Viral News: ಬೆಡ್ ರೂಮಲ್ಲೇ ಇದೆ ಓಪನ್ ಟಾಯ್ಲೆಟ್; ಇದ್ರಲ್ಲಿ ಹೆಂಗೆ ವಾಸ ಮಾಡೋದು?
ಬೆಡ್ ರೂಮಿಗೆ ಅಟ್ಯಾಚ್ ಬಾತ್ ರೂಮ್ ಇರೋದು ಸಾಮಾನ್ಯ. ಆದ್ರೆ ಮಧ್ಯೆ ಗೋಡೆನೇ ಇಲ್ಲದೆ ಎಲ್ಲವೂ ತೆರೆದ ಪ್ರದೇಶದಲ್ಲಿದ್ರೆ..ಊಟ,ಮೂತ್ರ – ಮಲ ವಿಸರ್ಜನೆ, ನಿದ್ರೆ ಎಲ್ಲ ಒಂದೇ ಕಡೆ ಇದ್ರೆ ಹೆಂಗೆ ವಾಸ ಮಾಡೋದು?

ಮನೆ ಖರೀದಿ ಮಾಡುವಾಗ ಇಲ್ಲ ಬಾಡಿಗೆ ಮನೆ ಪಡೆಯುವಾಗ ನಾವು ಎಲ್ಲವನ್ನೂ ಗಮನಿಸಿ ಮನೆಯಲ್ಲಿ ವಾಸ ಶುರು ಮಾಡ್ತಾವೆ. ನಾವೆಷ್ಟು ಜನರಿದ್ದೇವೆ, ಮನೆಯಲ್ಲಿ ಎಷ್ಟು ಕೋಣೆಯಿದೆ, ಬಾತ್ ರೂಮ್ ಎಷ್ಟಿದೆ ಎಂಬೆಲ್ಲವನ್ನು ತಿಳಿದುಕೊಳ್ತೇವೆ. ಈಗಿನ ದಿನಗಳಲ್ಲಿ ಜನರು ವಾಸ್ತು ನೋಡಿಯೂ ಮನೆ ಬಾಡಿಗೆ ಪಡೆಯುತ್ತಿದ್ದಾರೆ. ಕೆಲ ಮೆಟ್ರೋ ಸಿಟಿಗಳಲ್ಲಿ ಮನೆ ಬಾಡಿಗೆಗೆ ಸಿಗೋದೇ ಕಷ್ಟ. ಹಾಗಿರುವಾಗ ಸಿಕ್ಕ ಮನೆಯನ್ನೇ ನಮಗೆ ಬೇಕಾದ ಹಾಗೆ ಸರಿಪಡಿಸಿಕೊಳ್ಳಬೇಕು. ಕರ್ಟನ್ ಹಾಕಿ ಇಲ್ಲವೆ ಟೇಬಲ್ ಹಾಕಿ ಮನೆಯನ್ನು ನಾವು ಚೊಕ್ಕಟಗೊಳಿಸ್ತೇವೆ. ಆದ್ರೆ ದೆಹಲಿಯಲ್ಲಿ ಬಾಡಿಗೆಗೆ ಇರುವ ಮನೆಯೊಂದು ಜನರನ್ನು ದಂಗಾಗಿಸಿದೆ.
ಒಂದು ಬೆಡ್ ರೂಮ್ (Bedroom) ಮನೆಯಾದ್ರೆ ಮನೆ ಹೊರಗೆ ಅಥವಾ ಮನೆಯ ಒಂದು ಭಾಗದಲ್ಲಿ ಶೌಚಾಲಯ (Toilet) ವಿರುತ್ತದೆ. ಎರಡು ಬೆಡ್ ರೂಮಿನ ಅಥವಾ ಮೂರು ಬೆಡ್ ರೂಮಿನ ಮನೆಯಾದರೆ ಒಂದು ಅಟ್ಯಾಚ್ ಶೌಚಾಲಯವಿದ್ರೆ ಮತ್ತೊಂದು ಕಾಮನ್ ಶೌಚಾಲಯವಿರುತ್ತದೆ. ಆದ್ರೆ ದೆಹಲಿ (Delhi) ಆ ಬಾಡಿಗೆ ಮನೆಯಲ್ಲಿ ಶೌಚಾಲಯಕ್ಕೆ ಪ್ರತ್ಯೇಕ ಕೊಠಡಿಯೇ ಇಲ್ಲ. ಹಾಗಿದ್ರೆ ಶೌಚಾಲಯ ಎಲ್ಲಿದೆ ಎಂಬುದನ್ನು ನಾವು ನಿಮಗೆ ಹೇಳ್ತೇವೆ.
ದೇಶದಲ್ಲಿ ವಾಸಿಸೋಕೆ ಕಾಸ್ಟ್ಲಿಯೆಸ್ಟ್ ಸಿಟಿ ಮುಂಬೈ, ಬೆಂಗಳೂರಿಗೆ ಎಷ್ಟನೇ ಸ್ಥಾನ?
