ನಿಮ್ ಕಣ್ಣಿನ ದೃಷ್ಟಿ ಎಷ್ಟು ಶಾರ್ಪ್, ಈ ಚಿತ್ರ ನೋಡಿ ಟೆಸ್ಟ್ ಮಾಡ್ಕೊಳ್ಳಿ
ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂದು ಪರೀಕ್ಷಿಸಲು ಬಯಸುವಿರಾ? ಹೌದು, ಎಂದಾದ್ರೆ ನೀವು ಈ ಸಿಂಪಲ್ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗೆ ಒಳಪಡಿ ಸಾಕು. ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂಬುದು ಈಝಿಯಾಗಿ ಅರ್ಥವಾಗುತ್ತೆ.

ನಮ್ ಕಣ್ಣಿನ ದೃಷ್ಟಿ ಎಷ್ಟು ಸೂಕ್ಷ್ಮವಾಗಿದೆ ಅನ್ನೋದನ್ನು ತಿಳ್ಕೊಳ್ಳೋ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತೆ. ಕೆಲವೊಬ್ಬರಿಗೆ ನನ್ ಕಣ್ಣು ತುಂಬಾ ತೀಕ್ಷ್ಮವಾಗಿದೆ ಅನ್ನೋ ಭ್ರಮೆ ಇರುತ್ತೆ. ಇನ್ನು ಕೆಲವರಿಗೆ ನಂಗೇನು ಕಾಣಲ್ಲ ಅಂತ ಅನಿಸ್ತಿರುತ್ತೆ. ಇದೆಲ್ಲಾ ನಿಜ ಆಗಿರಬೇಕೆಂದಿಲ್ಲ. ಇದಕ್ಕೆ ತದ್ವಿರುದ್ಧವಾಗಿಯೂ ಸಂಭವಿಸಬಹುದು. ನಿಮ್ಮ ದೃಷ್ಟಿ ಎಷ್ಟು ತೀಕ್ಷ್ಣವಾಗಿದೆ ಎಂದು ಪರೀಕ್ಷಿಸಲು ಬಯಸುವಿರಾ? ಹೌದು, ಎಂದಾದ್ರೆ ನೀವು ಈ ಸಿಂಪಲ್ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗೆ ಒಳಪಡಿ ಸಾಕು. ನಿಮ್ಮ ಕಣ್ಣು ಎಷ್ಟು ಸೂಕ್ಷ್ಮವಾಗಿದೆ ಎಂಬುದು ನಿಮ್ಗೆ ಈಝಿಯಾಗಿ ಅರ್ಥವಾಗುತ್ತೆ.
ಆಪ್ಟಿಕಲ್ ಭ್ರಮೆಯನ್ನುಂಟು ಮಾಡುವ ಚಿತ್ರಗಳು ಸಾಮಾನ್ಯವಾಗಿ ವ್ಯಕ್ತಿಯ ಮನಸ್ಸನ್ನು ಗೊಂದಲಕ್ಕೀಡು ಮಾಡುವ ಫೋಟೋಗಳಾಗಿವೆ. ವಿಶೇಷವಾಗಿ ತೀಕ್ಷ್ಣವಾದ ಕಣ್ಣುಗಳನ್ನು ಹೊಂದಿರುವ ಯಾರಾದರೂ ಮಾತ್ರ ಆಪ್ಟಿಕಲ್ ಭ್ರಮೆಯನ್ನು ಸುಲಭವಾಗಿ ಕಂಡುಹಿಡಿಯಬಹುದು. ಮಾನವನ ಮೆದುಳಿನ ಮೇಲೆ ಈ ಆಪ್ಟಿಕಲ್ ಭ್ರಮೆಗಳ ಮೂಲ ಮತ್ತು ಪರಿಣಾಮಗಳನ್ನು ಕಂಡುಹಿಡಿಯಲು ಸಂಶೋಧಕರು ಹೆಚ್ಚಿನ ಸಮಯವನ್ನು ಕಳೆದಿದ್ದರೂ, ಅವುಗಳ ಅಸ್ತಿತ್ವ ಮತ್ತು ಪರಿಣಾಮಗಳ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯುವಲ್ಲಿ ಅನೇಕರು ಯಶಸ್ವಿಯಾಗಲಿಲ್ಲ.
ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ
ಹೆಚ್ಚಿನ ಸಂದರ್ಭದಲ್ಲಿ ಆಪ್ಟಿಕಲ್ ಭ್ರಮೆಗಳನ್ನು ಮಕ್ಕಳಿಗೆ ಸಮಯವನ್ನು ಕಳೆಯುವ ಮಾರ್ಗವೆಂದು ಸಾಮಾನ್ಯವಾಗಿ ಗ್ರಹಿಸಲಾಗಿದೆ. ಆದರೆ ವಾಸ್ತವದಲ್ಲಿ ಇದು ವ್ಯಕ್ತಿಯ ಐಕ್ಯೂ ಮಟ್ಟವನ್ನು ಅಳೆಯಲು, ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಸಹ ನೆರವಾಗುತ್ತದೆ. ಈ ಆಪ್ಟಿಕಲ್ ಭ್ರಮೆಯನ್ನು ಪ್ರಯತ್ನಿಸಿ ಮತ್ತು ನೀವು ಅವರ ದೃಷ್ಟಿಗೋಚರ ಗ್ರಹಿಕೆಯನ್ನು ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವವರಾಗಿದ್ದರೆ ಕಂಡುಹಿಡಿಯಿರಿ.
