ಅಯ್ಯೋ ಅಡಿಗೆ ಮಾಡೋಕೆ ಟೈಂ ಇಲ್ಲ, ಕೆಲಸಕ್ಕೆ ಲೇಟ್ ಆಯ್ತು ಅಂದಾಗ ಫಟ್ ಅಂತ ಬರ್ಗರ್ ತಿಂದು ಪೆಪ್ಸಿ ಕುಡಿದು ಓಡೋದು ಸುಲಭ. ಅದು ರುಚಿಕರ ಕೂಡಾ. ಆದರೆ, ನೀವು ಅದೆಷ್ಟು ಅನಾರೋಗ್ಯಕಾರಿ ಆಹಾರ ಸೇವಿಸುತ್ತಿದ್ದೀರಿ ಎಂಬ ಅರಿವಿದೆಯೇ? ಹೌದು, ಫಾಸ್ಟ್ ಫುಡ್ ದೇಹಕ್ಕೆ ಒಳ್ಳೆಯದಲ್ಲ ಎಂದು ನಮಗೆಲ್ಲರಿಗೂ ಗೊತ್ತು.

ಭಾರತದ ಸಮೋಸಾ ಮುಂದೆ ಮಂಡಿಯೂರಿದ ಅಮೆರಿಕದ ಬರ್ಗರ್

ಅದು ಜಿಡ್ಡು ಜಿಡ್ಡು, ಫ್ಯಾಟಿ ಫ್ಯಾಟಿ... ಪ್ರತಿದಿನ ತಿಂದರೆ ಕಾಯಿಲೆಗಳು ಬರೋದು ಗ್ಯಾರಂಟಿ. ಆದರೆ, ಎಷ್ಟೇ ಅನಾರೋಗ್ಯಕಾರಿ ಎಂದರೂ ಅದರ ಪರಿಮಳ, ರುಚಿ, ನೋಟ ಎಲ್ಲವೂ 'ನನ್ನ ತಿನ್ನು ಬಾ' ಎಂದು ಕರೆದೂ ಕರೆದೂ ಆಸೆ ಹುಟ್ಟಿಸುತ್ತವೆ. ಆದರೆ, ಜಂಕ್ ಫುಡ್ ಕುರಿತ ಈ ವಿಷಯಗಳನ್ನು ತಿಳಿದುಕೊಂಡರೆ ನೀವು ಇನ್ನೊಮ್ಮೆ ಅದು ನಿಮ್ಮನ್ನು ಕರೆದಾಗ ಹತ್ತಿರವೂ ಹೋಗಲಾರಿರಿ. 

1. ಟೊಮ್ಯಾಟೋ ಸಾಸ್ ಅಥವಾ ಸಕ್ಕರೆ ಸಾಸ್?

ಕೆಲವರಿಗೆ ಫಿಜ್ಜಾ, ಬರ್ಗರ್, ಯಾವುದೇ ಎಣ್ಣೆ ತಿಂಡಿ, ಚಪಾತಿ, ದೋಸೆ ಎಲ್ಲಕ್ಕೂ ಟೊಮ್ಯಾಟೋ ಸಾಸ್ ಹಚ್ಚಿಕೊಂಡು ತಿನ್ನುವ ಅಭ್ಯಾಸ. ಟೋಮ್ಯಾಟೋ ಸಾಸ್‌ನ ಸಣ್ಣ ಪ್ಯಾಕೆಟ್‌ನಲ್ಲಿ 1 ಚಮಚದಷ್ಟು ಸಕ್ಕರೆ ಇರುತ್ತದೆ. ಟೊಮ್ಯಾಟೋಗೆ ಸಿಹಿ ಸೇರಿಸಲು ಬಹಳಷ್ಟು ಸಾಸ್ ಬ್ರ್ಯಾಂಡ್‌ಗಳು ಫ್ರುಕ್ಟೋಸ್ ಕಾರ್ನ್ ಸಿರಪ್ ಸೇರಿಸುತ್ತವೆ. ಇದು ಹೊಟ್ಟೆಗೆ ಕೆಟ್ಟದ್ದು ಮಾತ್ರವಲ್ಲ, ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಿಸಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸಕ್ಕರೆ ಬಹಳಷ್ಟು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. 

2. ಸ್ಟ್ರಾಬೆರಿ ಮಿಲ್ಕ್‌ಶೇಕ್

ಸ್ಟ್ರಾಬೆರಿ ಫ್ಲೇವರ್ ಕಾಪಿ ಮಾಡಲು ಫಾಸ್ಟ್ ಫುಡ್ ಕಾರ್ಪೋರೇಶನ್‌ಗಳು ಇಥೈಲ್ ಅಸಿಟೇಟ್, ಫಿನೆಥೈಲ್ ಆಲ್ಕೋಹಾಲ್, ರೋಸ್, ಸಾಲ್ವೆಂಟ್ ಸೇರಿದಂತೆ 50 ವಿವಿಧ ಕೆಮಿಕಲ್ಸ್‌ಗಳನ್ನು ಮಿಕ್ಸ್ ಮಾಡುತ್ತವೆ. ಹಾಗಾಗಿ, ಮುಂದಿನ ಬಾರಿ ಸ್ಟ್ರಾಬೆರಿ ಮಿಲ್ಕ್‌ಶೇಕ್‌ ಕುಡಿಯಬೇಕೆನಿಸಿದಾಗ ಈ ಎಲ್ಲ ರಾಸಾಯನಿಕಗಳನ್ನು ನೆನೆಸಿಕೊಳ್ಳಿ ಮತ್ತು ಮನೆಗೆ ಹೋಗಿ ಸ್ಟ್ರಾಬೆರಿ ಹಣ್ಣು ಹಾಗೂ ಹಾಲು ಸೇರಿಸಿ ಸ್ವತಃ ಜ್ಯೂಸ್ ಮಾಡಿ ಕುಡಿಯಿರಿ. 

3. ಡೋನಟ್

ಡೋನಟ್ ಒಳ್ಳೆಯದಲ್ಲವೆಂದು ಎಲ್ಲರಿಗೂ ಗೊತ್ತು. ಆದರೂ, ಡೋನಟ್ ಶಾಪ್‌ನ ಪರಿಮಳ ಒಳ ಕರೆಯುತ್ತಾ? ಒಂದೇ ಒಂದು ಡೋನಟ್ 1 ಪ್ಯಾಕ್ ಚಿಪ್ಸ್‌ಗಿಂತ ಕೆಟ್ಟದ್ದು. ಹಾಂಗ್‌ಕಾಂಗ್ ಗ್ರಾಹಕರ ಸಮಿತಿ 2008ರಲ್ಲಿ ಪ್ರಕಟಿಸಿದ ವರದಿಯಂತೆ, "ಚಾಕೋಲೇಟ್, ಪೀನಟ್ ಬಟರ್, ಚಾಕೋಲೇಟ್ ಬಾರ್ಸ್ ಹಾಗೂ ಚಿಪ್ಸ್‌ಗಿಂತ ಹೆಚ್ಚಾಗಿ ಟ್ರಾನ್ಸ್ ಫ್ಯಾಟ್ ಡೋನಟ್‌ನಲ್ಲಿರುತ್ತದೆ. ಒಂದೇ ಒಂದು ಡೋನಟ್ ಒಂದು ದಿನಕ್ಕೆ ಸೇವಿಸಬಹುದಾದ ಗರಿಷ್ಠ ಟ್ರಾನ್ಸ್ ಫ್ಯಾಟ್ ಹೊಂದಿರುತ್ತದೆ''. ಇಷ್ಟಕ್ಕೂ ಡೋನಟ್‌ ಪ್ರಿಯರು ಒಂದು ಬಾರಿಗೆ ಒಂದಕ್ಕೇ ನಿಲ್ಲಿಸಿಬಿಡುವ ಸಾಧ್ಯತೆ ಕೂಡಾ ಕಡಿಮೆ. ಟ್ರಾನ್ಸ್ ಫ್ಯಾಟ್ ದೇಹದಲ್ಲಿ ಕೊಲೆಸ್ಟೆರಾಲ್ ಹಾಗೂ ಟ್ರೈಗ್ಲಿಸೆರೈಡ್ಸ್ ಹೆಚ್ಚಿಸುತ್ತದೆ. ಇದರಿಂದ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. 

ಮಾಂಸಾಹಾರಿಗಳಿಗಿಂತ ಪುಳ್ಚಾರ್‌ಗಳೇ ಆರೋಗ್ಯವಂತರು: ಆಕ್ಸ್‌ಫರ್ಡ್

4. ಹಳದಿ ಆಹಾರ ಬಣ್ಣ

ಫಿಜ್ಜಿ ಡ್ರಿಂಕ್ಸ್, ಜೆಲ್ಲಿ, ಚಿಪ್ಸ್, ಗಮ್ ಬೇರ್ಸ್, ಕಾರ್ನ್ ಫ್ಲೇಕ್ಸ್‌ಗಳಲ್ಲಿ ಟಾರ್ಟಾಜಿನ್ ಹಾಕಲಾಗಿರುತ್ತದೆ. ಈ ಹಳದಿ ಆಹಾರ ಬಣ್ಣವು ಮಕ್ಕಳಲ್ಲಿ ಹೈಪರ್‌ಆ್ಯಕ್ಟಿವಿಟಿ ಹಾಗೂ ದೊಡ್ಡವರಲ್ಲಿ ಕೆಲ ಟ್ಯೂಮರ್‌ಗಳಿಗೆ ಕಾರಣವಾಗಬಲ್ಲದು ಎಂದು ಸೆಂಟರ್ ಫಾರ್ ಸೈನ್ಸ್ ಹೇಳಿದೆ. ಅಲ್ಲದೆ, 2010ರಲ್ಲಿ ಈ ಕುರಿತು ಫುಡ್ ಆ್ಯಂಡ್ ಕೆಮಿಕಲ್ ಟಾಕ್ಸಿಕಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯು ಈ ಹಳದಿ ಬಣ್ಣವು ಲಿವರ್ ಮತ್ತು ಕಿಡ್ನಿಯ ಕೆಮಿಕಲ್ ಫಂಕ್ಷನ್ ಏರುಪೇರುಗೊಳಿಸುತ್ತದೆ ಎಂದು ಹೇಳಿದೆ. 