ಈ ಶೌಚಾಲಯಕ್ಕೆ ಪ್ರತ್ಯೇಕ ಕೊಠಡಿಯೇ ಇಲ್ಲ : ಗ್ರೇಟರ್ ಕೈಲಾಶ್ ದೆಹಲಿಯ ಐಷಾರಾಮಿ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಮನೆ ಬಾಡಿಗೆಗೆ ಸಿಗೋದು ಕಷ್ಟ. ಸಿಕ್ಕಿದ್ರೂ ದುಬಾರಿ ಹಣ ನೀಡ್ಬೇಕು. ಈಗ ವೈರಲ್ ಆಗಿರುವ ಮನೆ ಫೋಟೋ ಕೂಡ ಗ್ರೇಟರ್ ಕೈಲಾಶ್ ನದ್ದು. ರೆಡ್ಡಿಟ್ ನಲ್ಲಿ ಈ ಮನೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆ ಫೋಟೋದಲ್ಲಿ ನೀವು ಒಂದು ರೂಮ್ ನೋಡ್ಬಹುದು. ಒಂದ್ಕಡೆ ಬೆಡ್ ಹಾಕಲಾಗಿದೆ. ಇನ್ನೊಂದು ಕಡೆ ಗ್ಲಾಸ್ ಕವರ್ ಆಗಿರುವ ಬಾತ್ ರೂಮ್ ಇದೆ. ಆದ್ರೆ ಬಾತ್ ರೂಮ್ ಒಳಗೆ ನಿಮಗೆ ಶೌಚಾಲಯ ಕಾಣಸಿಗೋದಿಲ್ಲ. ರೂಮ್ ಒಳಗೆ ತೆರೆದ ಕಮೋಡ್ ನಿಮ್ಮ ಕಣ್ಣಿಗೆ ಬೀಳುತ್ತದೆ. ನೀವು ಐಷಾರಾಮಿ ಹೊಟೇಲ್ ಗೆ ಹೋದ್ರೆ ಅಲ್ಲಿನ ಬಾತ್ ರೂಮಿನಲ್ಲಿ ಸ್ನಾನ ಗೃಹ ಹಾಗೂ ಕಮೋಡ್ ಇದೇ ರೀತಿ ಇರುತ್ತದೆ. ಆದ್ರೆ ಇಲ್ಲಿ ಬೆಡ್ ಕೂಡ ಹಾಕಲಾಗಿದ್ದು, ಇದು ಬೆಡ್ ರೂಮಾ ಇಲ್ಲ ಶೌಚಾಲಯದಲ್ಲಿ ಬೆಡ್ ಹಾಕಲಾಗಿದ್ಯಾ ಎಂಬ ಪ್ರಶ್ನೆ ಮೂಡಿಸ್ತಿದೆ. ಫೋಟೋ ಹಂಚಿಕೊಂಡ ವ್ಯಕ್ತಿ ಜಿಕೆ2ನಲ್ಲಿ ಇಂಥ ಮನೆಗೆ ನೀವು ಎಷ್ಟು ಬಾಡಿಗೆ ನೀಡಲು ಬಯಸ್ತೀರಿ ಎಂದು ಶೀರ್ಷಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಮನೆ ಬಾಡಿಗೆ ಎಷ್ಟು ಎಂಬುದನ್ನು ಕೂಡ ಹೇಳಿದ್ದಾರೆ.
ಗ್ರೇಟರ್ ಕೈಲಾಶ್‌ನಲ್ಲಿರುವ ಈ ಕೊಠಡಿಯ ಬಾಡಿಗೆ 15 ರಿಂದ 20 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಚಿತ್ರ ಮಲಗುವ ಕೋಣೆಯ ಫೋಟೋ ವೈರಲ್ ಆದ ತಕ್ಷಣ ಬಳಕೆದಾರರು ನಿರಂತರವಾಗಿ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.. ಬಳಕೆದಾರರು ಇದು ಟಾಯ್ಲೆಟ್ ವಿತ್ ಬೆಡ್ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ಇದು ಹೆಚ್ಚುವರಿ ಸ್ಥಳ ಮತ್ತು ಸೌಲಭ್ಯಗಳನ್ನು ಹೊಂದಿರುವ ಜೈಲು ಎಂದು ಬರೆದಿದ್ದಾರೆ. ಇದು ಉಚಿತವಾಗಿ ಸಿಕ್ಕರೂ ಉಳಿಯೋದಿಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಕರ್ಟನ್ ಹಾಕಿಕೊಂಡು ಇಲ್ಲಿ ವಾಸ ಮಾಡ್ಬಹುದು ಎಂದಿದ್ದಾರೆ.
ನಿಮ್ ಕಣ್ಣಿನ ದೃಷ್ಟಿ ಎಷ್ಟು ಶಾರ್ಪ್, ಈ ಚಿತ್ರ ನೋಡಿ ಟೆಸ್ಟ್ ಮಾಡ್ಕೊಳ್ಳಿ
ಮುಂಬೈನಲ್ಲಿ ಇಂಥ ರೂಮ್ ಬಾಡಿಗೆ 30 ಸಾವಿರವಾಗಿದ್ದು 1.50 ಲಕ್ಷ ಅಡ್ವಾನ್ಸ್ ಕೊಡ್ಬೇಕು ಎನ್ನುವ ಮೂಲಕ ಇಂಥ ರೂಮ್ ಇನ್ನೂ ಕೆಲವೆಡೆ ಇದೆ ಎಂಬುದನ್ನು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಇದೊಂದು ಬಾತ್ ರೂಮ್ ಆಗಿದ್ದು, ಅದ್ರಲ್ಲಿ ಬೆಡ್ ಹಾಕಲಾಗಿದೆ ಎಂದು ಕಮೆಂಟ್ ಮಾಡಿದ ವ್ಯಕ್ತಿಯೊಬ್ಬರು 2 ಸಾವಿರಕ್ಕಿಂತ ಹೆಚ್ಚು ಬಾಡಿಗೆ ನೀಡ್ಬೇಡಿ ಎಂದಿದ್ದಾರೆ. ಇದು ಜಿಕೆ2 ಅಲ್ಲ, ಬಿಹಾರದ ವಿಐಪಿ ಜೈಲು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
What's the max rent you would pay for this kind of place in GK2?
by u/supermarketblues in delhi