ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!
ಬೆಂಗಳೂರಿನಲ್ಲಿ ಮನೆ ಹುಡುಕೋದು ಅಷ್ಟು ಸುಲಭವದ ಕೆಲಸವೇನಲ್ಲ. ಹುಡುಕಿದವರಿಗಷ್ಟೇ ಗೊತ್ತು ಅದರ ಕಷ್ಟ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಹೇಳೋದೇ ಬೇಡ. ಮನೆ ಓನರ್ಸ್ ಸಾವಿರಾರು ರೂಲ್ಸ್ ಹೇಳ್ತಾರೆ. ಹಾಗೆಯೇ ಇಲ್ಲೊಂದು ಹೌಸಿಂಗ್ ಸೊಸೈಟಿ ಬ್ಯಾಚುಲರ್ಸ್‌ಗೆ ಮನೆ ಕೊಡೋ ಮುಂಚೆ ಹೇಳಿರೋ ರೂಲ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಜನರು ಎಲ್ಲೆಲ್ಲಿಂದಲೋ ಬರುವ ಕಾರಣ ಮನೆ ಮಾಲೀಕರು ಸಹ ಕಣ್ಣುಮುಚ್ಚಿ ಮನೆ ಬಾಡಿಗೆಗೆ ಕೊಡಲಾಗುವುದಿಲ್ಲ. ಅವರ ಕುರಿತಾಗಿ ವಿಚಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ದುಷ್ಕೃತ್ಯ ಎಸಗಿದರೆ ಅದಕ್ಕೆ ಮನೆ ಮಾಲೀಕರೇ ಹೊಣೆಯಾಗಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಮನೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ತಾರೆ. ಮಾತ್ರವಲ್ಲ ಇದರ ಮೇಲೂ ಮತ್ತು ಹಲವು ನಿಯಮಗಳನ್ನು ಹೇರುತ್ತಾರೆ. ನಾನ್‌ವೆಜ್ ಮಾಡೋ ಹಾಗಿಲ್ಲ, ಮನೆಯಲ್ಲಿ ತುಂಬಾ ಮಂದಿ ಸ್ಟೇ ಮಾಡೋ ಹಾಗಿಲ್ಲ ಎಂಬೆಲ್ಲಾ ರೂಲ್ಸ್‌ಗಳ ಬಗ್ಗೆ ಹೇಳುತ್ತಾರೆ. ಅದೆಲ್ಲಾ ಸರಿ, ಆದ್ರೆ ಇಲ್ಲೊಂದು ಮನೆ ಮಾಲೀಕರ ರೂಲ್ಸ್ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬೆಂಗಳೂರಿನ ಹೌಸಿಂಗ್ ಸೊಸೈಟಿಯಲ್ಲಿ ವಿಚಿತ್ರ ರೂಲ್ಸ್
ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್‌ಗಳು (ಆರ್‌ಡಬ್ಲ್ಯೂಎ) ಸಾಮಾನ್ಯವಾಗಿ ತಮ್ಮ ಸದಸ್ಯರಿಗೆ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುತ್ತವೆ. ಸಾಮಾನ್ಯವಾಗಿ ಶಿಸ್ತನ್ನು ರೂಪಿಸಿಕೊಳ್ಳಲು ಈ ನಿಯಮವನ್ನು ಮಾಡಿರಲಾಗಿರುತ್ತದೆ. ಆದ್ರೆ ಬೆಂಗಳೂರಿನ ಕುಂದನಹಳ್ಳಿ ಗೇಟ್ ನೆರೆಹೊರೆಯಲ್ಲಿರುವ ರೆಸಿಡೆನ್ಶಿಯಲ್ ಸೊಸೈಟಿಯ ನಿಯಮ ಮಾತ್ರ ಎಲ್ಲರೂ ಸಿಟ್ಟಿಗೇಳುವಂತೆ ಮಾಡಿದೆ.
ಬದಲಾಗಿದೆ ಬೆಂಗಳೂರು, ಬಾಡಿಗೆ ಮನೆ ಪಡೆಯಲು ನಿಮ್ಮಲಿರಬೇಕು ಈ ಪದವಿ!
ಹೌಸಿಂಗ್ ಸೊಸೈಟಿಯ ರೂಲ್ಸ್‌ಗಳೇನು?
