ಇದುವರೆಗೆ ನೀವು ಅಂಬಾನಿ, ಅದಾನಿಯಂತಹ ಶ್ರೀಮಂತರು ಗಣ್ಯ ವ್ಯಕ್ತಿಗಳು ತಮ್ಮ ಮಕ್ಕಳ ಮದ್ವೆಯಲ್ಲಿ ಭರ್ಜರಿ ಗಿಫ್ಟ್ ನೀಡಿದ ವಿಚಾರಗಳನ್ನು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ನಮ್ಮ ನಿಮ್ಮಂತ ಸಾಮಾನ್ಯ ಹೆಣ್ಣು ಮಗಳೊಬ್ಬಳಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ರಾಜಸ್ಥಾನ: ಇದುವರೆಗೆ ನೀವು ಅಂಬಾನಿ ಅದಾನಿಯಂತಹ ಶ್ರೀಮಂತರು ಗಣ್ಯ ವ್ಯಕ್ತಿಗಳು ತಮ್ಮ ಮಕ್ಕಳ ಮದ್ವೆಯಲ್ಲಿ ಭರ್ಜರಿ ಗಿಫ್ಟ್ ನೀಡಿದ ವಿಚಾರಗಳನ್ನು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ನಮ್ಮ ನಿಮ್ಮಂತ ಸಾಮಾನ್ಯ ಹೆಣ್ಣು ಮಗಳೊಬ್ಬಳಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡುವ ಯುವಕ ಯುವತಿಗೆ ತಮ್ಮ ಗೆಳೆಯರು, ನೆಂಟರು, ಆತ್ಮೀಯರು ಮದುವೆ ಸಂದರ್ಭದಲ್ಲಿ ಅದ್ದೂರಿಯಾದ ಗಿಫ್ಟ್‌ಗಳನ್ನು ನೀಡಿ ಹೊಸ ಜೀವನಕ್ಕೆ ಶುಭ ಹಾರೈಸುತ್ತಾರೆ. ಈ ಗಿಫ್ಟ್‌ಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಆಸ್ತಿ, ಮನೆ, ಫ್ಲಾಟ್, ಬಂಗಾರ ಆಭರಣ ಸೇರಿದಂತೆ ಯಾವುದೇ ವಸ್ತುವನ್ನು ಗಿಫ್ಟ್ ಆಗಿ ನೀಡಬಹುದಾಗಿದೆ. ಅದೇ ರೀತಿ ಇಲ್ಲೊಂದು ಕಡೆ ವಧುವಿಗೆ ಹೀಗೆ ಆತ್ಮೀಯರು ನೀಡಿದ ಗಿಫ್ಟ್‌ಗಳ ಮೊತ್ತ 3 ಕೋಟಿ ತೂಗುತ್ತಿದೆ. 

ಹೌದು ಅಚ್ಚರಿಯಾದರೂ ಇದು ಸತ್ಯ, ಉತ್ತರ ಭಾರತದ ಮದುವೆಗಳಲ್ಲಿ ಮದುವೆಗೂ ಮೊದಲು 'ಮಮೆರ್' ಅಥವಾ ಮೈರಾ (mayra) (ತಮ್ಮ ಸೊಸೆ ಅಥವಾ ಅಳಿಯನಿಗೆ ಸೋದರ ಮಾವ ನೀಡುವ ಉಡುಗೊರೆ) ಎಂಬ ಸಮಾರಂಭವನ್ನು ಆಚರಿಸಲಾಗುತ್ತದೆ. ಅದರಂತೆ ವಧುವಿನ ಮನೆಗೆ ಬರುವ ಆಕೆಯ ಸೋದರ ಮಾವ ಅಂದರೆ ವಧುವಿನ ಅಮ್ಮನ ಅಣ್ಣ ಅಥವಾ ತಮ್ಮ ತಮ್ಮ ಸೊಸೆಗೆ ಸಿಹಿ ತಿಂಡಿ, ಆಭರಣ, ಸೀರೆ, ಹಣ ಮುಂತಾದ ಉಡುಗೊರೆಗಳನ್ನು ನೀಡಿ ಆಕೆಯನ್ನು ಶುಭಕಾರ್ಯಕ್ಕೆ ಅಡಿ ಇಡಲು ಹಾರೈಸುತ್ತಾರೆ. ಅದರಂತೆ ರಾಜಸ್ಥಾನದ ನಾಗಪುರದಲ್ಲಿ ನಡೆದ ಮಮೆರ್ ಕಾರ್ಯಕ್ರಮದಲ್ಲಿ ವಧುವಿಗೆ ಸೋದರ ಮಾವನ ಕಡೆಯಿಂದ ಮೂರು ಕೋಟಿ ಮೊತ್ತದ ಉಡುಗೊರೆ ಹರಿದು ಬಂದಿದೆ. ಇದನ್ನು ನೋಡಿ ಅಲ್ಲಿ ಇದ್ದವರೆಲ್ಲಾ ಅಚ್ಚರಿಗೊಂಡಿದ್ದಾರೆ. 

ಒಬ್ರು 75 ಕೋಟಿ ಬಂಗ್ಲೆ, ಇನ್ನೊಬ್ರು 4 ಕೋಟಿ ಕಾರು: ಅಬ್ಬಬ್ಬಾ ಈ ಸೆಲೆಬ್ರಿಟಿಗಳು ಕೊಟ್ಟ ಈ ಗಿಫ್ಟುಗಳೇ!

ಹರಿವಾಣದಲ್ಲಿ ದುಡ್ಡು ಹಾಗೂ ಆಸ್ತಿಪತ್ರವನ್ನು ಇಟ್ಟು ಸೋದರ ಮಾವ ಅದನ್ನು ತಲೆಯಲ್ಲಿರಿಸಿ ಹೊತ್ತುಕೊಂಡು ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಧುವಿನ ಸೋದರ ಮಾವ 80 ಲಕ್ಷ ನಗದು, ಆಭರಣ, ಆಸ್ತಿಪತ್ರ ಹಾಗೂ ಒಂದು ಟ್ಯಾಕ್ಟರ್‌ ಅನ್ನು ಉಡುಗೊರೆಯಾಗಿ ತನ್ನ (ತಂಗಿ ಅಥವಾ ಅಕ್ಕನ ಮಕ್ಕಳು) ಸೊಸೆಗೆ ನೀಡಿದ್ದಾರೆ. 

ಹೀಗೆ ಸೋದರ ಮಾವನಿಂದ ಅದ್ದೂರಿ ಗಿಫ್ಟ್ ಪಡೆದ ಅದೃಷ್ಟವಂತ ವಧುವನ್ನು ಅನುಷ್ಕಾ ಎಂದು ಗುರುತಿಸಲಾಗಿದೆ. ಈಕೆ ಘೇವರಿ ದೇವಿ ಹಾಗೂ ಭನ್ವರ್‌ಲಾಲ್ ಪೊತಲಿಯಾ ಎಂಬುವವರ ಪುತ್ರಿಯಾಗಿದ್ದು, ನಿನ್ನೆ ಈಕೆ ಹಸೆಮಣೆ ಏರಿದರು. ಈ ವೇಳೆ ವಧುವಿನ ಅಜ್ಜ (ತಾಯಿಯ ತಂದೆ) ಬುರ್ಡಿ ಗ್ರಾಮದ ನಿವಾಸಿಯಾಗಿರುವ ಭನ್ವರ್‌ಲಾಲ್ ಘರ್ವ ಅವರು ತಮ್ಮ ಮೂವರು ಗಂಡು ಮಕ್ಕಳಾದ ಹರೇಂದ್ರ (Harendra), ರಾಮೇಶ್ವರ್ ಹಾಗೂ ರಾಜೇಂದ್ರ (Rajendra) ಅವರ ಜೊತೆ ಅಲ್ಲಿಗೆ ಆಗಮಿಸಿ ತಮ್ಮ ಮೊಮ್ಮಗಳಿಗೆ ಒಟ್ಟು ಮೂರು ಕೋಟಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. 

ಘೇವರಿ ದೇವಿ (Ghevari Devi) ಹಾಗೂ ಅವರ ಕುಟುಂಬ ತನ್ನ ತವರಿನ ಸಿರಿ ಹಾಗೂ ಹೃದಯ ವೈಶಾಲ್ಯತೆಯನ್ನು ನೋಡಿ ಭಾವುಕರಾಗಿದ್ದಾರೆ. ಈ ವೇಳೆ ಮಾತನಾಡಿದ ವಧುವಿನ ತಾಯಿಯ ತಂದೆ ಭನ್ವರ್‌ಲಾಲ್ (Bhanwarlal), ಘೇವರಿ ದೇವಿ ನಮ್ಮ ಏಕೈಕ ಮಗಳಾಗಿದ್ದು, ಆಕೆ ಹುಟ್ಟಿದ ನಂತರ ನಮ್ಮ ಮನೆ ಬೆಳಗಿತು. ಆಕೆಯ ನಂತರವೇ ಆಕೆಯ ಮೂವರು ಸಹೋದರರು ಸಾಕಷ್ಟು ಐಶ್ವರ್ಯಾ ಗಳಿಸಿ ಶ್ರೀಮಂತರಾದರೂ ಎಂದು ತಮ್ಮ ಏಕೈಕ ಪುತ್ರಿಯನ್ನು ಕೊಂಡಾಡಿದ್ದಾರೆ. 

ಕೆಎಲ್ ರಾಹುಲ್‌-ಆಥಿಯಾ ಶೆಟ್ಟಿಗೆ ದುಬಾರಿ ಗಿಫ್ಟ್‌, 2.17 ಕೋಟಿ ಮೌಲ್ಯದ ಕಾರು, 30 ಲಕ್ಷದ ವಾಚ್‌!

Scroll to load tweet…

Scroll to load tweet…