ಪಾಂಡಾ ಗುಂಪಿನಲ್ಲಿ ಅಡಗಿರುವ ನರಿಯನ್ನು ಹುಡುಕಿ
ಆಪ್ಟಿಕಲ್ ಭ್ರಮೆಯು ಸರಳವಾದ ಪರೀಕ್ಷೆಯಾಗಿದೆ. ನೀವು ಈ ಚಿತ್ರದಲ್ಲಿ ಕೆಂಪು ಪಾಂಡಾಗಳ ನಡುವೆ ಅಡಗಿರುವ 3 ನರಿಗಳನ್ನು ಹುಡುಕಬೇಕಿದೆ. ಅರೆ ಅದೆಷ್ಟು ಈಝಿ ಕೆಲ್ಸ ಅನ್ಬೇಡಿ. ಈ ನರಿಗಳನ್ನು ಕಂಡು ಹುಡುಕಲು ನಿಮಗಿರುವುದು ಕೇವಲ 9 ಸೆಕೆಂಡು ಮಾತ್ರ. ಕೆಂಪು ಪಾಂಡಾಗಳ ನಡುವೆ ಅಡಗಿರುವ ಮೂರು ನರಿಗಳನ್ನು 9 ಸೆಕೆಂಡುಗಳಲ್ಲಿ ನೀವು ಕಂಡುಕೊಂಡರೆ ಮಾತ್ರ ನಿಮ್ಮ ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿದೆ ಎಂದರ್ಥ.
ನೀವು ಜೀನಿಯಸ್ಸಾ? ಹಾಗಿದ್ರೆ ಹತ್ತೇ ಸೆಕೆಂಡಲ್ಲಿ ಫೋಟೋದಲ್ಲಿ ನಿಮಗೆಷ್ಟು M ಕಾಣಿಸ್ತಿದೆ ಹೇಳಿ
ಪಾಂಡಾಗಳ ಮಧ್ಯೆ ನರಿಯನ್ನು ಹುಡುಕಲು ಸುಳಿವು
ಹಲವಾರು ಕೆಂಪು ಪಾಂಡಾಗಳ ನಡುವೆ ನೀವು ಮೂರು ಗುಪ್ತ ನರಿಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಚಿಂತಿಸಬೇಡಿ. ಯಾಕೆಂದರೆ ಹೀಗೆ ಮಾಡುವಲ್ಲಿ ನೀವು ಮಾತ್ರ ವಿಫಲವಾಗಿಲ್ಲ. ನಿಗದಿತ ಅವಧಿಯೊಳಗೆ ಪರೀಕ್ಷೆಯನ್ನು ಪೂರ್ಣಗೊಳಿಸಲು ಪ್ರಯತ್ನಿಸುವ ಹೆಚ್ಚಿನ ಜನರು ವಿಫಲರಾಗುತ್ತಾರೆ. ಆದ್ದರಿಂದ, ಅಡಗಿದ ನರಿಗಳನ್ನು ಹುಡುಕಲು ನಿಮಗೆ ಸಹಾಯ ಮಾಡುವ ಕೆಲವು ಸುಳಿವುಗಳು ಇಲ್ಲಿವೆ.
ಮೊದಲನೆಯದ್ದು, ನೀವು ಕೆಂಪು ಪಾಂಡಾಗಳ ಮೇಲಿನ ಸಾಲಿನಲ್ಲಿ, ಮಧ್ಯದಲ್ಲಿಯೇ ಕಾಣಬಹುದು. ಎರಡನೆಯದು ದೂರದ ಎಡ ಕಾಲಮ್‌ನ ಮಧ್ಯದಲ್ಲಿ ಮರೆಮಾಚಿದೆ. ಇನ್ನೊಂದು ಪಾಂಡಾ, ಕೆಳಗಿನ ಸಾಲುಗಳ ಮಧ್ಯದಲ್ಲಿ ಹಲವಾರು ಕೆಂಪು ಪಾಂಡಾಗಳ ಹಿಂದೆ ಅಡಗಿಕೊಂಡಿದೆ. ಎಲ್ಲಾ ಮೂರು ನರಿಗಳನ್ನು ಹುಡುಕಲು ನಿಮಗೆ ಸಹಾಯ ಮಾಡಲು ಈ ಸುಳಿವುಗಳು ಸಾಕಾಗದಿದ್ದರೆ, ನಿಮಗೆ ಸಹಾಯ ಮಾಡುವ ಮಾರ್ಗದರ್ಶಿ ಇಲ್ಲಿದೆ.