ಎಲ್ಲೋ ಪರೀಕ್ಷೆ ಇನ್ನೆಲ್ಲೋ ಬಿಟ್ಟ ಅಪ್ಪ: ವಿದ್ಯಾರ್ಥಿನಿ ಪಾಲಿಗೆ ಆಪತ್ಭಾಂದವನಾದ ಪೊಲೀಸ್ ಅಧಿಕಾರಿ
ದೇಶಾದ್ಯಂತ ಶಾಲಾ, ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಸಹಜವಾಗಿಯೇ ವಿದ್ಯಾರ್ಥಿ, ಪೋಷಕರಿಗೆ ಹೆಚ್ಚು ಒತ್ತಡವಿದೆ. ಹಾಗೆಯೇ ಇಲ್ಲೊಬ್ಬ ಪೋಷಕರು ಗಡಿಬಿಡಿಯಲ್ಲಿ ಮಗಳನ್ನು ತಪ್ಪಾದ ಎಕ್ಸಾಂ ಸೆಂಟರ್‌ಗೆ ಡ್ರಾಪ್ ಮಾಡಿದ್ದಾರೆ. ಮುಂದೆ ಆಗಿದ್ದೇನು?
ಅಹಮದಾಬಾದ್: ಪರೀಕ್ಷೆ ಎಂದರೆ ಮಕ್ಕಳು ಟೆನ್ಶನ್ ಮಾಡಿಕೊಳ್ಳುವುದು ಸಹಜವಾಗಿದೆ. ಮಾತ್ರವಲ್ಲ ಪೋಷಕರು ಸಹ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಾರೆ. ಹೀಗೆ ವಿಪರೀತ ಟೆನ್ಶನ್ ಮಾಡಿಕೊಳ್ಳೋದ್ರಿಂದ ಕೆಲವೊಮ್ಮೆ ಎಡವಟ್ಟುಗಳು ಆಗೋದು ಇದೆ. ಹಾಗೆಯೇ ಗುಜರಾತ್‌ನ ಅಹಮದಾಬಾದ್‌ನಲ್ಲಿ ತಂದೆಯೊಬ್ಬ ಮಗಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾನೆ. ಒತ್ತಡದಲ್ಲಿದ್ದ ತಂದೆ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ತಪ್ಪು ಪರೀಕ್ಷಾ ಕೇಂದ್ರಕ್ಕೆ ಬಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ನೆರವಿಗೆ ಗುಜರಾತ್ ಪೊಲೀಸ್ ಬಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲಸದ ನಿಮಿತ್ತ ಗಡಿಬಿಡಿಯಲ್ಲಿದ್ದ ತಂದೆ ಮಗಳನ್ನು ಪರೀಕ್ಷಾ ಕೇಂದ್ರದ (Exam centre) ಬಳಿ ಬಿಟ್ಟು ಹೋಗಿದ್ದರು. .ಈಕೆ ತನ್ನ ರೋಲ್ ನಂಬರ್ ಗಾಗಿ ಎಷ್ಟೇ ಹುಡುಕಾಡಿದರೂ ಪಟ್ಟಿಯಲ್ಲಿ ಹೆಸರು ಇಲ್ಲವಾಗಿತ್ತು. ಕೊನೆಗೆ ವಿದ್ಯಾರ್ಥಿನಿಗೆ (Student) ತನ್ನ ತಂದೆ ಬೇರೆ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾರೆಂಬುದು ಅರಿವಿಗೆ ಬಂದಿತ್ತು. ಇದರಿಂದ ಗಲಿಬಿಲಿಗೊಂಡ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿರುವುದನ್ನು ಕಂಡ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ (Police officer) ಆಕೆಯ ಬಳಿ ಬಂದು ಏನಾಯಿತೆಂದು ವಿಚಾರಿಸಿದ್ದರು.
'ಹಾರ್ಟ್‌ಬ್ರೇಕ್ ಇನ್ಶುರೆನ್ಸ್ ಫಂಡ್' ಮಾಡಿಸಿದ್ದ ಲವರ್ಸ್, ಬ್ರೇಕ್‌ಅಪ್ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!
