೆ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ. ಕಡೆಯಲ್ಲಿ ಬ್ರೆಡ್ ಕ್ರಂಬ್ಸ್ ಸೇರಿಸಿ ಮತ್ತೆ ಕಲಸಿ. 

ಮಳೆ, ಜತೆಗೆ ಹಲಸಿನ ಹಪ್ಪಳ, ಮಜಾನೇ ಬೇರೆ, ಇಲ್ಲಿದೆ ರೆಸಿಪಿ...

ಈಗ ಇನ್ನೊಂದು ಪಾತ್ರೆಯಲ್ಲಿ ಮೈದಾಹಿಟ್ಟು, ಜೋಳದ ಹಿಟ್ಟು, ಪೆಪ್ಪರ್, ಉಪ್ಪು ಸೇರಿಸಿ ಮಿಶ್ರಣ ಮಾಡಿ.  ಈಗ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕಟ್ಲೆಟ್ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ. ಪ್ರತಿ ಉಂಡೆಯನ್ನೂ ಹಿಟ್ಟಿನಲ್ಲಿ ಅದ್ದಿ, ಪುಡಿ ಮಾಡಿಟ್ಟುಕೊಂಡ ಬ್ರೆಡ್ ಕ್ರಂಬ್ಸ್ ಮೇಲೆ ಉರುಳಾಡಿಸಿ. ಹೊರಗಿನಿಂದ ಎರಡು ಲೇಯರ್ ಕೋಟ್ ಕೊಟ್ಟಾದ ಮೇಲೆ ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಬಿಡಿ. ಕಟ್ಲೆಟ್‌ಗಳು ಕೆಂಪು ಬಣ್ಣಕ್ಕೆ ತಿರುಗುತ್ತಲೇ ಅದನ್ನು ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಅತಿಯಾದ ಎಣ್ಣೆಯನ್ನೆಲ್ಲ ಪೇಪರ್ ಹೀರಿಕೊಂಡ ಬಳಿಕ ಟೊಮ್ಯಾಟೋ ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ಸವಿಯಲು ಕೊಡಿ.