5. ಕ್ಯಾಂಡಿ

ಕ್ಯಾಂಡಿಯಲ್ಲಿ ಹೊಳೆಯುವ, ವರ್ಣಮಯವಾದ ಆ ಸಕ್ಕರೆಯುತ ಶೆಲ್ ಎಷ್ಟು ಆಕರ್ಷಕವಲ್ಲವೇ? ಅದನ್ನು ಶೆಲ್ಲಾಕ್ ಎಂಬ ವಸ್ತುವಿನಿಂದ ಮಾಡಲಾಗುತ್ತದೆ. ಈ ಶೆಲ್ಲಾಕ್ ಎಲ್ಲಿ ಸಿಗುತ್ತದೆ ಗೊತ್ತೇ? ಲ್ಯಾಕ್ಸ್ ಎಂಬ ಕೀಟಗಳು ಉತ್ಪಾದಿಸುವ ಒಂದು ಅಂಟಿನಿಂದ! ಈ ಲ್ಯಾಕ್ಸ್ ಬಲೆ ಮಾಡಲು ಕೂಡಾ ಬಳಕೆಯಾಗುತ್ತದೆ. ಹಾಗಿದ್ದರೆ, ಅದು ತಿನ್ನಲು ಯೋಗ್ಯವೇ ಎಂಬುದನ್ನು ನೀವೇ ಯೋಚಿಸಿ.

6. ಕೋಲಾ

ಒಂದು ತಿಂಗಳ ಕಾಲ ಪ್ರತಿದಿನ ನೀವು ಒಂದು ಕ್ಯಾನ್ ಕೋಲಾ ಕುಡಿದಿರೆಂದುಕೊಳ್ಳಿ- ಇದು ಒಂದು ದೊಡ್ಡ ಚೀಲ ಪೂರ್ತಿ ಸಕ್ಕರೆಯನ್ನು ನೆಕ್ಕಿ ತಿನ್ನುವುದಕ್ಕೆ ಸಮ. ಇದು ಅತಿಯಾಗಿ ಅಸಿಡಿಕ್ ಬೇರೆ ಆಗಿರುತ್ತದೆ. ಟಾಯ್ಲೆಟ್‌ನಿಂದ ಹಿಡಿದು ಎಲ್ಲ ರೀತಿಯ ಕ್ಲೀನಿಂಗ್‌ಗೆ ಕೂಡಾ ಬಳಸಬಹುದಾಗಿದೆ. ಅಂದ ಮೇಲೆ ಅದು ನಿಮ್ಮ ಹೊಟ್ಟೆಯೊಳಗೆ ಏನೆಲ್ಲ ಮಾಡಬಹುದು ಲೆಕ್ಕ ಹಾಕಿ.

ದಿನನಿತ್ಯದ ಆಹಾರಗಳನ್ನು ಫ್ರಿಡ್ಜ್‌ನಲ್ಲಿಡುವ ಅಗತ್ಯವಿಲ್ಲ!

7. ಪ್ರೊಸೆಸ್ಡ್ ಆಹಾರ

ಚಿಪ್ಸ್ ತಿನ್ನುತ್ತಿದ್ದರೆ ನಿಲ್ಲಿಸಲೇ ಮನಸು ಬಾರದು ಅಲ್ಲವೇ? ಅದರಲ್ಲೂ ಈ ದೊಡ್ಡ ಪ್ಯಾಕ್‌ಗಳಲ್ಲಿ ಗಾಳಿಯೊಂದಿಗೆ ಉಚಿತವಾಗಿ ಬರುವ ಚಿಪ್ಸ್ ಎಲ್ಲರಿಗೂ ಇಷ್ಟ. ಪ್ರೊಸೆಸ್ಡ್ ಆಹಾರ ಡೋಪಮೈನ್ ಸ್ಟಿಮುಲೇಟ್ ಮಾಡುತ್ತದೆ. ಇದರಿಂದ ನಿಮಗೆ ಖುಷಿ ಸಿಕ್ಕುತ್ತದೆ. ಇದೇ ವ್ಯಾಕರಣ ಬಳಸಿಕೊಂಡು ಆಹಾರ ಕಂಪನಿಗಳು ತಮ್ಮ ಪ್ರೊಸೆಸ್ಡ್ ಆಹಾರವನ್ನು ತಯಾರಿಸುತ್ತವೆ. ನೀವು ಪ್ರೊಸೆಸ್ಡ್ ಫುಡ್‌ಗೆ ಅಡಿಕ್ಟ್ ಆದ ಹಾಗೂ ದೇಹ ಕ್ಯಾಲೋರಿ ಕರಗಿಸುವಲ್ಲಿ ಶೇ.50ರಷ್ಟು ಸಾಮರ್ಥ್ಯ ಕಳೆದುಕೊಳ್ಳುತ್ತದೆ.