ಅಧಿಕೃತ ಕಾರಿನಲ್ಲಿ ಸೈರನ್ ಹಾಕಿ ಹುಡುಗಿಯನ್ನು ಎಕ್ಸಾಂ ಸೆಂಟರ್‌ಗೆ ತಲುಪಿಸಿದ ಅಧಿಕಾರಿ
ಈ ಸಂದರ್ಭಲ್ಲಿ ವಿದ್ಯಾರ್ಥಿನಿ ಎಕ್ಸಾಂ ಸೆಂಟರ್ ತಪ್ಪಿದ್ದಾಗಿ ತಿಳಿಸಿದ್ದಾಳೆ. ಅಧಿಕಾರಿಯು ಆಕೆಗೆ ಹಾಲ್ ಟಿಕೆಟ್ ತೋರಿಸಲು ಹೇಳಿದರು ಮತ್ತು ಟಿಕೆಟ್‌ನಲ್ಲಿ ನಮೂದಿಸಲಾದ ಕೇಂದ್ರವು 20 ಕಿಮೀ ದೂರದಲ್ಲಿದೆ ಎಂದು ಅರಿತುಕೊಂಡರು. ಹೀಗಾಗಿ ಆಕೆಯನ್ನು ತನ್ನ ಪೊಲೀಸ್ ವಾಹನದಲ್ಲಿ ಎಕ್ಸಾಂ ಸೆಂಟರ್‌ಗೆ ತಲುಪಿಸಲು ನಿರ್ಧರಿಸಿದ್ದಾರೆ. ಇಷ್ಟರಲ್ಲಿ ಪರೀಕ್ಷೆಗೆ (Exam) 20 ನಿಮಿಷ ಮಾತ್ರ ಉಳಿದಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕೃತ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಹುಡುಗಿಯನ್ನು ಸಮಯಕ್ಕಿಂತ ಮುಂಚಿತವಾಗಿ ಆಕೆಯ ಮೂಲ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಆಕೆಯ ಒಂದು ವರ್ಷ ಹಾಳಾಗದಂತೆ ರಕ್ಷಿಸಿದರು. ಇಡೀ ಘಟನೆಯನ್ನು ಆದರ್ಶ್ ಹೆಗ್ಡೆ ಎಂಬ ಬಳಕೆದಾರರ ಹೆಸರಿನ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.
'ನಿಗದಿತ ಸಮಯಕ್ಕೆ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿಯ ನೆರವಿಗೆ ಧನ್ಯವಾದಗಳು. ನಮ್ಮ ಸಮಾಜದಲ್ಲಿ ಇಂತಹ ಕೆಲವು ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ; ಎಂದು ಆದರ್ಶ್ ಹೆಗ್ಡೆ ಎಂಬವರು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಇದಕ್ಕೆ ಸಾಕಷ್ಟು ಲೈಕ್ಸ್‌ಗಳು ಬಂದಿವೆ. ನೆಟ್ಟಿಗರು ಪೊಲೀಸ್ ಅಧಿಕಾರಿಯ ಸಹಾಯಹಸ್ತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
'ತವರಿನ ಸಿರಿ' ಕಂಡು ಭಾವುಕಳಾದ ತಾಯಿ: ಅಜ್ಜನ ಮನೆಯಿಂದ ವಧುವಿಗೆ ಸಿಕ್ತು 3 ಕೋಟಿ ಗಿಫ್ಟ್
ಹಲವರು ಪೊಲೀಸ್ ಅಧಿಕಾರಿಯನ್ನು 'ದಿ ರಿಯಲ್ ಲೈಫ್ ಸಿಂಘಮ್' ಎಂದು ಕರೆದಿದ್ದಾರೆ. ಇನ್ನು ಕೆಲವರು 'ಸಮಾಜದಲ್ಲಿ ಇನ್ನೂ ಮಾನವೀಯತೆ ಇದೆ' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು 'ಉತ್ತಮ ಪೊಲೀಸ್ ಅಧಿಕಾರಿಗಳು ಇನ್ನೂ ನಮ್ಮ ನಡುವೆಯಿರುವುದು ಖುಷಿಯ ವಿಚಾರ' ಎಂದು ತಿಳಿಸಿದ್ದಾರೆ.