ನಗರದ ಹೌಸಿಂಗ್ ಸೊಸೈಟಿಯೊಂದು ಹೊರಡಿಸಿರುವ ಈ ಹೊಸ ಮಾರ್ಗಸೂಚಿಯ (Guidelines) ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಬ್ಯಾಚುಲರ್ಗಳು ಮತ್ತು ಅವಿವಾಹಿತ ಮಹಿಳೆಯರು (Unmarried) ಬಾಡಿಗೆಗೆ ಪಡೆದಿರುವ ಫ್ಲ್ಯಾಟ್ಗಳಲ್ಲಿ ರಾತ್ರಿ 10 ಗಂಟೆಯ ನಂತರ ಅತಿಥಿಗಳಿಗೆ (Guests) ಅವಕಾಶ ನೀಡಲಾಗುವುದಿಲ್ಲ ಎಂಬ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ನಿಯಮಗಳನ್ನು ಅನುಸರಿಸದಿದ್ದಲ್ಲಿ 1000 ರೂ. ದಂಡ (Fine) ಕಟ್ಟಬೇಕಾಗುತ್ತದೆ ಅಥವಾ ಸಮಾಜದಿಂದ ಹೊರಹಾಕಲಾಗುವುದು ಎಂಬ ನಿಯಮವನ್ನು ರೂಪಿಸಲಾಗಿದೆ. ಉದಾಹರಣೆಗೆ ರಾತ್ರಿ 10 ಗಂಟೆಯ ನಂತರ ಜೋರಾಗಿ ಮ್ಯೂಸಿಕ್ ಹಾಕುವ ಆಗಿಲ್ಲ, ತಡರಾತ್ರಿಯ ಪಾರ್ಟಿಗಳನ್ನು ಅನುಮತಿಸಲಾಗುವುದಿಲ್ಲ ಮತ್ತು ರಾತ್ರಿ 10 ಗಂಟೆಯ ನಂತರ ಫೋನ್ ಕರೆಗಳಿಗಾಗಿ ಕಾರಿಡಾರ್‌ಗಳು ಮತ್ತು ಬಾಲ್ಕನಿಗಳನ್ನು ಬಳಸಬಾರದು ಎಂದು ರೂಲ್ಸ್‌ನಲ್ಲಿ ತಿಳಿಸಲಾಗಿದೆ. ಹೌಸಿಂಗ್ ಸೊಸೈಟಿಯ ಈ ವಿಚಿತ್ರ ರೂಲ್ಸ್‌ನ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಇದು ಹಾಸ್ಟೆಲ್ ನಿಯಮಗಳಿಗಿಂತ ಕೆಟ್ಟದಾಗಿದೆ. ನೀವು ಫ್ಲಾಟ್ನ್ನು ಬಾಡಿಗೆಗೆ ನೀಡಲು ಹಣವನ್ನು ಪಾವತಿಸುತ್ತಿದ್ದೀರಿ. ಒಪ್ಪಂದಗಳ ಪ್ರಕಾರ ನೀವು ಬಾಡಿಗೆಗೆ ನೀಡುತ್ತಿರುವ ಅವಧಿಯವರೆಗೂ ಇದು ನಿಮ್ಮ ಫ್ಲಾಟ್ ಆಗಿರುತ್ತದೆ. ನಿಮ್ಮ ಫ್ಲಾಟ್‌ಗೆ ಯಾರು ಬರುತ್ತಾರೆ, ಹೋಗುತ್ತಾರೆ ಮತ್ತು ನೀವು ಬಾಲ್ಕನಿಯಲ್ಲಿ ಏನು ಮಾಡುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮಗೆ ಬಿಟ್ಟದ್ದು. ಇತ್ತೀಚಿನ ದಿನಗಳಲ್ಲಿ ಹೌಸಿಂಗ್ ಸೊಸೈಟಿಯ ನಿಯಮಗಳು ತುಂಬಾ ಹಾಸ್ಯಾಸ್ಪದವಾಗುತ್ತಿವೆ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.
ಬಾಡಿಗೆ ಮನೆ ಮಾಲಿಕರೇ, ಒತ್ತಾಯಪೂರ್ವಕವಾಗಿ ಬಾಡಿಗೆ ವಸೂಲಿಗಿಳಿದರೆ ಜೈಲು ಫಿಕ್ಸ್!
ಅದಕ್ಕಾಗಿಯೇ ನಾನು ಹೌಸಿಂಗ್ ಸೊಸೈಟಿಗಳನ್ನು ದ್ವೇಷಿಸುತ್ತೇನೆ. ಕೇವಲ 3-5 ಅಂತಸ್ತಿನ ಕಟ್ಟಡಗಳು ವಾಸಕ್ಕೆ ಅತ್ಯುತ್ತಮವಾಗಿವೆ. ಈ ಸೊಸೈಟಿಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆಯೂ ಕಡಿಮೆ. ಇದು ಕರುಣಾಜನಕವಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಬೆಂಗಳೂರಿನ ಮನೆ ಮಾಲೀಕರೊಬ್ಬರು ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವಾಗ ಮಾಲೀಕರು ಬಾಡಿಗೆದಾರರ (Tenant) ಲಿಂಕ್ಡ್‌ಇನ್ ಪ್ರೊಫೈಲ್ ಕೇಳಿದ್ದರು. ಈ ವಾಟ್ಸಾಪ್ ಸಂದೇಶ ಎಲ್ಲೆಡೆ ವೈರಲ್ ಆಗಿತ್ತು.