ಆಫೀಸಿನಲ್ಲಿ ಫುಲ್ ಟೈಮ್, ಡಬಲ್ ಡ್ಯೂಟಿ ಎಂದು ಕೆಲಸ ಮಾಡಿ ಮಾಡಿ ಸಾಕಾಗಿ ಹೋಗಿದ್ಯಾ? ಹಾಗಿದ್ರೆ ಈ ಸುದ್ದಿನಾ ನಿಮ್ಮ ಬಾಸ್‌ಗೆ ತಲುಪೋ ಹಾಗೆ ಮಾಡಿ. ಏನು ಸುದ್ದಿ ಅಂತೀರಾ? ಮುಂದೆ ಓದಿ ನಿಮಗೇ ಗೊತ್ತಾಗುತ್ತೆ..
ಆಫೀಸಿಗೆ ಹೋಗೋದೇ ಕಷ್ಟ, ಅದ್ರಲ್ಲೂ ವಾರ ಪೂರ್ತಿ ಯಾರಪ್ಪ ಹೋಗೋದು ಅಂದ್ಕೊಂಡ್ರಾ .. ಭಾರತದಲ್ಲಿ ಹೇಳೋದೇ ಬೇಡ ವ್ಯಕ್ತಿಯೊಬ್ಬ ವಾರದಲ್ಲಿ ಸುಮಾರು 53-54 ಗಂಟೆ ಕೆಲಸ ಮಾಡುತ್ತಾನೆ. ಆದರೆ, ಮನುಷ್ಯನೊಬ್ಬ ವಾರಕ್ಕೆ 35 ಗಂಟೆ ಕೆಲಸ ಮಾಡ್ಬೇಕೆಂದು ಇಂಟರ್ ನ್ಯಾಷನಲ್ ಆರ್ಗನೈಸೇಷನ್ ನಿಗದಿ ಮಾಡಿದೆ.
ಅಧ್ಯಯನವೊಂದರ ಪ್ರಕಾರ ತುಂಬಾ ಸಮಯದವರೆಗೆ ಕೆಲಸ ಮಾಡಿದರೆ ಅದರಿಂದ ಉತ್ತಮ ಉತ್ಪಾದಕತೆ ಹೊರ ಬರಲು ಸಾಧ್ಯವೇ ಇಲ್ಲ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಕಂಪ್ಯೂಟರ್ ಮುಂದೆ ಕೂರುವಾಗ ಹೈ ಫೈ ಟೆಸ್ಟ್ ಮಾಡಿಕೊಳ್ಳಿ...
ಬಿಜಿನೆಸ್ ಟೈಮಿನಲ್ಲಿ ವರದಿಯಾದ ಅಧ್ಯಯನದ ಪ್ರಕಾರ 35 ಗಂಟೆಗಿಂತ ಹೆಚ್ಚು ಹೊತ್ತು ಕೆಲಸ ಮಾಡಲು ಸಾಧ್ಯವೇ ಇಲ್ವಂತೆ. ಆ ನಂತರ ನಿಧಾನವಾಗಿ ಕೆಲಸದ ಮೇಲೆ ಆಸಕ್ತಿ ಕುಂಠಿತವಾಗುತ್ತದೆ. ಅಷ್ಟೇ ಯಾಕೆ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡಿದರೆ ಅನಾರೋಗ್ಯ ಕಾಡುತ್ತಂತೆ. ಕೆಲವು ಎಕ್ಸ್‌ಪರ್ಟ್ಸ್ ಹೇಳುವಂತೆ ಕೆಲಸದ ಅವಧಿ ವಾರದಲ್ಲಿ 35 ಗಂಟೆಗಿಂತ ಹೆಚ್ಚಿರಬಾರದಂತೆ. 24/7 ಕೆಲಸ ಮಾಡಿದರೆ ಕೆಲಸದ ಮೇಲಿನ ಆಸಕ್ತಿಯೇ ಹೊರಟು ಹೋಗುತ್ತದೆ ಎಂದೂ ಅಧ್ಯಯನ ಸ್ಪಷ್ಟಪಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಕೆಲಸ ಮಾಡುವವರು ಸರಿಯಾಗಿ ಕೆಲಸ ಮಾಡುವುದೇ ಇಲ್ಲ. ಇದರಿಂದ ಕೆಲಸದಲ್ಲೂ ಲಾಭ ಸಿಗುವುದು ಕಷ್ಟವಂತೆ.
ಲೈಂಗಿಕ ವಾಸನೆಯನ್ನ ಬೇಕಾದ್ರೂ ಕಂಡು ಹಿಡಿಯುತ್ತೆ ನಾಸಿಕ!
ಕೆಲವು ದಿನಗಳ ಹಿಂದೆ ಯುಕೆಯ ಕಂಪೆನಿಗಳಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಇದರಿಂದ ಉದ್ಯೋಗಿಗಳು ಎಷ್ಟು ಖುಷಿಯಾಗಿದ್ದರು ಎಂದರೆ ಇರುವ ಅವಧಿಯಲ್ಲೇ ಹೆಚ್ಚು ಆಸಕ್ತಿಯಿಂದ, ಲಾಭ ತರುವಂತೆ ಕೆಲಸ ಮಾಡುತ್ತಿದ್ದಾರಂತೆ.
