ನಾನು ಒಂದು ಹುಡುಗನನ್ನು ಪ್ರೀತಿ ಮಾಡುತ್ತಿದ್ದೇನೆ. ಆದರೆ ಈ ವಿಷಯವನ್ನು ನನ್ನ ಮನೆಯವರಿಗೆ ಹೇಗೆ ತಿಳಿಸಲಿ ಎನ್ನುವ ಭಯ ಕಾಡುತ್ತಿದೆ. ಮೂರು ವರ್ಷದ ನನ್ನ ಪ್ರೀತಿಯನ್ನು ಇದುವರೆಗೂ ಮನೆಗೆ ತಿಳಿಯದ ಹಾಗೆ ಕಾಪಾಡಿಕೊಂಡು ಬಂದೆ. ಆದರೆ ಇನ್ನು ರಹಸ್ಯವಾಗಿ ಇಡುವುದು ಸರಿಯಲ್ಲ ಎನ್ನಿಸುತ್ತದೆ. ಅದೂ ಅಲ್ಲದೇ ಈಗ ಮನೆಯಲ್ಲಿ ನನ್ನ ಮದುವೆಯ ಕುರಿತು ಮಾತುಕತೆಗಳು ಶುರುವಾಗುತ್ತಿವೆ. ನನ್ನ ಪ್ರೀತಿಯ ವಿಷಯವನ್ನು ಮೂರನೇ ವ್ಯಕ್ತಿಗಳಿಂದ ನಮ್ಮ ಮನೆಯವರು ತಿಳಿದುಕೊಳ್ಳುವುದು ಬೇಡ. ಅದನ್ನು ನಾನೇ ಹೇಳಬೇಕು ಎಂದು ಮನಸ್ಸು ಹೇಳುತ್ತಿದೆ. ಆದರೆ ಇಂತಹ ಸೂಕ್ಷ್ಮ ವಿಚಾರವನ್ನು ಹೇಗೆ ಹೇಳಲಿ ಎಂದು ತಿಳಿಯದಾಗಿದೆ, ಏನಾದರೂ ಸಲಹೆ ಇದ್ದರೆ ಹೇಳಿ.

ನಿಧಾನವಾಗಿ ಮುಂದುವರೆಯಿರಿ

ಪ್ರೀತಿಯ ಸಹೋದರಿ, ನಿಮ್ಮದು ಮೂರು ವರ್ಷದ ಪ್ರೀತಿ ಎಂದು ಹೇಳಿದ್ದೀರಿ. ಆದರೆ ಹುಡುಗನ ಬಗ್ಗೆ ಯಾವುದೇ ವಿವರ ತಿಳಿಸಿಲ್ಲ. ನನ್ನ ಪ್ರಕಾರ ನೀವು ಪ್ರೀತಿ ಮಾಡಿದ ಮೊದಲ ದಿನಗಳಲ್ಲಿಯೇ ನಿಮ್ಮ ತಂದೆ ತಾಯಿಗೆ ಸೂಕ್ಷ್ಮವಾಗಿ ಪ್ರೀತಿಯ ಬಗ್ಗೆ ಹೇಳಿದ್ದರೆ ಚೆಂದವಿತ್ತು. ಇರಲಿ, ಈಗ ನಿಮಗೆ ಸಂಕ್ರಮಣ ಸಮಯ. ನೀವು ತಂದೆ, ತಾಯಿ ತೋರಿಸಿದ ಹುಡುಗನನ್ನು ಮದುವೆಯಾಗುವುದೋ, ಪ್ರೀತಿ ಮಾಡಿದ ಹುಡುಗನನ್ನೋ ಎನ್ನುವ ಗೊಂದಲಕ್ಕೆ ಬೀಳದೇ ನಿಮ್ಮ ಪ್ರೀತಿಯ ಬಗ್ಗೆ ಧೈರ್ಯವಾಗಿ ಮನೆಯವರ ಬಳಿ ಹೇಳಿಕೊಳ್ಳಿ.

ಟಿಕ್‌ಟಾಕಲ್ಲಿಲ ಶುರುವಾದ ಲವ್ ಸ್ಟೋರಿ ಸೂಸೈಡಿನಲ್ಲಿ ಅಂತ್ಯ

ಮೂರನೇ ವ್ಯಕ್ತಿಗಳಿಂದ ವಿಷಯ ಗೊತ್ತಾಗುವುದು ಬೇಡ. ನಿಮ್ಮ ಸಂಗಾತಿಯೊಂದಿಗೂ ಒಂದು ಬಾರಿ ಚರ್ಚೆ ಮಾಡಿ. ಅವರನ್ನು ಮನೆಗೆ ಕರೆದುಕೊಂಡು ಬಂದು ನಿಮ್ಮ ಮನೆಯವರಿಗೆ ಪರಿಚಯ ಮಾಡಿಸಿ, ನಿಮ್ಮ ಮನೆಯವರಿಗೆ ನಿಮ್ಮ ಸಂಗಾತಿಯ ಬಗ್ಗೆ ಪೂರ್ಣವಾಗಿ ತಿಳಿಸಿಕೊಡಿ. ಅವನೊಂದಿಗೆ ಇದ್ದರೆ ನನ್ನ ಮಗಳು ಚೆನ್ನಾಗಿ ಬದುಕುತ್ತಾಳೆ ಎನ್ನುವ ವಿಶ್ವಾಸವನ್ನು ಮನೆಯವರಲ್ಲಿ ಮೂಡಿಸಿ. ಇದೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪ್ರೀತಿ, ನಿಮ್ಮ ಮೇಲೆ ನಿಮ್ಮ ಹುಡುಗ ನಿಜವಾದ ಪ್ರೀತಿ ಹೊಂದಿದ್ದಾನೆಯೇ ಎಂಬುದನ್ನು ಅವಶ್ಯವಾಗಿ ಪರೀಕ್ಷೆ ಮಾಡಿಕೊಂಡು ಮುಂದೆ ಸಾಗಿ.

- ಸುಮಾ ಗುರುರಾಜರಾವ್, ಮಠದ ರಸ್ತೆ, ರವೀಂದ್ರ ನಗರ, ಹಾಸನ

ರಣಬೀರ್ ಜೊತೆ ಹೇಗಿತ್ತು ಆಲಿಯಾ ಫಸ್ಟ್ ಮೀಟಿಂಗ್?

ಧೈರ್ಯವಾಗಿ ಹೇಳಿಬಿಡಿ

ಪ್ರೀತಿ ವಿಚಾರದಲ್ಲಿ ಎಂದಿಗೂ ಹೀಗೆ ಧೈರ್ಯಗೆಡುವುದು ಬೇಡ. ಮೂರು ವರ್ಷದ ನಿಮ್ಮ ಪ್ರೀತಿಗೆ ಜಯ ಸಿಕ್ಕುವುದು ಇಂತಹ ಸಮಯದಲ್ಲಿಯೇ. ಹಾಗಾಗಿ ನೀವು ಸಮಯ ನೋಡಿಕೊಂಡು ನಿಮ್ಮ ಮನೆಯವರೊಂದಿಗೆ ಮಾತನಾಡಿ. ಅದಕ್ಕೂ ಮೊದಲು ನಿಮ್ಮ ಪ್ರಿಯಕರನೊಂದಿಗೆ ಒಂದು ಸುತ್ತಿನ ಮಾತುಕತೆ ಮುಗಿಸಿಕೊಳ್ಳಿ. ಮುಂದೆ ಪರಿಸ್ಥಿತಿಗಳು ಹೇಗಿರಬಹುದು, ಅದನ್ನು ಹೇಗೆ ಎದುರಿಸಬೇಕು ಎನ್ನುವ ವಿಚಾರಗಳ ಬಗ್ಗೆ ಕುಳಿತು ಚರ್ಚೆ ಮಾಡಿ. ಇದರಿಂದ ನಿಮ್ಮ ಅಂತರಂಗದಲ್ಲೂ ಸ್ವಲ್ಪ ಧೈರ್ಯ ಬರುತ್ತದೆ. ಹಾಗಾಗಿ ನೀವು ಈ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಸಾಗುವುದು ಒಳ್ಳೆಯದು.