'ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌' ಮಾಡಿಸಿದ್ದ ಲವರ್ಸ್‌, ಬ್ರೇಕ್‌ಅಪ್‌ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!

ಪ್ರೀತಿಯಲ್ಲಿದ್ದಾಗ ಹುಡುಗ-ಹುಡುಗಿ ಇಬ್ಬರೂ ಪ್ರತಿ ತಿಂಗಳು 500 ರೂಪಾಯಿ ಮೊತ್ತವನ್ನು ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ಗೆ ಹಾಕಿದ್ದರು. ಕೊನೆಗೆ ಹುಡುಗಿ ಬ್ರೇಕ್‌ಅಪ್‌ ಮಾಡಿಕೊಂಡಿದ್ದರಿಂದ ಹುಡುಗನಿಗೆ ಈ ಫಂಡ್‌ನಲ್ಲಿದ್ದ 25 ಸಾವಿರ ರೂಪಾಯಿ ಸಿಕ್ಕಿದೆ. ಇದನ್ನು ಹುಡುಗ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ವೈರಲ್‌ ಆಗಿದೆ.

heartbreak insurance fund With GF gets Rs 25000 after she cheated on him san

ಬೆಂಗಳೂರು (ಮಾ.16): ಪ್ರೀತಿ ಮಾಡುತ್ತಿದ್ದ ಹುಡುಗಿ ತನಗೆ ಮೋಸ ಮಾಡಿ ಬ್ರೇಕ್‌ಅಪ್‌ ಮಾಡಿಕೊಂಡ ಕಾರಣಕ್ಕೆ ವ್ಯಕ್ತಿಯೊಬ್ಬ 25 ಸಾವಿರ ರೂಪಾಯಿ ಪಡೆದುಕೊಂಡಿದ್ದಾನೆ. ಇಷ್ಟು ದೊಡ್ಡ ಮೊತ್ತದ ಹಣ ತನಗೆ ಸಿಕ್ಕಿದ್ದು ಹೇಗೆ ಅನ್ನೋದನ್ನು ಆ ವ್ಯಕ್ತಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರೀತೀಕ್‌ ಆರ್ಯನ್‌ ಎನ್ನುವ ವ್ಯಕ್ತಿ ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನಾನು ಹಾಗೂ ನನ್ನ ಹುಡುಗಿ ಪ್ರತಿ ತಿಂಗಳು 500 ರೂಪಾಯಿಯಂತೆ ಜಂಟಿ ಖಾತೆಗೆ ಹಣ ಹಾಕುತ್ತಿದ್ದೆವು. ಅದಕ್ಕಾಗಿ ಒಂದು ಷರತ್ತು ವಿಧಿಸಲಾಗಿತ್ತು. ನಮ್ಮ ಪ್ರೀತಿಯಲ್ಲಿ ಯಾರಿಗೆ ಮೋಸ ಆಗುತ್ತದೆಯೋ, ಅವರಿಗೆ ಇದರಲ್ಲಿ ಠೇವಣಿಯಾಗಿರುವ ಎಲ್ಲಾ ಹಣ ಸಿಗುತ್ತದೆ ಅನ್ನೋದು ಮಾತನಾಗಿತ್ತು. ಈ ಫಂಡ್‌ಗೆ ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ ಎನ್ನುವ ಹೆಸರನ್ನು ಇಡಲಾಗಿತ್ತು. 'ನನ್ನ ಗೆಳತಿ ನನಗೆ ಮೋಸ ಮಾಡಿದ್ದ ಕಾರಣಕ್ಕಾಗಿ 25 ಸಾವಿರ ರೂಪಾಯಿಯನ್ನು ನಾನು ಪಡೆದುಕೊಂಡಿದ್ದೇನೆ. ನಮ್ಮಿಬ್ಬರ ರಿಲೇಷನ್‌ಶಿಪ್‌ ಆರಂಭವಾದಾಗ ನಾವಿಬ್ಬರೂ ಪ್ರತಿ ತಿಂಗಳು ತಲಾ 500 ರಂತೆ ಜಂಟಿ ಖಾತೆಗೆ ಹಾಕುತ್ತಿದ್ದೆವು. ಈ ಸಂಬಂಧದಲ್ಲಿ ಯಾರಿಗೆ ಮೋಸ ಆಗುತ್ತದೆಯೋ ಅವರಿಗೆ ಈ ಎಲ್ಲಾ ಹಣ ಸಿಗುತ್ತದೆ ಎಂದು ನಿಯಮ ಮಾಡಲಾಗಿತ್ತು. ಇದನ್ನು ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ (ಎಚ್‌ಐಎಫ್‌) ಎಂದು ಕರೆದಿದ್ದೆವು' ಎಂದು ಆರ್ಯನ್‌ ಬರೆದುಕೊಂಡಿದ್ದಾರೆ.


ಈ ಟ್ವೀಟ್‌ ಮೈಕ್ರೋಬ್ಲಾಗಿಂಗ್‌ ವೇದಿಕೆಯಲ್ಲಿ ವೈರಲ್‌ ಆಗಿದೆ. ಇದನ್ನು ಈವರೆಗೂ 5.24 ಕೋಟಿ ಮಂದಿ ನೋಡಿದ್ದಾರೆ.  631 ಮಂದಿ ಇದನ್ನು ರೀಟ್ವೀಟ್‌ ಮಾಡಿದ್ದರೆ,  263 ಮಂದಿ ಕೋಟ್‌ ಟ್ವೀಟ್‌ ಮಾಡಿದ್ದಾರೆ. ಅಂದಾಜು 10 ಸಾವಿರ ಮಂದಿ ಈ ಟ್ವೀಟ್‌ಅನ್ನು ಲೈಕ್‌ ಮಾಡಿದ್ದಾರೆ. ಈ ಟ್ವೀಟ್‌ಅನ್ನು ನೋಡಿದ ಬಹುತೇಕ ವ್ಯಕ್ತಿಗಳು, ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ ಐಡಿಯಾಗೆ ಮೆಚ್ಚುಗೆ ವ್ಯಕ್ತಿಪಡಿಸಿದ್ದು, ಅವಕಾಶ ಸಿಕ್ಕಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

