ರಣಬೀರ್ ಜೊತೆ ಫಸ್ಟ್ ಮೀಟಿಂಗ್ ಬಹಿರಂಗ ಪಡಿಸಿದ ಆಲಿಯಾ!
ರಣಬೀರ್ ಕಪೂರ್ ಆಲಿಯಾ ಭಟ್‌ರ ಹೆಸರು ಹಿಂದೆ ಹಲವರ ಜೊತೆ ಲಿಂಕ್‌ಅಪ್ ಆಗಿತ್ತು. ಆದರೂ ಸದ್ಯಕ್ಕೆ ಇವರಿಬ್ಬರು ಬಾಲಿವುಡ್‌ನ ಫೇವರೇಟ್ ಕಪಲ್ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಜೋಡಿ ಕಳೆದ 2 ವರ್ಷಗಳಿಂದ ರಿಲೆಷನ್‌ಶಿಪ್‌ನಲ್ಲಿದ್ದಾರೆ. ಇವರು ಮೊದಲ ಭೇಟಿಯ ಬಗ್ಗೆ ಆಲಿಯಾ ಬಹಿರಂಗ ಪಡಿಸಿದ್ದಾರೆ. ಯಾವಾಗ ಮೀಟ್ ಆಗಿದ್ದು ಇವರು?
ರಣಬೀರ್ ಕಪೂರ್ ಆಲಿಯಾ ಭಟ್ ಸದ್ಯಕ್ಕೆ ಬಾಲಿವುಡ್‌ನ ಫೇವರೇಟ್ ಕಪಲ್.
ಆಲ್ ಟೈಮ್ ಫೇವರೇಟ್ ನಟ ರಣಬೀರ್ ಕಪೂರ್ ಮೇಲೆ ಬಹಳ ಹಿಂದಿನಿಂದಲೂ ಕ್ರಶ್ ಹೊಂದಿದ್ದಾರೆ ಆಲಿಯಾ ಭಟ್ .
ಆದರೆ ಒಂದು ದಿನ ಅವರು ಡೇಟಿಂಗ್ ಪ್ರಾರಂಭಿಸುತ್ತಾರೆ ಮತ್ತು ಬಾಲಿವುಡ್‌ನ ಫೇಮಸ್ ಕಪಲ್‌ಗಳಲ್ಲಿ ಒಬ್ಬರಾಗುತ್ತಾರೆ ಎಂದು ಯಾರು ಗೆಸ್ ಮಾಡಿದ್ದರು?
ಕಳೆದ 2 ವರ್ಷಗಳಿಂದ ರಿಲೆಷನ್‌ಶಿಪ್‌ನಲ್ಲಿರುವ ಇವರ ಮೊದಲ ಭೇಟಿಯ ಬಗ್ಗೆ ಆಲಿಯಾ ಬಹಿರಂಗ ಪಡಿಸಿದ್ದಾರೆ.
ಆಲಿಯಾ 11 ವರ್ಷದವಳಿದ್ದಾಗ ರಣಬೀರ್‌ರನ್ನು ಫಸ್ಟ್ ಮೀಟ್ ಆಗಿದ್ದರು.
'ನಾನು ಮೊದಲು ರಣಬೀರ್ ಅವರನ್ನು ಭೇಟಿಯಾದಾಗ ನನಗೆ ಕೇವಲ 11 ವರ್ಷ ವಯಸ್ಸಾಗಿತ್ತು, ಅವರು ಸಂಜಯ್ ಲೀಲಾ ಭನ್ಸಾಲಿಗೆ ಆಸಿಸ್ಟ್ ಮಾಡುತ್ತಿದ್ದರು. ನಾನು ಅವರೊಂದಿಗೆ ಫೋಟೋಶೂಟ್ ಮಾಡಬೇಕಾಗಿತ್ತು. ನಾನು ತಲೆಯನ್ನು ಅವರ ಭುಜದ ಮೇಲೆ ಇಟ್ಟುಕೊಳ್ಳಬೇಕಾಗಿತ್ತು. ನನಗೆ ತುಂಬಾ ನಾಚಿಕೆಯಾಗಿತ್ತು. ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ, ಏಕೆಂದರೆ ಇದು ನನಗೆ ನಿಜವಾಗಿಯೂ ನಾಚಿಕೆ ಕ್ಷಣವಾಗಿತ್ತು' ಎಂದು ಆಲಿಯಾ ಹೇಳಿದ್ದರು.
ಆಲಿಯಾ ರಣಬೀರ್‌ರನ್ನು ತನ್ನ ವೃತ್ತಿಜೀವನದ ದೊಡ್ಡ ಬೆಂಬಲಿಗ ಎಂದು ಕರೆದರು ಮತ್ತು ಈ ವರ್ಷಗಳಲ್ಲಿ ಅವರನ್ನು ಹೇಗೆ ಗೌರವಿಸುತ್ತಾಳೆ ಮತ್ತು ಮೆಚ್ಚಿದ್ದಾಳೆ ಎಂಬುದನ್ನು ಹೇಳಿಕೊಂಡಿದ್ದಾರೆ.
'ಸಾವರಿಯಾದಿಂದ ನಾನು ಯಾವಾಗಲೂ ರಣಬೀರ್‌ಗೆ ಲಾಯಲ್ ಆಗಿದ್ದೇನೆ ಮತ್ತು ಅದು ಎಂದಿಗೂ ಬದಲಾಗಿಲ್ಲ' ಎಂದು ಹೇಳಿದ ಆಲಿಯಾ ಭಟ್
ಬಹಳ ಹಿಂದೆಯೇ ಸಂಜಯ್ ಲೀಲಾ ಭನ್ಸಾಲಿ ಈ ಜೋಡಿಯನ್ನು ಬಾಲಿಕಾ ವಾಧು ಚಿತ್ರದಲ್ಲಿ ಕಾಸ್ಟ್ ಮಾಡಲು ಬಯಸಿದ್ದರು ಮತ್ತು ಅದಕ್ಕಾಗಿ ಒಟ್ಟಿಗೆ ಫೋಟೋಶೂಟ್ ಕೂಡ ಮಾಡಿದರು.
2017 ರಲ್ಲಿ ನಡೆದ ಲೋಕಮತ್ ಮಹಾರಾಷ್ಟ್ರ ವರ್ಷದ ಪ್ರಶಸ್ತಿ ಸಮಾರಂಭದಲ್ಲಿ ರಣಬೀರ್ ಆಲಿಯಾ ಭಟ್ ಜೊತೆ ಫೋಟೋಶೂಟ್ ಮಾಡಿದ್ದಾಗಿ ಬಹಿರಂಗಪಡಿಸಿದರು.
ಅಂದಿನಿಂದ ಆಲಿಯಾಳ ಫ್ಯಾನ್ ಆಗಿದ್ದಾರೆ ಮತ್ತು ಹೈವೇ ಸಿನಿಮಾದಲ್ಲಿ ಆಲಿಯಾಳ ನಟನೆಗೆ ಫಿದಾ ಆಗಿರುವುದಾಗಿ ಹೇಳಿದ್ದಾರೆ ರಾಕ್‌ಸ್ಟಾರ್ ನಟ.
ಈಗ ಈ ಕಪಲ್ ರಿಲೆಷನ್‌ಶಿಪ್‌ನಿದ್ದು ಎರಡು ವರ್ಷಗಳೇ ಕಳೆದಿವೆ.
ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರದಲ್ಲಿ ಅಭಿಮಾನಿಗಳು ಅವರನ್ನು ಒಟ್ಟಿಗೆ ನೋಡಲಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದಾರೆ.