ಎಷ್ಟೇ ದೂರ ಕೂತರೂ ಯಾವ ಟೇಬಲ್‌, ಯಾರು, ಅಡುಗೆ ಏನ್ ತಂದಿದ್ದಾರೆ ಅಂತ ಹೇಳುವಷ್ಟು ಪವರ್‌ ಕೆಲವರ ಮೂಗಿಗಿರುತ್ತದೆ. ವರ್ಷದಲ್ಲಿ 3-4 ಸಲ ನೆಗಡಿಯಿಂದ ಮೂಗು ಕೆಟ್ಟೋಗಿ, ಎಂತ ವಾಸನೆಯನ್ನೂ ಕಂಡು ಹಿಡಿಯಲಾಗೋಲ್ಲ. ಬಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ವರ್ತಿಸುವ ಈ ಮೂಗಿನ ಬಗ್ಗೆ ನಿಮಗೇನು ಗೊತ್ತು?

- ಇಸ್ರೇಲ್ ವೈದ್ಯರ ವರದಿಯಂತೆ ಮಾನವರಲ್ಲಿ 14 ರೀತಿಯ ಮೂಗುಗಳು ಇವೆ! ಉದ್ದ ಮೂಗು, ಗಿಡ್ಡ ಮೂಗು, ಗಿಣಿ ಮೂಗು....ಹೀಗೆಲ್ಲ ವಿವಿಧ ಮೂಗುಗಳಿರುವತ್ತವೆ. ಕೆಲವರಿಗೆ ಆ ಮೂಗೇ ಅಂದ ಹೆಚ್ಚಿಸಿದರೆ, ಇನ್ನು ಕೆಲವರಿಗೆ ಮೂಗಿನ ಶೇಪೆ ಮುಕಕ್ಕೆ ಕಪ್ಪು ಚುಕ್ಕಿಯಾಗಿ ಸೌಂದರ್ಯಕ್ಕೆ ಕುಂದು ತರುತ್ತದೆ. ನಿಮ್ಮ ಮೂಗು ಹೇಗಿದೆ ಎಂದು ಕಂಡು ಕೊಳ್ಳಲು ಕಾರ್ಟೂನಿಸ್ಟ್ ಮುಂದೆ ಕುಳಿತು ಚಿತ್ರ ಬರೆಯಿಸಿಕೊಳ್ಳಿ. ನಾಸಿಕ ನಿಮ್ಮ ಮುಖದ ಅಂದ ಹೆಚ್ಚಿಸುತ್ತಿದೆಯೋ, ಅಂದ ಕೆಡಿಸಿದೆಯೋ ಎಂದು ಹೇಳುತ್ತದೆ. 

- ಒಂದೇ ಕುಟುಂಬಕ್ಕೆ ಸೇರಿದವರು ಒಂದೇ ರೀತಿ ಸೀನುತ್ತಾರಂತೆ! ಒಬ್ಬರಿಗೊಬ್ಬರ ಸೀನಿನಲ್ಲಿಯೂ ಇರುತ್ತೆ ಸಾಮ್ಯತೆ ಹಾಗೂ ವಿಭಿನ್ನತೆ. ವಿಶೇಷವೆಂದರೆ ಒಂದು ಕುಟುಂಬದವರು, ಇನ್ನೊಂದು ಕುಟುಂಬದವರಂತೆ ಸೀನುವುದಿಲ್ಲ. ಕೆಲವರು ಇಡೀ ನಾಲ್ಕು ಮನೆಗೆ ಕೇಳುವಂತೆ ಜೋರಾಗಿ ಸೀನಿದರೆ, ಮತ್ತೊಂದು ಕುಟುಂಬದವರು 'ಮನಸ್ಸಿನಲ್ಲಿಯೇ ಮಂಡಿಗೆ ತಿಂದವರಂತೆ', ಪಕ್ಕದವರಿಗೂ ಗೊತ್ತಾಗದಂತೆ ಸೀನಿ, ನಿರುಮ್ಮಳವಾಗುತ್ತಾರೆ. 

- ಮೂಗಿನ ಬೆಳವಣೆಗೆಗೂ ವಯಸ್ಸಿಗೂ ಸಂಬಂಧವಿರುತ್ತದೆ. ಹುಡುಗಿಯರ ಮೂಗು ಸುಮಾರು 15 ರಿಂದ 17 ವರ್ಷ ಹಾಗೂ ಹುಡುಗರ ಮೂಗು 17 ರಿಂದ 19ರವರಗೂ  ಬೆಳೆಯುತ್ತದೆ.

- ಸುಮಾರು 10 ಸಾವಿರಕ್ಕೂ ಹೆಚ್ಚು ವಾಸನೆಗಳನ್ನು ಕಂಡು ಹಿಡಿಯುವ ಸಾಮರ್ಥ್ಯ ಈ ಮನುಷ್ಯನ ಮೂಗಿಗಿರುತ್ತದೆ. 

ಮೂಗಿನ ಕೂದಲು ಕಿತ್ತರೆ ಸಾವು?

- ಸಂಶೋಧನೆಯೊಂದರ ಪ್ರಕಾರ ಸಂಗಾತಿ ಜೊತೆ ರೋಮ್ಯಾನ್ಸ್‌ ಮಾಡಲು ಅವರ ಮೂಗನ್ನು ಗಮನಿಸಿದರೆ ಸಾಕಂತೆ, ಯಾವ ಮೂಡ್‌ನಲ್ಲಿದಾರೆ ಎಂದು ಸುಲಭವಾಗಿ ತಿಳಿಯ ಬಹುದಂತೆ.

- ಗರ್ಭಿಣಿಯರ ಮೂಗು ಸೂಕ್ಷ್ಮವಾಗಿರುತ್ತದೆ, ಯಾವ ಆಹಾರದ ವಾಸನೆ ಬಂದರೆ ಸವಿಯುವ ಬಯಕೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕೆಲವು ಆಹಾರದ ವಾಸನೆ ಬಂದರೂ ಸಾಕು, ವಾಕರಿಕೆಯೂ ಬರುತ್ತದೆ. 

-  ಹುಡುಗಿಯರ ಮೂಗು ಹುಡುಗರ ಮೂಗಿಗಿಂತ ಸಣ್ಣವಂತೆ! ಸಣ್ಣದಾಗಿದ್ದರೂ ವಾಸನೆ ಕಂಡು ಹಿಡಿಯುವ ಶಕ್ತಿ ಏನೂ ಕಡಿಮೆ ಇರೋಲ್ಲ ಬಿಡಿ...