'ನಾನೂ ಹೂಡಿಕೆಯ ಅವಕಾಶಗಳ ಬಗ್ಗೆ ನೋಡುತ್ತಿದ್ದೆ. ಬಹುಶಃ ಇದರಲ್ಲಿ ಉತ್ತಮ ರಿಟರ್ನ್ಸ್‌ ಇರುವ ಸಾಧ್ಯತೆ ಕಾಣುತ್ತಿದೆ. ಯಾರಾದರೂ ಜೊತೆಯಾಗಲು ಬಯಸುತ್ತೀರಾ?' ಎಂದು ವ್ಯಕ್ತಿಯೊಬ್ಬ ಬರೆದಿದ್ದರೆ, ಇನ್ನೊಬ್ಬ ವ್ಯಕ್ತಿ, 'ಸರಿ ಹಾಗಿದ್ರೆ, ಎಐಎಫ್‌ ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ, ಬ್ರೇಕ್‌ಅಪ್‌ ಮಾಡಿಕೊಳ್ಳುವ ಮುನ್ನ ಯೋಚಿಸಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

3 Month Rule: ಈ ಫಾರ್ಮುಲಾ ಬಗ್ಗೆ ತಿಳ್ಕೊಂಡ್ರೆ ಬ್ರೇಕಪ್‌ ಬಳಿಕ ಮುಂದೇನು ಅನ್ನೋದು ತಿಳಿಯುತ್ತೆ!

'ಹಣ ಕಳೆದುಕೊಳ್ಳುತ್ತೇನೆ ಎಂದು ಗೊತ್ತಿದ್ದರೂ ಆಕೆ ನಿಮಗೆ ಮೋಸ ಮಾಡಲು ನಿರ್ಧಾರ ಮಾಡಿದ್ದಳು. ನೀವು ಇದರ ಇನ್ನೊಂದು ಕೋನವನ್ನು ಅರ್ಥಮಾಡಿಕೊಂಡಿದ್ದೀರಾ? ಇದನ್ನು ಇನ್ನೊಂದು ಕೇಸ್‌ಗಳೊಂದಿಗೆ ರಿಪೀಟ್‌ ಮಾಡಬಹುದು.  ಆದರೆ, ನಿಮ್ಮ ಬ್ಯುಸಿನೆಸ್‌ ಐಡಿಯಾ ಮಾತ್ರ ಸೂಪರ್‌ ಆಗಿದೆ' ಎಂದಿದ್ದಾರೆ.

ಬ್ರೇಕಪ್ ಬಳಿಕ ನೋವು ಮರೆತು ಮುಂದೆ ಸಾಗಲು ಇಲ್ಲಿವೆ Vastu tips

'ಹಾಗೇನಾದರೂ ಇಂಥ ಫಂಡ್‌ ಮಾಡಿದ್ದರೆ, ನಾನು ಆರಾಮವಾಗಿ ವಿದೇಶ ಪ್ರವಾಸ ಮಾಡಬಹುದಿತ್ತು' ಎಂದು ಬರೆದುಕೊಂಡಿದ್ದರೆ, ಇನ್ನೊಬ್ಬ ವ್ಯಕ್ತಿ, ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ ಬದಲು, ಯಾರು ಮೊದಲು ಮೋಸ ಮಾಡುತ್ತಾರೆ ಎನ್ನುವ ಅರ್ಥದ ಹೆಸರನ್ನು ಫಂಡ್‌ಗೆ ನೀಡಬೇಕಿತ್ತು ಎಂದು ಬರೆದಿದ್ದಾರೆ. ಇನ್ನು ತಮ್ಮ ಟ್ವೀಟ್‌ಗೆ ಪ್ರತಿಕ್ರಿಯೆಯನ್ನೂ ನೀಡಿರುವ ಪ್ರತೀಕ್‌, 'ಒಂದು ಸಂಬಂಧದಲ್ಲಿ ಇರುವ ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌ನಿಂದ ತಮಗೆ ಲಾಭವಾಗಲಿದೆ ಎಂದು ಮಹಿಳೆಯರು ಮಾತ್ರ ಯೋಚಿಸುವುದೇಕೆ? ಈ ನೀತಿಯು ನಿಷ್ಠಾವಂತರಿಗೆ ಮಾತ್ರ' ಎಂದು ಹೇಳುವ ಮೂಲಕ ಹುಡುಗಿಯರು ಪ್ರೀತಿಯಲ್ಲಿ ನಿಷ್ಠಾವಂತರಲ್ಲ ಎಂದು ಕಾಲೆಳೆದಿದ್ದಾರೆ. ಇಷ್ಟೊಂದು ಧನರಾಶಿಯನ್ನು ಇಟ್ಟುಕೊಂಡು ಏನ್‌ ಮಾಡ್ತೀಯಾ ಎಂದು ಇನ್ನೊಬ್ಬಳು ಹುಡುಗಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಪ್ರತೀಕ್‌ ಆರ್ಯನ್‌, 'ಮುಂದಿನ ರಿಲೇಷನ್‌ಷಿಪ್‌ನಲ್ಲಿ ಇದನ್ನು ಹೂಡಿಕೆ ಮಾಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios